ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಸಿಡಿದದ್ದು 1062 ಸಿಕ್ಸರ್; ಹೆಚ್ಚು ಸಿಕ್ಸರ್ ಬಾರಿಸಿದ್ದು ಈ ತಂಡ, ಬಲಿಷ್ಠ ತಂಡವೇ ಕಳಪೆ!

IPL 2022: List of teams with most number of sixes in the tournament; GT team has the lowest sixes

ವಿಶ್ವದ ಶ್ರೀಮಂತ ಹಾಗೂ ಅತಿ ಹೆಚ್ಚು ಕ್ರಿಕೆಟ್ ಪ್ರೇಮಿಗಳಿಂದ ವೀಕ್ಷಿಸಲ್ಪಡುವ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದೇ ಖ್ಯಾತಿಯನ್ನು ಪಡೆದಿರುವಂತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿಗೆ ಮೇ 29ರ ಭಾನುವಾರದಂದು ನಡೆದ ಫೈನಲ್ ಪಂದ್ಯದ ಮೂಲಕ ತೆರೆ ಬಿದ್ದಿದೆ.

IPL 2022: ಈ 5 ತಂಡಗಳ ಆಟಗಾರರು ಒಮ್ಮೆಯೂ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಯನ್ನು ಗೆದ್ದೇ ಇಲ್ಲ!IPL 2022: ಈ 5 ತಂಡಗಳ ಆಟಗಾರರು ಒಮ್ಮೆಯೂ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಯನ್ನು ಗೆದ್ದೇ ಇಲ್ಲ!

ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಅಮೋಘ ಜಯ ಸಾಧಿಸುವುದರ ಮೂಲಕ ಕಣಕ್ಕಿಳಿದ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು.

ಐಪಿಎಲ್ 2022 ಮುಕ್ತಾಯದ ಬೆನ್ನಲ್ಲೇ ಶುರು ಟೀಮ್ ಇಂಡಿಯಾ ಪಂದ್ಯಗಳು; ಜೂನ್-ಜುಲೈ ತಿಂಗಳ ವೇಳಾಪಟ್ಟಿಐಪಿಎಲ್ 2022 ಮುಕ್ತಾಯದ ಬೆನ್ನಲ್ಲೇ ಶುರು ಟೀಮ್ ಇಂಡಿಯಾ ಪಂದ್ಯಗಳು; ಜೂನ್-ಜುಲೈ ತಿಂಗಳ ವೇಳಾಪಟ್ಟಿ

ಇತ್ತ ಮೊದಲಿಗೆ ಪ್ಲೇ ಆಫ್ ಸುತ್ತಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋತು ನಂತರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದ್ದ ರಾಜಸ್ಥಾನ್ ರಾಯಲ್ಸ್ ಮತ್ತೆ ಗುಜರಾತ್ ಟೈಟನ್ಸ್ ವಿರುದ್ಧ ಸೋಲುಂಡಿತು. ಹೀಗೆ ತನ್ನ ಎರಡನೇ ಐಪಿಎಲ್ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಳ್ಳಲಾಗದ ರಾಜಸ್ಥಾನ್ ರಾಯಲ್ಸ್ ತಂಡದ ಹಲವಾರು ಆಟಗಾರರು ಟೂರ್ನಿಯಲ್ಲಿ ದಾಖಲೆ ಬರೆಯುವುದರಲ್ಲಿ ಮಾತ್ರ ವಿಫಲರಾಗಿಲ್ಲ. ತಂಡದ ಜೋಸ್ ಬಟ್ಲರ್ ಬಹುತೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದು, ಇತರೆ ಕೆಲ ಆಟಗಾರರು ಕೂಡ ವಿವಿಧ ದಾಖಲೆಗಳನ್ನು ನಿರ್ಮಿಸಿದ್ದಾರೆ. ಹೀಗೆ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ನಿರ್ಮಿಸಿರುವ ದಾಖಲೆಗಳಲ್ಲಿ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡ ಎಂಬ ದಾಖಲೆ ಕೂಡ ಒಂದು. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 1062 ದಾಖಲೆಯ ಸಿಕ್ಸರ್ ಸಿಡಿದಿದ್ದು, ಎಲ್ಲಾ ತಂಡಗಳು ಸಿಡಿಸಿದ ಸಿಕ್ಸರ್ ಸಂಖ್ಯೆ ಮುಂದೆ ಇದೆ ಓದಿ.

