ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಒಂದು ಪಂದ್ಯವಾಡದಿದ್ದರೂ 2 ಐಪಿಎಲ್ ಟ್ರೋಫಿ ಗೆದ್ದ ತಂಡದ ಭಾಗವಾದ ಅದೃಷ್ಟವಂತ

IPL 2022: Dominic Drakes Has Won Two IPL Trophies Who Has Never Play Single Match In The IPL

ಗುಜರಾತ್ ಟೈಟನ್ಸ್ (ಜಿಟಿ) 2022ರ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಯತ್ನದಲ್ಲಿ ಪ್ರಶಸ್ತಿ ಎತ್ತಿಹಿಡಿಯುವ ಮೂಲಕ ಅದ್ಭುತವಾಗಿ ಐಪಿಎಲ್ ಅಭಿಯಾನವನ್ನು ಆರಂಭಿಸಿತು.

2011ರ ವಿಶ್ವಕಪ್ ಗೆಲುವನ್ನು ನೆನಪಿಸಿದ IPL 2022ರ ಫೈನಲ್ ಗುಜರಾತ್ ಟೈಟನ್ಸ್ ಜಯ; ಅದೇಗೆ?2011ರ ವಿಶ್ವಕಪ್ ಗೆಲುವನ್ನು ನೆನಪಿಸಿದ IPL 2022ರ ಫೈನಲ್ ಗುಜರಾತ್ ಟೈಟನ್ಸ್ ಜಯ; ಅದೇಗೆ?

ಮೇ 29, 2022ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಟೈಟನ್ಸ್ ಏಳು ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್ ಅನ್ನು ಸೋಲಿಸಿತು. ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ, 30 ಎಸೆತಗಳಲ್ಲಿ 34 ರನ್‌ಗಳ ಜೊತೆಗೆ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿ, ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಕೆಲ ಸ್ಟಾರ್ ಆಟಗಾರರಿಗೆ ಕಪ್ ಗೆಲ್ಲುವ ಅದೃಷ್ಟ ಒದಗಿ ಬಂದಿಲ್ಲ

ಕೆಲ ಸ್ಟಾರ್ ಆಟಗಾರರಿಗೆ ಕಪ್ ಗೆಲ್ಲುವ ಅದೃಷ್ಟ ಒದಗಿ ಬಂದಿಲ್ಲ

ಇನ್ನು ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್‌ರಂತಹ ಕೆಲ ಸ್ಟಾರ್ ಆಟಗಾರರಿಗೆ ಐಪಿಎಲ್‍ನಲ್ಲಿ ಒಮ್ಮೆಯೂ ಕಪ್ ಗೆಲ್ಲುವ ಅದೃಷ್ಟ ಒದಗಿ ಬಂದಿಲ್ಲ. ಆದರೆ ವೆಸ್ಟ್ ಇಂಡೀಸ್‌ನ ಆಲ್‍ರೌಂಡರ್ ಡೊಮಿನಿಕ್ ಡ್ರೇಕ್ಸ್ ಐಪಿಎಲ್‍ನಲ್ಲಿ ಒಂದೇ ಒಂದು ಪಂದ್ಯವಾಡದೇ ಎರಡು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ.

ವೆಸ್ಟ್ ಇಂಡೀಸ್ ಲೀಗ್‌ನಲ್ಲಿ ಆಲ್‍ರೌಂಡರ್ ಆಟದ ಮೂಲಕ ಗಮನ ಸೆಳೆದಿದ್ದ ಡೊಮಿನಿಕ್ ಡ್ರೇಕ್ಸ್ ಮೇಲೆ ಭಾರತ ಸೇರಿದಂತೆ ಇತರ ದೇಶಗಳಲ್ಲಿ ನಡೆಯುವ ಫ್ರಾಂಚೈಸ್ ಲೀಗ್‌ನ ಮಾಲೀಕರು ಕಟ್ಟಿದ್ದರು. ಅದರಂತೆ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‍ರೌಂಡರ್ ಸ್ಯಾಮ್ ಕರ್ರನ್ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೊಮಿನಿಕ್ ಡ್ರೇಕ್ಸ್‌ಗೆ ಮಣೆ ಹಾಕಿತ್ತು. ಆದರೆ ಡ್ರೇಕ್ಸ್ ಸಿಎಸ್‌ಕೆ ಪರ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಸಿಎಸ್‍ಕೆ ತಂಡ 2021ರ ಐಪಿಎಲ್‍ನಲ್ಲಿ ಚಾಂಪಿಯನ್ ಆಗಿತ್ತು. ಈ ವೇಳೆ ಡ್ರೀಕ್ಸ್ ತಂಡದಲ್ಲಿದ್ದರಿಂದ ಐಪಿಎಲ್ ವಿಜೇತ ತಂಡದ ಭಾಗವಾಗಿದ್ದರು.

