ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs DC: ಅದು ನನ್ನ ಪ್ರಮುಖ ಗುರಿ: ಆಯ್ಕೆಗಾರರಿಗೆ ದೊಡ್ಡದಾಗಿ ಸಂದೇಶ ರವಾನಿಸಿದ ದಿನೇಶ್ ಕಾರ್ತಿಕ್

IPL 2022: I have bigger goal Dinesh Karthik statement after victoey against Delhi Capitals

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಅದ್ಭುತ ಪ್ರದರ್ಶನ ನಿಡಿ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಪರವಾಗಿ ಮತ್ತೊಮ್ಮೆ ಮಿಂಚಿದ್ದು ಅನುಭವಿ ಆಟಗಾರ ದಿನೇಶ್ ಕಾರ್ತಿಕ್. ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ಪರವಾಗಿ ಪ್ರತಿ ಪಂದ್ಯದಲ್ಲಿಯೂ ಮಿಂಚುತ್ತಿರುವ ದಿನೇಶ್ ಕಾರ್ತಿಕ್ ಫಿನಿಷರ್ ಜವಾಬ್ಧಾರಿಯನ್ನು ಅತ್ಯಂತ ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಅದಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ 11.2 ಓವರ್‌ಗಳಲ್ಲಿ 92 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ದಿನೇಶ್ ಕಾರ್ತಿಕ್ ಕ್ರೀಸ್‌ಗೆ ಇಳಿದಿದ್ದರು.

ಈ ಸಂದರ್ಭದಲ್ಲಿ ರನ್ ಏರಿಸುವುದರ ಜೊತೆಗೆ ತಂಡವನ್ನು ಕುಸಿತದಿಂದ ಪಾರು ಮಾಡುವ ಜವಾಬ್ಧಾರಿ ಕೂಡ ದಿನೇಶ್ ಕಾರ್ತಿಕ್ ಮೇಲಿತ್ತು. ಈ ಜವಾಬ್ಧಾರಿಯನ್ನು ದಿನೇಶ್ ಕಾರ್ತಿಕ್ ಶಹ್ಬಾಜ್ ಅಹ್ಮದ್ ಜೊತೆ ಸೇರಿ ಅದ್ಭುತವಾಗಿ ನಿರ್ವಹಿಸಿದರು. ಈ ಜೋಡಿ ಅಜೇಯ 97 ರನ್‌ಗಳ ಅಮೋಘ ಕೊಡುಗೆ ನೀಡುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 189 ರನ್‌ಗಳಿಸಲು ಕಾರಣವಾದರು. ಇದರಲ್ಲಿ ದಿನೇಶ್ ಕಾರ್ತಿಕ್ 34 ಎಸೆತಗಳನ್ನು ಎದುರಿಸಿ 66 ರನ್ ಬಾರಿಸಿದ್ದರು. ಐದು ಬೌಂಡಿಉ ಹಾಗೂ ಐದು ಸಿಕ್ಸ್ ಡಿಕೆ ಬ್ಯಾಟ್‌ನಿಂದ ಸಿಡಿದಿತ್ತು. ಈ ಮೊತ್ತವನ್ನು ಬೆನ್ನಟ್ಟಲಾಗದ ಡೆಲ್ಲಿ ಕ್ಯಾಪಿಟಲ್ಸ್ ತಂಡ 173 ರನ್‌ಗಳಿಗೆ ಆಲೌಟ್ ಇನ್ನಿಂಗ್ಸ್ ಮುಗಿಸಯುವ ಮೂಲಕ 16 ರನ್‌ಗಳ ಅಂತರದಿಂದ ಆರ್‌ಸಬಿ ತಂಡಕ್ಕೆ ಶರಣಾಗಿದೆ.

RCB vs DC: ಮಿಂಚಿದ ಬೌಲರ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದ ಆರ್‌ಸಿಬಿRCB vs DC: ಮಿಂಚಿದ ಬೌಲರ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದ ಆರ್‌ಸಿಬಿ

