ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಈ ಆವೃತ್ತಿಯಲ್ಲಿ ನಾಲ್ಕನೇ ಅರ್ಧ ಶತಕ ದಾಖಲಿಸಿದ ಹಾರ್ದಿಕ್ ಪಾಂಡ್ಯ

IPL 2022: Gujarat Titans skipper Hardik pandya hit 4th half century in this season

ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈ ಬಾರಿಯ ಐಪಿಎಲ್‌ನ ನಿರ್ಣಾಯಕ ಪಂದ್ಯದಲ್ಲಿ ಸೆಣೆಸಾಡುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ ನಾಯಕ ಹಾರ್ದಿಕ್ ಪಾಂಡ್ಯ ಮತ್ತೊಂದು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ತಂಡಕ್ಕೆ ಆಸರೆಯಾದರು.

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತೊಂದು ಭರ್ಜರಿ ಅರ್ಧ ಶತಕ ದಾಖಲಿಸಿದ್ದಾರೆ. 38 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಪಾಂಡ್ಯ ಅಂತಿಮ ಹಂತದಲ್ಲಿ ಸಿಡಿಯಲು ಆರಂಭಿಸಿದರು. 47 ಎಸೆತಗಳನ್ನು ಎದುರಸಿದ ಹಾರ್ದಿಕ್ ಪಾಂಡ್ಯ 62 ರನ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರು. ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಈ ಇನ್ನಿಂಗ್ಸ್‌ನಲ್ಲಿ ಹಾರ್ದಿಕ್ ಬ್ಯಾಟ್‌ನಿಂದ ಸಿಡಿದಿತ್ತು.

RCB vs GT: ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಈ ಆಟಗಾರನದ್ದೇ ದೊಡ್ಡ ಚಿಂತೆ!RCB vs GT: ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಈ ಆಟಗಾರನದ್ದೇ ದೊಡ್ಡ ಚಿಂತೆ!

ಇನ್ನು ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಡೇವಿಡ್ ಮಿಲ್ಲರ್ ಹಾಗೂ ರಶೀದ್ ಖಾನ್ ಉತ್ತಮ ಜೊತೆಯಾಟವನ್ನು ನೀಡಿದರು. ಮಿಲ್ಲರ್ ಜೊತೆಗೆ 61 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದ ಪಾಂಡ್ಯಗೆ ಅಂತಿಮ ಹಂತದಲ್ಲಿ ರಶೀದ್ ಖಾನ್ ಜೊತೆಯಾದರು. ರಶೀದ್ ಖಾನ್ ಕೇವಲ 6 ಎಸೆತಗಳನ್ನು ಎದುರಿಸಿ 19 ರನ್‌ಗಳನ್ನು ಗಳಿಸುವ ಮೂಲಕ ಜಿಟಿ ಸವಾಲಿನ ಮೊತ್ತ ಪೇರಿಸಲು ಕಾರಣವಾದರು.

ಇನ್ನು ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅರ್ಧ ಶತಕ ಗಳಿಸುವ ಮೂಲಕ ಈ ಬಾರಿಯ ಆವೃತ್ತಿಯಲ್ಲಿ ನಾಲ್ಕನೇ ಅರ್ಧ ಶತಕ ದಾಖಲಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಈವರೆಗೆ ಒಟ್ಟು 8 ಆವೃತ್ತಿಗಳಲ್ಲಿ ಆಡಿದ್ದು ಈ ಹಿಂದಿನ 7 ಆವೃತ್ತಿಗಳಲ್ಲಿ ಪಾಂಡ್ಉ ಗಳಿಸಿದ ಒಟ್ಟು ಅರ್ಧ ಶತಕಗಳ ಸಂಖ್ಯೆ 4 ಆದರೆ ಈ ಬಾರಿಯ ಆವೃತ್ತಿಯೊಂದರಲ್ಲಿಯೇ ಪಾಂಡ್ಯ 4 ಅರ್ಧ ಶತಕ ದಾಖಲಿಸಿದ್ದಾರೆ. ಈ ಮೂಲಕ ತಾನೆಂಥಾ ಅದ್ಭುತ ಫಾರ್ಮ್‌ನಲ್ಲಿದ್ದೇನೆ ಎಂಬುದನ್ನು ಪಾಂಡ್ಯ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಈಗಾಗಲೇ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯಲ್ಲಿ ಪ್ಲೇಆಫ್ ಹಂತಕ್ಕೇರಿದ ಮೊದಲ ತಂಡ ಎನಿಸಿಕೊಂಡಿದೆ ಗುಜರಾತ್ ಟೈಟನ್ಸ್.

RCB Playoff Chances 2022 : ಗುಜರಾತ್ ವಿರುದ್ಧ ಗೆದ್ದರೂ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸುವುದು ಅನುಮಾನ! ಕಾರಣವೇನು?RCB Playoff Chances 2022 : ಗುಜರಾತ್ ವಿರುದ್ಧ ಗೆದ್ದರೂ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸುವುದು ಅನುಮಾನ! ಕಾರಣವೇನು?

ಪ್ಲೇಯಿಂಗ್ XI:
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಸಿದ್ದಾರ್ಥ್ ಕೌಲ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಆಕಾಶ್ ದೀಪ್, ಅನುಜ್ ರಾವತ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಶೆರ್ಫೇನ್ ರುದರ್ಫೋರ್ಡ್, ಅನೀಶ್ವರ್ ಗೌತಮ್, ಚಾಮ ವಿ ಮಿಲಿಂದ್, ಜೇಸನ್ ಬೆಹ್ರೆನ್ಡಾರ್ಫ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್

KL ರಾಹುಲ್ ವಿರುದ್ಧ ಸೋತಿದ್ದು ಸ್ವಲ್ಪವೂ ಬೇಸರ ಇಲ್ಲ ಅಂತಾ ಶ್ರೇಯಸ್ ಅಯ್ಯರ್ ಹೇಳಿದ್ಯಾಕೆ? | Oneindia Kannada

ಜಿಟಿ: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ
ಬೆಂಚ್: ಪ್ರದೀಪ್ ಸಾಂಗ್ವಾನ್, ವರುಣ್ ಆರೋನ್, ಜಯಂತ್ ಯಾದವ್, ವಿಜಯ್ ಶಂಕರ್, ಗುರುಕೀರತ್ ಸಿಂಗ್ ಮಾನ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ರಹಮಾನುಲ್ಲಾ ಗುರ್ಬಾಜ್, ಡೊಮಿನಿಕ್ ಡ್ರೇಕ್ಸ್, ನೂರ್ ಅಹ್ಮದ್, ಅಲ್ಜಾರಿ ಜೋಸೆಫ್

Story first published: Friday, May 20, 2022, 9:34 [IST]
Other articles published on May 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X