ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ವಿರುದ್ಧ ಇಶಾನ್ ಕಿಶನ್ ಓಪನಿಂಗ್ ಬ್ಯಾಟಿಂಗ್ ಇಳಿಯಲಿದ್ದಾರೆ: ರೋಹಿತ್ ಶರ್ಮಾ

Ishan Kishan and Rohit

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಸಮೀಪದಲ್ಲೇ ಶಿಖರ್ ಧವನ್, ರುತುರಾಜ್ ಗಾಯಕ್ವಾಡ್ ಕೋವಿಡ್-19 ಪಾಸಿಟಿವ್ ಆದ ಪರಿಣಾಮ ರೋಹಿತ್ ಶರ್ಮಾ ಜೊತೆಗೆ ಯಾರು ಓಪನಿಂಗ್ ಜೋಡಿಯಾಗಿ ಕಣಕ್ಕಿಳಿಯುತ್ತಾರೆ ಎಂದು ಗೊಂದಲ ಮೂಡಿಸಿತ್ತು. ಆದ್ರೆ ತನ್ನ ಜೊತೆಗೆ ಇನ್ನಿಂಗ್ಸ್ ಅನ್ನು ಯಾರು ಪ್ರಾರಂಭಿಸುತ್ತಾರೆ ಎಂಬುದನ್ನ ಸ್ವತಃ ಹಿಟ್‌ಮ್ಯಾನ್ ಸ್ಪಷ್ಟಪಡಿಸಿದ್ದಾರೆ.

ಟೀಂ ಇಂಡಿಯಾದ ಮೂವರು ಪ್ರಮುಖ ಆಟಗಾರರು ಕೋವಿಡ್ ಪಾಸಿಟಿವ್ ಆದ ಕಾರಣ ಮಯಾಂಕ್ ಅಗರ್ವಾಲ್‌ಗೂ ಸಹ ಬುಲಾವ್ ನೀಡಲಾಗಿತ್ತು. ಆದ್ರೆ ಅಗರ್ವಾಲ್ ಇನ್ನೂ ಕ್ವಾರಂಟೈನ್‌ನಲ್ಲಿದ್ದಾರೆ. ಆದರೆ, ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಈ ಸಂದಿಗ್ಧತೆಯ ಬಗ್ಗೆ ತೆರೆದಿಟ್ಟಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಅಂತಿಮ ತಂಡದ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ.

ಕೊಹ್ಲಿ ತೋರಿದ ಹಾದಿಯಲ್ಲೇ ಮುಂದುವರಿಯಲಿದೆ

ಕೊಹ್ಲಿ ತೋರಿದ ಹಾದಿಯಲ್ಲೇ ಮುಂದುವರಿಯಲಿದೆ

ವಿರಾಟ್ ಕೊಹ್ಲಿ ನಾಯಕತ್ವ ಬಿಟ್ಟು ಹೋದಲ್ಲಿಂದಲೇ ಟೀಂ ಇಂಡಿಯಾ ಮುನ್ನಡೆಯಲಿದೆ ಎಂದು ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೇಳಿದ್ದಾರೆ. ಜೊತೆಗೆ ಅವರ ನಾಯಕತ್ವದಲ್ಲಿ ಆಡಿದ ಆಟ ಈಗಲೂ ಮುಂದುವರಿಯಲಿದೆ ಎಂದು ಕೊಹ್ಲಿ ಬಗ್ಗೆ ರೋಹಿತ್ ಹೇಳಿದ್ದಾರೆ. ಒಬ್ಬ ಆಟಗಾರನಾಗಿ ತಂಡವು ಅವರಿಂದ ಏನನ್ನು ನಿರೀಕ್ಷಿಸುತ್ತಿದೆ ಎಂಬುದು ನನಗೆ ತಿಳಿದಿದೆ ಎಂದು ಹಿಟ್‌ಮ್ಯಾನ್ ತಿಳಿಪಡಿಸಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ಉಪನಾಯಕನಾಗಿದ್ದೆ ಎಂದು ಸ್ಮರಿಸಿದರು. ಜೊತೆಗೆ ಸದ್ಯಕ್ಕೆ ಯಾವುದೇ ಪ್ರಮುಖ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಪಾಠ ಕಲಿತಿದ್ದೇವೆ!

ದಕ್ಷಿಣ ಆಫ್ರಿಕಾದಿಂದ ಪಾಠ ಕಲಿತಿದ್ದೇವೆ!

