ರವೀಂದ್ರ ಜಡೇಜಾ ಸಿಎಸ್‌ಕೆಗೆ ಗುಡ್‌ಬೈ? : ಆರ್‌ಸಿಬಿ ಪಾಲಾಗಲಿದ್ದಾರ ಜಡ್ಡು!, ಕಣ್ಣಿಟ್ಟಿವೆ 4 ತಂಡಗಳು

ಭಾರತದ ಅನುಭವಿ ಕ್ರಿಕೆಟಿಗ ರವೀಂದ್ರ ಜಡೇಜಾ ಐಪಿಎಲ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 2022ರ ಐಪಿಎಲ್ ಆವೃತ್ತಿಯ ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ರವೀಂದ್ರ ಜಡೇಜಾ ಟೂರ್ನಿಯಲ್ಲಿ ನಾಯಕನಾಗಿ ಹಾಗೂ ಆಟಗಾರನಾಗಿ ಸಂಪೂರ್ಣ ವೈಫಲ್ಯ ಅನುಭವಿಸಿದರು. ವೈಯಕ್ತಿಕ ಪ್ರದರ್ಶನ ಹಾಗೂ ತಂಡದ ಪ್ರದರ್ಶನ ಎರಡು ಕೂಡ ಕಳಪೆಯಾಗುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು ರವೀಂದ್ರ ಜಡೇಜಾ. ನಂತರ ಗಾಯಗೊಂಡ ರವೀಂದ್ರ ಜಡೇಜಾ ತಂಡದಿಂದ ಹೊರಬಿದ್ದರು.

ಟೂರ್ನಿಯ ಮಧ್ಯದಲ್ಲಿಯೇ ರವೀಂದ್ರ ಜಡೇಜಾ ಬಯೋಬಬಲ್ ತೊರೆದಿದ್ದು ಅನೇಕ ಚರ್ಚೆಗಳಿಗೆ ಕಾರಣವಾಯಿತು. ಮ್ಯಾನೇಜ್‌ಮೆಂಟ್ ಜೊತೆಗೆ ವೈಮನಸ್ಸಿನ ಕಾರಣಕ್ಕೆ ರವೀಂದ್ರ ಜಡೇಜಾ ತಂಡವನ್ನು ತೊರೆದರು ಎಂಬ ಸುದ್ದಿ ಸಾಕಷ್ಟು ಹರಿದಾಡಿತ್ತು. ಈ ಬಗ್ಗೆ ತೇಪೆ ಹಚ್ಚುವ ಕಾರ್ಯಗಳಾದರೂ ಗೊಂದಲಗಳು ಇನ್ನೂ ಮುಂದುವರಿದೇ ಇದೆ.

ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?

ಇದೀಗ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲವೇ ಇಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಸುದ್ದಿ ನಿಜವಾದಲ್ಲಿ ಮುಂದಿನ ಆವೃತ್ತಿಗೂ ಮುನ್ನ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ರವೀಂದ್ರ ಜಡೇಜಾ ಕಾಣಿಸಿಕೊಳ್ಳಲಿದ್ದು ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ರವೀಂದ್ರ ಜಡೇಜಾ ಮುಂದಿನ ಆವೃತ್ತಿಯಲ್ಲಿ ಸೇರಿಕೊಳ್ಳಬಹುದಾದ ನಾಲ್ಕು ಸಂಭಾವ್ಯ ತಂಡಗಳು ಇಲ್ಲಿದೆ.

ಜಡೇಜಾ ಮೇಲೆ ಆರ್‌ಸಿಬಿ ಕಣ್ಣು

ಜಡೇಜಾ ಮೇಲೆ ಆರ್‌ಸಿಬಿ ಕಣ್ಣು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಕಣ್ಣಿಟ್ಟಿರುವ ಪ್ರಮುಖ ತಂಡವಾಗಿದೆ. ತಂಡದಲ್ಲಿ ಜಡೇಜಾ ಸೇರ್ಪಡೆಯಾದರೆ ತಂಡಕ್ಕೆ ಹೆಚ್ಚಿನ ಸ್ಥಿರತೆ ದೊರೆಯಲಿದೆ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಜಡೇಜಾ ಫಿನಿಷರ್ ಆಗಿಯೂ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಬೌಲಿಂಗ್‌ನಲ್ಲಿಯೂ ನಾಲ್ಕು ಓವರ್‌ಗಳ ದಾಳಿ ನಡೆಸಬಲ್ಲ ಜಡೇಜಾ ಫೀಲ್ಡಿಂಗ್‌ನಲ್ಲಿ ದೊಡ್ಡ ಆಸ್ತಿಯಾಗಬಲ್ಲರು. ಇನ್ನು ಕೆಲ ಸಿಎಸ್‌ಕೆ ಅಭಿಮಾನಿಗಳು ಫಾಫ್ ಡು ಪ್ಲೆಸಿಸ್ ಅವರೊಂದಿಗೆ ರವೀಂದ್ರ ಜಡೇಜಾ ಅವರನ್ನು ಟ್ರೇಡ್ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯವವನ್ನು ವ್ಯಕ್ತಪಡಿಸಿದ್ದಾರೆ.

