ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಅಂಪೈರ್‌ ತೀರ್ಪಿನ ವಿರುದ್ಧ ಸಂಜು ಸ್ಯಾಮ್ಸನ್ ಪ್ರತಿಭಟನೆ, ವೈಡ್‌ಗೂ DRS ರಿವೀವ್

Sanju samson

ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ವಿರುದ್ಧ ಸತತ ಎರಡು ಪಂದ್ಯಗಳನ್ನ ಸೋಲುವ ಮೂಲಕ ರಾಜಸ್ತಾನ್ ರಾಯಲ್ಸ್‌ ಒತ್ತಡಕ್ಕೆ ಸಿಲುಕಿದೆ. ಅದ್ರಲ್ಲೂ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪಿಂಕ್ ಆರ್ಮಿ ಹೋರಾಟವು ಅಷ್ಟರ ಮಟ್ಟಿಗೆ ಉತ್ತಮವಾಗಿರಲಿಲ್ಲ.

ಈ ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ ರೆಫರಿಯ ತಪ್ಪು ನಿರ್ಧಾರದಿಂದ ಸಂಜು ಸ್ಯಾಮ್ಸನ್ ಮೈದಾನದಲ್ಲೇ ಪ್ರತಿಭಟನೆ ನಡೆಸಿರುವುದು ಸಂಚಲನಕ್ಕೆ ಕಾರಣವಾಗಿದೆ. ಐಪಿಎಲ್ 2022ರ 47ನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಈ ವಿವಾದಾತ್ಮಕ ಘಟನೆ ನಡೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ತಾನ್ ರಾಯಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್‌ಗಳಿಸಿತು. ಸಂಜು ಸ್ಯಾಮ್ಸನ್ ತಾಳ್ಮೆಯುತ ಬ್ಯಾಟಿಂಗ್‌ (54) ನೆರವಿನಿಂದ ಹಾಗೂ ಕೆಳಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್ 13 ಎಸೆತಗಳಲ್ಲಿ ಅಜೇಯ 27ರನ್‌ಗಳ ನೆರವಿನಿಂದ ರಾಜಸ್ತಾನ್ ರಾಯಲ್ಸ್ 152ರನ್ ಕಲೆಹಾಕಲು ಸಾಧ್ಯವಾಯಿತು.

ಐದು ಎಸೆತ ಬಾಕಿ ಇರುವಂತೆಯೇ ಕೆಕೆಆರ್‌ಗೆ ಗೆಲುವು

ಐದು ಎಸೆತ ಬಾಕಿ ಇರುವಂತೆಯೇ ಕೆಕೆಆರ್‌ಗೆ ಗೆಲುವು

153ರನ್‌ಗಳ ಗುರಿ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಇನ್ನೂ ಐದು ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿತು. ಈ ಮೂಲಕ ಸತತ ಐದು ಪಂದ್ಯಗಳ ಸೋಲಿನಿಂದ ಹೊರಬಂದು ಗೆಲುವಿನ ನಗೆ ಬೀರಿತು. ಮತ್ತೊಂದೆಡೆ ರಾಜಸ್ತಾನ್ ರಾಯಲ್ಸ್ ಸತತ ಎರಡು ಪಂದ್ಯಗಳನ್ನ ಸೋಲುವ ಮೂಲಕ ಮುಗ್ಗರಿಸಿದೆ.
153ರನ್‌ಗಳ ಗುರಿ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಇನ್ನೂ ಐದು ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿತು. ಈ ಮೂಲಕ ಸತತ ಐದು ಪಂದ್ಯಗಳ ಸೋಲಿನಿಂದ ಹೊರಬಂದು ಗೆಲುವಿನ ನಗೆ ಬೀರಿತು. ಮತ್ತೊಂದೆಡೆ ರಾಜಸ್ತಾನ್ ರಾಯಲ್ಸ್ ಸತತ ಎರಡು ಪಂದ್ಯಗಳನ್ನ ಸೋಲುವ ಮೂಲಕ ಮುಗ್ಗರಿಸಿದೆ.

ಸಿಎಸ್‌ಕೆ ತಂಡಕ್ಕೆ ಪ್ಲೇಆಫ್‌ಗೇರುವ ಅವಕಾಶವಿದೆ: ಧೋನಿ ನಾಯಕತ್ವದ ಬಗ್ಗೆ ಸೆಹ್ವಾಗ್ ವಿಶ್ವಾಸ

ಗುಜರಾತ್ ಮತ್ತು ಪಂಜಾಬ್ ನಡುವೆ ಯಾವ ತಂಡ ಗೆದ್ದರೆ RCB ಗೆ ಲಾಭವಾಗುತ್ತೆ?? | Oneindia Kannada
19ನೇ ಓವರ್‌ನಲ್ಲಿ ಒಂದರ ಹಿಂದೆ ಮತ್ತೊಂದು ವೈಡ್‌

