ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA: ಫಾರ್ಮ್ ಮರಳಿ ಪಡೆಯಲು ವಿರಾಟ್ ಕೊಹ್ಲಿ ದಾರಿ ಹಿಡಿದ ಕನ್ನಡಿಗ ರಾಹುಲ್‌ !

KL Rahul Seeking Mental conditioning coach Paddy Upton Help To Find Good Form

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್ ರನ್‌ಗಾಗಿ ಪರದಾಡಿದ್ದಾರೆ. ಅವರ ಕಳಪೆ ಪ್ರದರ್ಶನ ಟೀಂ ಇಂಡಿಯಾವನ್ನು ಚಿಂತೆಗೆ ದೂಡಿದೆ. ದೊದ್ದ ವೇದಿಕೆಯಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡುವುದಿಲ್ಲ ಎನ್ನುವ ಟೀಕೆ ವ್ಯಕ್ತವಾಗುತ್ತಿದೆ. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಭಾನುವಾರ ಈ ಪಂದ್ಯ ನಡೆಯಲಿದೆ.

ತಮ್ಮ ಫಾರ್ಮ್ ಮರಳಿಪಡೆಯಲು ಕೆಎಲ್ ರಾಹುಲ್ ಈಗ ವಿರಾಟ್ ಕೊಹ್ಲಿಯಂತೆ ಮಾನಸಿಕ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರ ಸಹಾಯವನ್ನು ಕೋರಿದ್ದಾರೆ. ತಮ್ಮ ಪ್ರದರ್ಶನ ಉತ್ತಮ ಪಡಿಸಿಕೊಳ್ಳಲು ಕೋಚಿಂಗ್ ಸಿಬ್ಬಂದಿಯೊಂದಿಗೆ ವಿಶೇಷ ನೆಟ್ ಸೆಷನ್ ತೆಗೆದುಕೊಂಡಿದ್ದರು.

ಸಿದ್ಧತೆಯೇ ಮಾಡಿಕೊಳ್ಳದೆ ವಿಶ್ವಕಪ್‌ಗೆ ಬಂದ ತಂಡ ಅದು: ಮಾಜಿ ಕ್ರಿಕೆಟಿಗನ ಟೀಕೆಸಿದ್ಧತೆಯೇ ಮಾಡಿಕೊಳ್ಳದೆ ವಿಶ್ವಕಪ್‌ಗೆ ಬಂದ ತಂಡ ಅದು: ಮಾಜಿ ಕ್ರಿಕೆಟಿಗನ ಟೀಕೆ

ವಿರಾಟ್ ಕೊಹ್ಲಿ ಕೂಡ ತಮ್ಮ ಕೆಟ್ಟ ಫಾರ್ಮ್‌ನಿಂದ ಹೊರಬರಲು ಪ್ಯಾಡಿ ಆಪ್ಟನ್ ಸಹಾಯ ಮಾಡಿದ್ದರು. ಈಗ ಕೊಹ್ಲಿ ದಾರಿಯನ್ನು ಅನುಸರಿಲು ಮುಂದಾಗಿದ್ದು, ತಮ್ಮ ಫಾರ್ಮ್‌ಗೆ ಮರಳಲು ಪ್ಯಾಡಿ ಆಪ್ಟನ್ ಸಹಾಯವನ್ನು ಬಯಸುತ್ತಿದ್ದಾರೆ. ವಿಶೇಷವಾಗಿ ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮುನ್ನ ರಾಹುಲ್ ಆಪ್ಟನ್‌ನೊಂದಿಗೆ ವಿಶೇಷ ಸೆಷನ್‌ಗಳನ್ನು ನಡೆಸುತ್ತಿದ್ದಾರೆ.

ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ಮಾಡಿದರೂ ಪ್ರಯೋಜನವಿಲ್ಲ

ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ಮಾಡಿದರೂ ಪ್ರಯೋಜನವಿಲ್ಲ

ಈ ಮೊದಲು ಎಲ್‌ಬಿಡಬ್ಲ್ಯೂ ಗೆ ಹಲವು ಬಾರಿ ಬಲಿಯಾಗಿದ್ದ ಕಾರಣ, ನೆಟ್ಸ್‌ನಲ್ಲಿ ಅದರ ಬಗ್ಗೆ ಸಾಕಷ್ಟು ಅಭ್ಯಾಸ ಮಾಡಿದ್ದರು. ಎಷ್ಟೇ ಅಭ್ಯಾಸ ಮಾಡಿದರೂ ಅದು ಫಲಿತಾಂಶ ನೀಡುತ್ತಿಲ್ಲ, ಭಾರತೀಯ ಉಪನಾಯಕ ರಾಹುಲ್‌ಗೆ ತಾಂತ್ರಿಕತೆಗಿಂದ ಮಾನಸಿಕ ಸಮಸ್ಯೆ ಹೆಚ್ಚಾಗಿದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಮಾನಸಿಕವಾಗಿ ಬಲಗೊಳ್ಳಲು ಪ್ಯಾಡಿ ಆಪ್ಟನ್‌ ಮೊರೆ ಹೋಗಿದ್ದಾರೆ.