ಟೂರ್ನಿಯಲ್ಲಿ ಪ್ರತಿ ತಂಡಗಳು ಸಿಡಿಸಿದ ಸಿಕ್ಸರ್ ಸಂಖ್ಯೆ

ಟೂರ್ನಿಯಲ್ಲಿ ಪ್ರತಿ ತಂಡಗಳು ಸಿಡಿಸಿದ ಸಿಕ್ಸರ್ ಸಂಖ್ಯೆ

ರಾಜಸ್ಥಾನ್ ರಾಯಲ್ಸ್ - 17 ಪಂದ್ಯಗಳು - 137 ಸಿಕ್ಸರ್

ಲಕ್ನೋ ಸೂಪರ್ ಜೈಂಟ್ಸ್ - 15 ಪಂದ್ಯಗಳು - 115 ಸಿಕ್ಸರ್

ಕೋಲ್ಕತ್ತಾ ನೈಟ್ ರೈಡರ್ಸ್ - 14 ತಂಡಗಳು - 113 ಸಿಕ್ಸರ್

ಪಂಜಾಬ್ ಕಿಂಗ್ಸ್ - 14 ಪಂದ್ಯಗಳು - 110 ಸಿಕ್ಸರ್

ಡೆಲ್ಲಿ ಕ್ಯಾಪಿಟಲ್ಸ್ - 14 ಪಂದ್ಯಗಳು - 106 ಸಿಕ್ಸರ್

ಚೆನ್ನೈ ಸೂಪರ್ ಕಿಂಗ್ಸ್ - 14 ಪಂದ್ಯಗಳು - 103 ಸಿಕ್ಸರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು - 16 ಪಂದ್ಯಗಳು - 102 ಸಿಕ್ಸರ್

ಮುಂಬೈ ಇಂಡಿಯನ್ಸ್ - 14 ಪಂದ್ಯಗಳು - 100 ಸಿಕ್ಸರ್

ಸನ್ ರೈಸರ್ಸ್ ಹೈದರಾಬಾದ್ - 14 ಪಂದ್ಯಗಳು - 97 ಸಿಕ್ಸರ್

ಗುಜರಾತ್ ಟೈಟನ್ಸ್ - 16 ಪಂದ್ಯಗಳು - 79 ಸಿಕ್ಸರ್

ಸಿಕ್ಸರ್ ಲೆಕ್ಕಾಚಾರದಲ್ಲಿ ಚಾಂಪಿಯನ್ಸ್ ಕಳಪೆ

ಸಿಕ್ಸರ್ ಲೆಕ್ಕಾಚಾರದಲ್ಲಿ ಚಾಂಪಿಯನ್ಸ್ ಕಳಪೆ

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಗುಜರಾತ್ ಟೈಟನ್ಸ್ ಸಿಕ್ಸರ್ ಲೆಕ್ಕಾಚಾರದಲ್ಲಿ ಕಳಪೆಯಾಗಿದೆ. ಎಲ್ಲಾ ತಂಡಗಳಿಗಿಂತ ಟೂರ್ನಿಯಲ್ಲಿ ಅತಿ ಕಡಿಮೆ ಸಿಕ್ಸರ್ ಬಾರಿಸಿದ ತಂಡ ಎಂದು ಗುಜರಾತ್ ಟೈಟನ್ಸ್ ಗುರುತಿಸಿಕೊಂಡಿದೆ. 16 ಪಂದ್ಯಗಳಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯಾ ಬಳಗ ಕೇವಲ 79 ಸಿಕ್ಸರ್ ಬಾರಿಸಿದೆ.

ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಯಾರು?

ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಯಾರು?

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 863 ರನ್ ಚಚ್ಚಿ ಆರೆಂಜ್ ಕ್ಯಾಪ್ ವಿಜೇತನಾಗಿ ಹೊರಹೊಮ್ಮಿದ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 17 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜೋಸ್ ಬಟ್ಲರ್ 45 ಸಿಕ್ಸರ್ ಚಚ್ಚಿ ಅಬ್ಬರಿಸಿದ್ದರು.

Story first published: Saturday, June 4, 2022, 21:34 [IST]
Other articles published on Jun 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X