ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಟ್ರೋಫಿ ಗೆದ್ದರೂ ಈ ನಾಲ್ವರಿಗೆ ಗುಜರಾತ್ ಟೈಟನ್ಸ್ ಗೇಟ್‌ಪಾಸ್ ನೀಡೋದು ಬಹುತೇಕ ಖಚಿತ!

IPL 2022 champion Gujarat Titans may release these 4 players ahead of 2023 season

ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಆಗಿ ಮೆರೆದಿದೆ. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿರುವ ಜಿಟಿ ಫೈನಲ್ ಪಂದ್ಯದಲ್ಲಿಯೂ ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು ಅರ್ಹವಾಗಿಯೇ ಚಾಂಪಿಯನ್ ತಂಡವಾಗಿ ಮೆರೆದಿದೆ. ಈ ಮೂಲಕ ಚೊಚ್ಚಲ ಆವೃತ್ತಿಯಲ್ಲಿಯೇ ಟ್ರೋಫಿ ಗೆದ್ದು ಶ್ರೇಷ್ಠ ಸಾಧನೆ ಮಾಡಿದೆ.

ಆದರೆ ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ ಬಹುತೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ತಂಡ ಸಾಂಘಿಕ ಪ್ರದರ್ಶನ ನೀಡಿರುವ ಕಾರಣದಿಂದಾಗಿಯೇ ಈ ಸಾಧನೆ ಮಾಡುವುದು ಸಾಧ್ಯವಾಗಿದೆ. ಆದರೆ ಚಾಂಪಿಯನ್ ತಮಡದಲ್ಲಿದ್ದರೂ ಕೆಲ ಆಟಗಾರರಿಂದ ಕಳಪೆ ಪ್ರದರ್ಶನ ಬಂದಿದೆ ಎಂಬುದು ಗಮನಾರ್ಹ ಅಂಶ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಮುಂದುವರಿಯಬೇಕಾದರೆ ಕೆಲ ಆಟಗಾರರನ್ನು ತಮಡದಿಂದ ಬಿಡುಗಡೆಗೊಳಿಸುವ ನಿರ್ಧಾರಕ್ಕೆ ಜಿಟಿ ಫ್ರಾಂಚೈಸಿ ಬರುವ ಸಾಧ್ಯತೆಯಿದೆ.

5 ಐಪಿಎಲ್ ಟ್ರೋಫಿ ಗೆದ್ದ ನಂತರ ತನ್ನ ಮುಂದಿನ ಗುರಿ ಏನೆಂದು ರಿವೀಲ್ ಮಾಡಿದ ಹಾರ್ದಿಕ್ ಪಾಂಡ್ಯ5 ಐಪಿಎಲ್ ಟ್ರೋಫಿ ಗೆದ್ದ ನಂತರ ತನ್ನ ಮುಂದಿನ ಗುರಿ ಏನೆಂದು ರಿವೀಲ್ ಮಾಡಿದ ಹಾರ್ದಿಕ್ ಪಾಂಡ್ಯ

ಗುಜರಾತ್ ಟೈಟನ್ಸ್ ತಂಡದ ಪರವಾಗಿ ಆಡಿರುವ ಈ ನಾಲ್ವರು ಆಟಗಾರರು ಮುಂದಿನ ಆವೃತ್ತಿಗೂ ಮುನ್ನ ತಂಡದಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಯಾರು ಆ ನಾಲ್ವರು ಆಟಗಾರರು ಮುಂದೆ ಓದಿ..

ವಿಜಯ್ ಶಂಕರ್‌ ಜಿಟಿ ತಂಡದಲ್ಲಿ ಮುಂದುವರಿಯುವುದು ಅನುಮಾನ

ವಿಜಯ್ ಶಂಕರ್‌ ಜಿಟಿ ತಂಡದಲ್ಲಿ ಮುಂದುವರಿಯುವುದು ಅನುಮಾನ

ತಮಿಳುನಾಡು ಮೂಲದ ವಿಜಯ್ ಶಂಕರ್ ಈ ಬಾರಿಯ ಆವೃತ್ತಿಯಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ದೊಡ್ಡ ನಿರೀಕ್ಷೆಯಿಟ್ಟು ಈ ಆಲ್‌ರೌಂಡರ್ ಮೇಲೆ ಹಣ ಸುರಿದಿದ್ದ ಜಿಟಿ ತಂಡ ನಿರಾಸೆ ಅನುಭವಿಸಿದೆ. ವಿಜಯ್ ಶಂಕರ್‌ಗೆ ಗುಜರಾತ್ ಟೈಟನ್ಸ್ ತಂಡ ಮೂರನೇ ಕ್ರಮಾಂಕವನ್ನು ನೀಡಿ ಕಣಕ್ಕಿಳಿಸಿತ್ತು. ಆದರೆ ಆಡಿದ ನಾಲ್ಕು ಪಂದ್ಯಗಳಲ್ಲಿ ವಿಜಯ್ ಶಂಕರ್ ಗಳಿಸಿದ್ದು ಕೇವಲ 19 ರನ್‌ಗಳನ್ನು ಮಾತ್ರ. ಅಂದರೆ ಸರಾಸರಿ ಐದಕ್ಕೂ ಕಡಿಮೆ. ಇನ್ನು ಬೌಲಿಂಗ್‌ನಲ್ಲಿ 1.3 ಓವರ್‌ಗಳನ್ನು ಎಸೆದಿರುವ ಶಂಕರ್ 10ರಷ್ಟು ಎಕಾನಮಿಯನ್ನು ಹೊಂದಿದ್ದಾರೆ.

