ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಷ್ಟೊಂದು ಬ್ರೇಕ್‌ನ ಅಗತ್ಯವೇನಿದೆ?: ಕೋಚ್ ರಾಹುಲ್ ದ್ರಾವಿಡ್ ನಿಲುವಿಗೆ ರವಿ ಶಾಸ್ತ್ರಿ ಕಿಡಿ

Ravi Shastri criticizes Rahul Dravid said I do not believe in breaks

ಅತಿಯಾದ ಕ್ರಿಕೆಟ್‌ನ ಕಾರಣದಿಂದಾಗಿ ಆಟಗಾರರು ಒತ್ತಡವನ್ನು ನಿಭಾಯಿಸುವ ಸಲುವಾಗಿ ವಿಶ್ರಾಂತಿ ಪಡೆಯುವುದು ಸಾಮಾನ್ಯ. ಅದರಲ್ಲೂ ಮೂರು ಮಾದರಿಯಲ್ಲಿ ಆಡುವ ಆಟಗಾರರಿಗೆ ವಿಶ್ರಾಂತಿಗಳು ಅನಿವಾರ್ಯವೂ ಆಗಿರುತ್ತದೆ. ಆದರೆ ಕೋಚ್‌ಗಳು ಕೂಡ ಆಗಾಗ ವಿಶ್ರಾಂತಿ ಪಡೆಯುವುದು ಇತ್ತೀಚೆಗೆ ಭಾರತೀಯ ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ವಿಚಾರವಾಗಿ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರಶ್ನಿಸಿದ್ದಾರೆ.

ನವೆಂಬರ್ 18ರಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಗೆ ಕೆಲ ಅನುಭವಿ ಆಟಗಾರರ ಜೊತೆಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ವಿಶ್ರಾಂತಿ ಪಡೆದುಕೊಂಡಿದ್ದು ಈ ಸರಣಿಯಿಂದ ಹೊರಗುಳಿದಿದ್ದಾರೆ. ಈ ಹಿಂದೆಯೂ ದ್ರಾವಿಡ್ ಕೆಲ ಸಂದರ್ಭಗಳಲ್ಲಿ ಸರಣಿಯಿಂದ ಹೊರಗುಳಿದಿದ್ದರು.

IPL 2023: ನಿವೃತ್ತಿ ಘೋಷಿಸಿದ ಪೊಲಾರ್ಡ್‌ಗೆ ಸಚಿನ್, ರೋಹಿತ್ ಹೇಳಿದ್ದೇನು?IPL 2023: ನಿವೃತ್ತಿ ಘೋಷಿಸಿದ ಪೊಲಾರ್ಡ್‌ಗೆ ಸಚಿನ್, ರೋಹಿತ್ ಹೇಳಿದ್ದೇನು?

ಕೋಚ್ ಯಾವಾಗಲೂ ತಂಡದ ಜೊತೆಗಿರಬೇಕು ಎಂದ ರವಿ ಶಾಸ್ತ್ರಿ

ಕೋಚ್ ಯಾವಾಗಲೂ ತಂಡದ ಜೊತೆಗಿರಬೇಕು ಎಂದ ರವಿ ಶಾಸ್ತ್ರಿ

ರವಿ ಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಆಗಿ ಸುಮಾರು ಆರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೋಚ್ ಆಗಿ ನೇಮಕವಾದ ಬಳಿಕ ತಂಡವನ್ನು ಹೊರತುಪಡಿಸಿ ಹೆಚ್ಚು ಕಾಲ ಕಳೆಯಬಾರದು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ ರವಿ ಶಾಸ್ತ್ರಿ. ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮಾತನಾಡಿದ ರವಿ ಶಾಸ್ತ್ರಿ ತಾನು ವಿರಾಮದ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿಲ್ಲ, ಕೋಚ್ ಯಾವಾಗಲೂ ತಂಡದ ಜೊತೆಗೇ ಇರಬೇಕು ಎಂದಿದ್ದಾರೆ.

ಕೋಚ್‌ಗೆ ಇಷ್ಟು ವಿಶ್ರಾಂತಿ ಯಾಕೆ ಬೇಕು?

ಕೋಚ್‌ಗೆ ಇಷ್ಟು ವಿಶ್ರಾಂತಿ ಯಾಕೆ ಬೇಕು?

"ನನಗೆ ವಿಶ್ರಾಂತಿಯಲ್ಲಿ ನಂಬಿಕೆಯಿಲ್ಲ. ಯಾಕೆಂದರೆ ನಾನು ನನ್ನ ತಂಡವನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತೇನೆ, ನಾನು ನನ್ನ ತಂಡದ ಆಟಗಾರರನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತೇನೆ. ಬಳಿಕ ತಂಡವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಪ್ರಾಮಾಣಿಕವಾಗಿ ಇಷ್ಟು ವಿರಾಮಗಳ ಅಗತ್ಯವೇನಿದೆ? ಐಪಿಎಲ್‌ನಲ್ಲಿ ನಿಮಗೆ 2-3 ತಿಂಗಳ ವಿರಾಮ ದೊರೆಯುತ್ತದೆ. ಕೋಚ್ ಆಗಿ ವಿಶ್ರಾಂತಿ ಪಡೆಯಲು ನಿಮಗೆ ಅಷ್ಟು ಅವಧಿ ಸಾಕಾಗುತ್ತದೆ. ನನ್ನ ಪ್ರಕಾರ ಉಳಿದ ಅವಧಿಯಲ್ಲಿ ಕೋಚ್ ತಂಡದ ಜೊತೆಗೆ ಇರಬೇಕಾಗುತ್ತದೆ. ಅದು ಯಾರಾದರೂ ಆಗಿರಲಿ" ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ನ್ಯೂಜಿಲೆಂಡ್ ಸರಣಿಗೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್

ನ್ಯೂಜಿಲೆಂಡ್ ಸರಣಿಗೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್

ಇನ್ನು ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗಿದೆ. ಈ ಸರಣಿಗೆ ಟೀಮ್ ಇಂಡಿಯಾ ಕೋಚ್ ಆಗಿ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಕೂಡ ಲಕ್ಷ್ಮಣ್ ಟೀಮ್ ಇಂಡಿಯಾದ ಹಂಗಾಮಿ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇನ್ನು ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾವನ್ನು ಮುನ್ನಡೆಸಿದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶಿಖರ್ ಧವನ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಭಾರತದ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ರಿಷಭ್ ಪಂತ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್‌ನ ಟಿ20 ತಂಡ: ಕೇನ್ ವಿಲಿಯಮ್ಸನ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಫಿನ್ ಅಲೆನ್, ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಲಾಕಿ ಫರ್ಗುಸನ್, ಆಡಮ್ ಮಿಲ್ನೆ, ಇಶ್ ಸೋಧಿ, ಟಿಮ್ ಸೌಥಿ, ಬ್ಲೇರ್ ಟಿಕ್ನರ್

Story first published: Thursday, November 17, 2022, 18:30 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X