ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ಹುಲಿಗಳನ್ನ ಅವರದ್ದೇ ನೆಲದಲ್ಲಿ ವೈಟ್‌ವಾಶ್ ಮಾಡಿದ ಪಾಕಿಸ್ತಾನ

Pakistan

ಎದುರಾಳಿಗಳನ್ನ ಅವರದ್ದೇ ನೆಲದಲ್ಲಿ ಬೇಟೆಯಾಡುವುದು ಅಷ್ಟು ಸುಲಭದ ಮಾತಲ್ಲ. ಬಾಂಗ್ಲಾದೇಶದ ಡಾಕಾದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಪಾಕಿಸ್ತಾನ ಆತಿಥೇಯರ ವಿರುದ್ಧ ರೋಚಕ ಗೆಲುವು ಕಂಡಿದೆ.

ಡಾಕಾದ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾ ವಿರುದ್ಧ ಇನ್ನಿಂಗ್ಸ್‌ ಸೇರಿದಂತೆ 8ರನ್‌ಗಳ ಜಯ ದಾಖಲಿಸಿದೆ. ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಕಾನ್ಪುರದ ಟೆಸ್ಟ್‌ನಲ್ಲಿ ಕೊನೆಯ ಸೆಷನ್‌ನಲ್ಲಿ ಕಂಡುಬಂದಂತಹ ಜಿದ್ದಾಜಿದ್ದಿನ ಪೈಪೋಟಿಯನ್ನ ಈ ಟೆಸ್ಟ್ ಪಂದ್ಯದಲ್ಲೂ ಕಾಣಬಹುದು.

ಅದಾಗಲೇ ಮೊದಲ ಇನ್ನಿಂಗ್ಸ್‌ ಲೀಡ್ ಪಡೆದು ಡಿಕ್ಲೇರ್ ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ, ಐದನೇ ದಿನದ ಕೊನೆಯ ಸೆಷನ್‌ನಲ್ಲಿ ನಾಲ್ಕು ವಿಕೆಟ್‌ಗಳಷ್ಟೇ ಬೇಕಿತ್ತು. ಗುರಿಯನ್ನ ಬೆನ್ನಟ್ಟುವಲ್ಲಿ ಸಫಲಗೊಂಡ ಪಾಕ್ ಪಡೆ ರೋಚಕ ಜಯ ಸಾಧಿಸಿದೆ.

ಈ ಗೆಲುವಿನ ಮೂಲಕ ಪಾಕಿಸ್ತಾನ ತಂಡವು ಟೆಸ್‌ ಸರಣಿಯನ್ನ 2-0 ಹಾಗೂ ಇದಕ್ಕೂ ಮೊದಲು ಟಿ20 ಸರಣಿಯನ್ನ 3-0ಯಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶವನ್ನ ಅವರದ್ದೇ ನೆಲದಲ್ಲಿ ವೈಟ್‌ವಾಟ್ ಮಾಡಿತು.

ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 300 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು. ಮೊದಲೆರಡು ದಿನಗಳು ಮಳೆಯಲ್ಲಿಯೇ ಪಂದ್ಯ ಕೊಚ್ಚಿ ಹೋಗಿದ್ದರಿಂದ ಪಾಕ್ ಡಿಕ್ಲೇರ್ ಮಾಡಿಕೊಂಡಿತು. ಪಾಕ್ ಪರ ಬಾಬರ್ ಅಜಮ್, ಅಜರ್ ಅಲಿ, ಅಲಮ್, ರಿಜ್ವಾನ್ ಅರ್ಧಶತಕ ಸಿಡಿಸುವ ಮೂಲಕ ಮಿಂಚಿದ್ರು.

ವಿರಾಟ್ ಕೊಹ್ಲಿ ODI ನಾಯಕತ್ವ ಕಳೆದುಕೊಳ್ಳಲು ಪ್ರಮುಖ ಕಾರಣಗಳೇನು?ವಿರಾಟ್ ಕೊಹ್ಲಿ ODI ನಾಯಕತ್ವ ಕಳೆದುಕೊಳ್ಳಲು ಪ್ರಮುಖ ಕಾರಣಗಳೇನು?

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಇಳಿದ ಬಾಂಗ್ಲಾಗೆ ಪಾಕ್‌ನ ಸ್ಪಿನ್ನರ್ ಸಜಿದ್ ಖಾನ್ ಭಾರೀ ತೊಂದರೆಕೊಟ್ರು. 8 ವಿಕೆಟ್ ಉರುಳಿಸಿದ ಸ್ಪಿನ್ನರ್ ಸಜಿದ್ ಖಾನ್ ಎದುರಾಳಿಯನ್ನ 87ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದ್ರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಪೆವಿಲಿಯನ್ ಪರೇಡ್ ನಡೆಸಿದ್ರು. ಮುಷ್ಫೀಕರ್ ರಹೀಮ್, ಶಕೀಬ್ ಅಲ್ ಹಸನ್, ಮೆಹದಿ ಹಸನ್, ಲಿಟ್ಟನ್ ದಾಸ್ ಅರ್ಧಶತಕ ಆಟವಾಡುವ ಮೂಲಕ ಆಧಾರವಾದ್ರೂ ತಂಡವನ್ನ ಸೋಲಿನಿಂದ ಪಾರು ಮಾಡಲು ಸಾಧ್ಯವಾಲಿಲ್ಲ.

ಪಾಕ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಪಡೆದ ಸಜಿದ್ ಖಾ್ನ ಎರಡನೇ ಇನ್ನಿಂಗ್ಸ್ 4 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಸಜಿದ್‌ಗೆ ಪಂದ್ಯ ಪುರುಷೋತ್ರಮ ಪ್ರಶಸ್ತಿಯು ಲಭಿಸಿತು.

ಟೆಸ್ಟ್ ಸರಣಿ ಗೆಲುವು
ಮೊದಲ ಟೆಸ್ಟ್‌: ಪಾಕಿಸ್ತಾನಕ್ಕೆ 8 ವಿಕೆಟ್ ಗೆಲುವು
ಎರಡನೇ ಟೆಸ್ಟ್‌: ಪಾಕಿಸ್ತಾನಕ್ಕೆ ಇನ್ನಿಂಗ್ಸ್ ಸೇರಿದಂತೆ 8 ರನ್ ಗೆಲುವು

David Warner, RCB ಸೆರೋ ಸುಳಿವು ಕೊಟ್ರಾ! | Oneindia Kannada

ಟಿ20 ಸರಣಿ ಫಲಿತಾಂಶ
ಮೊದಲ ಟಿ20: ಪಾಕಿಸ್ತಾನಕ್ಕೆ 4 ವಿಕೆಟ್ ಗೆಲುವು
ಎರಡನೇ ಟಿ20: ಪಾಕಿಸ್ತಾನಕ್ಕೆ 8 ವಿಕೆಟ್ ಗೆಲುವು
ಮೂರನೇ ಟಿ20: ಪಾಕಿಸ್ತಾನಕ್ಕೆ 5 ವಿಕೆಟ್ ಗೆಲುವು

Story first published: Thursday, December 9, 2021, 9:28 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X