ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL Auction 2023 Live Updates: 2023ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯ

By ಪ್ರತಿನಿಧಿ
IPL Auction 2023 Live Updates in Kannada, Players Sold, Unsold, Squads and Players List

ಐಪಿಎಲ್ ಮಿನಿ ಹರಾಜು ಇಂದು ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಮುಂದಿನ ಐಪಿಎಲ್ ಆವೃತ್ತಿಗೂ ಮುನ್ನ ಈಗಾಗಲೇ ಫ್ರಾಂಚೈಸಿಗಳು ಬಿಡುಗಡೆಗೊಳಿಸಿರುವ ಆಟಗಾರರನ್ನು ತೆಕ್ಕೆಗೆ ಹಾಕಿಕೊಳ್ಳಲು ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ. ಯಾವ ಫ್ರಾಂಚೈಸಿ ಯಾವ ಆಟಗಾರನನ್ನು ತಂಡಕ್ಕೆ ಸೇರ್ಪಡೆಗೊಳಿಸಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಈ ಮಿನಿ ಹರಾಜಿನಲ್ಲಿ ಒಟ್ಟು 405 ಆಟಗಾರರು ಹರಾಜಿನಲ್ಲಿ ಭಾಗಿಯಾಗಲಿದ್ದು ಒಟ್ಟು 87 ಸ್ಥಾನಗಳು ಮಾತ್ರವೇ ಬಾಕಿಯಿದೆ. ಕನ್ನಡಿಗರಾದ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆಯಂತಾ ಪ್ರಮುಖ ಆಟಗಾರರು ಈ ಹರಾಜಿನಲ್ಲಿದ್ದು ಬೆನ್ ಸ್ಟೋಕ್ಸ್, ಕೇನ್ ವಿಲಿಯಮ್ಸನ್, ಸ್ಯಾಮ್ ಕರನ್ ಕ್ಯಾಮರೂನ್ ಗ್ರೀನ್ ಮೊದಲಾದ ಆಟಗಾರರು ಕೂಡ ಇದ್ದಾರೆ. ಹೀಗಾಗಿ ಈ ಮಿನಿ ಹರಾಜು ಸಾಕಷ್ಟು ಕುತೂಹಲ ಕೆರಳಿಸಿದೆ.

IPL 2023 Mini Auction : ಮಿನಿ ಹರಾಜು ಯಾವ ಟಿವಿ ಚಾನೆಲ್‌ನಲ್ಲಿ ನೇರಪ್ರಸಾರ, ಉಚಿತ ಲೈವ್ ಸ್ಟ್ರೀಮಿಂಗ್, ಸಮಯದ ವಿವರIPL 2023 Mini Auction : ಮಿನಿ ಹರಾಜು ಯಾವ ಟಿವಿ ಚಾನೆಲ್‌ನಲ್ಲಿ ನೇರಪ್ರಸಾರ, ಉಚಿತ ಲೈವ್ ಸ್ಟ್ರೀಮಿಂಗ್, ಸಮಯದ ವಿವರ

Dec 23, 2022, 11:16 pm IST

ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಮುನ್ನ ಒಮ್ಮೆಯಾದರೂ ಐಪಿಎಲ್‌ನಲ್ಲಿ ಆಡಬೇಕು ಎನ್ನುವ ಆಸೆಯಿತ್ತು, ಈಗ ಅದು ನೆರವೇರಿದೆ ಎಂದು ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಾಜಾ ಹೇಳಿದ್ದಾರೆ. ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ 50 ಲಕ್ಷ ರುಪಾಯಿಗೆ ಹರಾಜಾಗಿದ್ದಾರೆ.

Dec 23, 2022, 10:03 pm IST

ಗುಜರಾತ್ ಟೈಟನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಲ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಕೇನ್ ವಿಲಿಯಮ್ಸನ್, ಒಡಿಯನ್ ಸ್ಮಿತ್, ಕೆ.ಎಸ್. ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ.

Dec 23, 2022, 9:58 pm IST

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್‌ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಕೇಶ್ ದೇಶಪಾಂಡೆ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಂಧು, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ.

Dec 23, 2022, 9:55 pm IST

ಕೆಕೆಆರ್ ಸಂಪೂರ್ಣ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಆಂಡ್ರೆ ರಸೆಲ್, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ಮತ್ತು ರಿಂಕು ಸಿಂಗ್, ಶಾರ್ದುಲ್ ಠಾಕೂರ್, ರಹಮಾನ್ ಠಾಕೂರ್, ಲಾಕಿ ಫರ್ಗುಸನ್, ನಾರಾಯಣ್ ಜಗದೀಶನ್, ವೈಭವ್ ಅರೋರಾ, ಸುಯಾಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಲಿಟ್ಟನ್ ದಾಸ್, ಮನ್ದೀಪ್ ಸಿಂಗ್, ಶಕೀಬ್ ಅಲ್ ಹಸನ್.

Dec 23, 2022, 9:51 pm IST

ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಜಾನಿ ಬೈರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ರಾಹುಲ್ ರಬಾಡ ಚಾಹರ್, ಹರ್‌ಪ್ರೀತ್ ಬ್ರಾರ್, ಸ್ಯಾಮ್ ಕರನ್, ಸಿಕಂದರ್ ರಾಜಾ, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಮೋಹಿತ್ ರಥಿ, ಶಿವಂ ಸಿಂಗ್.

Dec 23, 2022, 9:47 pm IST

ರಾಜಸ್ಥಾನ ರಾಯಲ್ಸ್ ಸಂಪೂರ್ಣ ತಂಡ: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಒಬೆಡ್ ಮೆಕಾಯ್, ನವದೀಪ್ ಸೈನಿ, ಕುಲ್ದೀಪ್ ಸೇನ್, ಕುಲದೀಪ್ ಯಾದವ್, ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಕೆಸಿ ಕಾರಿಯಪ್ಪ, ಜೇಸನ್ ಹೋಲ್ಡರ್, ಡೊನೊವನ್ ಫೆರೇರಾ, ಕುನಾಲ್ ರಾಥೋರ್, ಆಡಮ್ ಝಂಪಾ, ಕೆ.ಎಂ. ಆಸಿಫ್, ಮುರುಗನ್ ಅಶ್ವಿನ್, ಆಕಾಶ್ ವಶಿಷ್ಟ್, ಅಬ್ದುಲ್ ಪಿ ಎ, ಜೋ ರೂಟ್.

Dec 23, 2022, 9:44 pm IST

ಸನ್‌ರೈಸರ್ಸ್ ಹೈದರಾಬಾದ್ ಸಂಪೂರ್ಣ ತಂಡ: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್, ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಾಂಡೆ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್ , ಉಪೇಂದ್ರ ಸಿಂಗ್ ಯಾದವ್, ಮಯಾಂಕ್ ದಾಗರ್, ನಿತೀಶ್ ಕುಮಾರ್ ರೆಡ್ಡಿ, ಅಕೇಲ್ ಹೊಸೈನ್, ಅನ್ಮೋಲ್‌ಪ್ರೀತ್ ಸಿಂಗ್.

Dec 23, 2022, 9:39 pm IST

ಮಿನಿ ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಸಂಪೂರ್ಣ ತಂಡ: ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಆಕಾಶ್ ಮಾಧ್ವಲ್, ಜೇಸನ್ ಬೆಹ್ರೆನ್ಡಾರ್ಫ್, ಕ್ಯಾಮರೂನ್ ಗ್ರೀನ್, ಜೈ ರಿಚರ್ಡ್‌ಸನ್, ಯೂಷ್ ಚಾವ್ಲಾ, ಡುವಾನ್ ಜೆನ್ಸನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್

Dec 23, 2022, 9:36 pm IST

ಮಿನಿ ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ತಂಡ: ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಚ್ ನೋಕಿಯಾ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಮುಸ್ತಾಫ್ ಎನ್‌ಗಿಡಿ, , ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ಮತ್ತು ವಿಕ್ಕಿ ಓಸ್ತ್ವಾಲ್, ಅಮನ್ ಖಾನ್, ಫಿಲ್ ಸಾಲ್ಟ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಮನೀಶ್ ಪಾಂಡೆ, ರಿಲೀ ರೊಸೊವ್

Dec 23, 2022, 9:30 pm IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿರುವ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದಾರೆ.

