ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ತನ್ನದೇ ತಪ್ಪಿನಿಂದ ಚಾಂಪಿಯನ್ ಪಟ್ಟ ಕಳೆದುಕೊಂಡ ಆರ್‌ಆರ್: ರಾಜಸ್ಥಾನ್ ಸೋಲಿಗೆ 4 ಕಾರಣಗಳು!

IPL 2022 Final: 4 reason for Rajasthan Royals defeat in Final match against GT

ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಆಗಿ ಮೆರೆದಿದೆ. ಚೊಚ್ಚಲ ಆವೃತ್ತಿಯಲ್ಲಿಯೇ ಟ್ರೋಫಿ ಗೆಲ್ಲುವ ಮೂಲಕ ಗುಜರಾತ್ ಟೈಟನ್ಸ್ ತಂಡ ಅದ್ಭುತ ಸಾಧನೆ ಮಾಡಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 14 ವರ್ಷಗಳ ಬಳಿಕ ಟ್ರೋಫಿ ಗೆಲ್ಲುವ ಕನಸನ್ನು ಭಗ್ನಗೊಳಿಸಿದೆ.

ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿಕೊಂಡು ಬಂದಿದ್ದ ಗುಜರಾತ್ ಟೈಟನ್ಸ್ ತಂಡ ಫೈನಲ್ ಪಂದ್ಯದಲ್ಲಿಯೂ ಎಡವಲಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಶ್ರೇಷ್ಠ ಪ್ರದರ್ಶನ ನೀಡಿದ ಜಿಟಿ ತಾನು ಚಾಂಪಿಯನ್ ಪಟ್ಟಕ್ಕೇರಲು ಅರ್ಹ ತಂಡ ಎಂದು ಸಾಭೀತುಪಡಿಸಿದೆ. ಆದರೆ ರಾಜಸ್ಥಾನ್ ರಾಯಲ್ಸ್ ತಂಡ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲವಾಗುವ ಮೂಲಕ ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತ್ತು. ಬೌಲಿಂಗ್‌ನಲ್ಲಿ ಒಂದು ಹಂತದಲ್ಲಿ ಯಶಸ್ಸು ಸಾಧಿಸಿದರೂ ಆ ಲಾಭವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ.

IPL 2022: ಈ ಸೀಸನ್‌ನ ಬೆಸ್ಟ್‌ ಪ್ಲೇಯಿಂಗ್ 11 ಭಾರತೀಯ ಆಟಗಾರರನ್ನ ತಿಳಿಸಿದ ಹರ್ಷ ಭೋಗ್ಲೆIPL 2022: ಈ ಸೀಸನ್‌ನ ಬೆಸ್ಟ್‌ ಪ್ಲೇಯಿಂಗ್ 11 ಭಾರತೀಯ ಆಟಗಾರರನ್ನ ತಿಳಿಸಿದ ಹರ್ಷ ಭೋಗ್ಲೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ

ರಾಜಸ್ಥಾನ್ ರಾಯಲ್ಸ ತಂಡ ಈ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿತ್ತು. ಆದರೆ ಅಚ್ಚರಿಯೆಂಬಂತೆ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಳೆದ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರನ್ ಬೆನ್ನಟ್ಟಿ ಅದ್ಭುತ ಗೆಲುವು ಸಾಧಿಸಿದ್ದರೂ ಸಂಜು ಸ್ಯಾಮ್ಸನ್ ಮೊದಲಿಗೆ ಬ್ಯಾಟಿಂಗ್ ನಡೆಸುವ ಧೈರ್ಯ ತೋರಿಸಿದರು. ಆದರೆ ಆರ್‌ಆರ್ ಬ್ಯಾಟರ್‌ಗಳು ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟಿಂಗ್ ನಡೆಸಲಿಲ್ಲ. ಸ್ವತಃ ಸಂಜು ಸ್ಯಾಮ್ಸನ್ ಕೂಡ ಬ್ಯಾಟಿಂಗ್‌ನಲ್ಲಿ ವಿಫಲವಾದರು.

ಫೈನಲ್ ಪಂದ್ಯದ ಒತ್ತಡ ನಿಭಾಯಿಸುವಲ್ಲಿ ವಿಫಲ

ಫೈನಲ್ ಪಂದ್ಯದ ಒತ್ತಡ ನಿಭಾಯಿಸುವಲ್ಲಿ ವಿಫಲ

ಸಂಜು ಸ್ಯಾಮ್ಸನ್ ಪಡೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದಾಗ ಫೈನಲ್ ಪಂದ್ಯದ ಒತ್ತಡವನ್ನು ಅನುಭವಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಗುಜರಾತ್ ಟೈಟನ್ಸ್ ಬೌಲರ್‌ಗಳು ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದರೆ ಆರಂಭದಲ್ಲಿ ಎಚ್ಚರಿಕೆಯ ಆಟವಾಡುವ ಲೆಕ್ಕಾಚಾರಕ್ಕೆ ಮುಂದಾಯಿತು ಆರ್‌ಆರ್ ಪಡೆ. ಈ ಸಂದರ್ಭದಲ್ಲಿ ವಿಕೆಟ್‌ಗಳು ಕೂಡ ಕಳೆದುಕೊಂಡ ಕಾರಣ ಆರ್‌ಆರ್ ಪಡೆಯ ಮೇಲೆ ಬಿದ್ದಿತು. ಇದರ ಲಾಭವನ್ನು ಗುಜರಾತ್ ಟೈಟನ್ಸ್ ಬೌಲರ್‌ಗಳು ಮತ್ತಷ್ಟು ಉತ್ತಮವಾಗಿ ಬಳಸಿಕೊಂಡರು.

