ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಅನಗತ್ಯ ಪ್ರಶಂಸೆಯನ್ನು ಪಡೆದುಕೊಂಡೆ ಎಂದ ರಾಹುಲ್ ದ್ರಾವಿಡ್

It is Unnecessary credit, the boys deserve all the praise says Rahul Dravid

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಯುವ ಪಡೆ ನೀಡಿದ ಪ್ರದರ್ಶನ ವಿಶ್ವ ಕ್ರಿಕೆಟ್ ದಿಗ್ಗಜರಿಂದ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಇದೇ ಸಂದರ್ಭದಲ್ಲಿ ಯುವ ಆಟಗಾರರು ಬಲಿಷ್ಠರನ್ನಾಗಿ ರೂಪುಗೊಳ್ಳಲು ಅಂಡರ್ 19 ಹಾಗೂ ಭಾರತ ಎ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ನೀಡಿದ ಕೊಡುಗೆಯ ಬಗ್ಗೆಯೂ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

ಆದರೆ ಈ ಪ್ರಶಂಸೆಗಳಿಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ. ಈ ಎಲ್ಲಾ ಪ್ರಶಂಸೆಗಳು ಹುಡುಗರಿಗೆ ಸಲ್ಲಬೇಕು. ನಾನು ಅನಗತ್ಯವಾಗಿ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನಿಡಿದ ಸಂದರ್ಶನದಲ್ಲಿ ದ್ರಾವಿಡ್ ಈ ಗೆಲುವಿನ ಶ್ರೇಯಸ್ಸು ಸಂಪೂರ್ಣವಾಗಿ ಆಟಗಾರರಿಗೆ ಸಲ್ಲಬೇಕೆಂದು ನಗುತ್ತಲೇ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ

ಪ್ರಮುಖ ಆಟಗಾರರ ಅಲಭ್ಯತೆ

ಪ್ರಮುಖ ಆಟಗಾರರ ಅಲಭ್ಯತೆ

ಮೊದಲ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಪಿತೃತ್ವದ ರಜೆಯಲ್ಲಿ ತವರಿಗೆ ವಾಪಾಸಾಗಿದ್ದರು. ಆದರೆ ಅದಾದ ಬಳಿಕ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಆರ್ ಅಶ್ವಿನ್, ರವೀಂದ್ರ ಜಡೇಜಾ ಸಹಿತ ಹಲವು ಆಟಗಾರರು ಗಾಯಗೊಂಡಿದ್ದರು.

ಶ್ರೇಷ್ಠ ಪ್ರದರ್ಶನ ನೀಡಿದ ಯುವ ಪಡೆ

ಶ್ರೇಷ್ಠ ಪ್ರದರ್ಶನ ನೀಡಿದ ಯುವ ಪಡೆ

ಈ ಸಂದರ್ಭದಲ್ಲಿ ಮೊಹಮದ್ ಸಿರಾಜ್, ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶುಬ್ಲನ್ ಗಿಲ್ ಮತ್ತು ರಿಷಬ್ ಪಂತ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡು ಶ್ರೇಷ್ಠ ಪ್ರದರ್ಶನ ನಿಡಿ ಗೆಲುವಿಗೆ ಕಾರಣರಾದರು. ಈ ಎಲ್ಲಾ ಆಟಗಾರರು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಂಡರ್ 19 ಹಾಗೂ ಭಾರತ ಎ ತಂಡವನ್ನು ಪ್ರತಿನಿಧಿಸಿವರು. ಹೀಗಾಗಿ ದ್ರಾವಿಡ್ ನೀಡಿದ ಕೊಡುಗೆ ಇಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು.

ದ್ರಾವಿಡ್ ಕೊಡುಗೆಗೆ ಪ್ರಶಂಸೆ

ದ್ರಾವಿಡ್ ಕೊಡುಗೆಗೆ ಪ್ರಶಂಸೆ

ಭಾರತೀಯ ಕ್ರಿಕೆಟ್‌ನ ಮಾಜಿ ಆಯ್ಕೆಗಾರ ಜತಿನ್ ಪರಂಜಪೆ, ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಲ್ ಸಹಿತ ಸಾಕಷ್ಟು ಪ್ರಮುಖರ ಜೊತೆಗೆ ಕ್ರಿಕೆಟ್ ಪ್ರೇಮಿಗಳು ರಾಹುಲ್ ದ್ರಾವಿಡ್ ಕೊಡುಗೆಯ ಬಗ್ಗೆ ಮುಕ್ತಕಂಠದಿಂದ ಹೊಗಳಿಕೆಯ ಮಾತುಗಳನ್ನು ಆಡಿದ್ದರು.

Story first published: Sunday, January 24, 2021, 17:01 [IST]
Other articles published on Jan 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X