Dec 23, 2022, 9:11 pm IST

ಮಿನಿ ಹರಾಜಿನ ಬಳಿಕ ಲಕ್ನೋ ಸೂರ್ ಜೈಂಟ್ಸ್ ತಂಡ : ಕೆಎಲ್ ರಾಹುಲ್ (ನಾಯಕ), ಆಯುಷ್ ಬದೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ಮತ್ತು ರವಿ ಬಿಷ್ಣೋಯಿ, ನಿಕೋಲಸ್ ಪೂರನ್, ಜಯದೇವ್ ಉನದ್ಕತ್, ಯಶ್ ಠಾಕೂರ್, ರೊಮಾರಿಯೋ ಶೆಫರ್ಡ್, ಡೇನಿಯಲ್ ಸಾಮ್ಸ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್ ಉಲ್ ಹಕ್, ಯುಧ್‌ವೀರ್ ಚರಕ್

Dec 23, 2022, 8:57 pm IST

ಐಪಿಎಲ್ ಮಿನಿ ಹರಾಜು

ಎಲ್ಲಾ ಹತ್ತು ತಂಡಗಳು ಮಿನಿ ಹರಾಜು ಸೇರಿ ಒಟ್ಟು 551.70 ಕೋಟಿ ರೂಪಾಯಿ ಖರ್ಚು ಮಾಡಿ 204 ಆಟಗಾರರನ್ನು ಖರೀದಿಸಿವೆ.

Dec 23, 2022, 8:54 pm IST

ಕ್ಯಾಮರೂನ್ ಗ್ರೀನ್

ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯಾವಳಿಯ ಶಕ್ತಿಶಾಲಿ ತಂಡಗಳಲ್ಲಿ ಒಂದು ಎಂದು ಕರೆದ ಕ್ಯಾಮರೂನ್ ಗ್ರೀನ್, ಐದು ಬಾರಿಯ ಚಾಂಪಿಯನ್‌ಗಳನ್ನು ಸೇರಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು. ಕ್ಯಾಮರೂನ್ ಗ್ರೀನ್ 17.5 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ.

Dec 23, 2022, 8:49 pm IST

ಅಜಿಂಕ್ಯಾ ರಹಾನೆ

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಆಯ್ಕೆಯಾದ ನಂತರ ಅಜಿಂಕ್ಯಾ ರಹಾನೆ ತಮ್ಮ ಉತ್ಸಾಹವನ್ನು ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಚಿದಂಬರಂ ಸ್ಟೇಡಿಯಂನಲ್ಲಿ ಆಡಲು ಮತ್ತು ತಮ್ಮ ತಂಡದ ಆಟಗಾರರಿಂದ ಕಲಿಯಲು ಎದುರು ನೋಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Dec 23, 2022, 8:45 pm IST

ಆರ್‌ಸಿಬಿ

ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವ ಆಟಗಾರರ ಪಟ್ಟಿ: ರೀಸ್ ಟೋಪ್ಲಿ (1.9 ಕೋಟಿ), ಹಿಮಾಂಶು ಶರ್ಮಾ (20 ಲಕ್ಷ), ವಿಲ್ ಜಾಕ್ಸ್ (3.2 ಕೋಟಿ), ಮನೋಜ್ ಭಾಂಡಗೆ (20 ಲಕ್ಷ), ರಾಜನ್ ಕುಮಾರ್ (70 ಲಕ್ಷ), ಅವಿನಾಶ್ ಸಿಂಗ್ (60 ಲಕ್ಷ), ಸೋನು ಯಾದವ್(20 ಲಕ್ಷ)

Dec 23, 2022, 8:44 pm IST

ಆರ್‌ಸಿಬಿ

ಆರ್‌ಸಿಬಿ ಈ ಹರಾಜಿನಲ್ಲಿ 7 ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಈ ಮೂಲಕ 25 ಆಟಗಾರರ ಸ್ಥಾನವನ್ನು ಭರ್ತಿಗೊಳಿಸಿದೆ. ಇಬ್ಬರು ವಿದೇಶಿ ಆಟಗಾರರು ಆರ್‌ಸಿಬಿ ಪಾಲಾದರೆ ಉಳಿದ ಐವರು ದೇಶೀಯ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Dec 23, 2022, 8:40 pm IST

ಶಕಿಬ್ ಅಲ್ ಹಸನ್

ಶಕಿಬ್ ಅಲ್ ಹಸನ್ ಅವರನ್ನು ಕೆಕೆಆರ್ ತಂಡ 1.50 ಕೋಟಿ ರೂ.ಗೆ ಖರೀದಿಸಿತು.

Dec 23, 2022, 8:39 pm IST

ಜೋ ರೂಟ್

ಜೋ ರೂಟ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 1 ಕೋಟಿ ರೂ.ಗೆ ಖರೀದಿಸಿತು.

Dec 23, 2022, 8:39 pm IST

ಆರ್‌ಸಿಬಿ

ಮಿನಿ ಹರಾಜಿನ ನಂತರ ಆರ್‌ಸಿಬಿ ಪೂರ್ಣ ತಂಡ: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಜ್ ಅಹಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್

Dec 23, 2022, 8:30 pm IST

ಕೆಎಸ್ ಭರತ್

ಪಂಜಾಬ್ ಕಿಂಗ್ಸ್‌ನ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಗುಜರಾತ್ ಟೈಟನ್ಸ್ ತಂಡ ಸೇರಿದ ಕೆಎಸ್ ಭರತ್ ಅವರ ಆಯ್ಕೆಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ ಮತ್ತು ರಾಹುಲ್ ದ್ರಾವಿಡ್ ಅವರಿಂದ ಕೀಪರ್-ಬ್ಯಾಟರ್ ಬಗ್ಗೆ ಸಾಕಷ್ಟು ಒಳ್ಳೆಯ ವಿಷಯಗಳನ್ನು ಕೇಳಿದ್ದೇನೆ ಎಂದು ಹೇಳಿದರು.

Dec 23, 2022, 8:24 pm IST

ಅಬ್ದುಲ್ ಪಿಎ

ಅಬ್ದುಲ್ ಪಿಎ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 8:23 pm IST

ರಾಘವ್ ಗೋಯಲ್

ರಾಘವ್ ಗೋಯಲ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 8:20 pm IST

ಆಕಾಶ ವಶಿಷ್ಠ

ಆಕಾಶ ವಶಿಷ್ಠ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 8:19 pm IST

ಜಾನ್ಸನ್ ಚಾರ್ಲ್ಸ್

ಜಾನ್ಸನ್ ಚಾರ್ಲ್ಸ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 8:18 pm IST

ಮುರುಗನ್ ಅಶ್ವಿನ್

ಮುರುಗನ್ ಅಶ್ವಿನ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 8:17 pm IST

ಆ್ಯಡಮ್ ಝಂಪಾ

ಆ್ಯಡಮ್ ಝಂಪಾ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 1.50 ಕೋಟಿ ರೂ.ಗೆ ಖರೀದಿಸಿತು.

Dec 23, 2022, 8:15 pm IST

ಅಕೀಲ್ ಹೋಸೈನ್

ಅಕೀಲ್ ಹೋಸೈನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 1 ಕೋಟಿ ರೂ.ಗೆ ಖರೀದಿಸಿತು.

Dec 23, 2022, 8:14 pm IST

ಲಿಟನ್ ದಾಸ್

ಲಿಟನ್ ದಾಸ್ ಅವರನ್ನು ಕೆಕೆಆರ್ ತಂಡ 50 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 8:13 pm IST

ರಿಲೀ ರೋಸ್ಸೌ

ದಕ್ಷಿಣ ಆಫ್ರಿಕಾದ ರಿಲೀ ರೋಸ್ಸೌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 4.60 ಕೋಟಿ ರೂ.ಗೆ ಖರೀದಿಸಿತು.

Dec 23, 2022, 8:11 pm IST

ಬೆನ್ ಸ್ಟೋಕ್ಸ್

ಬೆನ್ ಸ್ಟೋಕ್ಸ್ ಮತ್ತು ಎಂಎಸ್ ಧೋನಿ ಅವರ ಅನುಭವದಿಂದ ಚೆನ್ನೈ ಸೂಪರ್ ಕಿಂಗ್ಸ್ ಭಾರಿ ಲಾಭ ಪಡೆಯಲಿದೆ ಎಂದು 2021ರ ಐಪಿಎಲ್ ಆವೃತ್ತಿಯಲ್ಲಿ ಕೊನೆಯದಾಗಿ ಆಡಿದ ಕ್ರಿಸ್ ಗೇಲ್ ಹೇಳಿದರು.

Dec 23, 2022, 8:07 pm IST

ಸ್ಯಾಮ್ ಕರ್ರಾನ್

ಕ್ರಿಸ್ ಮೋರಿಸ್ 2021ರ ಐಪಿಎಲ್ ಮಿನಿ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ 16.25 ಕೋಟಿ ರೂ. ನೀಡಿ ಬೆಲೆಗೆ ಖರೀದಿಸಿದಾಗ ಅತ್ಯಂತ ದುಬಾರಿ ಆಟಗಾರರೆನಿಸಿದ್ದರು. ಇದೀಗ ಸ್ಯಾಮ್ ಕರ್ರಾನ್ 18.50 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಆ ದಾಖಲೆ ಮುರಿದಿದ್ದಾರೆ.