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕ್ಲೀನ್ ಸ್ವೀಪ್ ಎದುರಿಸಿದ್ದು ಸೋಲಿನ ಪಾಠ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಆಟಗಾರರು ಪರಸ್ಪರ ಮಾತನಾಡಿ ತಂಡವನ್ನು ಬಲಪಡಿಸುವಂತೆ ಹೇಳಿದರು. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ 3 ಏಕದಿನ ಸರಣಿಯನ್ನು 0-3 ಅಂತರದಲ್ಲಿ ಕಳೆದುಕೊಂಡಿತು. ಕೆ.ಎಲ್ ರಾಹುಲ್ ಭಾರತ ತಂಡವನ್ನ ಮುನ್ನಡೆಸಿದ್ದರು.

ಭಾರತ-ವೆಸ್ಟ್ ಇಂಡೀಸ್ 1st ODI: ವಾಸಿಂ ಜಾಫರ್ ಪ್ರಕಾರ ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11

ಭಾರತ ಶೇಕಡಾ 70 ರಷ್ಟು ಯಶಸ್ಸು ಸಾಧಿಸಿದೆ:ರೋಹಿತ್

ಭಾರತ ಶೇಕಡಾ 70 ರಷ್ಟು ಯಶಸ್ಸು ಸಾಧಿಸಿದೆ:ರೋಹಿತ್

ಕಳೆದ ಕೆಲವು ವರ್ಷಗಳಲ್ಲಿ ಟೀಂ ಇಂಡಿಯಾ ಶೇಕಡಾ 70 ರಷ್ಟು ಯಶಸ್ಸು ಸಾಧಿಸಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಆದರೆ, ಕೆಲ ಸಂದರ್ಭಗಳಲ್ಲಿ ಆಟ ಬದಲಿಸಬೇಕಾದ ಸಂದರ್ಭಗಳೂ ಎದುರಾಗುತ್ತವೆ ಎಂದರು. ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡಲು ಸಿದ್ಧ ಎಂದು ರೋಹಿತ್ ಹೇಳಿದ್ದಾರೆ. ಪ್ರಸ್ತುತ ವೆಸ್ಟ್ ಇಂಡೀಸ್ ಸರಣಿಯಲ್ಲಿ ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ಯುಜವೇಂದ್ರ ಚಹಾಲ್ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಾರೆ ಎಂದು ಹಿಟ್‌ಮ್ಯಾನ್ ಆಶಿಸಿದ್ದಾರೆ.

ಭಾರತ ಅಂಡರ್-19 ತಂಡಕ್ಕೆ ಅಭಿನಂದನೆ

ಭಾರತ ಅಂಡರ್-19 ತಂಡಕ್ಕೆ ಅಭಿನಂದನೆ

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿರುವ ಟೀಂ ಇಂಡಿಯಾ ಅಂಡರ್-19 ತಂಡವನ್ನು ರೋಹಿತ್ ಶರ್ಮಾ ಕೂಡ ಅಭಿನಂದಿಸಿದ್ದಾರೆ. ಫೈನಲ್‌ನಲ್ಲಿ ಗೆಲ್ಲುವ ಹಂಬಲವಿದೆ. ಅಂಡರ್-19 ತಂಡ ಉತ್ತಮವಾಗಿ ಆಡುತ್ತಿದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ಹೊಗಳಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಸರಿಯಾದ ಯೋಜನೆ ಮುಖ್ಯ ಎಂದು ಹೇಳಿದರು. ಬೆಂಗಳೂರಿನ ಎನ್ ಸಿಎ ಅಕಾಡೆಮಿಯಲ್ಲಿ ಟೀಂ ಇಂಡಿಯಾ ಅಂಡರ್-19 ತಂಡದೊಂದಿಗೆ ಮಾತನಾಡಿದ್ದೇನೆ ಎಂದು ರೋಹಿತ್ ಹೇಳಿದ್ದಾರೆ.

Rohit Sharma ಪ್ರಕಾರ ತಂಡದವರ ಈ ಒಂದರ ಕಡೆ ಗಮನ ಹರಿಸಬೇಕು | Oneindia Kannada
ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಏಕದಿನ ಫಾರ್ಮೆಟ್‌ನ ಸ್ಕ್ವಾಡ್‌

ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಏಕದಿನ ಫಾರ್ಮೆಟ್‌ನ ಸ್ಕ್ವಾಡ್‌

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಶಾರೂಖ್ ಖಾನ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್

Story first published: Saturday, February 5, 2022, 23:32 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X