ಪಾಕ್ ಬಹಿಷ್ಕಾರದ ಬೆದರಿಕೆ: ಡೋಂಟ್ ಕೇರ್ ಅಂದ ಬಲಾಢ್ಯ ಬಿಸಿಸಿಐ

ಭಯೋತ್ಪಾದನಾ ಕೇಂದ್ರವಾಗಿರುವ ಪಾಕಿಸ್ತಾನದಲ್ಲಿ ಯಾವ ದೇಶವೂ ಧೈರ್ಯದಿಂದ ಪಂದ್ಯವನ್ನಾಡಲು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ಕಾರಣ, ಪಾಕಿಸ್ತಾನವೇ ಹೊರತು, ಬೇರೆ ಯಾವ ದೇಶವನ್ನೂ ಪಾಕ್ ದೂಷಿಸಿದರೆ ಏನು ಪ್ರಯೋಜನ?

ಭಾರತದ ಸೈನಿಕರನ್ನು ಟಾರ್ಗೆಟ್ ಮಾಡಿ ಉಗ್ರ ಕೃತ್ಯ ನಡೆದ ನಂತರ, ಭಾರತ, ಪಾಕಿಸ್ತಾನದ ಜೊತೆಗೆ ಕ್ರೀಡಾ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದೆ. ಅದಕ್ಕೆ, ಕ್ರಿಕೆಟ್ ಕೂಡಾ ಹೊರತಾಗಿಲ್ಲ.

ನ್ಯೂಜಿಲೆಂಡ್ ಏಕದಿನ, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಕ್ಕೆ!ನ್ಯೂಜಿಲೆಂಡ್ ಏಕದಿನ, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಕ್ಕೆ!

ವರ್ಷದಿಂದ ವರ್ಷಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭರ್ಜರಿಯಾಗಿ ಮುನ್ನುಗ್ಗುತ್ತಾ ಸಾಗುತ್ತಿದೆ. ಪಾಕಿಸ್ತಾನದ ಯಾವುದೇ ಆಟಗಾರರಿಗೂ ಈ ಪ್ರತಿಷ್ಠಿತ ಟೂರ್ನಮೆಂಟ್ ನಲ್ಲಿ ಆಡಲು ಅವಕಾಶವಿಲ್ಲ. ಇದು ಪಾಕ್ ಆಟಗಾರರ ಸಂಪಾದನೆಗೂ ಹೊಡೆತಬೀಳುತ್ತಿದೆ.

ಕೆ.ಎಲ್.ರಾಹುಲ್ ಗೆ ನ್ಯೂಜಿಲ್ಯಾಂಡ್ ನಲ್ಲಿ ಹುಡುಕಿಕೊಂಡು ಬಂದ ಅದೃಷ್ಟದ ಬಾಗಿಲುಕೆ.ಎಲ್.ರಾಹುಲ್ ಗೆ ನ್ಯೂಜಿಲ್ಯಾಂಡ್ ನಲ್ಲಿ ಹುಡುಕಿಕೊಂಡು ಬಂದ ಅದೃಷ್ಟದ ಬಾಗಿಲು

ಈ ವರ್ಷ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಪಾಕಿಸ್ತಾನದಲ್ಲಿ ನಡೆಯಲಿದೆ. ಭಾರತ, ಪಾಕಿಸ್ತಾನಕ್ಕೆ ತನ್ನ ಆಟಗಾರರನ್ನು ಕಳುಹಿಸಲು ಸಿದ್ದವಿಲ್ಲ. ಇದಕ್ಕೆ, ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಬೋರ್ಡ್) ಭಾರತಕ್ಕೆ ಎಚ್ಚರಿಕೆಯನ್ನು ನೀಡಿದೆ.

