ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2011ರ ವಿಶ್ವಕಪ್ ಗೆಲುವನ್ನು ನೆನಪಿಸಿದ IPL 2022ರ ಫೈನಲ್ ಗುಜರಾತ್ ಟೈಟನ್ಸ್ ಜಯ; ಅದೇಗೆ?

IPL 2022 Final: Gujarat Titans Win Reminded Everyone of MS Dhoni-led Indias 2011 World Cup Victory

ಐಪಿಎಲ್ 2022ರ ಹದಿನೈದನೇ ಆವೃತ್ತಿಯ ತನ್ನ ಪದಾರ್ಪಣೆ ಟೂರ್ನಿಯಲ್ಲೇ ಚಾಂಪಿಯನ್ ತಂಡವಾಗಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಟೂರ್ನಿಯುದ್ದಕ್ಕೂ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಗುಜರಾತ್ ಟೈಟನ್ಸ್ ತವರಿನ ಅಂಗಳದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಐಪಿಎಲ್ ಪಂದ್ಯಾವಳಿಯ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಇನ್ನು ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಮಂಡಿಯೂರಿದ ರಾಜಸ್ಥಾನ ರಾಯಲ್ಸ್ ಐಪಿಎಲ್ 2022ರ ರನ್ನರ್ ಅಪ್ ತಂಡವಾಗಿದೆ.

ಚೊಚ್ಚಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಜಿಟಿ

ಚೊಚ್ಚಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಜಿಟಿ

ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ (3/17) ನೇತೃತ್ವದ ಅತ್ಯುನ್ನತ ಬೌಲಿಂಗ್ ದಾಳಿಗೆ ಬಲಿಷ್ಠ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಘಟಕವನ್ನು ಒಂಬತ್ತು ವಿಕೆಟ್‌ಗೆ 130ಕ್ಕೆ ನಿಯಂತ್ರಿಸಿತು.

ಒಬೆದ್ ಮೆಕಾಯ್ ಅವರ ಬೌಲಿಂಗ್‌ನಲ್ಲಿ ಶುಭ್‌ಮನ್ ಗಿಲ್ ಅವರ ಬೃಹತ್ ಸಿಕ್ಸರ್‌ನಿಂದ ಐಪಿಎಲ್‌ನ ಹೊಸ ತಂಡವಾದ ಗುಜರಾತ್ ಟೈಟನ್ಸ್ ಫೈನಲ್ ಅನ್ನು ಏಳು ವಿಕೆಟ್‌ಗಳಿಂದ ಗೆದ್ದು ಚೊಚ್ಚಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಶುಭ್‌ಮನ್ ಗಿಲ್ ಅಜೇಯ 45 ಮತ್ತು ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ ಅಜೇಯ 32 ರನ್ ಸಹಾಯದಿಂದ ಗುಜರಾತ್ ಟೈಟನ್ಸ್ ಕೇವಲ 18.1 ಓವರ್‌ಗಳಲ್ಲಿ ರಾಜಸ್ಥಾನ ನೀಡಿದ ಗುರಿಯನ್ನು ಬೆನ್ನಟ್ಟಿದರು.

ಐಪಿಎಲ್ 2022 ಫೈನಲ್: ರಾಜಸ್ಥಾನ ರಾಯಲ್ಸ್ ಮಣಿಸಿ ಚಾಂಪಿಯನ್ ಆದ ಗುಜರಾತ್ ಟೈಟನ್ಸ್

ಶ್ರೀಲಂಕಾ ವಿರುದ್ಧ ಭಾರತದ ಐತಿಹಾಸಿಕ ಗೆಲುವು

ಶ್ರೀಲಂಕಾ ವಿರುದ್ಧ ಭಾರತದ ಐತಿಹಾಸಿಕ ಗೆಲುವು

ಗಮನಾರ್ಹವಾದ ಅಂಶವೆಂದರೆ, ಐಪಿಎಲ್ ಫೈನಲ್ ಪಂದ್ಯವನ್ನು ಗೆದ್ದ ನಂತರ, ಗುಜರಾತ್ ಟೈಟನ್ಸ್ 12 ವರ್ಷಗಳ ಹಿಂದೆ ಸ್ವದೇಶದಲ್ಲಿಯೇ ನಡೆದ 2011ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಐತಿಹಾಸಿಕ ಗೆಲುವಿನೊಂದಿಗೆ ಅವರ ಐಪಿಎಲ್ 2022 ವಿಜಯವನ್ನು ಆಸಕ್ತಿದಾಯಕವಾಗಿ ಹೋಲಿಕೆ ಮಾಡಿ ಗಮನ ಸೆಳೆಯಿತು.

