ಐಪಿಎಲ್ ಹರಾಜು: ಕೋಟ್ಯಧಿಪತಿ ಬಿರ್ಲಾ ಅವರ ಮಗ 30 ಲಕ್ಷಕ್ಕೆ ಮಾರಾಟ

Posted By:
Kumar Mangalam Birla’s son Aryaman sold to Rajasthan Royals, Virender Sehwag buys nephew

ಬೆಂಗಳೂರು, ಜನವರಿ 29: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರ ಹರಾಜಿನಲ್ಲಿ ಹೆಚ್ಚೆಚ್ಚು ಯುವ ಪ್ರತಿಭೆಗಳು ಹರಾಜಿನಲ್ಲಿ ಅವಕಾಶ ಸಿಕ್ಕಿದ್ದು ವಿಶೇಷ.

ಅದರಲ್ಲೂ ರಾಜಸ್ಥಾನ್ ರಾಯಲ್ಸ್ ತಂಡವು ಯುವಕರಿಗೆ ಆರಂಭದಿಂದಲೂ ಮಾನ್ಯತೆ ನೀಡುತ್ತಾ ಬಂದಿದೆ. ಈ ಬಾರಿ ಕೋಟ್ಯಧಿಪತಿ ಉದ್ಯಮಿಯೊಬ್ಬರ ಮಗನನ್ನು 30 ಲಕ್ಷ ರುಗಳಿಗೆ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ.

ಐಪಿಎಲ್ ಹರಾಜು: ಕೊನೆಗೂ ಸೇಲ್ ಆದ ಯೂನಿವರ್ಸಲ್ ಬಾಸ್

ದೇಶದ ಪ್ರಮುಖ ಉದ್ಯಮಿ 12.7ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ಕುಮಾರ್ ಮಂಗಲಂ ಬಿರ್ಲಾ ಅವರ ಮಗ ಆರ್ಯಮಾನ್ ಬಿರ್ಲಾ ಅವರನ್ನು 30 ಲಕ್ಷ ರುಗಳಿಗೆ ರಾಜಸ್ಥಾನ್ ತಂಡ ಖರೀದಿಸಿದೆ.

ಮುಂಬೈ ಮೂಲದ ಆರ್ಯಮಾನ್ ಅವರು ಅವಕಾಶ ಸಿಗದ ಕಾರಣ ಮುಂಬೈ ತೊರೆದು ಮಧ್ಯಪ್ರದೇಶಕ್ಕೆ ವಲಸೆ ಹೋಗಿದ್ದರು. ಇತ್ತೀಚಿನ ಸಿಕೆ ನಾಯ್ಡು ಟ್ರೋಫಿಯಲ್ಲಿ 6 ಪಂದ್ಯಗಳ 11 ಇನ್ನಿಂಗ್ಸ್ ನಲ್ಲಿ 79.50 ರನ್ ಸರಾಸರಿಯಂತೆ 795 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಇಲ್ಲಿ ತನಕ ಒಂದು ರಣಜಿ ಪಂದ್ಯವನ್ನು ಮಾತ್ರ ಆಡಿದ್ದಾರೆ.

ಐಪಿಎಲ್ ಗೆ ಮರಳಿದ ರಾಜಸ್ಥಾನ್ ತಂಡ ಹೇಗಿದೆ?

ಅವಕಾಶಗಳು ಸಿಗದ ಕಾರಣ ಮೂರು ವರ್ಷಗಳ ಹಿಂದೆ ಮಧ್ಯಪ್ರದೇಶ ಕ್ರಿಕೆಟ್ ತಂಡ ಸೇರಬೇಕಾಯಿತು. ಈಗ ಐಪಿಎಲ್ ನಲ್ಲಿ ಕ್ರಿಕೆಟ್ ದಿಗ್ಗಜರ ಜತೆ ಆಡಲು ಅವಕಾಶ ಸಿಗುತ್ತಿರುವುದು ಸಂತಸ ತಂದಿದೆ. ನನ್ನ ಅಪ್ಪ ಕುಮಾರ್ ಮಂಗಲಂ ಹಾಗೂ ಅಮ್ಮ ನೀರ್ಜಾ ಬಿರ್ಲಾ ಅವರಿಗೆ ಖುಷಿ ತಂದಿದೆ ಎಂದು ಆರ್ಯಮಾನ್ ಹೇಳಿದರು.

Story first published: Monday, January 29, 2018, 23:46 [IST]
Other articles published on Jan 29, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