Dec 23, 2022, 7:57 pm IST

ನಿಕೋಲಸ್ ಪೂರನ್

ಐಪಿಎಲ್ 2023ರ ಹರಾಜು ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, ಐಪಿಎಲ್‌ನಲ್ಲಿ ನಿಕೋಲಸ್ ಪೂರನ್ ಅವರ ಹಿಂದಿನ ದಾಖಲೆಯ ಬಗ್ಗೆ ಲಕ್ನೋ ಸೂಪರ್ ಜೈಂಟ್ಸ್ ಚಿಂತಿಸಲಿಲ್ಲ ಮತ್ತು ಮುಂಬರುವ ಋತುಗಳಲ್ಲಿ ಮಾತ್ರ ಬಿಗ್ ಹಿಟ್ಟರ್ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಗಂಭೀರ್ ಹೇಳಿದರು.

Dec 23, 2022, 7:52 pm IST

ಜೋಶುವಾ ಲಿಟಲ್ ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್‌ಗೆ ನೆಟ್ ಬೌಲರ್ ಆಗಿದ್ದರು ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಪ್ರಭಾವ ಬೀರಿದ ಕಾರಣ ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿದ್ದರು.

Dec 23, 2022, 7:47 pm IST

ಜೋಶುವಾ ಲಿಟಲ್

ಐರ್ಲೆಂಡ್‌ನ ಎಡಗೈ ವೇಗಿ ಜೋಶುವಾ ಲಿಟಲ್ ಐಪಿಎಲ್ 2023ರ ಹರಾಜಿನಲ್ಲಿ ಶುಕ್ರವಾರ ಕೊಚ್ಚಿಯಲ್ಲಿ ಗುಜರಾತ್ ಟೈಟನ್ಸ್ 4.4 ಕೋಟಿಗೆ ಖರೀದಿಯಾದ ನಂತರ, ಐಪಿಎಲ್ ಒಪ್ಪಂದವನ್ನು ಪಡೆದ ಮೊದಲ ಐರ್ಲೆಂಡ್ ಆಟಗಾರರಾದರು.

Dec 23, 2022, 7:42 pm IST

ಶಿವಂ ಸಿಂಗ್

ಶಿವಂ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:41 pm IST

ನೆಹಾಲ್ ವಾದೆರಾ

ನೆಹಾಲ್ ವಾದೆರಾ ಅವರನ್ನು ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:41 pm IST

ಮೋಹಿತ್ ರಾಠೀ

ಮೋಹಿತ್ ರಾಠೀ ಅವರನ್ನು ಪಂಜಾಬ್ ಕಿಂಗ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:40 pm IST

ಶುಭಾಂಗ್ ಹೆಗ್ಡೆ

ಶುಭಾಂಗ್ ಹೆಗ್ಡೆ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:40 pm IST

ದೀಪೇಶ್ ನೈಲ್‌ವಾಲ್

ದೀಪೇಶ್ ನೈಲ್‌ವಾಲ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:39 pm IST

ತ್ರಿಲೋಕ್ ನಾಗ್

ತ್ರಿಲೋಕ್ ನಾಗ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:39 pm IST

ಶುಭಂ ಕಾಪ್ಸೆ

ಶುಭಂ ಕಾಪ್ಸೆ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:38 pm IST

ಉತ್ಕರ್ಷ್ ಸಿಂಗ್

ಉತ್ಕರ್ಷ್ ಸಿಂಗ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:38 pm IST

ಜಿತೇಂದರ್ ಪಾಲ್

ಜಿತೇಂದರ್ ಪಾಲ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:37 pm IST

ಕುಲ್ವಂತ್ ಖೆಜೋರಲಿಯಾ

ಕುಲ್ವಂತ್ ಖೆಜೋರಲಿಯಾ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:36 pm IST

ಸೋನು ಯಾದವ್

ಸೋನು ಯಾದವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:36 pm IST

ಕುನಾಲ್ ರಾಥೋರ್

ಕುನಾಲ್ ರಾಥೋರ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:35 pm IST

ಬಿ ಸೂರ್ಯ

ಬಿ ಸೂರ್ಯ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:35 pm IST

ಪ್ರಿಯಾಂಕ್ ಪಾಂಚಾಲ್

ಪ್ರಿಯಾಂಕ್ ಪಾಂಚಾಲ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:34 pm IST

ವರುಣ್ ಆ್ಯರನ್

ವರುಣ್ ಆ್ಯರನ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:33 pm IST

ಟಾಮ್ ಕರ್ರಾನ್

ಟಾಮ್ ಕರ್ರಾನ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:33 pm IST

ರೆಹಾನ್ ಅಹ್ಮದ್

ರೆಹಾನ್ ಅಹ್ಮದ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:32 pm IST

ಅವಿನಾಶ್ ಸಿಂಗ್

ಅವಿನಾಶ್ ಸಿಂಗ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 60 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:31 pm IST

ಅಜಿತೇಶ್ ಗುರುಸ್ವಾಮಿ

ಅಜಿತೇಶ್ ಗುರುಸ್ವಾಮಿ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:29 pm IST

ಸಂಜಯ್ ಯಾದವ್

ಸಂಜಯ್ ಯಾದವ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:28 pm IST

ಸ್ವಪ್ನಿಲ್ ಸಿಂಗ್

ಸ್ವಪ್ನಿಲ್ ಸಿಂಗ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:27 pm IST

ಶಾಮ್ಸ್ ಮುಲಾನಿ

ಶಾಮ್ಸ್ ಮುಲಾನಿ ಅವರನ್ನು ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:27 pm IST

ಹಿಮಾನ್ಶು ಬಿಷ್ಟ್

ಹಿಮಾನ್ಶು ಬಿಷ್ಟ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:26 pm IST

ಮೋಹಿತ್ ಶರ್ಮಾ

ಮೋಹಿತ್ ಶರ್ಮಾ ಅವರನ್ನು ಗುಜರಾತ್ ಟೈಟನ್ಸ್ ತಂಡ 50 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:25 pm IST

ದಿಲ್ಶಾನ್ ಮಧುಶನಕ

ದಿಲ್ಶಾನ್ ಮಧುಶನಕ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:25 pm IST

ಜೋಶುವಾ ಲಿಟಲ್

ಐರ್ಲೆಂಡ್‌ನ ಜೋಶುವಾ ಲಿಟಲ್ ಅವರನ್ನು ಗುಜರಾತ್ ಟೈಟನ್ಸ್ ತಂಡ 4.40 ಕೋಟಿ ರೂ.ಗೆ ಖರೀದಿಸಿತು.

Dec 23, 2022, 7:22 pm IST

ನವೀನ್ ಉಲ್ ಹಕ್

ನವೀನ್ ಉಲ್ ಹಕ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:22 pm IST

ರೀಚರ್ಡ್ ಗ್ಲೀಸನ್

ರೀಚರ್ಡ್ ಗ್ಲೀಸನ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:21 pm IST

ಯುವರಾಜ್ ಚೂಡಾಸಮಾ

ಯುವರಾಜ್ ಚೂಡಾಸಮಾ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:20 pm IST

ತೇಜಸ್ ಬರೋಕಾ

ತೇಜಸ್ ಬರೋಕಾ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:19 pm IST

ಪಾಲ್ ವ್ಯಾನ್ ಮೀಕೆರನ್

ಪಾಲ್ ವ್ಯಾನ್ ಮೀಕೆರನ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:19 pm IST

ಆಕಾಶ್ ಸಿಂಗ್

ಆಕಾಶ್ ಸಿಂಗ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:18 pm IST

ರಾಜನ್ ಕುಮಾರ್

ರಾಜನ್ ಕುಮಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 70 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:17 pm IST

ವಿದ್ವತ್ ಕಾವೇರಪ್

ಕರ್ನಾಟಕದ ವಿದ್ವತ್ ಕಾವೇರಪ್ಪ ಅವರನ್ನು ಪಂಜಾಬ್ ಕಿಂಗ್ಸ್ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:16 pm IST

ವಿಷ್ಣು ವಿನೋದ್

ವಿಷ್ಣು ವಿನೋದ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:15 pm IST

ಕಿರಂತ್ ಶಿಂಧೆ

ಕಿರಂತ್ ಶಿಂಧೆ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:14 pm IST

ದೊನಾವಾನ್ ಫರೆರಾ

ದೊನಾವಾನ್ ಫರೆರಾ ಅವರನ್ನು ರಾಜಸ್ಥಾನ ರಾಯಲ್ಸ್ 50 ಲಕ್ಷ ರೂ.ಗೆ ಖರೀದಿಸಿದೆ.

Dec 23, 2022, 7:12 pm IST

ಜಗದೀಶ್ ಸುಚಿತ್

ಕರ್ನಾಟಕದ ಜಗದೀಶ್ ಸುಚಿತ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:11 pm IST

ಪ್ರೇರಕ್ ಮಂಕಡ್

ಪ್ರೇರಕ್ ಮಂಕಡ್ ಅವರನ್ನು 20 ಲಕ್ಷ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿದೆ.

