ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?

ಕಳೆದ ಎರಡು ತಿಂಗಳ ಹಿಂದೆ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಭಾರತದ ನಾಯಕತ್ವದಿಂದ ದಿಢೀರ್‌ನೆ ತೆಗೆದುಹಾಕಿದ ಪ್ರಸಂಗಕ್ಕೆ ಭಾರತದ ಹಂಗಾಮಿ ನಾಯಕ ಶಿಖರ್ ಧವನ್ ಪ್ರತಿಕ್ರಿಯಿಸಿದ್ದಾರೆ.

ಹರಾರೆಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭದಲ್ಲಿ ಶಿಖರ್ ಧವನ್ ಅವರನ್ನು ನಾಯಕನಾಗಿ ನೇಮಿಸಲಾಗಿತ್ತು. ಆದರೆ ಗಾಯದಿಂದ ತಂಡಕ್ಕೆ ಮರಳಿದ ನಂತರ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಹೆಸರಿಸಲಾಯಿತು.

IND vs NZ 1st ODI: ಏಕದಿನ ಕ್ರಿಕೆಟ್‌ಗೆ ಅರ್ಶದೀಪ್ ಪದಾರ್ಪಣೆ?; ಸಂಭಾವ್ಯ ಆಡುವ ಬಳಗIND vs NZ 1st ODI: ಏಕದಿನ ಕ್ರಿಕೆಟ್‌ಗೆ ಅರ್ಶದೀಪ್ ಪದಾರ್ಪಣೆ?; ಸಂಭಾವ್ಯ ಆಡುವ ಬಳಗ

ಈ ಬಗ್ಗೆ ಮಾತನಾಡಿದ ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್ 'ಆ ಬದಲಾವಣೆ ತಮ್ಮನ್ನು ನೋಯಿಸಲಿಲ್ಲ' ಎಂದು ಹೇಳಿದ್ದಾರೆ.

 ರಾಹುಲ್ ಅವರನ್ನು ನಾಯಕನನ್ನಾಗಿ ಮಾಡುವುದು ಸರಿಯಾದ ಕೆಲಸ

ರಾಹುಲ್ ಅವರನ್ನು ನಾಯಕನನ್ನಾಗಿ ಮಾಡುವುದು ಸರಿಯಾದ ಕೆಲಸ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆದ ಏಷ್ಯಾ ಕಪ್ 2022ರಲ್ಲಿ ಭಾರತ ತಂಡವನ್ನು ಮುನ್ನಡೆಸಲು ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಮಾಡುವುದು ಸರಿಯಾದ ಕೆಲಸ ಎಂದು ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲು ಭಾರತದ ತಂಡದ ಹಂಗಾಮಿ ನಾಯಕ ಶಿಖರ್ ಧವನ್ ಸುದ್ದಿಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಭಾರತ ತಂಡದ ನಾಯಕತ್ವ ವಹಿಸಲು ನಾನು ಅದೃಷ್ಟಶಾಲಿ

ಭಾರತ ತಂಡದ ನಾಯಕತ್ವ ವಹಿಸಲು ನಾನು ಅದೃಷ್ಟಶಾಲಿ

"ಮೊದಲನೆಯದಾಗಿ, ನನ್ನ ವೃತ್ತಿಜೀವನದ ಈ ಹಂತದಲ್ಲಿ ಭಾರತ ತಂಡದ ನಾಯಕತ್ವ ವಹಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಸವಾಲುಗಳು ಮತ್ತು ಅವಕಾಶಗಳನ್ನು ಪಡೆದುಕೊಳ್ಳುವುದು ಒಳ್ಳೆಯ ಬೆಳವಣಿಗೆ. ನಾವು ಯುವ ಆಟಗಾರರು ಕೂಡಿದ ತಂಡದೊಂದಿಗೆ ಹಲವಾರು ಸರಣಿಗಳನ್ನು ಗೆದ್ದಿದ್ದೇವೆ," ಎಂದು ಶಿಖರ್ ಧವನ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಹುಲ್‌ಗೆ ನಾಯಕತ್ವ ವಹಿಸಿದಾಗ ನನಗೆ ನೋವಾಗಲಿಲ್ಲ

ರಾಹುಲ್‌ಗೆ ನಾಯಕತ್ವ ವಹಿಸಿದಾಗ ನನಗೆ ನೋವಾಗಲಿಲ್ಲ

"ಕೆಎಲ್ ರಾಹುಲ್ ಮುಖ್ಯ ತಂಡಕ್ಕೆ ಉಪನಾಯಕರಾಗಿದ್ದಾರೆ ಮತ್ತು ಅವರು ಗಾಯದಿಂದ ಹಿಂದಿರುಗಿದಾಗ, ಅವರು ನಾಯಕತ್ವವನ್ನು ಪಡೆಯಲು ಅರ್ಹರಾಗಿದ್ದಾರೆ. ಏಷ್ಯಾಕಪ್ ವೇಳೆ ರೋಹಿತ್ ಶರ್ಮಾ ಗಾಯಗೊಂಡರೆ ಕೆಎಲ್ ರಾಹುಲ್ ನಾಯಕತ್ವ ವಹಿಸಬೇಕಾಗಬಹುದು ಎಂದು ನನಗೆ ಅನಿಸಿತ್ತು. ಆದ್ದರಿಂದ, ಅದು ಸರಿಯಾದ ನಿರ್ಧಾರವಾಗಿತ್ತು," ಎಂದು ಶಿಖರ್ ಧವನ್ ಹೇಳಿದರು.

"ಜಿಂಬಾಬ್ವೆ ವಿರುದ್ಧ ಕೆಎಲ್ ರಾಹುಲ್‌ಗೆ ನಾಯಕತ್ವ ವಹಿಸಿದಾಗ ನನಗೆ ನೋವಾಗಲಿಲ್ಲ. ಇದು ದೇವರ ಯೋಜನೆ ಮತ್ತು ಎಲ್ಲರಿಗೂ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ನಾನು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಾಯಕನಾಗಿದ್ದೆ ಅದಕ್ಕೆ ಆಯ್ಕೆದಾರರು ಕಾರಣ. ಹಾಗಾಗಿ ನನಗೆ ಬೇಸರವಾಗಲಿಲ್ಲ," ಎಂದು ಶಿಖರ್ ಧವನ್ ತಿಳಿಸಿದರು.

ಮೂರು ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ

ಮೂರು ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ

ಶಿಖರ್ ಧವನ್ ಒಂಬತ್ತು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಇದರಲ್ಲಿ ಅವರು ಎಂಟು ಪಂದ್ಯಗಳಲ್ಲಿ ಗೆಲುವನ್ನು ಕಂಡಿದ್ದಾರೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ 12,000 ರನ್‌ಗಳ ಅಂಚಿನಲ್ಲಿರುವ ಶಿಖರ್ ಧವನ್, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಆರು ಏಕದಿನ ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದ ಭಾರತ ತಂಡದ ನಾಯಕತ್ವ ವಹಿಸಿದ್ದರು. ಇನ್ನು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಶುಕ್ರವಾರ, ನವೆಂಬರ್ 25ರಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, November 24, 2022, 12:08 [IST]
Other articles published on Nov 24, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X