ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಮೇಶ್ ಪೊವಾರ್ ಎನ್‌ಸಿಎಗೆ ವರ್ಗಾವಣೆ; ಮಹಿಳಾ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ನೇಮಕ

Ramesh Powar Transferred To NCA; Hrishikesh Kanitkar Named New Coach To Womens Cricket Team

ಮಹಿಳಾ ಟಿ20 ವಿಶ್ವಕಪ್‌ಗೆ ಕೇವಲ ಎರಡು ತಿಂಗಳುಗಳು ಬಾಕಿ ಉಳಿದಿರುವ ಈ ಸಮಯದಲ್ಲಿ, ಬಿಸಿಸಿಐ ಮಂಗಳವಾರ ತನ್ನ ಪುನರ್‌ರಚನೆ ಭಾಗವಾಗಿ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಮೇಶ್ ಪೊವಾರ್ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ವರ್ಗಾವಣೆ ಮಾಡಿದೆ.

ಮಹಿಳಾ ಕ್ರಿಕೆಟ್ ತಂಡಕ್ಕೆ ಯಾವುದೇ ಮುಖ್ಯ ಕೋಚ್ ಅನ್ನು ಹೆಸರಿಸದಿದ್ದರೂ, ಭಾರತ ಪುರುಷರ A ಮತ್ತು U-19 ತಂಡಗಳ ಭಾಗವಾಗಿರುವ ಭಾರತದ ಮಾಜಿ ಬ್ಯಾಟ್ಸ್‌ಮನ್ ಹೃಷಿಕೇಶ್ ಕಾನಿಟ್ಕರ್, ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯ ಮೊದಲು ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಭಾರತದಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ಆಡುವುದನ್ನು ಭಾರತೀಯರೇ ಬಯಸುತ್ತಿದ್ದಾರೆ; ಶಾಹಿದ್ ಅಫ್ರಿದಿಭಾರತದಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ಆಡುವುದನ್ನು ಭಾರತೀಯರೇ ಬಯಸುತ್ತಿದ್ದಾರೆ; ಶಾಹಿದ್ ಅಫ್ರಿದಿ

ಮಹಿಳಾ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರಮೇಶ್ ಪೊವಾರ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ತಂಡವನ್ನು ಸೇರಲಿದ್ದಾರೆ. ಬಿಸಿಸಿಐನ ಪುನರ್‌ರಚನೆ ಮಾಡ್ಯೂಲ್‌ನ ಭಾಗವಾಗಿ ಪುರುಷರ ಕ್ರಿಕೆಟ್‌ಗೆ ಬದಲಾಗಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಟಿಂಗ್ ಕೋಚ್ ಆಗಿ ಹೃಷಿಕೇಶ್ ಕಾನಿಟ್ಕರ್ ನೇಮಕ

ಬ್ಯಾಟಿಂಗ್ ಕೋಚ್ ಆಗಿ ಹೃಷಿಕೇಶ್ ಕಾನಿಟ್ಕರ್ ನೇಮಕ

"ಹಿರಿಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಹೃಷಿಕೇಶ್ ಕಾನಿಟ್ಕರ್ ನೇಮಕವಾಗಿರುವುದನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ. ಹೃಷಿಕೇಶ್ ಕಾನಿಟ್ಕರ್ ಅವರು ಮುಂಬೈನಲ್ಲಿ ಡಿಸೆಂಬರ್ 9ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗಾಗಿ ಮಹಿಳಾ ತಂಡವನ್ನು ಸೇರಿಕೊಳ್ಳಲಿದ್ದಾರೆ," ಎಂದು ತಿಳಿಸಿದೆ.

ಮೇ 2021ರಲ್ಲಿ ರಮೇಶ್ ಪೊವಾರ್ ಅವರನ್ನು ಎರಡನೇ ಬಾರಿಗೆ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲಲು ಮಾರ್ಗದರ್ಶನ ಮಾಡಿದರು. ಆದರೆ ಭಾರತ ತಂಡವು ಐಸಿಸಿ ಟೂರ್ನಿಗಳಲ್ಲಿ ಹೆಚ್ಚು ಗಮನಾರ್ಹ ಪ್ರದರ್ಶನಗಳನ್ನು ನೀಡಿಲ್ಲ ಬೇಸರದ ಸಂಗತಿ.

