ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಆರ್‌ಸಿಬಿ ಏನಾದ್ರೂ ಒಂದು ಬಾರಿ ಕಪ್ ಗೆದ್ರೆ..! ಎಬಿಡಿ ಹೇಳಿಕೆಯಿಂದ ಅಭಿಮಾನಿಗಳು ಫುಲ್ ಖುಷ್

IPL 2023: AB de Villiers Predicts That If RCB Wins Trophy Once, they Win Easily 3-4 Times

ಸತತ 15 ವರ್ಷಗಳ ಕಾಲ ಆರ್‌ಸಿಬಿ ಕಪ್ ಗೆಲ್ಲುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರತಿ ಸಾರಿ ತಮ್ಮ ನೆಚ್ಚಿನ ತಂಡ ಕಪ್ ಗೆಲ್ಲದೆ ನಿರಾಸೆ ಅನುಭವಿಸಿದರು, ಅಭಿಮಾನಿಗಳು ಮಾತ್ರ 'ಈ ಸಲ ಕಪ್ ನಮ್ದೆ' ಎಂದು ತಂಡಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದಾರೆ.

ಒಮ್ಮೆಯೂ ಕಪ್ ಗೆದ್ದಿಲ್ಲವಾದರೂ ಆರ್‌ಸಿಬಿಯ ಜನಪ್ರಿಯತೆ ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ. ಆರ್‌ಸಿಬಿ ಮಾಜಿ ಆಟಗಾರ ಮಿಸ್ಟರ್ 360 ಎಂದೇ ಖ್ಯಾತಿ ಪಡೆದಿರುವ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಕಪ್ ಗೆಲ್ಲುವ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

6 ತಿಂಗಳು ಕ್ರಿಕೆಟ್ ಪಂದ್ಯಗಳ ಭರಾಟೆ: 3 ಹೊಸ ಲೀಗ್‌ಗಳು, ಭಾರತದ ಮುಂದಿನ ಸರಣಿಗಳ ವಿವರ6 ತಿಂಗಳು ಕ್ರಿಕೆಟ್ ಪಂದ್ಯಗಳ ಭರಾಟೆ: 3 ಹೊಸ ಲೀಗ್‌ಗಳು, ಭಾರತದ ಮುಂದಿನ ಸರಣಿಗಳ ವಿವರ

ಆರ್‌ಸಿಬಿ ಇದುವರೆಗಿನ ಐಪಿಎಲ್ ಪಂದ್ಯಾವಳಿಗಳಲ್ಲಿ ಮೂರು ಬಾರಿ ಫೈನಲ್‌ಗೆ ಪ್ರವೇಶಿಸಿದರು ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ, ಆರ್‌ಸಿಬಿ ಒಮ್ಮೆ ಕಪ್ ಗೆದ್ದರೆ, ಅವರು ಕಡಿಮೆ ಸಮಯದಲ್ಲಿ ಮೂರರಿಂದ ನಾಲ್ಕು ಕಪ್ ಗೆಲ್ಲುತ್ತಾರೆ ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ.

ಫಾಫ್ ಡುಪ್ಲೆಸಿಸ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ 2023 ರ ಐಪಿಎಲ್ ಪಂದ್ಯಾವಳಿಯಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ತನ್ನ ಮೊದಲ ಪ್ರಶಸ್ತಿ ಗೆಲ್ಲಬೇಕು

