IPL Auction 2023: ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿದರೆ ಈ ಐವರಿಗೆ ಐಪಿಎಲ್‌ನಲ್ಲಿ ಖುಲಾಯಿಸುತ್ತೆ ಅದೃಷ್ಟ

ಲಂಕಾ ಪ್ರೀಮಿಯರ್ ಲೀಗ್ 2022 ಮಂಗಳವಾರ ಆರಂಭವಾಗಿದೆ. ಹಾಲಿ ಚಾಂಪಿಯನ್ ಜಾಫ್ನಾ ಕಿಂಗ್ಸ್ ಮೊದಲ ಪಂದ್ಯದಲ್ಲಿ ಗಾಲೆ ಗ್ಲಾಡಿಯೇಟರ್ಸ್ ವಿರುದ್ಧ 24 ರನ್‌ಗಳ ಜಯದೊಂದಿಗೆ ಅಭಿಯಾನ ಆರಂಭಿಸಿತು. ನಂತರದ ದಿನದಾಟದಲ್ಲಿ ಕ್ಯಾಂಡಿ ಫಾಲ್ಕನ್ಸ್ ಕೊಲಂಬೊ ಸ್ಟಾರ್ಸ್ ತಂಡವನ್ನು 109 ರನ್‌ಗಳಿಂದ ಸೋಲಿಸಿತು. ದಂಬುಲ್ಲಾ ಔರಾ ಸೇರಿ ಒಟ್ಟು ಐದು ತಂಡಗಳು ಸೆಣೆಸಲಿವೆ.

ಐದು ತಂಡಗಳು ಮುಂದಿನ ಎರಡು ವಾರಗಳು ಕಾದಾಡಲಿವೆ. ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸಲಿದ್ದು, ಲಂಕಾ ಪ್ರೀಮಿಯರ್ ಲೀಗ್ 2022 ಫೈನಲ್ ಡಿಸೆಂಬರ್ 23 ರಂದು ನಡೆಯಲಿದೆ. 2023ರ ಐಪಿಎಲ್ ಮಿನಿ ಹರಾಜು ಕೂಡ ಅಂದೇ ನಡೆಯಲಿದೆ.

ಮೂರನೇ ಏಕದಿನ ಪಂದ್ಯಕ್ಕೆ ರೋಹಿತ್ ಅಲಭ್ಯ ಸಾಧ್ಯತೆ: ಟೆಸ್ಟ್ ಸರಣಿಗೂ ಅನುಮಾನ!ಮೂರನೇ ಏಕದಿನ ಪಂದ್ಯಕ್ಕೆ ರೋಹಿತ್ ಅಲಭ್ಯ ಸಾಧ್ಯತೆ: ಟೆಸ್ಟ್ ಸರಣಿಗೂ ಅನುಮಾನ!

ಶ್ರೀಲಂಕಾ ಸೇರಿದಂತೆ ಹಲವು ದೇಶಗಳ ವಿವಿಧ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ಐಪಿಎಲ್‌ಗೆ ಪ್ರವೇಶ ಪಡೆಯಲು ಇದು ಸುವರ್ಣಾವಕಾಶವಾಗಿದೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಈ ಐವರು ಕ್ರಿಕೆಟಿಗರಿಗೆ ಐಪಿಎಲ್‌ ಹರಾಜು 2023ರಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗುವ ಅವಕಾಶ ಸಿಗಲಿದೆ.

ಶ್ರೀಲಂಕಾ ಕ್ರಿಕೆಟ್‌ನ ಅಗ್ರ ಬ್ಯಾಟರ್ ಕುಸಾಲ್ ಮೆಂಡಿಸ್

ಶ್ರೀಲಂಕಾ ಕ್ರಿಕೆಟ್‌ನ ಅಗ್ರ ಬ್ಯಾಟರ್ ಕುಸಾಲ್ ಮೆಂಡಿಸ್

ಕುಸಾಲ್ ಮೆಂಡಿಸ್ ಇದೀಗ ಶ್ರೀಲಂಕಾ ಕ್ರಿಕೆಟ್‌ನ ಅಗ್ರ ಬ್ಯಾಟಿಂಗ್‌ ಆಟಗಾರರಲ್ಲಿ ಒಬ್ಬರು. 49 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅವರು 1059 ರನ್‌ಗಳನ್ನು ಗಳಿಸಿದ್ದಾರೆ. ಕುಸಾಲ್ ಮೆಂಡಿಸ್ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಗಾಲೆ ಗ್ಲಾಡಿಯೇಟರ್ಸ್ ತಂಡದ ನಾಯಕರಾಗಿದ್ದಾರೆ.

ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಕುಸಾಲ್ ಮೆಂಡಿಸ್ ಆರಂಭಿಕ ಆಟಗಾರನ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮವಾಗಿ ರನ್ ಗಳಿಸಿದರೆ, ಐಪಿಎಲ್ ಫ್ರಾಂಚೈಸಿಗಳು ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಲಿವೆ.

