ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ವೆಸ್ಟ್ ಇಂಡೀಸ್ 1st ODI: ವಾಸಿಂ ಜಾಫರ್ ಪ್ರಕಾರ ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11

india vs west indies

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ 0-3 ಅಂತರದ ವೈಟ್‌ವಾಶ್ ಮುಖಭಂಗ ಎದುರಿಸಿದ ಭಾರತ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದಲ್ಲಿ ಜಯಗಳಿಸಿದ ಕಿರಾನ್ ಪೊಲಾರ್ಡ್ ನೇತೃತ್ವದ ವಿಂಡೀಸ್ ಪಡೆ ಸಂಪೂರ್ಣ ಆತ್ಮವಿಶ್ವಾಸದಿಂದ ಭಾರತಕ್ಕೆ ಬಂದಿಳಿದಿದೆ. ಆದ್ರೆ ತಮ್ಮ ತವರಿನಲ್ಲೇ ಐರ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಏಕದಿನ ಸರಣಿಯನ್ನ 2-1 ಅಂತರದಲ್ಲಿ ಸೋತಿದ್ದನ್ನ ಮರೆತಿಲ್ಲ.

ಇತ್ತ ಭಾರತದಲ್ಲಿ ರೋಹಿತ್ ಶರ್ಮಾ ಲಿಮಿಟೆಡ್ ಓವರ್‌ ಕ್ರಿಕೆಟ್‌ನ ಸಂಪೂರ್ಣ ನಾಯಕತ್ವದ ಮೊದಲ ಸರಣಿ ಇದಾಗಿದ್ದು, ಸಾಕಷ್ಟು ವಿಶ್ವಾಸದಿಂದ ಕಣಕ್ಕಿಳಿಯುತ್ತಿದೆ. ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ನಾಳೆ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ತಂಡವನ್ನ ಹೆಸರಿಸಿದ್ದಾರೆ.

ಜಾಫರ್ ಪ್ರಕಾರ ಟಾಪ್ ಆರ್ಡರ್ ಬ್ಯಾಟಿಂಗ್

ಜಾಫರ್ ಪ್ರಕಾರ ಟಾಪ್ ಆರ್ಡರ್ ಬ್ಯಾಟಿಂಗ್

ವಾಸಿಂ ಜಾಫರ್ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್‌ರನ್ನ ಓಪನಿಂಗ್ ಆಗಿ ಕಣಕ್ಕಿಳಿಯಲು ಬಯಸಿದ್ದಾರೆ. ಬ್ಯಾಟಿಂಗ್ ಐಕಾನ್ ವಿರಾಟ್ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ , ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ನಾಲ್ಕನೇ ಕ್ರಮಾಂಕ ಮತ್ತು ಸೂರ್ಯಕುಮಾರ್ ಯಾದವ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಯಸಿದ್ದಾರೆ.

ಆಲ್‌ರೌಂಡರ್ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್‌ಗೆ ಅವಕಾಶ

ಆಲ್‌ರೌಂಡರ್ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್‌ಗೆ ಅವಕಾಶ

ಆಲ್‌ರೌಂಡರ್ ಸ್ಥಾನದಲ್ಲಿ ವಾಸಿಂ ಜಾಫರ್‌ ತಮಿಳುನಾಡು ಮೂಲದ ಆಲ್‌ರೌಂಡರ್ ವಾಶಿಂಗ್‌ಟನ್‌ಗೆ ಸ್ಥಾನ ಒದಗಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಕೋವಿಡ್-19 ಪಾಸಿಟಿವ್ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸ ಮಿಸ್ ಮಾಡಿಕೊಂದಿದ್ದ ಸುಂದರ್‌ಗೆ ಅವಕಾಶ ನೀಡಿದ್ದಾರೆ. ನಾಯಕನಿಗೆ ಹೆಚ್ಚುವರಿ ಕುಶನ್ ನೀಡಲು ಅವರನ್ನು ಆರನೇ ಸ್ಥಾನದಲ್ಲಿ ಮತ್ತು ನಂತರ ಐದು ಸ್ಪೆಷಲಿಸ್ಟ್ ಬೌಲರ್‌ಗಳನ್ನು ಆಯ್ಕೆ ಮಾಡಲಾಗಿದೆ

ವಿಶ್ವ ದಾಖಲೆಯ 1000ನೇ ಏಕದಿನ ಪಂದ್ಯವನ್ನಾಡಲಿರುವ ಭಾರತ: ಇದುವರೆಗೆ ಗೆದ್ದಿದ್ದೆಷ್ಟು, ಸೋತಿದೆಷ್ಟು?