ತನ್ನ ಮೊದಲ ಪ್ರಶಸ್ತಿ ಗೆಲ್ಲಬೇಕು

2022ರ ಐಪಿಎಲ್‌ ಋತುವಿನಲ್ಲಿ ಆರ್‌ಸಿಬಿ ಮೂರನೇ ಸ್ಥಾನ ಗಳಿಸಿತ್ತು. 2023ರ ಐಪಿಎಲ್‌ಗೆ ಮುನ್ನ ಕಡಿಮೆ ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದ್ದು, 2022ರಲ್ಲಿ ಆಡಿದ್ದ ತಂಡವನ್ನೇ ಉಳಿಸಿಕೊಂಡಿದೆ. ಡಿಸೆಂಬರ್ 23ರಂದು ನಡೆಯುವ ಮಿನಿ ಹರಾಜಿನಲ್ಲಿ ಆರ್‌ಸಿಬಿ ಯಾವ ಆಟಗಾರನನ್ನು ಖರೀದಿಸಲಿದೆ ಎನ್ನುವುದು ಕುತೂಹಲಕಾರಿ ವಿಚಾರವಾಗಿದೆ. ಈ ಬಾರಿ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಜೊತೆ ಕೆಲಸ ಮಾಡಲಿದ್ದಾರೆ.

ಆರ್‌ಸಿಬಿ ಕಪ್ ಗೆಲ್ಲುವ ಬಗ್ಗೆ ಮಾತನಾಡಿರುವ ಎಬಿ ಡಿ ವಿಲಿಯರ್ಸ್, "ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಬಲ ಬಂದಂತಾಗಿದೆ. ಐಪಿಎಲ್ ಆರಂಭವಾಗಲು ಇನ್ನೂ ನಾಲ್ಕು ತಿಂಗಳು ಉಳಿದಿವೆ. ಒಮ್ಮೆ ಆರ್‌ಸಿಬಿ ಕಪ್ ಗೆದ್ದರೆ, ನಂತರ ಅವರು ಕಡಿಮೆ ಸಮಯದಲ್ಲಿ ಮೂರರಿಂದ ನಾಲ್ಕು ಬಾರಿ ಗೆಲ್ಲಲಿದ್ದಾರೆ" ಎಂದು ಭವಿಷ್ಯ ನುಡಿದಿದ್ದಾರೆ.

IPLನಲ್ಲಿ ಭಾಗವಹಿಸದಂತೆ ಬಹುಬೇಡಿಕೆಯ ಆಟಗಾರನಿಗೆ ಪರೋಕ್ಷ ಸೂಚನೆ ನೀಡಿದರಾ ಪ್ಯಾಟ್ ಕಮ್ಮಿನ್ಸ್!

ಟಿ20 ಪಂದ್ಯ ಜೂಜಾಟ ಇದ್ದಂತೆ

ಟಿ20 ಪಂದ್ಯ ಜೂಜಾಟ ಇದ್ದಂತೆ

"ಈಗ 15 ಐಪಿಎಲ್ ಆವೃತ್ತಿಗಳನ್ನು ಕಂಡಿದ್ದೇವೆ. ಆರ್‌ಸಿಬಿ ತನ್ನ ಸೋಲಿನ ಸಂಕೋಲೆಗಳನ್ನು ಮುರಿಯಲು ನೋಡುತ್ತಿದೆ. ಒಮ್ಮೆ ಅವರು ಕಪ್ ಗೆದ್ದರೆ, ಬಹುಶ ಎರಡು, ಮೂರು ಮತ್ತು ನಾಲ್ಕನೇ ಕಪ್‌ ಅನ್ನು ಬೇಗನೆ ಗೆಲ್ಲುತ್ತಾರೆ. ಟಿ20 ಕ್ರಿಕೆಟ್ ಕೆಲವೊಮ್ಮೆ ಜೂಜಾಟವಾಗುತ್ತದೆ. ಏನು ಬೇಕಾದರೂ ಆಗಬಹದು. ನಾಕೌಟ್ ಪಂದ್ಯಗಳಲ್ಲಿ ನೆಚ್ಚಿನ ತಂಡಗಳೇ ಸೋಲನ್ನಪ್ಪಿರುವುದುನ್ನು ನೋಡಿದ್ದೇವೆ" ಎಂದು ಹೇಳಿದ್ದಾರೆ.