7ನೇ ನಂಬರ್ ಜರ್ಸಿಯನ್ನು ಧರಿಸಿದ್ದ ಶುಭಮನ್ ಗಿಲ್

7ನೇ ನಂಬರ್ ಜರ್ಸಿಯನ್ನು ಧರಿಸಿದ್ದ ಶುಭಮನ್ ಗಿಲ್

ಕುತೂಹಲಕಾರಿಯಾದ ವಿಷಯವೆಂದರೆ, ಗುಜರಾತ್ ಟೈಟನ್ಸ್ ತಂಡದಲ್ಲಿ 7ನೇ ನಂಬರ್ ಜರ್ಸಿಯನ್ನು ಧರಿಸಿದ್ದ ಶುಭಮನ್ ಗಿಲ್, ಸಿಕ್ಸರ್‌ನೊಂದಿಗೆ ಪಂದ್ಯವನ್ನು ಮುಗಿಸಿದರು. ಹೀಗಾಗಿ ಎಂಎಸ್ ಧೋನಿ ಅಭಿಮಾನಿಗಳಿಗೆ 2011ರ ವಿಶ್ವಕಪ್‌ ಫೈನಲ್ ಪಂದ್ಯ ನೆನಪಿಸಿದರು. ಅವರು ಅದೇ ಸಂಖ್ಯೆಯ ಜೆರ್ಸಿಯನ್ನು ಧರಿಸಿದ್ದರು ಮತ್ತು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2011ರ ವಿಶ್ವಕಪ್ ಫೈನಲ್‌ನಲ್ಲಿ ಸಿಕ್ಸರ್‌ನೊಂದಿಗೆ ಪೂರ್ಣಗೊಳಿಸಿದ್ದರು.

ಇದಲ್ಲದೆ, ಆಶಿಶ್ ನೆಹ್ರಾ ಮತ್ತು ಗ್ಯಾರಿ ಕರ್ಸ್ಟನ್ ಆಗ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಇದೇ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದ ಕುಮಾರ್ ಕುಮಾರ್ ಸಂಗಕ್ಕಾರ ಮತ್ತು ಲಸಿತ್ ಮಾಲಿಂಗ ಸೋತರು.

ಸೋತ ತಂಡದ ಭಾಗವಾಗಿದ್ದ ಕುಮಾರ ಸಂಗಕ್ಕಾರ, ಲಸಿತ್ ಮಾಲಿಂಗ

ಸೋತ ತಂಡದ ಭಾಗವಾಗಿದ್ದ ಕುಮಾರ ಸಂಗಕ್ಕಾರ, ಲಸಿತ್ ಮಾಲಿಂಗ

ಭಾನುವಾರವೂ ಅದೇ ರೀತಿ, ಗುಜರಾತ್ ಟೈಟನ್ಸ್ ಕೋಚ್ ಮತ್ತು ಮೆಂಟರ್ ಆಗಿರುವ ನೆಹ್ರಾ ಮತ್ತು ಕರ್ಸ್ಟನ್ ಕ್ರಮವಾಗಿ ಗೆಲುವಿನ ಭಾಗದಲ್ಲಿ ಕೊನೆಗೊಂಡರೆ, ಪ್ರಸ್ತುತ ಕ್ರಿಕೆಟ್ ನಿರ್ದೇಶಕ ಮತ್ತು ರಾಯಲ್ಸ್‌ನ ಮುಖ್ಯ ಕೋಚ್ ಆಗಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರು ರಾಜಸ್ಥಾನ ರಾಯಲ್ಸ್ ಸೋತ ತಂಡದ ಭಾಗವಾಗಿದ್ದರು.

Story first published: Monday, May 30, 2022, 18:00 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X