ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs DC: "ಡಿವಿಲಿಯರ್ಸ್ ಹೆಮ್ಮೆ ಪಡುತ್ತಾರೆ": DK ಪ್ರದರ್ಶನವನ್ನು ಕೊಂಡಾಡಿದ ಕೊಹ್ಲಿ

IPL 2022: Virat Kohli praises Dinesh Karthik said AB de Villiers will be very proud

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳೊಯುತ್ತಿರುವ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಎದುರಾಳಿಯ ಬೌಲಿಂಗ್ ಪಡೆಗೆ ಅಕ್ಷರಶಃ ಆಘಾತ ನೀಡುತ್ತಿದ್ದಾರೆ. ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬ್ಯಾಟರ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 34 ಎಸೆತಗಳನ್ನು ಎದುರಿಸಿದ ದಿನೇಶ್ ಕಾರ್ತಿಕ್ 66 ರನ್ ಸಿಡಿಸಿ ಮಿಂಚಿದರು. ಈ ಪ್ರದರ್ಶನದ ಕಾರಣದಿಂದಾಗಿ ಆರ್‌ಸಿಬಿ ಈ ಪಂದ್ಯದಲ್ಲಿ 16 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಪ್ರದರ್ಶನಕ್ಕೆ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದ ಮುಕ್ತಾಯದ ಬಳಿಕ ದಿನೇಶ್ ಕಾರ್ತಿಕ್ ಅವರನ್ನು ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಸಂದರ್ಶನ ಮಾಡಿದ್ದಾರೆ. ಐಪಿಎಲ್ ಅಧಿಕೃತ ವೆಬ್‌ಸೈಟ್‌ಗಾಗಿ ಮಾಡಿರುವ ಈ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ದಿನೇಶ್ ಕಾರ್ತಿಕ್ ಬಗ್ಗೆ ಅದ್ಭುತ ಮಾತುಗಳನ್ನಾಡಿದ್ದಾರೆ. ದಿನೇಶ್ ಕಾರ್ತಿಕ್ ಅವರನ್ನು ಆರ್‌ಸಿಬಿ ತಂಡದ ಮ್ಯಾನ್ ಆಫ್‌ ದಿ ಐಪಿಎಲ್ ಎಂದು ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ. ಅಲ್ಲದೆ ದಿನೇಶ್ ಕಾರ್ತಿಜ್ ಅವರ ಈ ಪ್ರದರ್ಶನವನ್ನು ನೋಡಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ ವಿರಾಟ್ ಕೊಹ್ಲಿ.

RCB vs DC: ಮಿಂಚಿದ ಬೌಲರ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದ ಆರ್‌ಸಿಬಿRCB vs DC: ಮಿಂಚಿದ ಬೌಲರ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದ ಆರ್‌ಸಿಬಿ