2023ರ ಐಪಿಎಲ್‌ ತನ್ನ ಹಳೆಯ ಶೈಲಿಗೆ ಮರಳಲಿದೆ, ತವರಿನಲ್ಲಿ ಮತ್ತು ಹೊರಗೆ ಆರ್‌ಸಿಬಿ ಪಂದ್ಯಗಳನ್ನಾಡಲಿದೆ. ಬೆಂಗಳೂರು ಕ್ರಿಕೆಟ್ ಅಭಿಮಾನಿಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಾಗಿ ತನ್ನ ನೆಚ್ಚಿನ ತಂಡಕ್ಕೆ ಬೆಂಬಲ ನೀಡುವ ಅವಕಾಶ ಸಿಗಲಿದೆ.

ಆರ್‌ಸಿಬಿ ತಂಡದ ಜೊತೆ ಎಬಿಡಿ ಕೆಲಸ

ಆರ್‌ಸಿಬಿ ತಂಡದ ಜೊತೆ ಎಬಿಡಿ ಕೆಲಸ

ಎಬಿ ಡಿವಿಲಿಯರ್ಸ್ ಐಪಿಎಲ್ 2023 ರಲ್ಲಿ ಆರ್‌ಸಿಬಿ ತಂಡದ ಜೊತೆ ಕೆಲಸ ಮಾಡಲಿದ್ದಾರೆ. ಅವರು ಯಾವ ಪಾತ್ರ ನಿಭಾಯಿಸುತ್ತಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲವಾದರೂ, ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡುವ ಸಾಧ್ಯತೆ ಇದೆ.

ಎಬಿ ಡಿವಿಲಿಯರ್ಸ್ ಕೆಲವೇ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದರು. ತಂಡದ ಆಟಗಾರರ ಜೊತೆ ಚರ್ಚೆ ನಡೆಸಿದ್ದಾರೆ. ಐಪಿಎಲ್ 2023ರ ಆರ್‌ಸಿಬಿಯ ಮೊದಲನೇ ಪಂದ್ಯದಲ್ಲಿ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಹಾಜರಿರಲಿದ್ದಾರೆ.

ಆರ್‌ಸಿಬಿ ನನ್ನ ಜೀವನವನ್ನು ಬದಲಾಯಿಸಿದೆ

ಆರ್‌ಸಿಬಿ ನನ್ನ ಜೀವನವನ್ನು ಬದಲಾಯಿಸಿದೆ

"ನಾನು ಆರ್‌ಸಿಬಿಯನ್ನು ತುಂಬಾ ಪ್ರೀತಿಸುತ್ತೇನೆ. ಇದು ನನ್ನ ಜಗತ್ತು, ಜೀವನವನ್ನು ಬದಲಾಯಿಸಿದೆ. 2011ರಿಂದ ಆರ್‌ಸಿಬಿ ಜೊತೆಯಲ್ಲಿದ್ದೇನೆ. ಅನೇಕ ಸ್ನೇಹಿತರು ನನಗೆ ಸಿಕ್ಕಿದ್ದಾರೆ, ಇದು ನನ್ನ ಮತ್ತು ಕುಟುಂಬದ ಭಾಗವಾಗಿದೆ. ನಾವೆಲ್ಲರೂ ಆರ್‌ಸಿಬಿಯನ್ನರು" ಎಂದು ಹೇಳಿದರು.

ಎಬಿ ಡಿವಿಲಿಯರ್ಸ್ ತಂಡದ ಜೊತೆ ಕೆಲಸ ಮಾಡುತ್ತಿರುವುದರಿಂದ ಆರ್‌ಸಿಬಿ ಈ ಬಾರಿ ಇನ್ನಷ್ಟು ಬಲಿಷ್ಠವಾಗಿದ್ದು, ಈ ಬಾರಿಯಾದರೂ ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

Story first published: Friday, November 18, 2022, 19:17 [IST]
Other articles published on Nov 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X