ಇಬ್ಬರು ಸ್ಪಿನ್ನರ್‌ಗಳಿಗೆ ಪ್ಲೇಯಿಂಗ್‌ 11ನಲ್ಲಿ ಸ್ಥಾನ

ಇಬ್ಬರು ಸ್ಪಿನ್ನರ್‌ಗಳಿಗೆ ಪ್ಲೇಯಿಂಗ್‌ 11ನಲ್ಲಿ ಸ್ಥಾನ

ವಾಷಿಂಗ್ಟನ್ ಸುಂದರ್ ಆಫ್‌ ಸ್ಪಿನ್ ಜೊತೆಗೆ, ಇಬ್ಬರು ಸ್ಪಿನ್ನರ್‌ಗಳಿಗೆ ಜಾಫರ್ ಮಣೆ ಹಾಕಿದ್ದಾರೆ. ಯುಜವೇಂದ್ರ ಚಹಾಲ್ ಮತ್ತು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಕಲ್ಪಿಸಿದ್ದು, ಬೌಲಿಂಗ್ ದಾಳಿಯಲ್ಲಿ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಾಹರ್ಗೆ ಅವಕಾಶ ನೀಡುವ ಮೂಲಕ ಭಾರತದ ಬ್ಯಾಟಿಂಗ್ ಬಲವನ್ನ ಆಳವಾಗಿ ಹೆಚ್ಚುವಂತೆ ನೋಡಿಕೊಂಡಿದ್ದಾರೆ. ಇನ್ನು ಮೂರನೇ ವೇಗಿ ಆಗಿ ಮೊಹಮ್ಮದ್ ಸಿರಾಜ್‌ಗೆ ಸ್ಥಾನ ನೀಡಲಾಗಿದೆ.

ವಾಸಿಂ ಜಾಫರ್ ಪ್ರಕಾರ ಭಾರತ ಪ್ಲೇಯಿಂಗ್ ಸಂಭಾವ್ಯ ಪ್ಲೇಯಿಂಗ್ 11

ವಾಸಿಂ ಜಾಫರ್ ಪ್ರಕಾರ ಭಾರತ ಪ್ಲೇಯಿಂಗ್ ಸಂಭಾವ್ಯ ಪ್ಲೇಯಿಂಗ್ 11

ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಾಲ್

Rohit Sharma ಪ್ರಕಾರ ತಂಡದವರ ಈ ಒಂದರ ಕಡೆ ಗಮನ ಹರಿಸಬೇಕು | Oneindia Kannada
ವೆಸ್ಟ್ ಇಂಡೀಸ್ ಏಕದಿನ ಸ್ಕ್ವಾಡ್‌

ವೆಸ್ಟ್ ಇಂಡೀಸ್ ಏಕದಿನ ಸ್ಕ್ವಾಡ್‌

ಭಾರತ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 16 ಮಂದಿಯ ತಂಡವನ್ನು ಆಯ್ಕೆ ಮಾಡಿದೆ.

ವೆಸ್ಟ್ ಇಂಡೀಸ್ ODI ತಂಡ: ಕೀರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಎನ್ಕ್ರುಮಾ ಬೊನ್ನರ್, ಡ್ಯಾರೆನ್ ಬ್ರಾವೋ, ಶೇಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶೇ ಹೋಪ್, ಅಕಿಲ್ಸ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮೆರೊ ಸ್ಮಿತ್, ಓಡಿಯನ್ ಝಾಪರ್ಡ್, ಓಡಿಯನ್ ಶೆಫರ್ಡ್.

Story first published: Saturday, February 5, 2022, 19:20 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X