ಗುಜರಾತ್ ಟೈಟನ್ಸ್‌ನ ಭಾಗ

ಗುಜರಾತ್ ಟೈಟನ್ಸ್‌ನ ಭಾಗ

ಆ ಬಳಿಕ ಡೊಮಿನಿಕ್ ಡ್ರೇಕ್ಸ್ ಇದೀಗ ಮುಕ್ತಾಯಗೊಂಡ 15ನೇ ಆವೃತ್ತಿ ಐಪಿಎಲ್‍ನಲ್ಲಿ ಚೊಚ್ಚಲ ಚಾಂಪಿಯನ್ ತಂಡ ಗುಜರಾತ್ ಟೈಟನ್ಸ್‌ನ ಭಾಗವಾಗಿದ್ದಾರೆ. ಆದರೆ ಟೈಟನ್ಸ್ ಪರ ಕೂಡ ಡೊಮಿನಿಕ್ ಡ್ರೇಕ್ಸ್‌ಗೆ ಒಂದೇ ಒಂದು ಐಪಿಎಲ್ ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ. ಆದರೆ ತಂಡ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಡೊಮಿನಿಕ್ ಡ್ರೇಕ್ಸ್ ಸತತ 2 ಐಪಿಎಲ್‍ನಲ್ಲಿ ಟ್ರೋಫಿ ಗೆದ್ದ ತಂಡದ ಸದಸ್ಯನಾದ ಅದೃಷ್ಟವಂತರಾಗಿದ್ದಾರೆ.

ಬಲಿಷ್ಠ ರಾಜಸ್ಥಾನ ರಾಯಲ್ಸ್ ಸೋಲಿಸಿದ ಗುಜರಾತ್

ಬಲಿಷ್ಠ ರಾಜಸ್ಥಾನ ರಾಯಲ್ಸ್ ಸೋಲಿಸಿದ ಗುಜರಾತ್

ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ (3/17) ನೇತೃತ್ವದ ಅತ್ಯುನ್ನತ ಬೌಲಿಂಗ್ ದಾಳಿಗೆ ಬಲಿಷ್ಠ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಘಟಕವನ್ನು ಒಂಬತ್ತು ವಿಕೆಟ್‌ಗೆ 130ಕ್ಕೆ ನಿಯಂತ್ರಿಸಿತು.

ಒಬೆದ್ ಮೆಕಾಯ್ ಅವರ ಬೌಲಿಂಗ್‌ನಲ್ಲಿ ಶುಭ್‌ಮನ್ ಗಿಲ್ ಅವರ ಬೃಹತ್ ಸಿಕ್ಸರ್‌ನಿಂದ ಐಪಿಎಲ್‌ನ ಹೊಸ ತಂಡವಾದ ಗುಜರಾತ್ ಟೈಟನ್ಸ್ ಫೈನಲ್ ಅನ್ನು ಏಳು ವಿಕೆಟ್‌ಗಳಿಂದ ಗೆದ್ದು ಚೊಚ್ಚಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಶುಭ್‌ಮನ್ ಗಿಲ್ ಅಜೇಯ 45 ಮತ್ತು ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ ಅಜೇಯ 32 ರನ್ ಸಹಾಯದಿಂದ ಗುಜರಾತ್ ಟೈಟನ್ಸ್ ಕೇವಲ 18.1 ಓವರ್‌ಗಳಲ್ಲಿ ರಾಜಸ್ಥಾನ ನೀಡಿದ ಗುರಿಯನ್ನು ಬೆನ್ನಟ್ಟಿದರು.

Virat ಮಾಡಿದ ಒಂದೇ ಒಂದು ಪದದ ಟ್ವೀಟ್ ಈ ಥರಾ ದಾಖಲೆ ಸೃಷ್ಟಿ ಮಾಡುತ್ತಾ? | #Cricket | OneIndia Kannada
ಐಪಿಎಲ್‍ನ ಪದಾರ್ಪಣೆ ಪಂದ್ಯ ಕೂಡ ಆಡಿಲ್ಲ

ಐಪಿಎಲ್‍ನ ಪದಾರ್ಪಣೆ ಪಂದ್ಯ ಕೂಡ ಆಡಿಲ್ಲ

ಇದೀಗ ಡೊಮಿನಿಕ್ ಡ್ರೇಕ್ಸ್ ಅದೃಷ್ಟದ ಆಟಗಾರ ಎಂಬ ಬಿರುದನ್ನು ಜಾಗತಿಕ ಕ್ರಿಕೆಟ್ ಪ್ರೇಮಿಗಳು ನೀಡಿದ್ದು, ಡೊಮಿನಿಕ್ ಡ್ರೇಕ್ಸ್ ಮಾತ್ರ ಇನ್ನೂ ಕೂಡ ಐಪಿಎಲ್‍ನ ಪದಾರ್ಪಣೆ ಪಂದ್ಯ ಕೂಡ ಆಡಿಲ್ಲ. ಮುಂದಿನ ಸೀಸನ್‌ನಲ್ಲದರೂ ಗುಜರಾತ್ ಟೈಟನ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

Story first published: Thursday, June 2, 2022, 19:50 [IST]
Other articles published on Jun 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X