ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು: ಶ್ರೇಷ್ಠ ಸಾಧನೆ ಮಾಡಿದ ಗುಜರಾತ್ ಟೈಟನ್ಸ್

IPL 2022: Gujarat Titans special achievement in the History of IPL

ಐಪಿಎಲ್ 15ನೇ ಆವೃತ್ತಿ ರೋಚಕವಾಗಿ ಸಾಗುತ್ತಿದ್ದು ನಿತ್ಯವೂ ಅಭಿಮಾನಿಗಳಿಗೆ ಅದ್ಭುತ ಮನರಂಜನೆ ದೊರೆಯುತ್ತಿದೆ. ಎಲ್ಲಾ ತಂಡಗಳು ಕೂಡ ತೀವ್ರ ಪೈಪೋಟಿಯ ಪ್ರದರ್ಶನ ನೀಡುತ್ತಿದ್ದು ಹತ್ತು ತಂಡಗಳ ಈ ಕದನ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ಪ್ಲೇಆಫ್ ಹಂತಕ್ಕೇರಲು ಎಲ್ಲಾ ತಂಡಗಳು ಕೂಡ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದೆ. ಈ ಹಂತದಲ್ಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನಿಡುತ್ತಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ವಿಶೇಷ ಸಾಧನೆಯೊಂದನ್ನು ಮಾಡಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಹತ್ತುಗಳು ಮುಖಾಮುಖಿಯಾಗುತ್ತಿದ್ದು ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿದೆ. ಅದರಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಒಂದಾಗಿದ್ದರೆ ಹಾರ್ದಿಲ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ. ಅಹ್ಮದಾಬಾದ್ ಮೂಲದ ಫ್ರಾಂಚೈಸಿ ಅಮೋಘ ಪ್ರದರ್ಶನ ನೀಡುತ್ತಿದ್ದು ಐಪಿಎಲ್ ಇತಿಹಾಸದಲ್ಲಿ ಈವರೆಗೆ ಯಾವ ತಂಡವೂ ಮಾಡದ ಸಾಧನೆಯೊಂದನ್ನು ಮಾಡಿದೆ.

ಸಾಲು ಸಾಲು ಸೋಲುಂಡ ಆರ್‌ಸಿಬಿಗೆ ಪ್ಲೇಆಫ್ ತಲುಪಲು ಉಳಿದಿರುವುದು ಇದೊಂದೇ ಮಾರ್ಗ!ಸಾಲು ಸಾಲು ಸೋಲುಂಡ ಆರ್‌ಸಿಬಿಗೆ ಪ್ಲೇಆಫ್ ತಲುಪಲು ಉಳಿದಿರುವುದು ಇದೊಂದೇ ಮಾರ್ಗ!

ಹಾಗಾದರೆ ಗುಜರಾತ್ ಟೈಟನ್ಸ್ ತಂಡ ಮಾಡಿದ ಆ ಸಾಧನೆ ಯಾವುದು? ಮುಂದೆ ಓದಿ..

ಆರ್‌ಸಿಬಿ ವಿರುದ್ಧವೂ ಭರ್ಜರಿಯಾಗಿ ಗೆದ್ದ ಜಿಟಿ

ಆರ್‌ಸಿಬಿ ವಿರುದ್ಧವೂ ಭರ್ಜರಿಯಾಗಿ ಗೆದ್ದ ಜಿಟಿ

ಈ ಬಾರಿಯ ಐಪಿಎಲ್‌ನಲ್ಲಿ ಗೆಲುವಿನ ಮೇಲೆ ಗೆಲುವು ಸಾಧಿಸುತ್ತಿರುವ ಗುಜರಾತ್ ಟೈಟನ್ಸ್ ತಂಡ ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ಆಡಿದ 9 ಪಂದ್ಯಗಳ ಪೈಕಿ 8 ಗೆಲುವು ಸಂಪಾದಿಸಿದೆ. ಈ ಮೂಲಕ 16 ಅಂಕಗಳನ್ನು ಗಳಿಸಿಕೊಂಡಿದೆ. ಹೀಗಾಗಿ ಪ್ಲೇಆಫ್‌ಗೆ ಟಕೆಟ್ ಪಡೆದ ಮೊದಲ ತಂಡ ಎನಿಸಿಕೊಳ್ಳಲು ಜಿಟಿ ಮತ್ತಷ್ಟು ಸನಿಹದಲ್ಲಿದೆ.