ಮ್ಯಾಥ್ಯೂ ವೇಡ್‌ಗೂ ಬಿಡುಗಡೆ ಭಾಗ್ಯ?

ಮ್ಯಾಥ್ಯೂ ವೇಡ್‌ಗೂ ಬಿಡುಗಡೆ ಭಾಗ್ಯ?

ಈ ಬಾರಿಯ ಐಪಿಎಲ್‌ನಲ್ಲಿ ಮ್ಯಾಥ್ಯೂ ವೇಡ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ತನ್ನ ಪ್ರದರ್ಶನದ ಬಗ್ಗೆ ಸ್ವತಃ ವೇಡ್ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. 10 ಪಂದ್ಯಗಳಲ್ಲಿ ಆಡಿರುವ ವೇಡ್ ಕೇವಲ 157 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. ಅವರ ಸ್ಟ್ರೈಕ್‌ರೇಟ್ 115. ಇನ್ನು ಮುಂದಿನ ಆವೃತ್ತಿಯಲ್ಲಿ ಜಿಟಿ ತಂಡಕ್ಕೆ ಜೇಸನ್ ರಾಯ್ ಲಭ್ಯವಾಗುವ ಸಾಧ್ಯತೆಯಿದ್ದು ಅವರಿಗಾಗಿ ವಿದೇಶಿ ಆಟಗಾರನ ಸ್ಥಾನವನ್ನು ಬಿಟ್ಟುಕೊಡಬೇಕಾಗಿದೆ. ರಹ್ಮನುಲ್ಲಾ ಗರ್ಬಾಜ್ ಯುವ ಆಟಗಾರನಾಗಿರುವ ಕಾರಣ ವೇಡ್ ಅವರನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ವೇಗದ ಬೌಲರ್ ವರುಣ್ ಅರೋನ್

ವೇಗದ ಬೌಲರ್ ವರುಣ್ ಅರೋನ್

ಗುಜರಾತ್ ಟೈಟನ್ಸ್ ತಂಡ ಈ ಬಾರಿ ವರುಣ್ ಅರೋನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿ ಎರಡು ಪಂದ್ಯಗಳಲ್ಲಿ ಆಡಿಸಿತ್ತು. ಈ ವೇಗದ ಬೌಲರ್ ಬೌಲಿಂಗ್ ನಡೆಸಿದ ಐದು ಓವರ್‌ಗಳಲ್ಲಿ 52 ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಎರಡು ವಿಕೆಟ್ ಪಡೆದಿದ್ದಾರೆ. ಗಾಯದ ಸಮಸ್ಯೆಯ ಕಾರಣದಿಂದಾಗಿ ಗುಜರಾತ್ ಟೈಟನ್ಸ್ ತಂಡ ಈ ಆಟಗಾರನನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಪತಿಯ‌ ಸಾಧನೆಯಲ್ಲಿ ಮಿಂದೆದ್ದ ಹಾರ್ದಿಕ್ ಪತ್ನಿ ನತಾಶಾ ಪೋಸ್ಟ್ ಫುಲ್ ವೈರಲ್ | #Oneindia Kannada
ದರ್ಶನ್ ನಾಲ್ಕಂಡೆ

ದರ್ಶನ್ ನಾಲ್ಕಂಡೆ

ಈ ಪಟ್ಟಿಯಲ್ಲಿರುವ ಮತ್ತೋರ್ವ ವೇಗದ ಬೌಲರ್ ದರ್ಶನ್ ನಾಲ್ಕಂಡೆ. ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದುಕೊಂಡ ದರ್ಶನ್ ನಾಲ್ಕಂಡೆ 11.41ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಈ ಯುವ ಆಟಗಾರನ ಮೇಲೆ ಮತ್ತೊಂದು ಆವೃತ್ತಿಗೆ ಭರವಸೆಯಿಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, June 1, 2022, 10:21 [IST]
Other articles published on Jun 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X