ಟಿ20 ವಿಶ್ವಕಪ್ ಅನ್ನು ನಾವು ಬಹಿಷ್ಕರಿಸುತ್ತೇವೆ

ಟಿ20 ವಿಶ್ವಕಪ್ ಅನ್ನು ನಾವು ಬಹಿಷ್ಕರಿಸುತ್ತೇವೆ

ಭಾರತ, ಏಷ್ಯಾ ಕಪ್ ನಲ್ಲಿ ಭಾಗವಹಿಸದೇ ಇದ್ದರೆ, ನಾವೇನೂ ಪ್ರತಿರೋಧ ತೋರದೇ ಇರುವುದಿಲ್ಲ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಟೂರ್ನಮೆಂಟ್ ಅನ್ನು ನಾವು ಬಹಿಷ್ಕರಿಸುತ್ತೇವೆ" ಎಂದು ಪಿಸಿಬಿ ಸಿಇಒ ವಾಸೀಂ ಖಾನ್ ಎಚ್ಚರಿಕೆಯನ್ನು ನೀಡಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐ

ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐ

ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐ ಎಷ್ಟು ಪ್ರಭಾವಶಾಲಿಯಾದ ಸಂಸ್ಥೆ ಎನ್ನುವುದು ಗೊತ್ತಿರುವ ವಿಚಾರ. ಪಿಸಿಬಿ ಹಾಕಿದ ಬೆದರಿಕೆಯನ್ನು ಬಿಸಿಸಿಐ ಕ್ಯಾರ್ ಮಾಡುತ್ತಾ ಎನ್ನುವುದಿಲ್ಲಿ ಪ್ರಶ್ನೆ. ಮುಂದಿನ ವರ್ಷದ ಟೂರ್ನಮೆಂಟ್ ನಲ್ಲಿ ಭಾಗವಹಿಸದೇ ಇದ್ದರೆ ನಷ್ಟ ಯಾರಿಗೆ?

ನಮ್ಮ ತಂಡ ಪಾಕಿಸ್ತಾನದ ನೆಲದಲ್ಲಿ ಆಡುವುದಿಲ್ಲ

ನಮ್ಮ ತಂಡ ಪಾಕಿಸ್ತಾನದ ನೆಲದಲ್ಲಿ ಆಡುವುದಿಲ್ಲ

"ಪಾಕಿಸ್ತಾನ, ಏಷ್ಯಾ ಕಪ್ ಅನ್ನು ಆಯೋಜಿಸುವುದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ, ನಮ್ಮ ತಂಡ ಪಾಕಿಸ್ತಾನದ ನೆಲದಲ್ಲಿ ಆಡುವುದಿಲ್ಲ" ಎಂದು ಕಡ್ಡಿಮುರಿದಂತೆ ಹೇಳಿರುವ ಬಿಸಿಸಿಐ, "ತಟಸ್ಥ ಮೈದಾನದಲ್ಲಿ ಭಾರತ - ಪಾಕ್ ಪಂದ್ಯ ಆಡುವ ವಿಚಾರದಲ್ಲಿ ನಾವು ಮುಕ್ತರಾಗಿದ್ದೇವೆ" ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್

ಏಷ್ಯನ್ ಕ್ರಿಕೆಟ್ ಕೌನ್ಸಿಲ್

"ಭಾರತವಿಲ್ಲದೇ ಏಷ್ಯಾ ಕಪ್ ನಡೆಸಬಹುದು ಎನ್ನುವ ನಿರ್ಧಾರಕ್ಕೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಂದರೆ, ಆವಾಗ ಮುಂದಿನದ್ದನ್ನು ನೋಡಿಕೊಳ್ಳೋಣ. ನಾವಂತೂ ಅಲ್ಲಿ ಆಡುವುದಿಲ್ಲ" ಎಂದು ಬಿಸಿಸಿಐ ಖಡಕ್ ಆಗಿ ಹೇಳಿದೆ. ಕೆಲವು ಮೂಲಗಳ ಪ್ರಕಾರ, ಐಸಿಸಿ, ಏಷ್ಯಾ ಕಪ್ ಆಯೋಜಿಸಲು ಪಾಕಿಸ್ತಾನಕ್ಕೆ ನೀಡಿದ್ದ ಪ್ರಾಯೋಜತ್ವವನ್ನು ಹಿಂದಕ್ಕೆ ಪಡೆಯುವ ಸಾಧ್ಯತೆಯಿಲ್ಲದಿಲ್ಲ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, February 4, 2020, 8:23 [IST]
Other articles published on Feb 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X