ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

10,000 ರನ್ ಗಡಿ ದಾಟಿದ ವಿರಾಟ್ ಕೊಹ್ಲಿಯ ಟಾಪ್ 5 ಏಕದಿನ ಇನ್ನಿಂಗ್ಸ್‌

Kohli 10000: The top five ODI innings of Virat Kohli

ವಿಶಾಖಪಟ್ನಂ, ಅಕ್ಟೋಬರ್ 24: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ (ಅಕ್ಟೋಬರ್ 24) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 10,000 ರನ್ ಪೂರೈಸಿದರು. ಜೊತೆಗೆ 37ನೇ ಏಕದಿನ ಶತಕ ಸಾಧನೆಯನ್ನೂ ಮೆರೆದರು.

ಏಕದಿನ ಕ್ರಿಕೆಟ್ ನ ಅಚ್ಚರಿ: ಕಿಂಗ್ ಕೊಹ್ಲಿ ಈಗ 10,000ರನ್ ಗಳ ಸರದಾರಏಕದಿನ ಕ್ರಿಕೆಟ್ ನ ಅಚ್ಚರಿ: ಕಿಂಗ್ ಕೊಹ್ಲಿ ಈಗ 10,000ರನ್ ಗಳ ಸರದಾರ

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಭಾರತ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ಆರಂಭಿಕ ವಿಕೆಟ್ ಗಳನ್ನು ಕಳೆದುಕೊಂಡಿತಾದರೂ ನಾಯಕ ವಿರಾಟ್ ಕೊಹ್ಲಿ ತಂಡದ ಬೆಂಬಲಕ್ಕೆ ನಿಂತರು. ಈ ಪಂದ್ಯದಲ್ಲಿ ಕೊಹ್ಲಿ 129 ಎಸೆತಕ್ಕೆ 157 ರನ್ ಗಳಿಸಿದ್ದರು.

ವಿಂಡೀಸ್ ವಿರುದ್ಧ ಅತ್ಯಧಿಕ ರನ್: ಸಚಿನ್ ದಾಖಲೆ ಮುರಿದ ಕೊಹ್ಲಿವಿಂಡೀಸ್ ವಿರುದ್ಧ ಅತ್ಯಧಿಕ ರನ್: ಸಚಿನ್ ದಾಖಲೆ ಮುರಿದ ಕೊಹ್ಲಿ

ಸಚಿನ್ ತೆಂಡೂಲ್ಕರ್ 10,000 ರನ್ ಗಡಿ ದಾಟಿಸಲು 254 ಇನ್ನಿಂಗ್ಸ್ ಗಳನ್ನು ಬಳಸಿಕೊಂಡಿದ್ದರೆ, ಕೊಹ್ಲಿ ಕೇವಲ 205 ಇನ್ನಿಂಗ್ಸ್ ಗಳಲ್ಲೇ 10,000 ರನ್ ಗಡಿ ದಾಟಿ ಸಚಿನ್ ದಾಖಲೆ ಮೀರಿಸಿದ್ದಾರೆ. ದಾಖಲೆ ಶೂರ ಕೊಹ್ಲಿಯ ಈಗಿನ ಈ ಅಪರೂಪದ ಸಾಧನೆ ಜೊತೆಗೆ ವಿರಾಟ್ ಹಿಂದಿನ ಟಾಪ್ 5 ಏಕದಿನ ಇನ್ನಿಂಗ್ಸ್ ಗಳ ಮಾಹಿತಿ ಇಲ್ಲಿದೆ.

1. ಶ್ರೀಲಂಕಾ ವಿರುದ್ಧ 133 ರನ್

1. ಶ್ರೀಲಂಕಾ ವಿರುದ್ಧ 133 ರನ್

2012ರಲ್ಲಿ ಆಸ್ಟ್ರೇಲಿಯಾದ ಬ್ಲಂಡ್ಸ್ಟೋನ್ ಅರೆನಾ ಹೊಬರ್ಟ್ ನಲ್ಲಿ ನಡೆದಿದ್ದ ತ್ರಿಕೋನ ಸರಣಿಯ ಪಂದ್ಯಲ್ಲಿ ಶ್ರೀಲಂಕಾ ವಿರುದ್ಧ ಕೊಹ್ಲಿ 133 ರನ್ ಚಚ್ಚಿದ್ದರು. ಈ ವೇಳೆ 4 ವಿಕೆಟ್ ಕಳೆದು 320 ರನ್ ಪೇರಿಸಿದ್ದ ಶ್ರೀಲಂಕಾ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಭಾರತ, ಕೊಹ್ಲಿ ಬ್ಯಾಟಿಂಗ್ ನೆರವಿನಿಂದ 36.4 ಓವರ್ ನಲ್ಲೇ ಗುರಿ ಮುಟ್ಟಿ ಗೆಲುವನ್ನು ಸಂಭ್ರಮಿಸಿತ್ತು.