ಗುಜರಾತ್ ಟೈಟನ್ಸ್ ಪಡೆಯ ಶಿಸ್ತಿನ ಬೌಲಿಂಗ್

ಗುಜರಾತ್ ಟೈಟನ್ಸ್ ಪಡೆಯ ಶಿಸ್ತಿನ ಬೌಲಿಂಗ್

ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಶಿಸ್ತಿನ ಬೌಲಿಂಗ್ ದಾಳಿ ಆರ್‌ಆರ್ ತಂಡಕ್ಕೆ ಎಲ್ಲೂ ಅವಕಾಶವನ್ನೇ ನೀಡಲಿಲ್ಲ. ಆರಂಭದಿಂದಲೇ ಜಿಟಿ ಬೌಲರ್‌ಗಳು ಆರ್‌ಆರ್ ಮೇಲೆ ಒತ್ತಡವನನ್ಉ ಹೇರುತ್ತಾ ಸಾಗಿದರು. ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ನಾಲ್ಕು ಓವರ್‌ಗಳ ಬೌಲಿಂಗ್ ಕೋಟಾವನ್ನು ಸಂಪೂರ್ಣಗೊಳಿಸಿದ ಹಾರ್ದಿಕ್ ಪಾಂಡ್ಯ ಕೇವಲ 17 ರನ್‌ಗಳನ್ನು ನೀಡಿ ಮೂರು ವಿಕೆಟ್ ಪಡೆದುಕೊಂಡಿದ್ದಾರೆ.ಇನ್ನು ರಶೀದ್ ಖಾನ್, ಯಶ್ ದಯಾಳ್ ಪ್ರದರ್ಶನ ಕೂಡ ಗಮನಾರ್ಹವಾಗಿತ್ತು.

ಆರಂಭದಲ್ಲೇ ಎಡವಟ್ಟು ಮಾಡಿ ಗುಜರಾತ್ ಗೆ ಗೆಲ್ಲೊ ದಾರಿ ಬಿಟ್ಟುಕೊಟ್ಟ Sanju Samson |#cricket |Oneindia Kannada
ನಾಯಕನಾಗಿ ಮಿಂಚಿದ ಹಾರ್ದಿಕ್ ಪಾಂಡ್ಯ

ನಾಯಕನಾಗಿ ಮಿಂಚಿದ ಹಾರ್ದಿಕ್ ಪಾಂಡ್ಯ

ಟೂರ್ನಿಯುದ್ದಕ್ಕೂ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಮಿಂಚಿದ ಹಾರ್ದಿಕ್ ಪಾಂಡ್ಯ ಫೈನಲ್ ಪಂದ್ಯದಲ್ಲಿಯೂ ತನ್ನ ಜವಾಬ್ಧಾರಿಯನ್ನು ಅದ್ಭುತ ರೀತಿಯಲ್ಲಿ ನಿಭಾಯಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ದಾಂಡಿಗರ ವಿರುದ್ಧ ತನ್ನ ಪಡೆಯ ಬೌಲರ್‌ಗಳನ್ನು ಅದ್ಭುತವಾಗಿ ಬಳಸಿಕೊಂಡ ಪಾಂಡ್ಯ ತಾನು ಮುಂದೆ ನಿಂತು ದಾಳಿಗೆ ಮುಂದಾದರು. ಈ ಮೂಲಕ ಬೌಲಿಂಗ್‌ನಲ್ಲಿಯೂ ಪಾಂಡ್ಯ ಮಿಂಚಿದರು. ನಂತರ ಬ್ಯಾಟಿಂಗ್‌ನಲ್ಲಿಯೂ ಸಂದರ್ಭೋಚಿತ ಪ್ರದರ್ಶನ ನೀಡಿದ ಪಾಂಡ್ಯ 30 ಎಸೆತಗಳಲ್ಲಿ 34 ರನ್‌ಗಳಿಸಿ ಮಿಂಚಿದರು. ಈ ಮೂಲಕ ಹಾರ್ದಿಕ್ ಪಾಂಡ್ಯ ನಾಯಕನಾಗಿಯೂ ಈ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದರು. ಇದು ರಾಜಸ್ಥಾನ್ ರಾಯಲ್ಸ್ ತಂಡದ ಸೋಲಿಗೆ ಕಾರಣವಾಯಿತು.

Story first published: Monday, May 30, 2022, 9:52 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X