Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಪರ ಟಿ20 ಅತ್ಯಧಿಕ ರನ್ ದಾಖಲೆ ಬರೆದ ಶ್ರೇಯಸ್ ಐಯ್ಯರ್!

Shreyas Iyer scripts record, registers highest T20 score by an Indian

ಇಂದೋರ್, ಫೆಬ್ರವರಿ 21: ಮುಂಬೈಯ ಯುವ ಬ್ಯಾಟ್ಸ್ಮನ್ ಶ್ರೇಯಸ್ ಐಯ್ಯರ್ ಅವರು ಟಿ20 ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತದ ಆಟಗಾರನಾಗಿ ಶ್ರೇಯಸ್ ಗುರುತಿಸಿಕೊಂಡಿದ್ದಾರೆ. ಇಂದೋರ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯದಲ್ಲಿ ಅಯ್ಯರ್ ಈ ಅಪೂರ್ವ ಸಾಧನೆ ಮೆರೆದರು.

ಇಂದೋರ್‌ನ ಎಮರಾಲ್ಡ್ ಹೈಸ್ಕೂಲ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಮುಂಬೈ-ಸಿಕ್ಕಿಂ ನಡುವಣ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 1ನೇ ಸುತ್ತಿನ ಗ್ರೂಪ್ ಸಿ ಪಂದ್ಯದಲ್ಲಿ ಮುಂಬೈ ಪ್ರತಿನಿಧಿಸಿದ್ದ ಶ್ರೇಯರ್ ಕೇವಲ 55 ಎಸೆತಗಳಿಗೆ 147 ರನ್ ಚಚ್ಚಿದರು.

ಶ್ರೇಯಸ್ ಅಬ್ಬರ ಮತ್ತು ಸೂರ್ಯ ಕುಮಾರ್ ಯಾದವ್ 63 ರನ್ ಸೇರ್ಪಡೆಯ ಫಲವಾಗಿ ಈ ಪಂದ್ಯದಲ್ಲಿ ಅಂಜಿಕ್ಯ ರಹಾನೆ ನಾಯಕತ್ವದ ಮುಂಬೈ ತಂಡ ಭರ್ಜರಿ 154 ರನ್ ಗಳಿಂದ ಗೆದ್ದಿತು. ಮುಂಬೈ ಇನ್ನಿಂಗ್ಸ್ ವೇಳೆ ಶ್ರೇಯಸ್ ಬ್ಯಾಟ್‌ನಿಂದ 7 ಬೌಂಡರಿ ಮತ್ತು ಬರೋಬ್ಬರಿ 15 ಸಿಕ್ಸ್‌ಗಳು ಸಿಡಿದಿದ್ದವು!

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಮುಂಬೈ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 258 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ಸಿಕ್ಕಿಂಗೆ ಬ್ಯಾಟ್ಸ್ಮನ್‌ಗಳ ಬೆಂಬಲ ಸಿಗಲಿಲ್ಲ. 20 ಓವರ್‌ಗೆ 7 ವಿಕೆಟ್ ಕಳೆದು 104 ರನ್ ಬಾರಿಸಿ ಸಿಕ್ಕಿಂ ಶರಣಾಯಿತು.

ಭಾರತದ ಬ್ಯಾಟ್ಸ್ಮನ್‌ಗಳಲ್ಲಿ ಶ್ರೇಯಸ್ ಮೊದಲ ಸ್ಥಾನದಲ್ಲಿದ್ದರೆ, ರಿಷಬ್ ಪಂತ್ - 128* (ಐಪಿಎಲ್ 2018), ಮುರಳಿ ವಿಜಯ್ -127 (ಐಪಿಎಲ್ 2010), ಸುರೇಶ್ ರೈನಾ -126* (ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2018), ವೀರೇಂದ್ರ ಸೆಹ್ವಾಗ್ -122 (ಐಪಿಎಲ್ 2014) ಅನಂತರದ ಸ್ಥಾನಗಳಲ್ಲಿದ್ದಾರೆ.

Story first published: Thursday, February 21, 2019, 19:39 [IST]
Other articles published on Feb 21, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+