ಸನ್‌ರೈಸರ್ಸ್ ಪಾಲಾಗುತ್ತಾರಾ ಜಡ್ಡು?

ಸನ್‌ರೈಸರ್ಸ್ ಪಾಲಾಗುತ್ತಾರಾ ಜಡ್ಡು?

ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಭಾರತದ ಅಗ್ರ ಆಟಗಾರರ ಅಗತ್ಯವಿದೆ. ಕಳೆದ ಬಾರಿ ಸ್ಟಾರ್ ವಿದೇಶಿ ಆಟಗಾರರ ಮೇಲೆ ಎಸ್‌ಆರ್‌ಹೆಚ್ ಫ್ರಾಂಚೈಸಿ ಗಮನಕೊಟ್ಟಿತ್ತು. ಇದು ತಂಡಕ್ಕೆ ಸಫಲತೆಯನ್ನುಂಟು ಮಾಡಿಲ್ಲ. ರವೀಂದ್ರ ಜಡೇಜಾ ರೀತಿಯ ಆಟಗಾರರು ತಂಡಕ್ಕೆ ಸೇರ್ಪಡೆಯಾದರೆ ತಂಡಕ್ಕೆ ದೊಡ್ಡ ಬಲ ದೊರೆಯಲಿದೆ.

ಪಂಜಾಬ್ ಕಿಂಗ್ಸ್ ಚಿತ್ತ ಭಾರತೀಯ ಆಲ್‌ರೌಂಡರ್‌ನತ್ತ!

ಪಂಜಾಬ್ ಕಿಂಗ್ಸ್ ಚಿತ್ತ ಭಾರತೀಯ ಆಲ್‌ರೌಂಡರ್‌ನತ್ತ!

ಭಾರತದ ಆಲ್‌ರೌಂಡರ್‌ನ ಅಗತ್ಯವಿರುವ ಮತ್ತೊಂದು ತಂಡ ಎಂದರೆ ಅದು ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್. ರವೀಂದ್ರ ಜಡೇಜಾ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿಕೊಂಡರೆ ನಾಯಕತ್ವ ಕೂಡ ಜಡೇಜಾ ಹೆಗಲಿಗೆ ಬಿದ್ದರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಕಳೆದ ಆವೃತ್ತಿಯಲ್ಲಿ ನಾಯಕನಾಗಿ ಮುನ್ನಡೆಸಿದ ಮಯಾಂಕ್ ಅಗರ್ವಾಲ್ ಕೂಡ ದೊಡ್ಡ ಮಟ್ಟದ ಯಶಸ್ಸು ನೀಡದಿರುವ ಕಾರಣ ಪಂಜಾಬ್ ಕಿಂಗ್ಸ್ ನಾಯಕತ್ವದಲ್ಲಿ ಬದಲಾವಣೆಯಾದರೂ ಅಚ್ಚರಿಯಿಲ್ಲ.

ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾಗಲಿದ್ದಾರಾ ರವೀಂದ್ರ ಜಡೇಜಾ?

ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾಗಲಿದ್ದಾರಾ ರವೀಂದ್ರ ಜಡೇಜಾ?

ಐದು ಬಾರಿಯ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ತಂಡ ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿತು. ಇತ್ತೀಚಿನ ವರ್ಷಗಳಲ್ಲಿ ಆಟಗಾರರ ಆಯ್ಕೆ ವಿಚಾರವಾಗಿ ಸಾಕಷ್ಟು ಯಶಸ್ಸು ಸಾಧಿಸಿದ್ದರೂ ಕಳೆದ ಆವೃತ್ತಿಯಲ್ಲಿ ಮುಂಬೈ ಲೆಕ್ಕಾಚಾರ ತಪ್ಪಿತ್ತು. ಹೀಗಾಗಿ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಸೇರ್ಪಡೆಗೊಳಿಸಿದರೆ ತಂಡದಲ್ಲಿ ಉತ್ತಮ ಹೊಂದಾಣಿಕೆ ಸಾಧ್ಯವಿದೆ. ಪ್ರಮುಖ ಆಲ್‌ರೌಂಡರ್ ಆಗಿದ್ದ ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆದಿರುವ ಕಾರಣ ಆ ಸ್ಥಾನವನ್ನು ಭರ್ತಿ ಮಾಡುವ ಯೋಚನೆಯಲ್ಲಿ ಮುಂಬೈ ಇಂಡಿಯನ್ಸ್ ಇದ್ದು ರವೀಂದ್ರ ಜಡೇಜಾ ಉತ್ತಮ ಆಯ್ಕೆಯಾಗಬಲ್ಲರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 16, 2022, 20:53 [IST]
Other articles published on Aug 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X