Dec 23, 2022, 7:10 pm IST

ದುಹಾನ್ ಜಾನ್‌ಸೆನ್

ದುಹಾನ್ ಜಾನ್‌ಸೆನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:09 pm IST

ಮಯಾಂಕ್ ದಗರ್

ಮಯಾಂಕ್ ದಗರ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 1.80 ಕೋಟಿ ರೂ.ಗೆ ಖರೀದಿಸಿತು.

Dec 23, 2022, 7:04 pm IST

ಮನೋಜ್ ಬಾಂಡಗೆ

ಮನೋಜ್ ಬಾಂಡಗೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:04 pm IST

ವಿಲ್ ಸ್ಮೀಡ್

ವಿಲ್ ಸ್ಮೀಡ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 7:03 pm IST

ಅಮಿತ್ ಮಿಶ್ರಾ

ಭಾರತದ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 50 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 7:02 pm IST

ಪಿಯೂಷ್ ಚಾವ್ಲಾ

ಭಾರತದ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರನ್ನು ಮುಂಬೈ ಇಂಡಿಯನ್ಸ್ ತಂಡ 50 ಲಕ್ಷ ರೂ.ಗೆ ಖರೀದಿಸಿತು.

Dec 23, 2022, 6:59 pm IST

ಬ್ಲೆಸ್ಸಿಂಗ್ ಮುಜರ್‌ಬಾನಿ

ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರ್‌ಬಾನಿ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 6:48 pm IST

ಶಿವಂ ಮಾವಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ 2022ರ ಋತುವಿನಲ್ಲಿ ಇತರ ಭಾರತೀಯ ವೇಗಿಗಳಂತೆ ಆಶಿಶ್ ನೆಹ್ರಾ ಅವರ ಅಡಿಯಲ್ಲಿ ಶಿವಂ ಮಾವಿ ಬಹಳಷ್ಟು ಪ್ರಯೋಜನ ಪಡೆಯಬಹುದು ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತಿಳಿಸಿದರು.

Dec 23, 2022, 6:30 pm IST

ವಿವ್ರಾಂತ್ ಶರ್ಮಾ

23 ವರ್ಷದ ಜಮ್ಮು ಮತ್ತು ಕಾಶ್ಮೀರದ ಆಲ್‌ರೌಂಡರ್ ವಿವ್ರಾಂತ್ ಶರ್ಮಾ ಅವರು ಐಪಿಎಲ್ 2023ರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ 2.6 ಕೋಟಿ ರೂ.ಗೆ ಮಾರಾಟವಾದರು.

Dec 23, 2022, 6:26 pm IST

ಆರ್‌ಸಿಬಿ

ಜೋಶ್ ಹ್ಯಾಝಲ್‌ವುಡ್‌ಗೆ ಬ್ಯಾಕಪ್ ಆಗಿ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲೆ ಅವರನ್ನು ಆರ್‌ಸಿಬಿ ತಂಡ ಖರೀದಿಸಿರುವುದರಿಂದ ಆರ್‌ಸಿಬಿ ಅಭಿಮಾನಿಗಳು ಪರ್ಫೆಕ್ಟ್ ಬ್ಯಾಕಪ್ ಎಂದು ಖುಷಿಪಟ್ಟಿದ್ದಾರೆ.

Dec 23, 2022, 6:22 pm IST

ಸ್ಯಾಮ್ ಕರ್ರಾನ್

ಐಪಿಎಲ್ ಹರಾಜಿನ ಇತಿಹಾಸದಲ್ಲಿ ಸ್ಯಾಮ್ ಕರ್ರಾನ್ ಅವರನ್ನು 'ಅತ್ಯಂತ ದುಬಾರಿ ಖರೀದಿ' ಮಾಡುವ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ಪಂಜಾಬ್‌ನ ಸಹ-ಮಾಲೀಕ ನೆಸ್ ವಾಡಿಯಾ, "ಇದು ಸರಿಯಾದ ಸಮತೋಲನವನ್ನು ಹೊಂದಿದೆ. ಇಲ್ಲಿಯವರೆಗೆ ಉತ್ತಮವಾಗಿದೆ, ಸ್ಯಾಮ್ ಕರ್ರಾನ್ ಮರಳಿ ಬಂದಿರುವುದು ಸಂತೋಷಕರವಾಗಿದೆ. ಕೆಲವು ವರ್ಷಗಳ ಹಿಂದೆ ನಾವು ಅವರನ್ನು 7-7.5 ಕೋಟಿ ರೂ.ಗೆ ಖರೀದಿಸಿದ್ದೇವು. ನಂತರ ಚೆನ್ನೈಗೆ ಹೋಗಿದ್ದರು. 24 ವರ್ಷದ ಸ್ಯಾಮ್ ಕರ್ರಾನ್ ವಿಶ್ವ ದರ್ಜೆಯ ಆಟಗಾರ," ಎಂದು ಹೇಳಿದ್ದಾರೆ.

Dec 23, 2022, 6:09 pm IST

ಡೇನಿಯಲ್ ಸ್ಯಾಮ್ಸ್

ಆಸ್ಟ್ರೇಲಿಯಾದ ಡೇನಿಯಲ್ ಸ್ಯಾಮ್ಸ್ ಅವರನ್ನು 75 ಲಕ್ಷ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿದೆ.

Dec 23, 2022, 6:05 pm IST

ಕೈಲ್ ಜೇಮಿಸನ್

ಕೈಲ್ ಜೇಮಿಸನ್

ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ಕೋಟಿ ರೂ.ಗೆ ಖರೀದಿಸಿದೆ.

Dec 23, 2022, 6:03 pm IST

ತಸ್ಕಿನ್ ಅಹ್ಮದ್

ಬಾಂಗ್ಲಾದೇಶದ ತಸ್ಕಿನ್ ಅಹ್ಮದ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 6:02 pm IST

ಸಂದೀಪ್ ಶರ್ಮಾ

ಭಾರತದ ಸಂದೀಪ್ ಶರ್ಮಾ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 6:02 pm IST

ರಿಲೆ ಮೆರಿಡಿತ್

ರಿಲೆ ಮೆರಿಡಿತ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 6:01 pm IST

ದಸುನ್ ಶನಕ

ಶ್ರೀಲಂಕಾದ ದಸುನ್ ಶನಕ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 6:00 pm IST

ಜಿಮ್ಮಿ ನಿಶಾಮ್

ನ್ಯೂಜಿಲೆಂಡ್‌ನ ಜಿಮ್ಮಿ ನಿಶಾಮ್ ಅನ್ ಸೋಲ್ಡ್ ಆಗಿದ್ದಾರೆ

Dec 23, 2022, 6:00 pm IST

ವೇಯ್ನ್ ಪಾರ್ನೆಲ್

ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:59 pm IST

ಮೊಹಮ್ಮದ್ ನಬಿ

ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:58 pm IST

ಡೆರಿಲ್ ಮಿಚೆಲ್

ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:58 pm IST

ರೋಮಾರಿಯೊ ಶಫರ್ಡ್

ವೆಸ್ಟ್‌ ಇಂಡೀಸ್‌ನ ರೋಮಾರಿಯೊ ಶಫರ್ಡ್ 50 ಲಕ್ಷ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾರಾಟವಾಗಿದ್ದಾರೆ.

Dec 23, 2022, 5:56 pm IST

ಡೇವಿಡ್ ಮಲಾನ್

ಇಂಗ್ಲೆಂಡ್‌ನ ಡೇವಿಡ್ ಮಲಾನ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:55 pm IST

ಮನದೀಪ್ ಸಿಂಗ್

ಭಾರತದ ಮನದೀಪ್ ಸಿಂಗ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:54 pm IST

ಟ್ರಾವಿಸ್ ಹೆಡ್

ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:54 pm IST

ವಿಲ್ ಜಾಕ್ಸ್

ವಿಲ್ ಜಾಕ್ಸ್

ವಿಲ್ ಜಾಕ್ಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3.20 ಕೋಟಿ ರೂ.ಗೆ ಖರೀದಿಸಿದೆ.

Dec 23, 2022, 5:51 pm IST

ಶೆರ್ಫೆನ್ ರುದರ್‌ಫೋರ್ಡ್

ವೆಸ್ಟ್ ಇಂಡೀಸ್‌ನ ಶೆರ್ಫೆನ್ ರುದರ್‌ಫೋರ್ಡ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:50 pm IST

ಮನೀಶ್ ಪಾಂಡೆ

ಮನೀಶ್ ಪಾಂಡೆ

ಭಾರತದ ಆಟಗಾರ ಮನೀಶ್ ಪಾಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 2.40 ಕೋಟಿ ರೂ.ಗೆ ಖರೀದಿಸಿದೆ.

