ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಈತ 3ನೇ ಕ್ರಮಾಂಕದಲ್ಲಿ ಆಡಬೇಕು; ಆರ್ ಅಶ್ವಿನ್

Shreyas Iyer To Play At Number 3 In T20 Series Against New Zealand Says Ravichandran Ashwin

2022ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತು ಹೊರಬಿದ್ದ ನಂತರ ಭಾರತ ಕ್ರಿಕೆಟ್ ತಂಡವು ಟಿ20 ಕ್ರಿಕೆಟ್‌ನಲ್ಲಿ ಹೊಸ ಬದಲಾವಣೆಯನ್ನು ಎದುರು ನೋಡುತ್ತಿದೆ.

ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದು, ಇದರಲ್ಲಿ ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ಉಮ್ರಾನ್ ಮಲಿಕ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮೊದಲಾದವರಿಗೆ ಅವಕಾಶ ನೀಡಲಾಗಿದೆ.

IPLನಲ್ಲಿ ಭಾಗವಹಿಸದಂತೆ ಬಹುಬೇಡಿಕೆಯ ಆಟಗಾರನಿಗೆ ಪರೋಕ್ಷ ಸೂಚನೆ ನೀಡಿದರಾ ಪ್ಯಾಟ್ ಕಮ್ಮಿನ್ಸ್!IPLನಲ್ಲಿ ಭಾಗವಹಿಸದಂತೆ ಬಹುಬೇಡಿಕೆಯ ಆಟಗಾರನಿಗೆ ಪರೋಕ್ಷ ಸೂಚನೆ ನೀಡಿದರಾ ಪ್ಯಾಟ್ ಕಮ್ಮಿನ್ಸ್!

ಇನ್ನು ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್ ಮುಂತಾದ ಕೆಲವು ಕಾಯಂ ಆಟಗಾರರು ಇದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ವಿಚಾರಕ್ಕೆ ಬಂದರೆ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ದೊಡ್ಡ ಪೈಪೋಟಿ ಏರ್ಪಟ್ಟಿದೆ.

ಶ್ರೇಯಸ್ ಅಯ್ಯರ್‌ಗೆ 3ನೇ ಕ್ರಮಾಂಕವನ್ನು ನೀಡಬೇಕು

ಶ್ರೇಯಸ್ ಅಯ್ಯರ್‌ಗೆ 3ನೇ ಕ್ರಮಾಂಕವನ್ನು ನೀಡಬೇಕು

2022ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರು ನಂ.3 ಕ್ರಮಾಂಕದಲ್ಲಿ ಆಡಿದರೆ, ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಇನ್ನು ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಭಾಗವಾಗಿರದ ಕಾರಣ, ಶ್ರೇಯಸ್ ಅಯ್ಯರ್ ಬದಲಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಸೂರ್ಯಕುಮಾರ್ ಒಂದು ಕ್ರಮಾಂಕ ಮೇಲೆ ಆಡಿದರೆ ಹೆಚ್ಚು ಪ್ರಭಾವಶಾಲಿ ಆಟಗಾರನಾಗಬಹುದು ಎಂದು ಕೆಲವರು ಭಾವಿಸಿದ್ದಾರೆ.

ಇದೇ ವೇಳೆ ಭಾರತ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯೂಟ್ಯೂಬ್‌ನಲ್ಲಿನ ತನ್ನ ವೀಡಿಯೊದಲ್ಲಿ, ಶ್ರೇಯಸ್ ಅಯ್ಯರ್ ತಮ್ಮ ಹಕ್ಕನ್ನು ಗಳಿಸಿದ್ದಾರೆ ಮತ್ತು ಅವರಿಗೆ ಬ್ಯಾಟಿಂಗ್‌ನಲ್ಲಿ 3ನೇ ಕ್ರಮಾಂಕವನ್ನು ನೀಡಬೇಕು ಎಂದು ಹೇಳಿದ್ದಾರೆ.