ಮುಂಬರುವ ಸವಾಲಿಗೆ ಭಾರತ ತಂಡ ಸಿದ್ಧವಾಗಿದೆ

ಮುಂಬರುವ ಸವಾಲಿಗೆ ಭಾರತ ತಂಡ ಸಿದ್ಧವಾಗಿದೆ

ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ.

ತಮ್ಮ ನೇಮಕಾತಿಯ ಕುರಿತು ಪ್ರತಿಕ್ರಿಯಿಸಿದ ಹೃಷಿಕೇಶ್ ಕಾನಿಟ್ಕರ್, "ನಾನು ಈ ತಂಡದಿಂದ ಅದ್ಭುತವಾದ ಪ್ರದರ್ಶನಗಳನ್ನು ನಿರೀಕ್ಷಿಸುತ್ತೇನೆ. ನಾವು ಯುವ ಮತ್ತು ಅನುಭವದ ಉತ್ತಮ ಮಿಶ್ರಣ ತಂಡವನ್ನು ಹೊಂದಿದ್ದೇವೆ. ಈ ತಂಡವು ಮುಂಬರುವ ಸವಾಲಿಗೆ ಸಿದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ಕೆಲವು ಪ್ರಮುಖ ಟೂರ್ನಿಗಳಲ್ಲಿ ಅಡಬೇಕಿದೆ. ಬ್ಯಾಟಿಂಗ್ ತರಬೇತುದಾರನಾಗಿ ತಂಡಕ್ಕೆ ಮತ್ತು ನನಗೆ ಉತ್ತೇಜನಕಾರಿಯಾಗಿದೆ," ಎಂದು ತಿಳಿಸಿದರು.

ರಮೇಶ್ ಪೊವಾರ್ ಜೊತೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ

ರಮೇಶ್ ಪೊವಾರ್ ಜೊತೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ

ರಮೇಶ್ ಪೊವಾರ್ ಎನ್‌ಸಿಎಯಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದು, "ರಮೇಶ್ ಪೊವಾರ್ ಸ್ಪಿನ್ ಬೌಲಿಂಗ್ ಕೋಚ್ ಆಗಿ ಬರುವುದರಿಂದ ತಮ್ಮ ಪರಿಣತಿ ಮತ್ತು ಅನುಭವವನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತರುತ್ತಾರೆ ಎಂದು ನಮಗೆ ಖಾತ್ರಿಯಿದೆ. ದೇಶೀಯ, ದೇಶೀಯ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವದಿಂದ ಅವರು ಖಂಡಿತವಾಗಿಯೂ ಆಟದಲ್ಲಿ ಸುಧಾರಣೆ ತರುತ್ತಾರೆ. ಎನ್‌ಸಿಎನಲ್ಲಿ ಅವರ ಹೊಸ ಪಾತ್ರದೊಂದಿಗೆ ಅವರ ಜೊತೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ," ಎಂದು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

"ಕೆಲವು ವರ್ಷಗಳ ಕಾಲ ವಿವಿಎಸ್ ಲಕ್ಷ್ಮಣ್ ಅವರಂತಹ ದಿಗ್ಗಜರು ಮತ್ತು ದೇಶದ ಮುಂಬರುವ ಪ್ರತಿಭೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ. ಎನ್‌ಸಿಎಯಲ್ಲಿ ನನ್ನ ಹೊಸ ಪಾತ್ರದೊಂದಿಗೆ, ಭವಿಷ್ಯಕ್ಕಾಗಿ ಪ್ರತಿಭೆಗಳನ್ನು ನಿರ್ಮಿಸಲು ಸಹಾಯ ಮಾಡಲು ನನ್ನ ಅನುಭವವನ್ನು ಬಳಸುತ್ತೇನೆ," ಎಂದು ರಮೇಶ್ ಪೊವಾರ್ ತಿಳಿಸಿದರು.

Story first published: Tuesday, December 6, 2022, 20:23 [IST]
Other articles published on Dec 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X