Dec 23, 2022, 5:48 pm IST

ಪಾಲ್ ಸ್ಟಿರ್ಲಿಂಗ್

ಐರ್ಲೆಂಡ್ ಆಟಗಾರ ಪಾಲ್ ಸ್ಟಿರ್ಲಿಂಗ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:37 pm IST

IPL 2023 Auction: ಇಂಗ್ಲೆಂಡ್ ಸ್ಟಾರ್ ಬೌಲರ್ ರೀಸ್ ಟೋಪ್ಲೆ ಖರೀಸಿದ ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 2023ರ ಐಪಿಎಲ್ ಹರಾಜಿನಲ್ಲಿ ತನ್ನ ಖಾತೆಯನ್ನು ರೀಸ್ ಟೋಪ್ಲೆ ಅವರನ್ನು 1.90 ಕೋಟಿ ರೂಪಾಯಿಗೆ ಪಡೆದುಕೊಳ್ಳುವ ಮೂಲಕ ತೆರೆಯಿತು.

Dec 23, 2022, 5:26 pm IST

ಹಿಮಾಂಶು ಶರ್ಮಾ

ಹಿಮಾಂಶು ಶರ್ಮಾ

ಭಾರತದ ಆಟಗಾರ ಹಿಮಾಂಶು ಶರ್ಮಾ ಅವರನ್ನು 20 ಲಕ್ಷ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ.

Dec 23, 2022, 5:25 pm IST

ಎಸ್ ಮಿಧುನ್

ಭಾರತದ ಎಸ್ ಮಿಧುನ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:24 pm IST

ಶ್ರೇಯಸ್ ಗೋಪಾಲ್

ಭಾರತದ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:24 pm IST

ಮುರುಗನ್ ಅಶ್ವಿನ್

ಭಾರತದ ಸ್ಪಿನ್ ಬೌಲರ್ ಮುರುಗನ್ ಅಶ್ವಿನ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:23 pm IST

ಇಜಾರುಲ್‌ಹಕ್ ನವೀದ್

ಇಜಾರುಲ್‌ಹಕ್ ನವೀದ್ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:23 pm IST

ಚಿಂತಾಲ್ ಗಾಂಧಿ

ಚಿಂತಾಲ್ ಗಾಂಧಿ ಅನ್ ಸೋಲ್ಡ್ ಆಗಿದ್ದಾರೆ.

Dec 23, 2022, 5:22 pm IST

ಮುಕೇಶ್ ಕುಮಾರ್

ಭಾರತದ ಬೌಲರ್ ಮುಕೇಶ್ ಕುಮಾರ್ ಅವರನ್ನು 5.50 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿದೆ.

Dec 23, 2022, 5:17 pm IST

ಶಿವಂ ಮಾವಿ

ಶಿವಂ ಮಾವಿ

ಭಾರತದ ಯುವ ವೇಗದ ಬೌಲರ್ ಶಿವಂ ಮಾವಿ ಅವರನ್ನು 6 ಕೋಟಿ ರೂ.ಗೆ ಗುಜರಾತ್ ಟೈಟನ್ಸ್ ತಂಡ ಖರೀದಿಸಿದೆ.

Dec 23, 2022, 5:12 pm IST

ಮುಂಬೈ ಇಂಡಿಯನ್ಸ್ ತಂಡವು ರೀಸ್ ಟೋಪ್ಲೆಯ ಮೂಲ ಬೆಲೆ 75 ಲಕ್ಷ ರೂ.ಗೆ ಬಿಡ್ಡಿಂಗ್ ತೆರೆಯಿತು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಪೈಪೋಟಿ ನಡೆಸಿತು. ನಂತರ ಬಿಡ್ಡಿಂಗ್ ಪೈಪೋಟಿ ಪ್ರವೇಶಿಸಿದ ಆರ್‌ಸಿಬಿ ತಂಡ ಅಂತಿಮವಾಗಿ ಅವರನ್ನು 1.90 ಕೋಟಿ ರೂ.ಗೆ ಬುಟ್ಟಿಗೆ ಹಾಕಿಕೊಂಡಿತು.

Dec 23, 2022, 5:09 pm IST

ಸನ್‌ರೈಸರ್ಸ್ ಹೈದರಾಬಾದ್ ತಂಡ ಸಂವಿರ್ ಸಿಂಗ್ ಅವರ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿ ಮಾಡಿದೆ.

Dec 23, 2022, 5:04 pm IST

ಕೆಎಸ್ ಭರತ್

ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ 1.20 ಕೋಟಿ ಮೊತ್ತಕ್ಕೆ ಗುಜರಾತ್ ಟೈಟನ್ಸ್ ತಂಡಕ್ಕೆ ಹರಾಜಾಗಿದ್ದಾರೆ

Dec 23, 2022, 5:02 pm IST

ಎನ್ ಜಗದೀಶನ್

ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚಿದ ಎನ್ ಜಗದೀಶನ್ 90 ಲಕ್ಷ ರೂಪಾಯಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ

Dec 23, 2022, 4:58 pm IST

ನಿಶಾಂತ್ ಸಿಂಧು

ಯುವ ಆಟಗಾರ ನಿಶಾಂತ್ ಸಿಂಧು ಅವರನ್ನು 60 ಲಕ್ಷ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ

Dec 23, 2022, 4:55 pm IST

ಸಮರ್ಥ್ ವ್ಯಾಸ್

ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮೂಲಬೆಲೆ 20 ಲಕ್ಷಕ್ಕೆ ಹರಾಜಾದ ಸಮರ್ಥ್ ವ್ಯಾಸ್

Dec 23, 2022, 4:54 pm IST

ಪ್ರಿಯಂ ಗರ್ಗ್

ಹರಾಜಾಗದೆ ಉಳಿದ ಯುವ ಆಟಗಾರ ಪ್ರಿಯಂ ಗರ್ಗ್

Dec 23, 2022, 4:53 pm IST

ವಿವ್ರಾಂತ್ ಶರ್ಮಾ

20 ಲಕ್ಷ ಮೂಲಬೆಲೆ ಹೊಂದಿದ್ದ ವಿವ್ರಾಂತ್ ಶರ್ಮಾ 2.60 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ

Dec 23, 2022, 4:47 pm IST

ಅನ್ಮೋಲ್‌ಪ್ರೀತ್ ಸಿಂಗ್

ಹರಾಜಾಗದೆ ಉಳಿದುಕೊಂಡ ಅನ್ಮೋಲ್‌ಪ್ರೀತ್ ಸಿಂಗ್

Dec 23, 2022, 4:45 pm IST

ಎಂಎಸ್ ಧೋನಿ ಬಳಗ ಸೇರಿಕೊಂಡ ಬೆನ್ ಸ್ಟೋಕ್ಸ್

"ಚೆನ್ನೈ ತಂಡವನ್ನು ಸೇರಿಕೊಂಡಿರುವುದಕ್ಕೆ ಬೆನ್ ಸ್ಟೋಕ್ಸ್ ಬಹಳ ಸಂತಸಗೊಂಡಿರುತ್ತಾರೆ. ಎಲ್ಲರು ಕೂಡ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಲು ಬಯಸುತ್ತಾರೆ. ಎಲ್ಲರು ಕೂಡ ಆತನನ್ನು ಪ್ರೀತಿಸುತ್ತಾರೆ- ಜಿಯೋ ಸಿನಿಮಾ ವಿಶ್ಲೇಷಣೆಯಲ್ಲಿ ಕ್ರಿಸ್ ಗೇಲ್ ಹೇಳಿಕೆ

Dec 23, 2022, 4:42 pm IST

ಸ್ಯಾಮ್ ಕರನ್

ಐಪಿಎಲ್ ಇತಿಹಾಸದಲ್ಲಿ ದಾಖಲೆಯ ಮೊತ್ತ ಪಡೆದುಕೊಂಡ ಯುವ ಆಲ್‌ರೌಂಡರ್ ಸ್ಯಾಮ್ ಕರನ್ ಹರಾಜಿನ ಕ್ಷಣ

Dec 23, 2022, 4:29 pm IST

ಮಯಾಂಕ್ ಮಾರ್ಕಂಡೆ

ಮೂಲ ಬೆಲೆ 50 ಲಕ್ಷಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾದ ಮಯಾಂಕ್ ಮಾರ್ಕಂಡೆ

Dec 23, 2022, 4:27 pm IST

ಮುಜೀಬ್ ರಹ್ಮಾನ್

ಹರಾಜಾಗದೆ ಉಳಿದ ಮುಜೀಬ್ ರಹ್ಮಾನ್

Dec 23, 2022, 4:26 pm IST

ಆಡಂ ಜಂಪಾ

ಹರಾಜಾಗದೆ ಉಳಿದ ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ಆಡಂ ಜಂಪಾ

Dec 23, 2022, 4:26 pm IST

ಅಕೀಲ್ ಹುಸೈನ್

ಹರಾಜಾಗದೆ ಉಳಿದ ಅಕೀಲ್ ಹುಸೇನ್

Dec 23, 2022, 4:25 pm IST

ಆದಿಲ್ ರಶೀದ್

2 ಕೋಟಿ ರೂಪಾಯಿಗೆ ಹೈದರಾಬಾದ್ ತಂಡದ ಪಾಲಾದ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್