4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್

4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್

"3ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಗಟ್ಟಿಯಾಗಿದ್ದಾರೆ. 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಕಳುಹಿಸುವ ಸಂದರ್ಭ ಬರಬಹುದು, ಆದರೆ ಶ್ರೇಯಸ್ ಅಯ್ಯರ್ ಶಕ್ತಿ ಗಳಿಸಿದ್ದಾರೆ. ಹಾಗಾಗಿ ಅವರು ಮೂರನೇ ಸ್ಥಾನದಲ್ಲಿ ಮತ್ತು ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ," ಎಂದು ರವಿಚಂದ್ರನ್ ಅಶ್ವಿನ್ ಹೇಳಿದರು.

ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಎಡಗೈ ಬ್ಯಾಟ್ಸ್‌ಮನ್ ಇಲ್ಲ

ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಎಡಗೈ ಬ್ಯಾಟ್ಸ್‌ಮನ್ ಇಲ್ಲ

ರಿಷಭ್ ಪಂತ್ ಆರಂಭಿಕ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಮಾತನಾಡಿದ ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್, ರಿಷಭ್ ಪಂತ್ ಇನ್ನಿಂಗ್ಸ್ ತೆರೆದರೆ, ವಾಷಿಂಗ್ಟನ್ ಸುಂದರ್ ಎಡಗೈ ಆಟಗಾರನಾಗಿ 5ನೇ ಕ್ರಮಾಂಕದ ಪಾತ್ರವನ್ನು ನಿರ್ವಹಿಸಬೇಕು ಎಂದು ತಿಳಿಸಿದರು.

"ಒಂದು ವೇಳೆ ರಿಷಭ್ ಪಂತ್‌ರನ್ನು ಅಗ್ರಸ್ಥಾನದಲ್ಲಿ ಆಡಿಸಿದರೆ, ನಮಗೆ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಎಡಗೈ ಬ್ಯಾಟ್ಸ್‌ಮನ್ ಇರುವುದಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಟಗಾರರಿಲ್ಲದಿರುವುದು ಕೂಡ ಹೆಚ್ಚು ಯೋಚನೆ ಮಾಡುವ ವಿಷಯವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಎಡ-ಬಲ ಸಂಯೋಜನೆಯನ್ನು ಹೊಂದಿರುವುದು ಟಿ20 ಪಂದ್ಯಗಳಲ್ಲಿ ಪ್ರಮುಖವಾಗಿದೆ," ಎಂದರು.

ಭಾರತಕ್ಕಿರುವ ಏಕೈಕ ಆಯ್ಕೆ ವಾಷಿಂಗ್ಟನ್ ಸುಂದರ್

ಭಾರತಕ್ಕಿರುವ ಏಕೈಕ ಆಯ್ಕೆ ವಾಷಿಂಗ್ಟನ್ ಸುಂದರ್

"ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತಕ್ಕಿರುವ ಏಕೈಕ ಆಯ್ಕೆ ವಾಷಿಂಗ್ಟನ್ ಸುಂದರ್. ತಂಡವು ಆತನನ್ನು 5ನೇ ಸ್ಥಾನದಲ್ಲಿ ಬ್ಯಾಟ್ ಮಾಡಿಸುತ್ತಾರೆಯೇ ಎಂದು ನನಗೆ ತಿಳಿದಿಲ್ಲ. ವಾಷಿಂಗ್ಟನ್ ಸುಂದರ್ ಅವರಿಗೂ ಇದು ಪುನರಾಗಮನ ಸರಣಿಯಾಗಿದೆ," ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟರು.

ಇನ್ನು ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಭಾಗವಾಗಿಲ್ಲ. ಅವರನ್ನು ಇನ್ಮುಂದೆ ಟಿ20 ಆಯ್ಕೆಗೆ ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಭಾರತ ತಂಡದ ಆಯ್ಕೆಗಾರರೇ ಸ್ಪಷ್ಟಪಡಿಸಬೇಕಿದೆ.

Story first published: Friday, November 18, 2022, 19:54 [IST]
Other articles published on Nov 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X