Google Search 2022: ಅತಿ ಹೆಚ್ಚು ಹುಡುಕಿದ ಕ್ರೀಡಾಕೂಟಗಳಲ್ಲಿ IPLಗೆ ಮೊದಲ ಸ್ಥಾನ; ಇತರೆ ಕ್ರೀಡೆಗಳ ಪಟ್ಟಿ

ರೊಮಾರಿಯೋ ಶೆಫರ್ಡ್‌ಗೆ ಸುವರ್ಣಾವಕಾಶ

ರೊಮಾರಿಯೋ ಶೆಫರ್ಡ್‌ಗೆ ಸುವರ್ಣಾವಕಾಶ

ವೆಸ್ಟ್ ಇಂಡೀಸ್‌ನ ಕ್ರಿಕೆಟರ್ ರೊಮಾರಿಯೋ ಶೆಫರ್ಡ್‌ ವಿಕೆಟ್ ಟೇಕಿಂಗ್ ಬೌಲರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ ಅವರನ್ನು 7.75 ಕೋಟಿ ರುಪಾಯಿಗೆ ಖರೀದಿ ಮಾಡಿತ್ತು. ಆದರೂ, ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಕಾರಣ 2023ರ ಐಪಿಎಲ್‌ಗೆ ಮುನ್ನ ಬಿಡುಗಡೆ ಮಾಡಿದೆ.

ಲಂಕಾ ಪ್ರೀಮಿಯರ್ ಲೀಗ್ 2022 ರಲ್ಲಿ ಕೊಲಂಬೊ ಸ್ಟಾರ್ಸ್‌ ತಂಡದಲ್ಲಿ ಆಡುವ ಅವರು, ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಈ ವರ್ಷ ಕೂಡ ಅವರು ಉತ್ತಮ ಮೊತ್ತಕ್ಕೆ ಹರಾಜಾಗುವ ಅವಕಾಶ ಇದೆ.

ಸಿಕಂದರ್ ರಜಾಗೆ ಅವಕಾಶ?

ಸಿಕಂದರ್ ರಜಾಗೆ ಅವಕಾಶ?

ಸಿಕಂದರ್ ರಜಾ ಪ್ರಸ್ತುತ ವಿಶ್ವ ಕ್ರಿಕೆಟ್‌ನ ಅಗ್ರ ಟಿ20 ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ನಾಲ್ಕು ಓವರ್ ಸ್ಪಿನ್ ಬೌಲ್ ಮಾಡಬಹುದು. ಅವರು ವಿಕೆಟ್ ಪಡೆಯುವ ಬೌಲರ್ ಕೂಡ ಆಗಿದ್ದಾರೆ. ಅವರು ಈ ಬಾರಿಯಾದರೂ ಐಪಿಎಲ್‌ನಲ್ಲಿ ಆಡಲಿ ಎಂದು ಹಲವು ಅಭಿಮಾನಿಗಳು ಆಶಿಸಿದ್ದಾರೆ.

2023ರ ಮಿನಿ ಹರಾಜಿನಲ್ಲಿ ರಜಾ ತನ್ನ ಮೊದಲ ಬಾರಿಗೆ ಹರಾಜಾಗುವ ಸಾಧ್ಯತೆ ಇದೆ. ಆದರೂ, ಅವರು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ದಂಬುಲ್ಲಾ ಜೈಂಟ್ಸ್‌ ಪರವಾಗಿ ಆಡುತ್ತಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದರೆ, ಬೇಡಿಕೆಯನ್ನು ಹೆಚ್ಚಿಸಿಕೊಳ್ಳಲಿದ್ದಾರೆ.

ಸ್ಫೋಟಕ ಬ್ಯಾಟರ್ ದಸುನ್ ಶನಕ

ಸ್ಫೋಟಕ ಬ್ಯಾಟರ್ ದಸುನ್ ಶನಕ

ಶ್ರೀಲಂಕಾ ಟಿ20 ತಂಡದ ನಾಯಕನಾಗಿರುವ ದಸುನ್ ಶನಕ ಈ ಬಾರಿ ಐಪಿಎಲ್‌ ಹರಾಜಿನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಉತ್ತಮ ಆಟವನ್ನು ಪ್ರದರ್ಶಿಸಿದರೆ ಅವರು ಕೂಡ ಐಪಿಎಲ್ ಮಿನಿ ಹರಾಜಿನಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಳ್ಳಬಹುದು.

ಸಿಕಂದರ್ ರಜಾ ಮತ್ತು ದಸುನ್ ಶನಕ ಇಬ್ಬರೂ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ದಂಬುಲ್ಲಾ ಜೈಂಟ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.

ವೇಗದ ಬೌಲರ್ ದಿಲ್ಶನ್ ಮಧುಶಂಕ

ವೇಗದ ಬೌಲರ್ ದಿಲ್ಶನ್ ಮಧುಶಂಕ

ದಿಲ್ಶನ್ ಮಧುಶಂಕ ಶ್ರೀಲಂಕಾದ ಯುವ ಎಡಗೈ ವೇಗದ ಬೌಲರ್ ಆಗಿದ್ದು, ಅವರು ಏಷ್ಯಾ ಕಪ್ 2022 ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇದುವರೆಗೆ 6 ಟಿ20 ಪಂದ್ಯಗಳನ್ನಾಡಿರುವ ಅವರು 6 ವಿಕೆಟ್ ಗಳಿಸಿದ್ದಾರೆ.

ಏಷ್ಯಾ ಕಪ್ 2022 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಧುಶಂಕ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಜಾಫ್ನಾ ಕಿಂಗ್ಸ್‌ ಪರವಾಗಿ ಆಡುತ್ತಿದ್ದು ಉತ್ತಮ ಪ್ರದರ್ಶನ ನೀಡಿದರೆ, ಮುಂಬೈ ಇಂಡಿಯನ್ಸ್ ತಂಡ ಅವರನ್ನು ಖರೀದಿಸುವ ಸಾಧ್ಯತೆ ಇದೆ.

For Quick Alerts
ALLOW NOTIFICATIONS
For Daily Alerts
Story first published: Thursday, December 8, 2022, 8:33 [IST]
Other articles published on Dec 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X