ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK ನಾಯಕತ್ವ ವಿವಾದ: ರವೀಂದ್ರ ಜಡೇಜಾ ಬಗ್ಗೆ ಗ್ರೇಮ್ ಸ್ವಾನ್ ಮೆಚ್ಚುಗೆ

Ravindra jadeja

ಐಪಿಎಲ್ 15ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದ ಬದಲಾವಣೆ ಸಾಕಷ್ಟು ವಿವಾದದ ಹೊಗೆ ಹತ್ತಿಸಿದ್ದಲ್ಲದೆ, ತಂಡದ ಕಳಪೆ ಪ್ರದರ್ಶನಕ್ಕೂ ಕಾರಣವಾಯಿತು. ಇದುವರೆಗೆ 10 ಪಂದ್ಯಗಳನ್ನಾಡಿದ್ದು, ಕೇವಲ 3 ಗೆಲುವು ಪಡೆದು ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದ್ದಾರೆ.

ಟೂರ್ನಿಯ ಮಧ್ಯದಲ್ಲಿ ರವೀಂದ್ರ ಜಡೇಜಾ ನಾಯಕತ್ವ ಬಿಟ್ಟುಕೊಟ್ಟ ವಿಚಾರಕ್ಕೆ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಹೊಗಳಿಕೆಯ ಮಾತನಾಡಿದ್ದಾರೆ. ರವೀಂದ್ರ ಜಡೇಜಾ ಅವರು ಅಹಂಕಾರವನ್ನು ಮೀರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೊಗಳಿದ್ದಾರೆ.

LSG vs KKR: ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11, ಹೆಡ್ ಟು ಹೆಡ್ ರೆಕಾರ್ಡ್ಸ್LSG vs KKR: ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11, ಹೆಡ್ ಟು ಹೆಡ್ ರೆಕಾರ್ಡ್ಸ್

ಐಪಿಎಲ್‌ನಲ್ಲಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ವರ್ಷ ಸ್ವಲ್ಪ ಸಂಕಷ್ಟದಲ್ಲಿದೆ. ಇನ್ನು ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ತಂಡ ಕಣಕ್ಕಿಳಿಯುತ್ತದೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ನಾಯಕತ್ವದ ಸಮಸ್ಯೆಯಿಂದಾಗಿ ಜಡೇಜಾ ಅವರ ಆಟವನ್ನು ಉತ್ತಮಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಜಡೇಜಾ ಕೊನೆಯ ಕ್ಷಣದಲ್ಲಿ ಮತ್ತೆ ಧೋನಿಗೆ ನಾಯಕತ್ವ ನೀಡಿದ್ದಾರೆ. ಇದು ಹಲವರಿಗೆ ಅಚ್ಚರಿ ತಂದಿತ್ತು.

Graeme swann

ಇದಕ್ಕೆ ಮಾಜಿ ಆಟಗಾರ ಗ್ರೇಮ್‌ ಸ್ವಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ, ಪ್ರತಿಯೊಬ್ಬರೂ ನಿರ್ದಿಷ್ಟ ತಂಡದ ವಿರುದ್ಧ ಆಡಲು ಇಷ್ಟಪಡುತ್ತಾರೆ. ಹೀಗಾಗಿ ಆರ್‌ಸಿಬಿ ವಿರುದ್ಧ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇತರ ತಂಡಗಳೊಂದಿಗೆ ಸರಿಯಾಗಿ ಮುನ್ನಡೆಸಲು ಸಾಧ್ಯವಾಗಲಿಲ್ಲ, ಇದರರ್ಥ ಅವರಿಗೆ ನಾಯಕತ್ವ ಮಾಡಲು ಬಂದಿಲ್ಲ.

ಇದನ್ನು ಜಡೇಜಾ ಬಹಿರಂಗವಾಗಿ ಒಪ್ಪಿಕೊಂಡಿರುವುದೇ ದೊಡ್ಡ ವಿಷಯ. ಏಕೆಂದರೆ ಹೀಗೆ ಒಪ್ಪಿಕೊಳ್ಳುವುದನ್ನು ಪುರುಷರ ಅಹಂಕಾರ ಒಪ್ಪಿಕೊಳ್ಳುವುದಿಲ್ಲ. ಅದಕ್ಕಾಗಿ ಜಡೇಜಾ ಅವರನ್ನು ಮೆಚ್ಚಲೇಬೇಕು. ಧೋನಿ ಮತ್ತೆ ಸಿಎಸ್‌ಕೆ ನಾಯಕತ್ವ ಪಡೆದಿದ್ದು ಸಂತಸದ ವಿಷಯ. CSK ಗಾಗಿ ಅವರು ಮಾಡಿದ ದೊಡ್ಡ ಕೆಲಸ ಅದಾಗಿದೆ ಎಂದು ಸ್ವಾನ್ ಹೇಳಿದ್ದಾರೆ.

ಶತಕದಂಚಿನಲ್ಲಿದ್ದ ವಾರ್ನರ್ ಗೆ ಬ್ಯಾಟಿಂಗ್ ಅವಕಾಶವನ್ನು ನೀಡದ ಪೊವೆಲ್ ಹೇಳಿದ್ದೇನು? | Oneindia Kannada

ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಜಡೇಜಾನನ್ನು ಇದೇ ರೀತಿ ಹೊಗಳಿದ್ದಾರೆ. ಜಡೇಜಾ ಅತ್ಯಂತ ಬಹಿರಂಗವಾಗಿ ಸಾಧ್ಯವಿಲ್ಲ ಎಂದು ಹಿಂದೆ ಸರಿದಿರುವುದು ಶ್ಲಾಘನೀಯ. ನಾನಿದ್ದರೂ ಹೇಳುತ್ತಿರಲಿಲ್ಲ. ಈಗ ಜಡೇಜಾ ಅವರನ್ನು ಹೊಸ ಆಟಗಾರನಾಗಿ ನೋಡಬಹುದು. ನಾಯಕತ್ವದ ಜವಾಬ್ದಾರಿ ಹೊರಬಿದ್ದಿದೆ. ಹೀಗಾಗಿ ಪೂರ್ಣ ಪ್ರಮಾಣದ ಪ್ರದರ್ಶನ ನೀಡುತ್ತಾರೆ ಎಂದಿದ್ದಾರೆ.

Story first published: Friday, May 6, 2022, 22:58 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X