19ನೇ ಓವರ್‌ನಲ್ಲಿ ಒಂದರ ಹಿಂದೆ ಮತ್ತೊಂದು ವೈಡ್‌

ಕೊಲ್ಕತ್ತಾ ಗೆಲುವಿಗೆ ಕೊನೆಯ 2 ಓವರ್‌ಗಳಲ್ಲಿ 18 ರನ್‌ಗಳ ಅಗತ್ಯವಿತ್ತು. ನಂತರ 19ನೇ ಓವರ್ ನಲ್ಲಿ ಪ್ರಸಿದ್ಧ ಕೃಷ್ಣ ಎಸೆದ 3ನೇ ಎಸೆತ ವೈಡ್ ಆಯಿತು. ನಂತರದ ಎಸೆತದಲ್ಲೇ ಚೆಂಡನ್ನು ಬೌಂಡರಿ ಬಾರಿಸಿದ್ದರಿಂದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಒತ್ತಡಕ್ಕೆ ಸಿಲುಕಿದ್ದರು. ನಂತರ ಪ್ರಸಿದ್ಧ ಕೃಷ್ಣ ಅವರು 4 ನೇ ಎಸೆತವನ್ನು ಆಫ್ ಸ್ಟಂಪ್ ಆಚೆ ಬೌಲ್ ಮಾಡಿದರು ಮತ್ತು ಬ್ಯಾಟ್ಸ್‌ಮನ್ ರಿಂಗ್ ಸಿಂಗ್ ಹೊಡೆಯಲು ವೈಟ್ ಲೈನ್‌ಗೆ ಹೋದರು. ಆದರೆ, ಅಂಪೈರ್ ಮಾತ್ರ ಮತ್ತೊಮ್ಮೆ ವೈಡ್ ಎಂದು ಸೂಚಿಸಿದರು.

ಅಂಪೈರ್ ವೈಡ್ ನೀಡುತ್ತಿದ್ದಂತೆ ಸಿಟ್ಟಿಗೆದ್ದ ಸಂಜು ಸ್ಯಾಮ್ಸನ್‌ ರೆಫರಿ ನಿರ್ಧಾರವನ್ನ ಪ್ರಶ್ನಿಸುವಂತೆ ಡಿಆರ್‌ಎಸ್‌ ತೆಗೆದುಕೊಳ್ಳಲು ಮುಂದಾದರು.

ಕೊಹ್ಲಿ ಇರುವುದರಿಂದ ಈ ಪ್ರತಿಭಾವಂತ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದ ಸ್ಟೇನ್!

ಅಂಪೈರ್ ನಿರ್ಧಾರಕ್ಕೆ ಸಂಜು ಸ್ಯಾಮ್ಸನ್ ವಿರೋಧ

ಅಂಪೈರ್ ವೈಡ್ ಎಂದು ತೀರ್ಪು ನೀಡುತ್ತಿದ್ದಂತೆ ಕೆರಳಿದ ನಾಯಕ ಸಂಜು ಸ್ಯಾಮ್ಸನ್, ಅಂಪೈರ್ ನಿರ್ಧಾರ ತೆಗೆದುಕೊಂಡು ಡಿಆರ್‌ಎಸ್‌ ಕೇಳಿದರು. ಥರ್ಡ್‌ ಅಂಪೈರ್ ಫಲಿತಾಂಶವನ್ನು ಕೇಳಿದ ಅಭಿಮಾನಿಗಳು ಆಶ್ಚರ್ಯಚಕಿತರಾದರು. ಅವರು ಒತ್ತಡದಲ್ಲಿ ಇದ್ದಾರೆಯೇ ಅಥವಾ ಫೀಲ್ಡ್ ಅಂಪೈರ್‌ನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆಯೇ ಎಂಬ ಗೊಂದಲದಲ್ಲಿದ್ದರು. ಕೊನೆಗೆ ಅವರ ಡಿಆರ್‌ಎಸ್ ಕುರಿತಾಗಿ ಯಾವುದೇ ನಿರ್ಧಾರ ಹೊರಬರಲಿಲ್ಲ. ಪರಿಣಾಮ ಕೊಟ್ಟ ತೀರ್ಪನ್ನೇ ಒಪ್ಪಿಕೊಳ್ಳಬೇಕಾಯಿತು.

ಅಂತಿಮ ಓವರ್‌ನ ಮೊದಲ ಎಸೆತದಲ್ಲೇ ಕುಲ್‌ದೀಪ್ ಬೌಲಿಂಗ್‌ನಲ್ಲಿ ನಿತೀಶ್ ರಾಣಾ ಚೆಂಡನ್ನು ಆಫ್ ಸ್ಟಂಪ್ ಕಡೆಗೆ ಸಿಕ್ಸರ್‌ ಹೊಡೆದರು. ಕೆಕೆಆರ್ ಪಂದ್ಯವನ್ನ ಗೆದ್ದು ಬೀಗಿತು.

Story first published: Wednesday, May 4, 2022, 10:18 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X