ಐಪಿಎಲ್‌ನಲ್ಲಿ ಟೈಟನ್ಸ್ ವಿಶೇಷ ದಾಖಲೆ

ಐಪಿಎಲ್‌ನಲ್ಲಿ ಟೈಟನ್ಸ್ ವಿಶೇಷ ದಾಖಲೆ

ಈ ಅಮೋಘ ಪ್ರದರ್ಶನದೊಂದಿಗೆ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಇತಿಹಾಸದಲ್ಲಿಯೇ ಅದ್ಭುತ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಟೂರ್ನಿ ಆರಂಭವಾದಾಗಿನಿಂದ ಈವರೆಗಿನ ಟೂರ್ನಿಗಳ ಪೈಕಿ ಅತ್ಯುತ್ತಮ ಆರಂಭವನ್ನು ಪಡೆದ ತಂಡ ಎನಿಸಿಕೊಂಡಿದೆ ಗುಜರಾತ್ ಟೈಟನ್ಸ್. ಗುಜರಾತ್ ಟೈಟನ್ಸ್ ತಂಡ ಆಡಿರುವ 9 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿದೆ. ಈವರೆಗೆ ಈ ಸಾಧನೆಯನ್ನು ಯಾವ ತಂಡ ಕೂಡ ಮಾಡಿಲ್ಲ. ಈ ಪೈಕಿ 5 ಗೆಲುವು ರನ್ ಬೆನ್ನಟ್ಟುವ ಸಂದರ್ಭದಲ್ಲಿಯೇ ಬಂದಿದೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡ 2008ರಲ್ಲಿ ಮತ್ತು ಗುಜರಾತ್ ಲಯನ್ಸ್ ತಂಡ 2016ರಲ್ಲಿ ಆಡಿದ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿದ್ದು ಈವರೆಗಿನ ಅತ್ಯುತ್ತಮ ಆರಂಭವಾಗಿತ್ತು.

ರನ್ ಬೆನ್ನಟ್ಟುವುದರಲ್ಲಿಯೂ ಜಿಟಿ ಮೈಲಿಗಲ್ಲು

ರನ್ ಬೆನ್ನಟ್ಟುವುದರಲ್ಲಿಯೂ ಜಿಟಿ ಮೈಲಿಗಲ್ಲು

ಇನ್ನು ಗುಜರಾತ್ ಟೈಟನ್ಸ್ ಈ ಆವೃತ್ತಿಯಲ್ಲಿ ಗೆದ್ದಿರುವ ಪಂದ್ಯಗಳ ಪೈಕಿ 5ರಲ್ಲಿ ಚೇಸಿಂಗ್ ಮೂಲಕ ಗೆಲುವು ಸಾಧಿಸಿದೆ. ಕುತೂಹಲಕಾರಿ ಸಂಗತಿಯೆಂದರೆ ಈ ಐದು ಗೆಲುವುಗಳು ಕೂಡ 20ನೇ ಓವರ್‌ನಲ್ಲಿ ಬಂದಿದೆ. ಐಪಿಎಲ್ ಇತಿಹಾಸದಲ್ಲಿ ಆರ್ವೃತ್ತಿಯೊಂದರಲ್ಲಿ ಐದು ಪಂದ್ಯಗಳಲ್ಲಿ 20ನೇ ಓವರ್‌ನಲ್ಲಿ ರನ್ ಬೆನ್ನಟ್ಟಿ ಗೆಲುವು ಸಂಪಾದಿಸಿರುವುದು ಇದು ಕೇವಲ 3ನೇ ದೃಷ್ಟಾಂತವಾಗಿದೆ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2019ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಐದು ಬಾರಿ 20ನೇ ಓವರ್‌ನಲ್ಲಿ ರನ್ ಬೆನ್ನಟ್ಟಿ ಗೆದ್ದುಕೊಂಡಿತ್ತು.

Mumbai Indians ಅವರ ಭವಿಷ್ಯ ಏನಾಗಲಿದೆ | Oneindia Kannada
ಗುಜರಾತ್ ಟೈಟನ್ಸ ಸ್ಕ್ವಾಡ್ ಹೀಗಿದೆ

ಗುಜರಾತ್ ಟೈಟನ್ಸ ಸ್ಕ್ವಾಡ್ ಹೀಗಿದೆ

ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್, ರಹಮಾನುಲ್ಲಾ ಗುರ್ಬಾಜ್

Story first published: Monday, May 2, 2022, 11:14 [IST]
Other articles published on May 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X