2. ಪಾಕ್ ವಿರುದ್ಧ ಬ್ಯಾಟಿಂಗ್ ಅಬ್ಬರ

2. ಪಾಕ್ ವಿರುದ್ಧ ಬ್ಯಾಟಿಂಗ್ ಅಬ್ಬರ

ಆಸ್ಟ್ರೇಲಿಯಾದ ಹೊಬರ್ಟ್ ಬಲ್ಲಿ ನಡೆದಿದ್ದ ಪಂದ್ಯದ ಕೆಲವೇ ವಾರದ ಬಳಿಕ ಕೊಹ್ಲಿ ಪಾಕಿಸ್ತಾನ ವಿರುದ್ಧ 183 ರನ್ ಬಾರಿಸಿದ್ದರು. ಧಾಕಾದಲ್ಲಿ ನಡೆದಿದ್ದ ಏಷ್ಯಾ ಕಪ್ 2012ರ ಪಂದ್ಯದಲ್ಲಿ ಪಾಕ್ 329 ರನ್ ಬಾರಿಸಿ ಗೆಲುವನ್ನು ಎದುರು ನೋಡುತ್ತಿತ್ತು. ಆದರೆ 148 ಎಸೆತಗಳಿಗೆ 183 ರನ್ ಬಾರಿಸಿದ್ದ ಕೊಹ್ಲಿ, ತಂಡವನ್ನು ಇನ್ನೂ ಎರಡು ಓವರ್ ಗಳು ಬಾಕಿಯಿರುವಾಗಲೇ ಗೆಲ್ಲಿಸುವಲ್ಲಿ ನೆರವಾಗಿದ್ದರು.

3. ಇಂಗ್ಲೆಂಡ್ ಎದುರು 122 ರನ್

3. ಇಂಗ್ಲೆಂಡ್ ಎದುರು 122 ರನ್

2017ರಲ್ಲಿ ಪುಣೆಯಲ್ಲಿ ನಡೆದಿದ್ದ ಇಂಗ್ಲೆಂಡ್-ಭಾರತ ನಡುವಣ ಪಂದ್ಯದಲ್ಲಿ ಇಂಗ್ಲೆಂಡ್ 350 ರನ್ ಬಾರಿಸಿತ್ತು. ಭಾರತ 63 ರನ್ ಗಳಿಸುವ ವೇಳೆಗೆ ಅಮೂಲ್ಯ 4 ವಿಕೆಟ್ ಗಳನ್ನು ಕಳೆದುಕೊಂಡು ಸೋಲುವ ಭೀತಿಯಲ್ಲಿತ್ತು. ಆದರೆ 8 ಬೌಂಡರಿ, 6 ಸಿಕ್ಸರ್ ಗಳನ್ನು ಚಚ್ಚಿದ್ದ ಕೊಹ್ಲಿ ಭಾರತದ ಬೆಂಗಾವಿಗೆ ನಿಂತರು. ಕೇದಾರ್ ಜಾಧವ್ ಕೂಡ 12 ಬೌಂಡರಿ, 4 ಸಿಕ್ಸರ್ ಗಳನ್ನು ಬಾರಿಸಿದ್ದರಿಂದ ಭಾರತ 48.1 ಓವರ್ ನಲ್ಲೇ 7 ವಿಕೆಟ್ ಕಳೆದು 356 ರನ್ ನೊಂದಿಗೆ ಗೆಲುವನ್ನಾಚರಿಸಿತು.

4. ಮತ್ತೊಂದು ರೋಚಕ ಪಂದ್ಯದಲ್ಲಿ ಜಯ

4. ಮತ್ತೊಂದು ರೋಚಕ ಪಂದ್ಯದಲ್ಲಿ ಜಯ

2013ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ, ನಾಗ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಭರ್ಜರಿ 350 ರನ್ ಪೇರಿಸಿತ್ತು. ಶೇನ್ ವಾಟ್ಸನ್ 102, ಜಾರ್ಜ್ ಬೈಲೇ 156 ರನ್ ಪೇರಸಿದ್ದರಿಂದ ಆಸೀಸ್ ಭಾರತಕ್ಕೆ ಉತ್ತಮ ರನ್ ಗುರಿ ನೀಡಿತ್ತು. ಆದರೆ ಮತ್ತೆ ತಂಡದ ಗೆಲುವನ್ನು ಹೆಗಲಿಗೇರಿಸಿಕೊಂಡಿದ್ದ ಕೊಹ್ಲಿ, 115 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ 49.3 ಓವರ್‌ ನಲ್ಲಿ ಭಾರತ 4 ವಿಕೆಟ್ ಕಳೆದು 351 ರನ್ ಸೇರಿಸಿತ್ತು.

5. ವಿಶ್ವಕಪ್ ನಲ್ಲಿ ಪಾಕ್ ಗೆ ಸೋಲು

5. ವಿಶ್ವಕಪ್ ನಲ್ಲಿ ಪಾಕ್ ಗೆ ಸೋಲು

ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ನಲ್ಲಿ 2015ರಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತಕ್ಕೆ ಕೊಹ್ಲಿ 107 ರನ್ ಸೇರಿಸಿದ್ದರು. ಶಿಖರ್ ಧವನ್ 73, ಸುರೇಶ್ ರೈನಾ 74 ರನ್ ರನ್ ಕೊಡುಗೆಯೊಂದಿಗೆ ಭಾರತ 7 ವಿಕೆಟ್ ಕಳೆದು ಭರ್ತಿ 300 ರನ್ ಮಾಡಿತ್ತು. ಪಾಕಿಸ್ತಾನ ಈ ವೇಳೆ 47 ಓವರ್ ಗೆ ಎಲ್ಲಾ ವಿಕೆಟ್ ಕಳೆದು 224 ರನ್ ಪೇರಿಸಿ ಶರಣಾಗಿತ್ತು.

Story first published: Wednesday, October 24, 2018, 18:45 [IST]
Other articles published on Oct 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X