"ಇದು ಬಹಳ ಅದ್ಭುತವಾಗಿತ್ತು. ಇದು ಮುಂದೆಯೂ ಮುಂದುವರಿಯಲಿ ಎಂದು ನಾನು ಹೇಳಲಾರೆ, ಯಾಕೆಂದರೆ ಅದು ಖಂಡಿತಾ ಬರಲಿದೆ. ನೀವು ಅಂತಾ ಅದ್ಭುತ ಅವಕಾಶವನ್ನು ಸೃಷ್ಟಿಸಿಕೊಂಡಿದ್ದೀರಿ. ಅದನ್ನು ನಾನು ಗಮನಿಸಬಲ್ಲೆ. ನೀವು ಮತ್ತೆ ಬ್ಯಾಟ್ ಮಾಡುವುದನ್ನು ನೋಡಲು ಸಂಭ್ರಮವಾಗುತ್ತದೆ. ತಂಡವನ್ನು ಗೆಲುವಿನ ದಡ ಸೇರಿಸಿದಕ್ಕಾಗಿ ಧನ್ಯವಾದಗಳು" ಎಂದು ದಿನೇಶ್ ಕಾರ್ತಿಕ್ ಅವರನ್ನು ಸಂದರ್ಶಿಸುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಮುಂದುವರಿದು ಮಾತನಾಡಿದ ವಿರಾಟ್ ಕೊಹ್ಲಿ ಈ ಅದ್ಭುತ ಪ್ರದರ್ಶನ ನೀಡಿದ ಕಾರಣಕ್ಕೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೆಮ್ಮೆ ಪಟ್ಟುಕೊಳ್ಳುತ್ತಾರೆ ಎಂದಿದ್ದಾರೆ ಕೊಹ್ಲಿ. "ಈ ಆಟವನ್ನು ಪ್ರಿಟೋರಿಯಾದಿಂದ ನೋಡುತ್ತಿರುವ ಎಬಿ ಡಿವಿಲಿಯರ್ಸ್ ಬಹಳ ಹೆಮ್ಮೆ ಪಟ್ಟುಕೊಳ್ಳಲಿದ್ದಾರೆ. ಮನೆಯಲ್ಲಿ ಕುಳಿತು, ನಮಗಾಗಿ ಪಂದ್ಯವನ್ನು ಗೆಲ್ಲಿಸಿಕೊಡುವುದನ್ನು ನೋಡುತ್ತಾ ಅವರು ಹೆಮ್ಮೆಪಟ್ಟುಕೊಂಡಿರುತ್ತಾರೆ" ಎಂದು ವಿರಾಟ್ ಕೊಹ್ಲಿ ದಿನೇಶ್ ಕಾರ್ತಿಕ್ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಕೂಡ ತನ್ನ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದರು. "ಮುಖ್ಯವಾಗಿ ಎರಡು ರೀತಿಯ ಗುರಿಯಿಟ್ಟುಕೊಂಡು ನಾನು ಆಡುತ್ತಿದ್ದೇನೆ. ಒಂದು ಅಲ್ಪ ಕಾಲದ ಗುರೊಯಾಗಿದ್ದು ಆರ್‌ಸಿಬಿ ತಂಡ ಟೂರ್ನಿಯಲ್ಲಿ ಗೆಲ್ಲುವಂತೆ ಮಾಡುವುದು ನನ್ನ ಗುರಿಯಾಗಿದೆ. ಇನ್ನೊಂದು ದೀರ್ಘ ಕಾಲದ ಗುರಿಯಾಗಿದ್ದು ಟೀಮ್ ಇಂಡಿಯಾ ಪರವಾಗಿ ಮುಂದಿನಬ ಟಿ20 ವಿಶ್ವಕಪ್‌ನಲ್ಲಿ ಆಡುವುದು ನನ್ನ ದೊಡ್ಡ ಗುರಿಯಾಗಿದೆ. ಅದಕ್ಕಾಗಿ ನಾನು ಎಲ್ಲಾ ಸಾಕಷ್ಟು ಪರಿಶ್ರಮಪಡುತ್ತಿದ್ದೇನೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.

RCB vs DC: ಅದು ನನ್ನ ಪ್ರಮುಖ ಗುರಿ: ಆಯ್ಕೆಗಾರರಿಗೆ ದೊಡ್ಡದಾಗಿ ಸಂದೇಶ ರವಾನಿಸಿದ ದಿನೇಶ್ ಕಾರ್ತಿಕ್
ಫಾಫ್ ಡು ಪ್ಲೆಸಿಸ್ (c), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್
ಬೆಂಚ್: ಆಕಾಶ್ ದೀಪ್, ಸಿದ್ದಾರ್ಥ್ ಕೌಲ್, ಡೇವಿಡ್ ವಿಲ್ಲಿ, ಶೆರ್ಫೇನ್ ರುದರ್ಫೋರ್ಡ್, ಕರ್ನ್ ಶರ್ಮಾ, ಜೇಸನ್ ಬೆಹ್ರೆನ್ಡಾರ್ಫ್, ಚಾಮ ವಿ ಮಿಲಿಂದ್, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಅನೀಶ್ವರ್ ಗೌತಮ್

ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್
ಬೆಂಚ್: ಸರ್ಫರಾಜ್ ಖಾನ್, ಮನ್ದೀಪ್ ಸಿಂಗ್, ಶ್ರೀಕರ್ ಭರತ್, ಟಿಮ್ ಸೀಫರ್ಟ್, ಲುಂಗಿ ಎನ್ಗಿಡಿ, ಅಶ್ವಿನ್ ಹೆಬ್ಬಾರ್, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್

Story first published: Sunday, April 17, 2022, 12:52 [IST]
Other articles published on Apr 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X