ನನ್ನ ಗುರಿ ದೊಡ್ಡದಿದೆ

ನನ್ನ ಗುರಿ ದೊಡ್ಡದಿದೆ

ಪಂದ್ಯದ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್ "ನಾನು ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದೇನೆ. ಅದಕ್ಕಾಗಿ ನಾನು ನಿಜಕ್ಕೂ ಬಹಳ ಬಹಳ ಶ್ರಮಪಡುತ್ತಿದ್ದೇನೆ. ಕೆಲ ಬಾರಿ ಜನರು ಅದನ್ನು ನಂಬುವುದಿಲ್ಲ. ನನ್ನ ಗುದಿ ನನ್ನ ದೇಶಕ್ಕಾಗಿ ವಿಶೇಷ ಸಾಧನೆಯನ್ನು ಮಾಡುವುದಾಗಿದೆ. ಇದು ಆ ಪ್ರಯಾಣದ ಭಾಗವಾಗಿದ್ದು ಅದಕ್ಕಾಗಿ ನಾನು ಎಲ್ಲವನ್ನೂ ಮಾಡುತ್ತಿದ್ದೇನೆ. ಹಾಗಿದ್ದಾಗ ನಾನು ಟೀಮ್ ಇಂಡಿಯಾದ ಭಾಗವಾಗಬಹುದು. ಇದು ಆ ನಿಟ್ಟಿನಲ್ಲಿ ನನ್ನ ಹೆಜ್ಜೆ" ಎಂದು ದಿನೇಶ್ ಕಾರ್ತಿಕ್ ತನ್ನ ಗುರಿಯನ್ನು ಸ್ಪಷ್ಟವಾಗಿ ಸಾರಿ ಹೇಳಿದ್ದಾರೆ.

ಫಿನಿಷರ್ ಆಗಿ ಕಾರ್ತಿಕ್ ಆರ್ಭಟ

ಫಿನಿಷರ್ ಆಗಿ ಕಾರ್ತಿಕ್ ಆರ್ಭಟ

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ ದಿನೇಶ್ ಕಾರ್ತಿಕ್ ಫಿನಿಷರ್ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದು ಆ ಜವಾಬ್ಧಾರಿಯನ್ನು ಅತ್ಯಂತ ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಕಳೆದ ಆರು ಇನ್ನಿಂಗ್ಸ್‌ಗಳಲ್ಲಿ ಆರ್‌ಸಿಬಿ ಪರವಾಗಿ ಬ್ಯಾಟಿಂಗ್‌ಗೆ ಇಳಿದಿರುವ ಡಿಕೆ ಕೆಳ ಕ್ರಮಾಂಖದಲ್ಲಿ ಕಣಕ್ಕಿಳಿದರೂ 192 ರನ್‌ಗಳನ್ನು ಬಾರಿಸಿದ್ದಾರೆ. ಅವರ ಹೈಯೆಸ್ಟ್ ಅಜೇಯ 61 ರನ್. ಇಡೀ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಒಮ್ಮೆ ಮಾತ್ರವೇ ವಿಕೆಟ್ ಒಪ್ಪಿಸಿದ್ದಾರೆ ಎಂಬುದು ಗಮನಾರ್ಹ ಅಂಶ. ಆಡಿರುವ 6 ಇನ್ನಿಂಗ್ಸ್‌ಗಳಲ್ಲಿ 18 ಬೌಂಡರಿ ಹಾಗೂ 14 ಸಿಕ್ಸರ್ ಸಿಡಿಸಿದ್ದಾರೆ.

Catch ಹಿಡಿದ Kohli , Anushka ಕಡೆಗೆ ತಿರುಗಿ ಮಾಡಿದ್ದೇನು | Oneindia Kannada
2019ರ ವಿಶ್ವಕಪ್‌ ಬಳಿಕ ತಂಡದಿಂದ ಹೊರಬಿದ್ದ ಡಿಕೆ

2019ರ ವಿಶ್ವಕಪ್‌ ಬಳಿಕ ತಂಡದಿಂದ ಹೊರಬಿದ್ದ ಡಿಕೆ

ದಿನೇಶ್ ಕಾರ್ತಿಕ್ 2019ರ ಏಕದಿನ ವಿಶ್ವಕಪ್‌ನ ಬಳಿಕ ಟೀಮ್ ಇಂಡಿಯಾ ಸ್ಕ್ವಾಡ್‌ನಿಂದ ಹೊರಬಿದ್ದಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಈ ವಿಶ್ವಕಪ್‌ನಲ್ಲಿ ಭಾರತ ಸಮಿ ಫೈನಲ್‌ನಲ್ಲಿ ಸೋತು ಹೊರಬಿದ್ದ ಬಳಿಕ ಡಿನೇಶ್ ಕಾರ್ತಿಕ್ ಭಾರತ ತಂಡದಿಂದ ಸಂಪೂರ್ಣವಾಗಿ ಹೊರಗುಳಿದರು. ಇನ್ನು ದಿನೇಶ್ ಕಾರ್ತಿಕ್ ಭಾರತದ ಪರವಾಗಿ ಟಿ20 ಮಾದರಿಯಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದಿದ್ದು 2019ರ ಫೆಬ್ರವರಿಯಲ್ಲಿ. ಅದಾದ ಬಳಿಕ ದಿನೇಶ್ ಕಾರ್ತಿಕ್ ಭಾರತ ತಂಡದ ಆಯ್ಕೆಗೆ ಪರಿಗಣನೆಯಾಗಲೇ ಇಲ್ಲ.

Story first published: Sunday, April 17, 2022, 9:39 [IST]
Other articles published on Apr 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X