Dec 23, 2022, 4:23 pm IST

ಇಶಾಂತ್ ಶರ್ಮಾ

ಡೆಲ್ಲ್ ಕ್ಯಾಪಿಟಲ್ಸ್ ತಂಡಕ್ಕೆ ಮೂಲಬೆಲೆ 50 ಲಕ್ಷಕ್ಕೆ ಹರಾಜಾದ ವೇಗಿ ಇಶಾಂತ್ ಶರ್ಮಾ

Dec 23, 2022, 4:21 pm IST

ರಿಸ್ ಟೋಪ್ಲೆ

ಆರ್‌ಸಿಬಿ ತಂಡದ ಪಾಲಾದ ರಿಸ್ ಟೋಪ್ಲೆ 1.90 ಕೋಟಿಗೆ ಹರಾಜಾದ ಆಟಗಾರ

Dec 23, 2022, 4:19 pm IST

ಕ್ರಿಸ್ ಜೋರ್ಡನ್

ಹರಾಜಾಗದೆ ಉಳಿದ ಕ್ರಿಸ್ ಜೋರ್ಡನ್

Dec 23, 2022, 4:15 pm IST

ಕುಸಾಲ್ ಮೆಂಡಿಸ್

ಹರಾಜಾಗದೆ ಉಳಿದ ಶ್ರೀಲಂಕಾ ಆಟಗಾರ ಕುಸಾಲ್ ಮೆಂಡಿಸ್

Dec 23, 2022, 4:12 pm IST

ನಿಕೋಲಸ್ ಪೂರನ್

ನಿಕೋಲಸ್ ಪೂರನ್ 16 ಕೋಟಿ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ

Dec 23, 2022, 4:05 pm IST

ಲಿಟನ್ ದಾಸ್

ಹರಾಜಾಗದೆ ಉಳಿದ ಬಾಂಗ್ಲಾದೇಶ ಆಟಗಾರ ಲಿಟನ್ ದಾಸ್

Dec 23, 2022, 3:46 pm IST

ಬೆನ್ ಸ್ಟೋಕ್ಸ್

16.25 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾದ ಆಲ್‌ರೌಂಡರ್ ಬೆನ್ ಸ್ಟೋಕ್ಸ್

Dec 23, 2022, 3:37 pm IST

ಕ್ಯಾಮರೂನ್ ಗ್ರೀನ್

17.50 ಕೋಟಿ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡದ ಪಾಲಾದ ಕ್ಯಾಮರೂನ್ ಗ್ರೀನ್

Dec 23, 2022, 3:33 pm IST

5.75 ಕೋಟಿ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾದ ಜೇಸನ್ ಹೋಲ್ಡರ್

Dec 23, 2022, 3:27 pm IST

ಮೂಲಬೆಲೆ 50 ಲಕ್ಷಕ್ಕೆ ಹರಾಜಾದ ಓಡಿಯನ್ ಸ್ಮಿತ್

Dec 23, 2022, 3:25 pm IST

18.50 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಹರಾಜಾದ ಸ್ಯಾಮ್ ಕರನ್

Dec 23, 2022, 3:24 pm IST

ಹರಾಜಿನಲ್ಲಿ ದಾಖಲೆ ಬರೆದ ಸ್ಯಾಮ್ ಕರನ್ ದಾಖಲೆ ಮೊತ್ತಕ್ಕೆ ಹರಾಜು

Dec 23, 2022, 3:16 pm IST

ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್‌ಗಾಗಿ ಭಾರೀ ಪೈಪೋಟಿ

Dec 23, 2022, 3:15 pm IST

ಹರಾಜಾಗದೆ ಉಳಿದ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್

Dec 23, 2022, 3:14 pm IST

ಕಳೆದ ಅಕ್ಟೋಬರ್‌ನಲ್ಲಿ ಭಾರತದ ವಿರುದ್ಗ ಟಿ20 ಶತಕ ಬಾರಿಸಿದ್ದ ರೊಸ್ಸೊ ಟಿ೨೦ ವಿಶ್ವಕಪ್‌ನಲ್ಲಿಯೂ ಶತಕ ಬಾರಿಸಿದ್ದರು

Dec 23, 2022, 3:07 pm IST

ಹರಾಜಾಗದೆ ಉಳಿದ ರಿಲೇ ರೊಸ್ಸೋ

Dec 23, 2022, 3:05 pm IST

ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದ ಜೋ ರೂಟ್

Dec 23, 2022, 3:04 pm IST

ಅಜಿಂಕ್ಯಾ ರಹಾನೆ

Dec 23, 2022, 3:03 pm IST

ಮೂಲ ಬೆಲೆ 50 ಲಕ್ಷ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾದ ಅನುಭವಿ ಆಟಗಾರ

Dec 23, 2022, 3:02 pm IST

ಮಯಾಂಕ್ ಅಗರ್ವಾಲ್

Dec 23, 2022, 3:02 pm IST

ಕನ್ನಡಿಗ ಮಯಾಂಕ್ ಅಗರ್ವಾಲ್ 8.25 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದ ಮಯಾಂಕ್

Dec 23, 2022, 2:57 pm IST

ಹರಾಜಿನ ಕಣದಲ್ಲಿ ಮಯಾಂಕ್ ಅಗರ್ವಾಲ್. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪೈಪೋಟಿ

Dec 23, 2022, 2:55 pm IST

ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್‌ಗಾಗಿ ಭಾರೀ ಪೈಪೋಟಿ. ಸನ್‌ರೈಸರ್ಸ್ ಹೈದರಾಬಾದ್‌ಗೆ 13.25ಕೋಟಿಗೆ ಹರಾಜಾದ ಬ್ರೂಕ್

Dec 23, 2022, 2:43 pm IST

ಕೇನ್ ವಿಲಿಯಮ್ಸನ್

Dec 23, 2022, 2:43 pm IST

ಮೂಲ ಬೆಲೆ ಗುಜರಾತ್ ಟೈಟನ್ಸ್‌ಗೆ ಪಾಲಾದ ಕೇನ್ ವಿಲಿಯಮ್ಸನ್

Dec 23, 2022, 2:42 pm IST

ಹರಾಜು ಪ್ರಕ್ರಿಯೆ ಆರಂಭ. ಮೊದಲ ಆಟಗಾರನಾಗಿ ಕೇನ್ ವಿಲಿಯಮ್ಸನ್

Dec 23, 2022, 2:23 pm IST

ಹರಾಜು ಕೋಣೆಗೆ ಆಗಮಿಸುತ್ತಿರುವ ಫ್ರಾಂಚೈಸಿಗಳ ತಂಡ. ಕೆಲವೇ ನಿಮಿಷಗಳಲ್ಲಿ ಹರಾಜಿಗೆ ಚಾಲನೆ

Dec 23, 2022, 2:22 pm IST

ಎಲ್ಲಾ ಫ್ರಾಂಚೈಸಿಗಳ ಸಿಬ್ಬಂದಿ ಹರಾಜು ವೇದಿಕೆಗೆ ಆಗಮಿಸುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.

Dec 23, 2022, 2:21 pm IST

IPL 2023 Auction : ಮಿನಿ ಹರಾಜಿನಲ್ಲಿ ಎನ್ ಜಗದೀಸನ್‌ರನ್ನು RCB ಏಕೆ ಖರೀದಿಸಬೇಕು ಎಂಬುದಕ್ಕೆ 3 ಕಾರಣಗಳು

2023ರ ಐಪಿಎಲ್ ಋತುವಿಗಾಗಿ ಮಿನಿ ಹರಾಜು ಪ್ರಕ್ರಿಯೆ ಇಂದು (ಶುಕ್ರವಾರ, ಡಿಸೆಂಬರ್ 23) ಮಧ್ಯಾಹ್ನ 2.30ಕ್ಕೆ ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಮತ್ತು ತಂಡದ ಅಧಿಕಾರಿಗಳು ಮಿನಿ ಹರಾಜಿಗಾಗಿ ಈಗಾಗಲೇ ಕೊಚ್ಚಿಗೆ ಬಂದಿಳಿದಿದ್ದು, ಹರಾಜಿಗಾಗಿ ಹಯಾತ್ ಹೋಟೆಲ್ ಕೂಡ ಸಜ್ಜಾಗಿದೆ.

Dec 23, 2022, 2:11 pm IST

ಮಿನಿ ಹರಾಜಿಗೂ ಮುನ್ನ ಸಿದ್ಧತೆಯ ವಿಡಿಯೋ ಹಂಚಿಕೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ಅಕೌಟ್

Dec 23, 2022, 2:07 pm IST

ಹರಾಜಿನಲ್ಲಿ ಭಾಗಿಯಾದ ಎಲ್ಲಾ ಫ್ರಾಂಚೈಸಿಗಳಿಗೆ ಅಲ್‌ದಿ ಬೆಸ್ಟ್ ಎಂದ ಆರ್‌ಸಿಬಿ

Dec 23, 2022, 2:04 pm IST

ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ತಮಿಳುನಾಡು ಬ್ಯಾಟರ್ ಎನ್ ಜಗದೀಶನ್‌ ಉತ್ತಮ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.

