ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SRH Playing 11, IPL 2022: ಸನ್‌ರೈಸರ್ಸ್ ಹೈದ್ರಾಬಾದ್ ಸಂಭಾವ್ಯ ಪ್ಲೇಯಿಂಗ್ 11

SRH

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆ ಬಳಿಕ ಎಲ್ಲಾ ತಂಡದ ಸ್ಕ್ವಾಡ್‌ಗಳು ಟೇಬಲ್ ಮೇಲಿದೆ. ಆದರೆ ಬಲಿಷ್ಠ ತಂಡ ರಚನೆಯ ಜೊತೆಗೆ ಕಣಕ್ಕಿಳಿಯುವ ಹನ್ನೊಂದು ಆಟಗಾರರು ಯಾರು ಎಂಬುದನ್ನ ಸಾಕಷ್ಟು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.

ಪ್ರತಿ ಫ್ರಾಂಚೈಸಿಯಂತೆ ಸನ್‌ರೈಸರ್ಸ್ ಹೈದ್ರಾಬಾದ್ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಇದುವರೆಗೂ 9 ಸೀಸನ್‌ಗಳನ್ನು ಆಡಿರುವ ಎಸ್‌ಆರ್‌ಎಚ್‌ ಒಮ್ಮೆ ಚಾಂಪಿಯನ್ ಆಗಿದ್ದು, ಒಮ್ಮೆ ರನ್ನರ್ ಅಪ್, ನಾಲ್ಕು ಬಾರಿ ಪ್ಲೇ ಆಫ್‌ ಪ್ರವೇಶಿಸಿದ್ದು, ಇನ್ನೆರಡು ಬಾರಿ ಆರನೇ ಸ್ಥಾನ ಕಾಯ್ದುಕೊಂಡಿದೆ. ಮತ್ತು ಒಮ್ಮೆ ಕೊನೆಯ ಸ್ಥಾನ ಪಡೆದಿದೆ.

ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ ಆರೆಂಜ್‌ ಆರ್ಮಿ

ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ ಆರೆಂಜ್‌ ಆರ್ಮಿ

ನಾವು ಯಾವುದೇ ಸೀಸನ್‌ ನೋಡಿದರೂ ಸನ್‌ರೈಸರ್ಸ್ ಹೈದ್ರಾಬಾದ್ ಬಹುತೇಕ ಬೌಲಿಂಗ್‌ ಮೇಲೆ ಹೆಚ್ಚು ಅವಲಂಬಿತವಾಗಿದೆ. ಎರಡೂ ಕಡೆ ಹರಿತವಾದ ಕತ್ತಿಯಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿ ಎದುರಾಳಿಯ ಮೇಲೆ ಅಬ್ಬರಿಸುವುದು ಆರೆಂಜ್ ಆರ್ಮಿ ಶೈಲಿ. ದರೆ ಕಳೆದ ಋತುವಿನಲ್ಲಿ ಆ ಅಂಕಿ ಅಂಶ ಬದಲಾಗಿದೆ. ಕಳಪೆ ಪ್ರದರ್ಶನದ ಜೊತೆಗೆ ತಂಡ ನಿರ್ವಹಣೆಯ ಅನಗತ್ಯ ರಾಜಕೀಯದಿಂದ ತಂಡವು ಹೀನಾಯ ಸೋಲನ್ನು ಅನುಭವಿಸಿತು. ಹೀಗಾಗಿಯೇ ಪಾಯಿಂಟ್‌ಗಳ ಪಟ್ಟಿಯಲ್ಲಿ ಕೆಳಭಾಗದಲ್ಲಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಐಪಿಎಲ್ 2022ರ ಋತುವಿನಲ್ಲಿ ತಂಡವು ತನ್ನ ಛಾಪು ಮೂಡಿಸುವ ಆಶಯ ಹೊಂದಿದೆ.

ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಕೇನ್ ವಿಲಿಯಮ್ಸನ್

ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಕೇನ್ ವಿಲಿಯಮ್ಸನ್

ಸನ್‌ರೈಸರ್ಸ್ ಹೈದ್ರಾಬಾದ್‌ಗೆ ಎದುರಾಗಿರುವ ದೊಡ್ಡ ಸವಾಲು ಅಂದ್ರೆ ಅದು ಫಿಟ್ನೆಸ್ ಸಮಸ್ಯೆಯಿಂದ ಕೇನ್ ವಿಲಿಯಮ್ಸನ್‌ ಬಳಲುತ್ತಿರುವುದು. ಸನ್ ರೈಸರ್ಸ್ ಹೈದ್ರಾಬಾದ್ ದೇಶಿಯ ತಾರೆಯರ ಕಡೆಗೂ ಗಮನ ಹರಿಸಲಿಲ್ಲ. 10.75 ಕೋಟಿ ಖರ್ಚು ಮಾಡಿದ ಸನ್ ರೈಸರ್ಸ್ ನಿಕೋಲಸ್ ಪೂರನ್ ಪಡೆದಿದೆ. ಆದ್ರೆ ಶ್ರೇಯಸ್ ಅಯ್ಯರ್ ಗೆ ಇನ್ನೂ ಎರಡು ಕೋಟಿ ಕೊಟ್ಟು ಆಯ್ಕೆ ಮಾಡುವ ಅವಕಾಶವಿತ್ತು. ಆದ್ರೆ ಎಸ್‌ಆರ್‌ಎಚ್‌ ಕಡೆ ಯಾವ ಪ್ರಯತ್ನವೂ ನಡೆಯಲಿಲ್ಲ. ರಶೀದ್ ಖಾನ್ ರಂತಹ ಸ್ಟಾರ್ ಸ್ಪಿನ್ನರ್ ನನ್ನು ಬಿಟ್ಟುಕೊಟ್ಟಿದೆ. ಸೈಮನ್ ಕ್ಯಾಟಿಚ್ ತಂಡದ ಸಹಾಯಕ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸನ್ ರೈಸರ್ಸ್ ಅಸಮಾಧಾನಕ್ಕೆ ಕಾರಣವಾಗಿದೆ.

ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!

ಪೇಪರ್ ಮೇಲೆ ಬಲಿಷ್ಠವಾಗಿದೆ ಎಸ್‌ಆರ್‌ಎಚ್‌

ಪೇಪರ್ ಮೇಲೆ ಬಲಿಷ್ಠವಾಗಿದೆ ಎಸ್‌ಆರ್‌ಎಚ್‌

ಸನ್ ರೈಸರ್ಸ್ ಹೈದರಾಬಾದ್ ಆಯ್ಕೆ ಮಾಡಿರುವ ತಂಡವನ್ನು ನೋಡಿದರೆ ಅದು ಪೇಪರ್ ಮೇಲೆ ಬಲಿಷ್ಠವಾಗಿದೆ. ತಂಡದ ಎಲ್ಲ ಆಟಗಾರರಲ್ಲೂ ಪ್ರತಿಭೆಗೆ ಕೊರತೆಯಿಲ್ಲ. ಆದರೆ ಮೈದಾನದಲ್ಲಿ ಮಿಂಚುತ್ತದೆಯೇ? ಎಂಬ ಸಂದೇಹ ಮೂಡಿಸಿದೆ. ಅತ್ಯಂತ ದುಬಾರಿ ನಿಕೋಲಸ್ ಪೂರನ್.. ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿದ್ದಾರೆ. ಪೂರನ್ ಸತತವಾಗಿ ಮಿಂಚುತ್ತಿರುವುದು ತಂಡಕ್ಕೆ ಪ್ಲಸ್‌ ಪಾಯಿಂಟ್ ಆಗಿದೆ. ಆದರೆ ನಿಜವಾದ ಸಮಸ್ಯೆ ಏನೆಂದರೆ ರಾಹುಲ್ ತ್ರಿಪಾಠಿ ಮತ್ತು ಸುಂದರ್ ಸರಿಯಾದ ಆಯ್ಕೆಯಾದರೂ ತಂಡದಲ್ಲಿ ವಿಕೆಟ್ ಪಡೆಯುವ ಸ್ಪಿನ್ನರ್ ಇಲ್ಲ. ಸುಂದರ್ ಉತ್ತಮ ಎಕಾನಮಿಯೊಂದಿಗೆ ಬೌಲಿಂಗ್ ಮಾಡಬಲ್ಲರು , ಆದ್ರೆ ವಿಕೆಟ್ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ.

ರಣಜಿ ಕ್ರಿಕೆಟ್: IPL ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶ್ರೀಶಾಂತ್ ಭರ್ಜರಿ ಕಂಬ್ಯಾಕ್

