IPL 2023: ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದಿಂದ ಹೊರಬಿದ್ದ ಲ್ಯೂಕಿ ಫರ್ಗುಸನ್, KKR ತಂಡಕ್ಕೆ ಸೇರ್ಪಡೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್‌ಗೆ ಈಗಿನಿಂದಲೇ ತಯಾರಿ ಜೋರಾಗಿ ನಡೆದಿದೆ. ಮುಂದಿನ ಸೀಸನ್‌ನ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯುವುದರಿಂದ 10 ಫ್ರಾಂಚೈಸಿಗಳು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಹಾಗೂ ತಂಡದಿಂದ ಕೈ ಬಿಡಲು ನವೆಂಬರ್ 15 ಕೊನೆಯ ದಿನವಾಗಿದೆ.

ಇನ್ನೆರಡು ದಿನಗಳು ಬಾಕಿ ಇರುವ ಹಿನ್ನಲೆಯಲ್ಲಿ ಫ್ರಾಂಚೈಸಿಗಳು ತಮಗೆ ಯೋಗ್ಯವೆನಿಸಿದ ಆಟಗಾರರನ್ನು ಉಳಿಸಿಕೊಂಡು ಬೇಡವಾದ ಆಟಗಾರನ್ನ ಕೈ ಬಿಡುತ್ತಿದೆ. ಇದ್ರ ಜೊತೆಗೆ ಆಟಗಾರರನ್ನು ಬೇರೆ ಫ್ರಾಂಚೈಸಿಗಳು ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತಿವೆ. ಇದೇ ಸಾಲಿನಲ್ಲಿ ಐಪಿಎಲ್ 2022ರ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆದಂತಹ ಗುಜರಾತ್ ಟೈಟನ್ಸ್‌ ತಂಡದಿಂದ ನ್ಯೂಜಿಲೆಂಡ್ ವೇಗಿ ಲ್ಯೂಕಿ ಫರ್ಗುಸನ್ ಹಾಗೂ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ರಹಮನುಲ್ಲಾ ಗುರ್ಬಾಜ್‌ರನ್ನ ಕೊಲ್ಕತ್ತಾ ನೈಟ್ ರೈಡರ್ಸ್‌ ತಂಡಕ್ಕೆ ಬಿಟ್ಟುಕೊಟ್ಟಿದೆ.

ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್

ನ್ಯೂಜಿಲೆಂಡ್‌ ಅತ್ಯಂತ ವೇಗದ ಬೌಲರ್ ಆಗಿರುವ ಲ್ಯೂಕಿ ಫರ್ಗುಸನ್ ಕಳೆದ ಸೀಸನ್‌ನಲ್ಲಿ ಹೆಚ್ಚು ಪರಿಣಾಮಕಾರಿಯಾದ ಪ್ರದರ್ಶನ ನೀಡಲಿಲ್ಲ. ಗುಜರಾತ್ ಟೈಟನ್ಸ್ ಪರ ಆಡಿದಂತಹ 13 ಪಂದ್ಯಗಳಲ್ಲಿ ಲ್ಯೂಕಿ ಪಡೆದಿದ್ದು 12 ವಿಕೆಟ್ ಮತ್ತು 4 ವಿಕೆಟ್ ಗೊಂಚಲು ಒಂದು ಬಾರಿ ಪಡೆದಿದ್ದಾರೆ.

ಲ್ಯೂಕಿ ಫರ್ಗುಸನ್ ಅಷ್ಟೇ ಅಲ್ಲದೆ ಅಫ್ಘಾನಿಸ್ತಾನದ ರಹಮನುಲ್ಲಾ ಗುರ್ಬಾಜ್‌ರನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿ ಮಾಡಿದೆ. ಐಪಿಎಲ್ 2022ರ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಸ್ಕ್ವಾಡ್‌ನಲ್ಲಿದ್ದ ಗುರ್ಬಾಜ್‌, ಇಂಗ್ಲೆಂಡ್ ಬ್ಯಾಟರ್ ಜೇಸನ್‌ ರಾಯ್ ಬದಲಿಗೆ ಸ್ಕ್ವಾಡ್‌ಗೆ ಸೇರಿಸಿಕೊಳ್ಳಲಾಗಿತ್ತು. ಆದ್ರೆ ಇಡೀ ಸೀಸನ್‌ನಲ್ಲಿ ಈತನಿಗೆ ಒಂದು ಅವಕಾಶವು ಸಿಗಲಿಲ್ಲ.

ಗುಜರಾತ್ ಟೈಟನ್ಸ್ ಅಷ್ಟೇ ಅಲ್ಲದೆ, ಆರ್‌ಸಿಬಿಯಿಂದ ಆಸ್ಟ್ರೇಲಿಯಾದ ವೇಗಿ ಜೇಸನ್ ಬೆಹ್ರೆಂಡ್ರೋಫ್ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಬಿದ್ದಿದ್ದಾರೆ. ಕಳೆದ ಸೀಸನ್‌ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿ ಪಾಯಿಂಟ್ಸ್ ಟೇಬಲ್‌ನಲ್ಲಿ ತಳಮುಟ್ಟಿತು. ಆದ್ರೆ ಅದೇ ಗುಜರಾತ್ ಟೈಟನ್ಸ್ ಚೊಚ್ಚಲ ಸೀಸನ್‌ನಲ್ಲೇ ಅಚ್ಚರಿ ಮೂಡಿಸುವಂತಹ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿತು.

For Quick Alerts
ALLOW NOTIFICATIONS
For Daily Alerts
Story first published: Sunday, November 13, 2022, 12:07 [IST]
Other articles published on Nov 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X