ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದಲ್ಲಿ ಕೊರೊನಾ ತೀವ್ರ ಹೆಚ್ಚಳ: ಅಭ್ಯಾಸ ಶಿಬಿರ ರದ್ದುಗೊಳಿಸಿದ ಪಿಸಿಬಿ

Pakistan Cancel Training Camp Due To Rise In Coronavirus Cases

ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಾಕ್ ಕ್ರಿಕೆಟ್ ತಂಡದ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಮುಂದಿನ ತಿಂಗಳು ಕ್ರಿಕೆಟ್ ಸರಣಿಯನ್ನು ಆಡುವ ಸಲುವಾಗಿ ಇಂಗ್ಲೆಂಡ್‌ಗೆ ತೆರಳಲಿದೆ. ಅದಕ್ಕಾಗಿ ಅಭ್ಯಾಸವನ್ನು ಆರಂಭಿಸಲು ಉದ್ದೇಶಿಸಲಾಗಿತ್ತು.

ಪಾಕಿಸ್ತಾನದಲ್ಲ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡಿದೆ. ಹೀಗಾಗಿ ತೀವ್ರ ಮೇಲ್ವಿಚಾರಣೆಯಲ್ಲಿ ಪೂರ್ವ ಸಿದ್ಧತೆಗಳನ್ನು ನಡೆಸಲು ಉದ್ದೇಶಿಸಲಾಗಿದ್ದ ಶಿಬಿರ ರದ್ದಾಗಿದೆ. ವಾರದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಕೋವಿಡ್ 19 ಪ್ರಕರಣ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ.

ಸಾಮಿ ವರ್ಣಭೇದ ಆರೋಪದ ಬೆನ್ನಲ್ಲೇ ವೈರಲ್ ಆಗ್ತಿದೆ ಇಶಾಂತ್ ಶರ್ಮಾ ಪೋಸ್ಟ್ಸಾಮಿ ವರ್ಣಭೇದ ಆರೋಪದ ಬೆನ್ನಲ್ಲೇ ವೈರಲ್ ಆಗ್ತಿದೆ ಇಶಾಂತ್ ಶರ್ಮಾ ಪೋಸ್ಟ್

ಪಾಕಿಸ್ತಾನದಲ್ಲಿ ಸ್ಯದ್ಯ ಕೊರೊನಾ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿ ಮುನ್ನುಗ್ಗುತ್ತಿದೆ. 1000ಕ್ಕೂ ಅಧಿಕ ಮಂದಿ ಕೊರೊನಾ ವೈರಸ್‌ನಿಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಮಧ್ಯೆ ಅಲ್ಲಿನ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಿರುವುದಾಗಿ ಆಸ್ಪತ್ರೆಗಳು ಎಚ್ಚರಿಕೆಯನ್ನು ನೀಡುತ್ತಿವೆ.

ಪಾಕಿಸ್ತಾನದಲ್ಲಿ ಅಭ್ಯಾಸವನ್ನು ರದ್ದುಗೊಳಿಸಿದ ಕಾರಣದಿಂದಾಗಿ ಪಾಕಿಸ್ತಾ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ 40ದಿನ ಮೊದಲೇ ತೆರಳುವ ಸಾಧ್ಯತೆಯಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಈ ಬಗ್ಗೆ ಇಸಿಬಿ ಜೊತೆಗೆ ಚರ್ಚೆಯನ್ನು ನಡೆಸಿದ್ದು ಪಾಕಿಸ್ತಾನ ತಂಡದ ಆಗಮನಕ್ಕೆ ಸಿದ್ಧತೆಗಳನ್ನು ನಡೆಸುವಂತೆ ಕೇಳಿಕೊಂಡಿದೆ.

ಕೊಹ್ಲಿ, ವಿಲಿಯಮ್ಸನ್ ರೀತಿ ಬೆಳೆಯೋ ಗುರಿ ಬಾಬರ್‌ದ್ದು: ಶೋಯೆಬ್ ಅಖ್ತರ್ಕೊಹ್ಲಿ, ವಿಲಿಯಮ್ಸನ್ ರೀತಿ ಬೆಳೆಯೋ ಗುರಿ ಬಾಬರ್‌ದ್ದು: ಶೋಯೆಬ್ ಅಖ್ತರ್

ಪೂರ್ವನಿಗದಿಗಿಂತ ಮುನ್ನವೇ ಇಂಗ್ಲೆಂಡ್‌ಗೆ ತೆರಳಿ ಅಲ್ಲಿ ಅಭ್ಯಾಸವನ್ನು ನಡೆಸಲು ನಿರ್ಧಾರವನ್ನು ಕೈಗೊಂಡಿದೆ. ಜುಲೈ 6ರಂದು ಪಾಕಿಸ್ತಾನ ಇಂಗ್ಲೆಂಡ್‌ಗೆ ಪ್ರವಾಸಕ್ಕೆ ತೆರಳುವ ನಿರ್ಧಾರವನ್ನು ತೆಗೆದುಕಳ್ಳಲಾಗಿತ್ತು. ಆದರೆ ಈಗ ಜೂನ್‌ನಲ್ಲೇ ತೆರಳುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ.

Story first published: Wednesday, June 10, 2020, 16:23 [IST]
Other articles published on Jun 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X