ಇನ್ನೂ ಮಿಂಚಬೇಕಾಗಿರುವ ಯುವ ಆಟಗಾರರು

ಇನ್ನೂ ಮಿಂಚಬೇಕಾಗಿರುವ ಯುವ ಆಟಗಾರರು

ಅನ್‌ಕ್ಯಾಪ್ಡ್‌ ಆಟಗಾರರಾದ ಅಬ್ದುಲ್ ಸಮದ್ ಮತ್ತು ಅಭಿಷೇಕ್ ಶರ್ಮಾ ಇನ್ನೂ ಏನನ್ನೂ ಸಾಬೀತುಪಡಿಸಿಲ್ಲ. ವಿಂಡೀಸ್ ಆಲ್ ರೌಂಡರ್ ರೊಮಾರಿಯೊ ಶೆಫರ್ಡ್ ಉತ್ತಮ ಆಯ್ಕೆ. ದೊಡ್ಡ ಹಿಟ್ಟರ್ ಆಗಿರುವ ಅವರು ತಂಡಕ್ಕೆ ಉಪಯೋಗವಾಗಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮಾಜಿ ಆಟಗಾರರಾದ ಭುವನೇಶ್ವರ್ ಕುಮಾರ್ ಮತ್ತು ನಟರಾಜನ್ ಅವರನ್ನು ನೇಮಕ ಮಾಡಿದ್ದರೂ ಅವರು ಲಯದಲ್ಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಟರಾಜನ್ ಗಾಯದಿಂದ ಬಳಲುತ್ತಿದ್ದಾರೆ. ಭುವಿ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಆದಾಗ್ಯೂ, ಬೌಲಿಂಗ್ ವಿಭಾಗವು ಮಾರ್ಕೊ ಜಾನ್ಸನ್, ಕಾರ್ತಿಕ್ ತ್ಯಾಗಿ ಮತ್ತು ಉಮ್ರಾನ್ ಮಲಿಕ್ ಅವರೊಂದಿಗೆ ಬಲವಾಗಿ ಕಾಣುತ್ತದೆ. ನಿಕೋಲಸ್ ಪೂರನ್ ವಿಕೆಟ್ ಕೀಪರ್ ಆಗಿದ್ದರೆ, ಗ್ಲೆನ್ ಫಿಲಿಪ್ಸ್ ಮತ್ತು ವಿಷ್ಣು ವಿನೋದ್ ಬ್ಯಾಕಪ್ ಆಗಿದ್ದಾರೆ.

ಸ್ಫೋಟಕ ಓಪನರ್‌ಗಳ ಕೊರತೆ ಕಾಡುತ್ತಿದೆ

ಸ್ಫೋಟಕ ಓಪನರ್‌ಗಳ ಕೊರತೆ ಕಾಡುತ್ತಿದೆ

ಇನ್ನು ಸನ್‌ರೈಸರ್ಸ್‌ಗೆ ವಾರ್ನರ್‌ನಂತಹ ವಿಧ್ವಂಸಕ ಆರಂಭಿಕರು ಇಲ್ಲ. ಇದರೊಂದಿಗೆ ಅಭಿಷೇಕ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದಾರೆ. ಈ ಹಿಂದೆ ಕೇನ್ ಕೂಡ ಓಪನಿಂಗ್ ಬ್ಯಾಟ್ ಮಾಡಿದ್ದರು. ಅಭಿಷೇಕ್ ದೇಶಿಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಆಡಿದ ಅನುಭವ ಹೊಂದಿದ್ದಾರೆ. ಆ ನಂತರ ಏಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ ಮತ್ತು ನಿಕೋಲಸ್ ಪೂರನ್ ಬ್ಯಾಟಿಂಗ್‌ಗೆ ಬರಲಿದ್ದಾರೆ. ವಾಷಿಂಗ್ಟನ್ ಸುಂದರ್ ಮತ್ತು ಅಬ್ದುಲ್ ಸಮದ್ ಕ್ರಮವಾಗಿ ಆರು ಮತ್ತು ಏಳನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆಯಿದೆ. ಪೇಸ್ ಆಲ್ ರೌಂಡರ್ ಹಾಗೂ ಹೆವಿ ಹಿಟ್ಟರ್ ರೊಮಾರಿಯೊ ಶೆಫರ್ಡ್ 8ನೇ ಸ್ಥಾನದಲ್ಲಿ ಆಡಲಿದ್ದಾರೆ. ಭುವನೇಶ್ವರ್ ಕುಮಾರ್, ಟಿ ನಟರಾಜನ್ ಮತ್ತು ಕಾರ್ತಿಕ್ ತ್ಯಾಗಿ / ಉಮ್ರಾನ್ ಮಲಿಕ್ ವೇಗಿಗಳಾಗಿದ್ದಾರೆ.