Dec 23, 2022, 2:02 pm IST

ಹರಾಜಿಗೆ ಸಿಎಸ್‌ಕೆ ಸಿದ್ಧ

ಮಿನಿ ಹರಾಜಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಜ್ಜಾಗಿದ್ದು ತಂಡದ ಯೋಜನೆಯ ಬಗ್ಗೆ ಸಿಇಒ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಸ್‌ಕೆ ಬಳಿ ಈ ಮಿನಿ ಹರಾಜಿಗೆ 20.45 ಕೋಟಿ ಮೊತ್ತವನ್ನು ಹೊಂದಿದ್ದು ಈ ಮೊತ್ತವನ್ನು ಯಾವ ರೀತಿಯಾಗಿ ಬಳಸಿಕೊಳ್ಳಲಿದೆ ಎಂಬುದನ್ನು ಕಾದು ನೋಡೋಣ.

Dec 23, 2022, 1:57 pm IST

ಐಪಿಎಲ್ ಪಿನಿ ಹರಾಜಿನಲ್ಲಿ ಯಾವೆಲ್ಲಾ ದೇಶಗಳ ಎಷ್ಟು ಆಟಗಾರರು ಭಾಗಿಯಾಗಿದ್ದಾರೆ? ಇಲ್ಲಿದೆ ಪಟ್ಟಿ

Dec 23, 2022, 1:55 pm IST

ಐಪಿಎಲ್ ಮಿನಿ ಹರಾಜು ಆರಂಭಕ್ಕೆ ಅಂತಿಮ ಹಂತದ ಸಿದ್ಧತೆಗಳು

Dec 23, 2022, 1:54 pm IST

ಐಪಿಎಲ್ ಹರಾಜು ಪ್ರಕ್ರಿಯೆ ಆರಂಭಕ್ಕೆ ವೇದಿಕೆ ಸಜ್ಜು

Dec 23, 2022, 1:50 pm IST

ಆರ್‌ಸಿಬಿಗೆ 2011ರಲ್ಲಿ ಆಯ್ಕೆಯಾಗಿದ್ದೇ ನನ್ನ ಐಪಿಎಲ್‌ನಲ್ಲಿ ನನ್ನ ಸಮರಣೀಯ ಕ್ಷಣ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್. ಹರಾಜಿಗೂ ಮುನ್ನ ವಿಸ್ಲೇಷನೆಯಲ್ಲಿ ಭಾಗಿಯಾಗಿದ್ದ ಎಬಿಡಿವಿಲಿಯರ್ಸ್ ಆರ್‌ಸಿಬಿ ಜೊತೆಗಿನ ಪಯಣ ಭಾವನಾತ್ಮಕ ಅನುಭವ ಎಂದಿದ್ದಾರೆ.

Dec 23, 2022, 1:44 pm IST

ಭಾರತೀಯ ತಂಡಕ್ಕೆ ಆಡದೇ ಇದ್ದರೂ ಕೂಡ ಐಪಿಎಲ್‌ನಲ್ಲಿ ಕೋಟಿಗಟ್ಟಲೆ ಹಣ ಪಡೆದಿರುವ ಸಾಕಷ್ಟು ಉದಾಹರಣೆಗಳಿದ್ದು. ಈ ಬಾರಿ ಮಿನಿ ಹರಾಜಿನಲ್ಲಿ ಕೂಡ ಭಾರತದ ಹಲವು ಯುವ ಕ್ರಿಕೆಟಿಗರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.

Dec 23, 2022, 1:27 pm IST

ಈ ಐಪಿಎಲ್ ಮಿನಿ ಹರಾಜಿನಲ್ಲಿ ಆಲ್‌ರೌಂಡರ್‌ಗಳೇ ಹೆಚ್ಚಿನ ಮೊತ್ತವನ್ನು ಸೆಳೆಯುವ ನಿರೀಕ್ಷೆಯಿದೆ. ಸ್ಯಾಮ್ ಕರ್ರಾನ್, ಬೆನ್ ಸ್ಟೋಕ್ಸ್ ಮತ್ತು ಕ್ಯಾಮರೂನ್ ಗ್ರೀನ್ ಇಂದು ಕೊಚ್ಚಿಯಲ್ಲಿ ಹಾಟ್ ಫೇವರಿಟ್ ಆಗಿದ್ದಾರೆ.

Dec 23, 2022, 1:02 pm IST

ಐಪಿಎಲ್ ಮಿನಿ ಹರಾಜಿನಲ್ಲಿ 4 ಆಟಗಾರರು 15 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಖರೀದಿಯಾಗಿದ್ದಾರೆ. ಕ್ರಿಸ್ ಮೋರಿಸ್ (2021ರಲ್ಲಿ 16.25 ಕೋಟಿ ರೂ.), ಯುವರಾಜ್ ಸಿಂಗ್ (2015ರಲ್ಲಿ 16 ಕೋಟಿ ರೂ.), ಪ್ಯಾಟ್ ಕಮಿನ್ಸ್ (2020ರಲ್ಲಿ 15.5 ಕೋಟಿ ರೂ.) ಮತ್ತು ಕೈಲ್ ಜೇಮಿಸನ್ (2021ರಲ್ಲಿ 15 ಕೋಟಿ ರೂ.)

Dec 23, 2022, 12:49 pm IST

ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ಅವರು ಹರಾಜಿಗಾಗಿ ಕೊಚ್ಚಿಯ ಹೋಟೆಲ್‌ಗೆ ಆಗಮಿಸಿದ್ದಾರೆ. ಹರಾಜು ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

Dec 23, 2022, 12:38 pm IST

ಭಾರತದ ಅತಿದೊಡ್ಡ ಟಿ20 ಕ್ರಿಕೆಟ್ ಪಂದ್ಯಾವಳಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಡಿಸೆಂಬರ್‌ 23ರಂದು ಆಟಗಾರರ ಹರಾಜಿನಿಂದಲೇ ಟೂರ್ನಿಯ ಗುಂಗು ಆರಂಭವಾಗುತ್ತಿದೆ.

Dec 23, 2022, 12:26 pm IST

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನಾಗಿದ್ದ ಕಿರಾನ್ ಪೊಲಾರ್ಡ್ ರೀಟೆನ್ಶನ್‌ಗೂ ಮುನ್ನ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಪೊಲಾರ್ಡ್ ಸ್ಥಾನಕ್ಕೆ ಯಾವ ಆಟಗಾರನನ್ನು ಮುಂಬೈ ಇಂಡಿಯನ್ಸ್ ಸೇರ್ಪಡೆಗೊಳಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

Dec 23, 2022, 12:24 pm IST

ಕೊಲ್ಕತ್ತಾ ನೈಟ್ ರೈಡರ್ಸ್

ಕೊಲ್ಕತ್ತಾ ನೈಟ್ ರೈಡರ್ಸ್

ಕೊಲ್ಕತ್ತಾ ನೈಟ್ ರೈಡರ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ

Dec 23, 2022, 12:23 pm IST

ಸನ್‌ರೈಸರ್ಸ್ ಹೈದರಾಬಾದ್

ಸನ್‌ರೈಸರ್ಸ್ ಹೈದರಾಬಾದ್

ಸನ್‌ರೈಸರ್ಸ್ ಹೈದರಾಬಾದ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ

Dec 23, 2022, 12:22 pm IST

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ರೀಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ

Dec 23, 2022, 12:22 pm IST

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ

Dec 23, 2022, 12:21 pm IST

ರಾಜಸ್ತಾನ್ ರಾಯಲ್ಸ್

ರಾಜಸ್ತಾನ್ ರಾಯಲ್ಸ್

ರಾಜಸ್ತಾನ್ ರಾಯಲ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ

Dec 23, 2022, 12:18 pm IST

ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್ ರೀಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ

Dec 23, 2022, 12:05 pm IST

ಲಕ್ನೋ ಸೂಪರ್ ಜೈಂಟ್ಸ್

ಲಕ್ನೋ ಸೂಪರ್ ಜೈಂಟ್ಸ್

ಲಕ್ನೋ ಸೂಪರ್ ಜೈಂಟ್ಸ್ ತಂಡ ರೀಟೈನ್ ಮಾಡಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ

Dec 23, 2022, 11:38 am IST

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ

Dec 23, 2022, 11:36 am IST

ಆರ್‌ಸಿಬಿ ರೀಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ

ಆರ್‌ಸಿಬಿ ರೀಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ

ಆರ್‌ಸಿಬಿ ರೀಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ

Dec 23, 2022, 11:34 am IST

ಎಲ್ಲಾ ಫ್ರಾಂಚೈಸಿಗಳಲ್ಲಿ ಇರುವ ಪರ್ಸ್ ಮೊತ್ತ ಹೀಗಿದೆ

Dec 23, 2022, 10:48 am IST

ಇಂಗ್ಲೆಂಡ್ ಆಟಗಾರರ ಬಗ್ಗೆಯೂ ಮಾಹಿತಿ ನೀಡಿರುವ ಬಿಸಿಸಿಐ ಪೂರ್ಣ ಪ್ರಮಾಣದಲ್ಲಿ ಲಭ್ಯವಿರಲಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದೆ. ಆದರೆ ಬಾಂಗ್ಲಾದೇಶ ತಂಡದ ಆಟಗಾರರು ಸೀಮಿತ ಸಮಯಕ್ಕೆ ಮಾತ್ರವೇ ಲಭ್ಯವಿರಲಿದ್ದಾರೆ ಎಂದಿದೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಲಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಏಪ್ರಿಲ್ 8ರಿಂದ ಮೇ 1ರ ವರೆಗೆ ಮಾತ್ರವೇ ಲಭ್ಯವಿರಲಿದ್ದಾರೆ ಎಂದು ಮಾಹಿತಿ ನೀಡಿದೆ. ಇನ್ನು ಇದೇ ಸಂದರ್ಭದಲ್ಲಿ ಶ್ರೀಲಂಕಾದ ಆಟಗಾರರ ಏಪ್ರಿಲ್ 8ರಿಂದ ಲಭ್ಯವಿರಲಿದ್ದಾರೆ ಎಂದಿದೆ.

Dec 23, 2022, 10:38 am IST

ಬಿಸಿಸಿಐ ಆಸ್ಟ್ರೇಲಿಯಾ ಆಟಗಾರರ ಲಭ್ಯತೆಯ ಬಗ್ಗೆ ಫ್ರಾಂಚೈಸಿಗಳಿಗೆ ಮೇಲ್ ಮೂಲಕ ಮಾಹಿತಿ ನೀಡಿದೆ. ಸಂಪೂರ್ಣವಾಗಿ ಆಟಗಾರರು ಲಭ್ಯವಿರಲಿದ್ದಾರೆ. ಅಫ್ಘಾಇಸ್ತಾನ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿರುವ ಆಟಗಾರರು ಮಾರ್ಚ್ 30ರಿಂದ ಲಭ್ಯವಿರಲಿದ್ದಾರೆ ಹಾಗೂ ಶೆಫೀಲ್ಡ್ ಶೀಲ್ಡ್‌ನ ಫೈನಲ್‌ನಲ್ಲಿ ಭಾಗವಹಿಸುವ ಆಟಗಾರರು ಮಾರ್ಚ್ 28 ರಿಂದ ಲಭ್ಯವಿರಲಿದ್ದಾರೆ" ಎಂದು ಬಿಸಿಸಿಐ ಮಾಹಿತಿಯನ್ನು ಹಂಚಿಕೊಂಡಿದೆ.

Dec 23, 2022, 10:11 am IST

ಮುಂದಿನ ಜೂನ್ ತಿಂಗಳಿನಲ್ಲಿ ಪ್ರತಿಷ್ಠಿತ ಆಶಸ್ ಸರಣಿ ಆರಂಭವಾಗಲಿದೆ. ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಈ ಸರಣಿಗಾಗಿ ಎರಡು ತಂಡಗಳ ಆಟಗಾರರು ಪೂರ್ಣ ಪ್ರಮಾಣದಲ್ಲಿ ಲಭ್ಯವಿರುವುದು ಅನುಮಾನ ಎನ್ನಲಾಗಿತ್ತು. ಆದರೆ ಬಿಸಿಸಿಐ ಈ ಎರಡು ತಂಡಗಳ ಆಟಗಾರರು ಕೂಡ ಐಪಿಎಲ್‌ನಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದೆ. ಇದು ಎಲ್ಲಾ ಫ್ರಾಂಚೈಸಿಗಳಿಗೆ ನಿರಾಳತೆ ಮೂಡಿಸಿದೆ.

Dec 23, 2022, 10:01 am IST

ಹೊಸ ತಾರೆಗಳನ್ನು ತಂಡಕ್ಕೆ ಸೇರ್ಪಡೆಗೊಳಿಸಲು ನಾವು ಸಿದ್ಧ ಎಂದು ಡೆಲ್ಲಿ ಕ್ಯಾಪಿಟಲ್ಸ್ ಟ್ವೀಟ್ ಮಾಡಿದೆ

Dec 23, 2022, 9:50 am IST

ಇನ್ನು ಈವರೆಗೆ ಐಪಿಎಲ್‌ನಲ್ಲಿ ಸಂಪೂರ್ಣ ಟೂರ್ನಿ ಆಡದಿರುವ ಆಸ್ಟ್ರೇಲಿಯಾದ ಯುವ ಆಟಗಾರ ಕ್ಯಾಮರೂನ್ ಗ್ರೀನ್ ಈ ಬಾರಿಯ ಹರಾಜಿನ ಅತ್ಯಂತ ದುಬಾರಿ ಆಟಗಾರ ಎನಿಸಲಿದ್ದಾರೆ ಎಂದು ನ್ಯೂಜಿಲೆಂಡ್‌ನ ಸ್ಕ್ವಾಡ್ ಸ್ಟೈರಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇವರಿಗಾಗಿ ದೊಡ್ಡ ಮೊತ್ತ ನೀಡಲಿದೆ ಎಂದಿದ್ದಾರೆ.

Dec 23, 2022, 9:48 am IST

ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಲಿದ್ದಾರಾ ಯುವ ಆಟಗಾರ ಸ್ಯಾಮ್ ಕರನ್. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಈ ಬಗ್ಗೆ ಕುತೂಹಲಕಾರಿ ಅನಿಸಿಕೆ ಹಂಚಿಕೊಂಡಿದ್ದಾರೆ. ಯುವ ಆಟಗಾರನಿಗಾಗಿ ಸಿಎಸ್‌ಕೆ ಎಷ್ಟು ಮೊತ್ತವನ್ನು ಬೇಕಾದರೂ ನೀಡಲು ಸಿದ್ಧವಿದೆ ಎಂದಿದ್ದಾರೆ ಸುರೇಶ್ ರೈನಾ

Dec 23, 2022, 8:34 am IST

ಎಲ್ಲಾ 10 ಫ್ರಾಂಚೈಸಿಗಳು ಹರಾಜಿನಲ್ಲಿ ಒಟ್ಟು 174.3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಬಹುದಾಗಿದೆ. ಸನ್ ರೈಸರ್ಸ್ ಹೈದರಾಬಾದ್ ದೊಡ್ಡ ಪರ್ಸ್ ಹೊಂದಿದ್ದಾರೆ, ಕೋಲ್ಕತ್ತಾ ನೈಟ್ ರೈಡರ್ಸ್ ಕಡಿಮೆ ಮೊತ್ತದ ಪರ್ಸ್ ಹೊಂದಿದೆ.

Dec 23, 2022, 8:33 am IST

ಎಲ್ಲ ತಂಡಗಳ ಬಳಿ ಇರುವ ಪರ್ಸ್ ಮೊತ್ತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) - 20.45 ಕೋಟಿ ರೂ. ಡಲ್ಲಿ ಕ್ಯಾಪಿಟಲ್ಸ್ (ಡಿಸಿ) - 19.45 ಕೋಟಿ ರೂ. ಗುಜರಾತ್ ಟೈಟನ್ಸ್ (ಜಿಟಿ) - 19.25 ಕೋಟಿ ರೂ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) - 7.05 ಕೋಟಿ ರೂ. ಲಕ್ನೋ ಸೂಒರ್ ಜೈಂಟ್ಸ್ (ಎಲ್ಎಸ್‌ಜಿ) - 23.35 ಕೋಟಿ ರೂ. ಮುಂಬೈ ಇಂಡಿಯನ್ಸ್ (ಎಂಐ) - 20.55 ಕೋಟಿ ರೂ. ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) - 32.20 ಕೋಟಿ ರೂ. ರಾಜಸ್ಥಾನ್ ರಾಯಲ್ಸ್ (ಆರ್‌ಆರ್): 13.20 ಕೋಟಿ ರೂ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 8.75 ಕೋಟಿ ರೂ. ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) - 42.25 ಕೋಟಿ ರೂ.

Dec 23, 2022, 8:31 am IST

ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ

ಐಪಿಎಲ್ 2023ರ ಆವೃತ್ತಿಗಾಗಿ ನಡೆಯಲಿರುವ ಮಿನಿ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಬವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ಎಲ್ಲಾ 10 ತಂಡಗಳು ಈ ಹರಾಜಿನಲ್ಲಿ ಆಟಗಾರರಿಗಾಗಿ ಪೈಪೋಟಿ ನಡೆಸಲಿದೆ

Story first published: Friday, December 23, 2022, 8:24 [IST]
Other articles published on Dec 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X