ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ತಂಡವನ್ನ ಪ್ರಕಟಿಸಿದ ಪಾಕಿಸ್ತಾನ

Pakistan team

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಐವರು ಹೆಚ್ಚುವರಿ ಆಟಗಾರರ ಜೊತೆಗೆ ಒಟ್ಟು 21 ಜನರ ಸ್ಕ್ವಾಡ್ ಅನ್ನು ಪ್ರಕಟಿಸಿದೆ. ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಮೂರು ಟೆಸ್ಟ್ ಹಾಗೂ ಏಕದಿನ ಸರಣಿ ಜೊತೆಗೆ ಟಿ20 ಪಂದ್ಯಗಳನ್ನು ಸಹ ಆಡಲಿದೆ.

ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಗೆ ಪಾಕಿಸ್ತಾನದ ಟೆಸ್ಟ್ ತಂಡದಲ್ಲಿ ವೇಗದ ಬೌಲರ್ ಹ್ಯಾರಿಸ್ ರೌಫ್ ಮತ್ತು ಆರಂಭಿಕ ಶಾನ್ ಮಸೂದ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಮಾರ್ಚ್ 4 ರಂದು ಟೆಸ್ಟ್‌ ಸರಣಿ ಆರಂಭಗೊಳ್ಳಲಿದ್ದು ಪಾಕಿಸ್ತಾನವು ಸಕ್ಲೇನ್ ಮುಷ್ತಾಕ್ ಅವರನ್ನು ಇನ್ನೂ 12 ತಿಂಗಳುಗಳ ಕಾಲ ಮುಖ್ಯ ಕೋಚ್ ಆಗಿ ಮುಂದುವರಿಸಲಿದೆ.

ವಿರಾಟ್ ದಾಖಲೆ: ತವರಿನಲ್ಲಿ 100ನೇ ಏಕದಿನ ಪಂದ್ಯವನ್ನಾಡಿದ ಭಾರತದ 5ನೇ ಕ್ರಿಕೆಟಿಗ ಕೊಹ್ಲಿ ವಿರಾಟ್ ದಾಖಲೆ: ತವರಿನಲ್ಲಿ 100ನೇ ಏಕದಿನ ಪಂದ್ಯವನ್ನಾಡಿದ ಭಾರತದ 5ನೇ ಕ್ರಿಕೆಟಿಗ ಕೊಹ್ಲಿ

ಐದು ಬಾರಿ ವಿಶ್ವಕಪ್ ವಿಜೇತ ತಂಡ ಆಸ್ಟ್ರೇಲಿಯಾ ಕೊನೆಯ ಬಾರಿಗೆ 1998 ರಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು. ಅದಾದ ಬಳಿಕ ಆಸ್ಟ್ರೇಲಿಯನ್ ತಂಡವು ಪಾಕಿಸ್ತಾನದಲ್ಲಿ ಈ ಬಾರಿ ಆಡುವ ಮೂಲಕ 24 ವರ್ಷಗಳ ಅನುಪಸ್ಥಿತಿಯನ್ನು ಕೊನೆಗೊಳಿಸುತ್ತದೆ.

ಪಾಕಿಸ್ತಾನದ 16 ಆಟಗಾರರ ಟೆಸ್ಟ್ ಸ್ಕ್ವಾಡ್‌ ಈ ಕೆಳಗಿನಂತಿದೆ
ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಬ್ದುಲ್ಲಾ ಶಫೀಕ್, ಅಜರ್ ಅಲಿ, ಫಹೀಮ್ ಅಶ್ರಫ್, ಫವಾದ್ ಆಲಂ, ಹ್ಯಾರಿಸ್ ರೌಫ್, ಹಸನ್ ಅಲಿ, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಸಾಜಿದ್ ಖಾನ್, ಸೌದ್ ಶಕೀಲ್ , ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಜಾಹಿದ್ ಮಹಮೂದ್

ಇನ್ನು ಈಗಾಗಲೇ ಆಸ್ಟ್ರೇಲಿಯಾ ತಂಡವು 18 ಸದಸ್ಯರನ್ನೊಳಗೊಂಡ ಸ್ಕ್ವಾಡ್ ಅನ್ನು ಪ್ರಕಟಿಸಿದೆ. ಕೆಲವು ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆ ಪಾಕ್ ಪ್ರವಾಸ ಕೈಗೊಳ್ಳಲಿದೆ.

Rohit Sharma ಅವರ ಹೊಸ ಪ್ರಯೋಗ ವರ್ಕೌಟ್ ಆಗುತ್ತಾ? | Oneindia Kannada

ಆಸ್ಟ್ರೇಲಿಯಾ ಟೆಸ್ಟ್ ಸ್ಕ್ವಾಡ್
ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್ (ಉಪ ನಾಯಕ) ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಥಾನ್ ಲಿಯಾನ್, ಮಿಚೆಲ್ ಮಾರ್ಷ್, ಮೈಕೆಲ್ ನೆಸರ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್

Story first published: Wednesday, February 9, 2022, 16:25 [IST]
Other articles published on Feb 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X