ಭಾರತದ ಹೊರಗೆ ನಡೆಯಲಿಲ್ಲ ಮಯಾಂಕ್ ಆಟ : 14 ಇನ್ನಿಂಗ್ಸ್‌ನಲ್ಲಿ ಗಳಿಸಿರುವುದು 1 ಅರ್ಧಶತಕ

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕಂದ್ರೆ ಹರಸಾಹಸ ಪಡಬೇಕು. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇತ್ತೀಚಿಗೆ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ರೂ, ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್‌ನಲ್ಲಿ ಬೆಂಚ್‌ ಕಾಯುತ್ತಿರುವ ಹನುಮ ವಿಹಾರಿಯೇ ಸಾಕ್ಷಿ.

ಅತ್ಯಂತ ಕಠಿಣ ಸ್ಪರ್ಧೆಯ ಜೊತೆಗೆ ಭಾರತದ ಬೆಂಚ್ ಸ್ಟ್ರೆಂಥ್ ತುಂಬಾನೆ ಬಲಿಷ್ಠವಾಗಿದೆ. ಹೀಗಿರುವಾಗ ಹಿರಿಯ ಆಟಗಾರರು ತಮ್ಮ ಮೇಲಿನ ಜವಾಬ್ದಾರಿ ಅರಿತು ಬ್ಯಾಟ್‌ ಬೀಸಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಕಿರಿಯ ಆಟಗಾರರು ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಬೇಕು. ಆದ್ರೆ ಕನ್ನಡಿಗ ಮಯಾಂಕ್ ಅಗರ್ವಾಲ್‌, ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬಂತೆ ಬ್ಯಾಟ್‌ ಬೀಸಿದ್ದಾರೆ.

ICC ಟೆಸ್ಟ್ ರ್ಯಾಂಕಿಂಗ್: ನ್ಯೂಜಿಲೆಂಡ್ ಪರ ಅಪ್ರತಿಮ ಸಾಧನೆ ಮಾಡಿದ ಕೈಲ್ ಜೇಮಿಸನ್ICC ಟೆಸ್ಟ್ ರ್ಯಾಂಕಿಂಗ್: ನ್ಯೂಜಿಲೆಂಡ್ ಪರ ಅಪ್ರತಿಮ ಸಾಧನೆ ಮಾಡಿದ ಕೈಲ್ ಜೇಮಿಸನ್

ಕಳೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದ್ದ ಓಪನರ್ ಮಯಾಂಕ್ ಅಗರ್ವಾಲ್, ವಿದೇಶಿ ನೆಲದಲ್ಲಿ ಠುಸ್ ಪಠಾಕಿಯಾಗಿದ್ದಾರೆ. ಕಿವೀಸ್ ವಿರುದ್ಧ ಶತಕ ಸಿಡಿಸಿದ್ದ ಮಯಾಂಕ್ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾದ್ರು. ರೋಹಿತ್ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಜೊತೆಗೂಡಿ ಹರಿಣಗಳ ನಾಡಲ್ಲಿ ಕಣಕ್ಕಿಳಿದ್ರು.

ಸೆಂಚುರಿಯನ್ ಮೈದಾನದಲ್ಲಿ ರಾಹುಲ್ ಜೊತೆಗೂಡಿ ಶತಕದ ಜೊತೆಯಾಟವಾಡಿದ ಮಯಾಂಕ್ ಭಾರೀ ಸಮಯದ ಬಳಿಕ ವಿದೇಶಿ ನೆಲದಲ್ಲಿ ಅರ್ಧಶತಕ ದಾಖಲಿಸಿದ್ರು. ಆದ್ರೆ ಅದಾದ ಬಳಿಕ ಮತ್ತೆ ಮಂಕಾಂದ ಮಯಾಂಕ ಕಳೆದ ಆರು ಇನ್ನಿಂಗ್ಸ್‌ಗಳಲ್ಲಿ 60, 4, 26, 23, 15 ಹಾಗೂ 7 ರನ್‌ಗೆ ವಿಕೆಟ್‌ ಒಪ್ಪಿಸುವ ಮೂಲಕ ಮತ್ತೊಮ್ಮೆ ವಿದೇಶಿ ನೆಲದಲ್ಲಿ ವಿಫಲರಾದರು.

ವಿದೇಶಿ ಅಂಗಳದಲ್ಲಿ ಮಯಾಂಕ್ ಆಟ ನಡೆಯದು ಎಂಬ ಟೀಕಾಕಾರರ ಪ್ರಶ್ನೆಗಳಿಗೆ ಕನ್ನಡಿಗ ಪ್ರೋಟಿಸ್ ನಾಡಲ್ಲಿ ಉತ್ತರ ನೀಡಬೇಕಿತ್ತು. ಆದ್ರೆ ಈತ ವಿದೇಶಿ ನೆಲದಲ್ಲಿ ಸತತ 14 ಇನಿಂಗ್ಸ್‌ಗಳಲ್ಲಿ ಮಯಾಂಕ್‌ ಅಗರ್ವಾಲ್‌ ಸತತ ವೈಫಲ್ಯ ಅನುಭವಿಸಿದಂತಾಗಿದೆ.

ಕಳೆದ 14 ಟೆಸ್ಟ್‌ ಇನಿಂಗ್ಸ್‌ಗಳಲ್ಲಿ ಮಯಾಂಕ್‌ ಅಗರ್ವಾಲ್‌ ಕ್ರಮವಾಗಿ 7, 15, 23, 26, 4, 60, 9,38, 5, 0, 9, 17, 3, 7 ರನ್‌ ಮಾತ್ರ ಗಳಿಸಿದ್ದಾರೆ. ಈ ಅಂಕಿಅಂಶಗಳು ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ವೈಫಲ್ಯತೆಗೆ ಹಿಡಿದ ಕನ್ನಡಿಯಾಗಿದೆ.

ಕೇಪ್ ಟೌನ್ ಟೆಸ್ಟ್ ನಲ್ಲಿ ವಿಶಿಷ್ಟ ಶತಕ ಸಿಡಿಸಿದ Virat Kohli | Oneindia Kannada

ಅಂತಿಮ ಟೆಸ್ಟ್‌ನಲ್ಲಿ 70 ರನ್‌ಗಳ ಮುನ್ನಡೆ ಸಾಧಿಸಿರುವ ಭಾರತ
ದಕ್ಷಿಣ ಆಫ್ರಿಕಾವನ್ನ 210 ರನ್‌ಗಳಿಗೆ ಆಲೌಟ್ ಮಾಡಿದ ಭಾರತ 13ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತು. ಆದ್ರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬಹುಬೇಗನೆ ಓಪನರ್‌ಗಳಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು. ದ್ವಿತೀಯ ದಿನದಾಟದಂತ್ಯಕ್ಕೆ ಭಾರತ 57ರನ್‌ಗಳಿಸಿ 2 ವಿಕೆಟ್ ಕಳೆದುಕೊಂಡಿದ್ದು 70 ರನ್‌ಗಳ ಲೀಡ್ ಪಡೆದಿದೆ. ನಾಯಕ ವಿರಾಟ್ ಕೊಹ್ಲಿ ಅಜೇಯ 14, ಚೇತೇಶ್ವರ ಪೂಜಾರ ಅಜೇಯ 9ರನ್‌ಗಳಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, January 13, 2022, 11:34 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X