ಕೆಎಲ್ ರಾಹುಲ್ ಮುಂದಿನ ಎರಡು ದಿನಗಳವರೆಗೆ ಪ್ಯಾಡಿ ಅಪ್ಟನ್‌ನೊಂದಿಗೆ ಸ್ವಲ್ಪ ಸಮಯ ಕಳೆಯಲಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಕೂಡ ಈ ಬಗ್ಗೆ ಸಲಹೆ ನೀಡಿದ್ದಾರೆ. ಕೆಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ತಾಂತ್ರಿಕವಾಗಿ ಯಾವುದೇ ತೊಂದರೆ ಇಲ್ಲ, ಆದರೆ, ಮಾನಸಿಕವಾಗಿ ಅಡಚಣೆ ಎದುರಿಸುತ್ತಿದ್ದಾರೆ. ಆದ್ದರಿಂದ, ಮುಂದಿನ ಎರಡು ದಿನ ಪ್ಯಾಡಿ ಅಪ್ಟನ್‌ ಜೊತೆ 1 ಗಂಟೆ ಸಮಯ ಕಳೆಯಲಿದ್ದಾರೆ.

IND Vs SA: ಹರಿಣಗಳನ್ನು ಎದುರಿಸಲು ಕಣಕ್ಕಿಳಿಯಲಿದೆ ಬಲಿಷ್ಠ ಟೀಂ ಇಂಡಿಯಾ, ಏನೆಲ್ಲಾ ಬದಲಾವಣೆ?

ಫಾರ್ಮ್ ಮುಂದುವರೆಸಲು ರಾಹುಲ್ ಪ್ರಯಾಸ

ಫಾರ್ಮ್ ಮುಂದುವರೆಸಲು ರಾಹುಲ್ ಪ್ರಯಾಸ

ಕೆಎಲ್ ರಾಹುಲ್ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು ಆದರೆ ಟಿ 20 ವಿಶ್ವಕಪ್‌ನಲ್ಲಿ ಅದನ್ನು ಪುನರಾವರ್ತಿಸಲು ಹೆಣಗಾಡಿದ್ದಾರೆ. ಎಂಸಿಜಿಯಲ್ಲಿ ಪಾಕಿಸ್ತಾನದ ವಿರುದ್ಧ 4 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ ಎಸ್‌ಸಿಜಿಯಲ್ಲಿ ವಿಶೇಷ ನೆಟ್ ಸೆಷನ್ ಹೊಂದಿದ್ದರು ಆದರೆ ನೆದರ್‌ಲ್ಯಾಂಡ್ ವಿರುದ್ಧ ಕೇವಲ 9 ರನ್ ಗಳಿಸಲು ಸಾಧ್ಯವಾಯಿತು.

ಇತ್ತೀಚೆಗಷ್ಟೇ ಏಷ್ಯಾಕಪ್‌ನಲ್ಲಿ ಕೊಹ್ಲಿಯೊಂದಿಗೆ ಆಪ್ಟನ್ ಇದೇ ರೀತಿಯ ಸೆಷನ್‌ಗಳನ್ನು ನಡೆಸಿದರು ಅದಾದ ನಂತರ ಅವರು ತಮ್ಮ ಫಾರ್ಮ್‌ಗೆ ಮರಳಿದ್ದರು. ಮಾತ್ರವಲ್ಲದೆ ಇಂದಿಗೂ ತಮ್ಮ ಉತ್ತಮ ಫಾರ್ಮ್‌ಅನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

2011ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಪ್ಯಾಡಿ

2011ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಪ್ಯಾಡಿ

ಪ್ಯಾಡಿ ಅಪ್ಟನ್ ಇತ್ತೀಚೆಗಷ್ಟೇ ಸೀಮಿತ ಅವಧಿಯ ಒಪ್ಪಂದದಲ್ಲಿ ಭಾರತ ತಂಡದೊಂದಿಗೆ ಸೇರಿಕೊಂಡರು. 2011 ರ ವಿಶ್ವಕಪ್-ವಿಜೇತ ಬ್ಯಾಕ್‌ರೂಮ್ ಸಿಬ್ಬಂದಿಯ ಭಾಗವಾಗಿದ್ದರು. ಆಪ್ಟನ್‌ರನ್ನು ಮಾಜಿ ಸಹೋದ್ಯೋಗಿ ರಾಹುಲ್ ದ್ರಾವಿಡ್ ಅವರು ಎರಡನೇ ಬಾರಿಗೆ ಭಾರತ ತಂಡದ ಜೊತೆ ಕೆಲಸ ಮಾಡಲು ಒತ್ತಾಯಿಸಿದರು.

ಈ ಹಿಂದೆ ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಆಪ್ಟನ್ ಕೆಲಸ ಮಾಡಿದ್ದಾರೆ ಮತ್ತು ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳೊಂದಿಗೆ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಕೆಎಲ್ ರಾಹುಲ್ ಇದೇ ರೀತಿಯ ಪರಿಣಾಮವನ್ನು ನಿರೀಕ್ಷಿಸುತ್ತಾರೆ.

Story first published: Friday, October 28, 2022, 21:04 [IST]
Other articles published on Oct 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X