ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR ನಾಯಕತ್ವ ಬದಲಾವಣೆಗೆ ಇರ್ಫಾನ್ ಪಠಾಣ್, ಆಕಾಶ್ ಚೋಪ್ರಾ ಅಸಮಾಧಾನ

Irfan Pathan And Aakash Chopra Not Happy With Eoin Morgan Taking Over KKR Captaincy

ಐಪಿಎಲ್ 13ನೇ ಆವೃತ್ತಿಯ ಮಧ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಬದಲಾವಣೆಗೆ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್ ಮತ್ತು ಆಕಾಶ್ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಪಂದ್ಯಕ್ಕೂ ಮೊದಲು ನಾಯಕತ್ವ ಸ್ಥಾನದಿಂದ ದಿನೇಶ್ ಕಾರ್ತಿಕ್ ಇಳಿದಿದ್ದು, ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್‌ಗೆ ಜವಾಬ್ದಾರಿ ವಹಿಸಲಾಗಿದೆ. ಇದು ಹಲವರ ಹುಬ್ಬೇರಿಸುವಂತೆ ಮಾಡಿದ್ದು, ಅನೇಕ ಮಾಜಿ ಕ್ರಿಕೆಟಿಗರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

KKR ನಾಯಕತ್ವ ತ್ಯಜಿಸಿದ ಡಿಕೆ : ಗೌತಮ್ ಗಂಭೀರ್ ಟ್ವೀಟ್ ವೈರಲ್KKR ನಾಯಕತ್ವ ತ್ಯಜಿಸಿದ ಡಿಕೆ : ಗೌತಮ್ ಗಂಭೀರ್ ಟ್ವೀಟ್ ವೈರಲ್

ದಿನೇಶ್ ಕಾರ್ತಿಕ್ ಸೀಸನ್‌ ಮಧ್ಯದಲ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವ ಮೊದಲು ಕೆಕೆಆರ್ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವು ಸಾಧಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ವೇಳೆ ತನ್ನ ಬ್ಯಾಟಿಂಗ್ ಮತ್ತು ಕೀಪಿಂಗ್ ಬಗ್ಗೆ ಹೆಚ್ಚು ಗಮನಹರಿಸಲು ಬಯಸಿದ್ದರಿಂದ ದಿನೇಶ್ ಕಾರ್ತಿಕ್ ಸ್ವತಃ ನಾಯಕ ಸ್ಥಾನದಿಂದ ಕೆಳಗಿಳಿದು ಇಯಾನ್ ಮಾರ್ಗನ್‌ಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ ಎಂದು ಕೆಕೆಆರ್ ಅಧಿಕೃತ ವೆಬ್‌ಸೈಟ್ ಹೇಳಿದೆ.

ಹೀಗಾಗಿ, ನಾಯಕನನ್ನು ಬದಲಾಯಿಸುವ ಹಠಾತ್ ನಿರ್ಧಾರ ಅನೇಕರಿಗೆ ಆಘಾತವನ್ನುಂಟು ಮಾಡಿತು. ಅನೇಕ ಅನುಭವಿ ಕ್ರಿಕೆಟಿಗರು, ವಿಶ್ಲೇಷಕರು ಮತ್ತು ಕ್ರಿಕೆಟ್ ಪಂಡಿತರು ಟ್ವಿಟ್ಟರ್ ಮೂಲಕ ಇಯಾನ್ ಮಾರ್ಗನ್ ಅವರಿಗೆ ನಾಯಕತ್ವ ಹಸ್ತಾಂತರಿಸುವ ನಿರ್ಧಾರವನ್ನು ವಿರೋಧಿಸಿದ್ದಾರೆ. ಈ ಸುದ್ದಿಯಿಂದ ಅಭಿಮಾನಿಗಳು ಖುಷಿಪಟ್ಟರೂ, ಮಧ್ಯದಲ್ಲಿ ಈ ಬದಲಾವಣೆಯನ್ನು ಮಾಡಿದ್ದಕ್ಕಾಗಿ ಆಕಾಶ್ ಚೋಪ್ರಾ ಮತ್ತು ಇರ್ಫಾನ್ ಪಠಾಣ್ ಅವರಂತಹ ಭಾರತದ ಮಾಜಿ ಕ್ರಿಕೆಟಿಗರಿಂದ ಫ್ರ್ಯಾಂಚೈಸ್ ವಿರೋಧ ಎದುರಿಸಿದೆ.

ಮಾಜಿ ಭಾರತದ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಟೂರ್ನಿಯಲ್ಲಿ ಮಾರ್ಗನ್ ಅವರ ಬ್ಯಾಟಿಂಗ್ ಸರಾಸರಿಗಿಂತಲೂ ಕಡಿಮೆಯಾಗಿದೆ ಮತ್ತು ನಾಯಕತ್ವವು ಇಂಗ್ಲೆಂಡ್ ಸ್ಟಾರ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದ್ದರಿಂದ ಈ ನಿರ್ಧಾರದಿಂದ ಅವರು ಹೆಚ್ಚು ಸಂತೋಷಪಟ್ಟಿಲ್ಲ. ಅನುಭವಿ ವೇಗಿ ಇರ್ಫಾನ್ ಪಠಾಣ್ ಕೂಡ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದು, ಪಂದ್ಯಾವಳಿಯ ಮಧ್ಯದಲ್ಲಿ ಬದಲಾವಣೆ ಮಾಡುವುದು ಎಂದಿಗೂ ಒಬ್ಬ ವ್ಯಕ್ತಿಗೆ ಅಥವಾ ತಂಡಕ್ಕೆ ಉತ್ತಮ ಆಯ್ಕೆಯಾಗಿಲ್ಲ ಎಂದು ಅವರು ನಂಬಿದ್ದಾರೆ.

ಇನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿದ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರನ್‌ಗಳಿಸಲು ಪರದಾಡಿದ ದಿನೇಶ್ ಕಾರ್ತಿಕ್ ಎಂಟು ಎಸೆತಗಳಲ್ಲಿ ಕೇವಲ ನಾಲ್ಕು ರನ್‌ಗಳಿಸಿ ಔಟಾದ್ರು.

Story first published: Saturday, October 17, 2020, 10:44 [IST]
Other articles published on Oct 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X