ಸನ್‌ರೈಸರ್ಸ್ ಹೈದ್ರಾಬಾದ್‌ ಸಂಭಾವ್ಯ ಪ್ಲೇಯಿಂಗ್ 11

ಸನ್‌ರೈಸರ್ಸ್ ಹೈದ್ರಾಬಾದ್‌ ಸಂಭಾವ್ಯ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ರೊಮೆರೊ ಶೆಫರ್ಡ್, ಭುವನೇಶ್ವರ್ ಕುಮಾರ್, ಟೀ ನಟರಾಜನ್, ಉಮ್ರಾನ್ ಮಲಿಕ್ / ಕಾರ್ತಿಕ್ ತ್ಯಾಗಿ

ಎಂಟು ವಿದೇಶಿ ಆಟಗಾರರು

ಎಂಟು ವಿದೇಶಿ ಆಟಗಾರರು

ಸನ್‌ರೈಸರ್ಸ್ ಫ್ರಾಂಚೈಸಿ ತನ್ನ ತಂಡದಲ್ಲಿ ವಿದೇಶಿ ಕೋಟಾವನ್ನು ಬದಲಿಸಿದೆ. ಇದು ಎಂಟರಲ್ಲಿ ಎಂಟು ಜನರನ್ನು ವಿದೇಶಿ ಆಟಗಾರರನ್ನ ತೆಗೆದುಕೊಂಡಿತು. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರನ್ನು ಈಗಾಗಲೇ ಫ್ರಾಂಚೈಸಿ ಉಳಿಸಿಕೊಂಡಿದೆ. ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಅವರನ್ನು ಬ್ಯಾಟಿಂಗ್ ಕಮ್ ವಿಕೆಟ್ ಕೀಪರ್ ಕೋಟಾದಲ್ಲಿ ಆಯ್ಕೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಏಡನ್ ಮಾಕ್ರಾಮ್ ಪ್ರಮುಖ ಬ್ಯಾಟ್ಸ್‌ಮನ್ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಬಾಲ್ ಒದ್ದು Bhubaneswar ಮೇಲೆ Rohit Sharma ಕೋಪ ತೋರಿಸಿದ ವಿಡಿಯೋ ವೈರಲ್ | Oneindia Kannada
ಎಸ್‌ಆರ್‌ಎಚ್‌ ಐಪಿಎಲ್ ಹರಾಜು ಪಟ್ಟಿ

ಎಸ್‌ಆರ್‌ಎಚ್‌ ಐಪಿಎಲ್ ಹರಾಜು ಪಟ್ಟಿ

ನಿಕೋಲಸ್ ಪೂರನ್ (10.75 ಕೋಟಿ ರೂ.), ವಾಷಿಂಗ್ಟನ್ ಸುಂದರ್ (8.75 ಕೋಟಿ ರೂ.), ರಾಹುಲ್ ತ್ರಿಪಾಠಿ (ರೂ. 8.50 ಕೋಟಿ), ರೊಮಾರಿಯೋ ಶೆಫರ್ಡ್ (ರೂ. 7.75 ಕೋಟಿ), ಅಭಿಷೇಕ್ ಶರ್ಮಾ (6.50 ಕೋಟಿ) ಮತ್ತು ಭುವನೇಶ್ವರ್ ಕುಮಾರ್ ( 4.20 ಕೋಟಿ), ಮಾರ್ಕೊ ಜಾನ್ಸೆನ್ (4.20 ಕೋಟಿ), ಟೀ ನಟರಾಜನ್ (4 ಕೋಟಿ), ಕಾರ್ತಿಕ್ ತ್ಯಾಗಿ ( 4 ಕೋಟಿ), ಏಡೆನ್ ಮಾರ್ಕ್ರಾಮ್ (2.60 ಕೋಟಿ), ಸೀನ್ ಅಬಾಟ್ ( 2.40 ಕೋಟಿ), ಗ್ಲೆನ್ ಫಿಲಿಪ್ಸ್ (1.50 ಕೋಟಿ ), ಶ್ರೇಯಸ್ ಗೋಪಾಲ್ ( 75 ಲಕ್ಷ), ಫಜಲ್ಲಾ ಫಾರೂಕಿ ( 50 ಲಕ್ಷ), ಪ್ರಿಯಮ್ ಗಾರ್ಗ್ (20 ಲಕ್ಷ), ಜಗದೀಶ್ ಸುಚಿತ್ ( 20 ಲಕ್ಷ), ಸಮರ್ಥ್ (20 ಲಕ್ಷ), ಶಶಾಂಕ್ ಸಿಂಗ್ (20 ಲಕ್ಷ), ಸೌರಭ್ ದುಬೆ (20 ಲಕ್ಷ ರೂ.)

Story first published: Saturday, February 19, 2022, 9:00 [IST]
Other articles published on Feb 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X