ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಐವರು ಭಾರತೀಯ ಬ್ಯಾಟ್ಸ್‌ಮನ್‌ಗಳು

ಬುಧವಾರ, ಜನವರಿ 18ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ದಾಖಲೆಯ ದ್ವಿಶತಕದ ನೆರವಿನಿಂದ ಭಾರತ ತಂಡ 12 ರನ್‌ಗಳ ರೋಚಕ ಗೆಲುವು ದಾಖಲಿಸಿತು.

ಏಕದಿನ ಕ್ರಿಕೆಟ್ ಯಾವುದೇ ಬ್ಯಾಟ್ಸ್‌ಮನ್‌ಗಳಿಗೆ ಅತ್ಯಂತ ಸವಾಲಿನ ಸ್ವರೂಪಗಳಲ್ಲಿ ಒಂದಾಗಿದೆ. 50-ಓವರ್‌ಗಳ ಪಂದ್ಯಕ್ಕೆ ಉತ್ತಮ ಕೌಶಲ್ಯ ಮತ್ತು ತಂಡಕ್ಕೆ ಅಗತ್ಯವಿರುವಾಗ ತ್ವರಿತವಾಗಿ ರನ್ ಗಳಿಸುವ ಸಾಮರ್ಥ್ಯದ ಬ್ಯಾಟ್ಸ್‌ಮನ್‌ಗಳ ಅಗತ್ಯವಿರುತ್ತದೆ.

IND vs NZ: ಶುಭ್ಮನ್ ಗಿಲ್ ದ್ವಿಶತಕಕ್ಕೆ ಯುವಿ, ಸೆಹ್ವಾಗ್, ಅಶ್ವಿನ್‌ರಿಂದ ಪ್ರಶಂಸೆಗಳ ಸುರಿಮಳೆIND vs NZ: ಶುಭ್ಮನ್ ಗಿಲ್ ದ್ವಿಶತಕಕ್ಕೆ ಯುವಿ, ಸೆಹ್ವಾಗ್, ಅಶ್ವಿನ್‌ರಿಂದ ಪ್ರಶಂಸೆಗಳ ಸುರಿಮಳೆ

ಹಲವು ಭಾರತೀಯ ಬ್ಯಾಟರ್‌ಗಳು ಏಕದಿನ ಸ್ವರೂಪದ ಆಟದಲ್ಲಿ ಪಾರುಪತ್ಯ ಸಾಧಿಸಿದ್ದಾರೆ. ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ದಾಖಲೆಯ 49 ಏಕದಿನ ಶತಕಗಳನ್ನು ದಾಖಲಿಸಿದ್ದರೆ, ಅವರನ್ನು ಬೆನ್ನತ್ತಿರುವ ವಿರಾಟ್ ಕೊಹ್ಲಿ 46 ಏಕದಿನ ಶತಕಗಳನ್ನು ಗಳಿಸಿದ್ದಾರೆ.

ಶುಭ್ಮನ್ ಗಿಲ್ ಭರ್ಜರಿ ದ್ವಿಶತಕ

ಶುಭ್ಮನ್ ಗಿಲ್ ಭರ್ಜರಿ ದ್ವಿಶತಕ

ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೂರು ಏಕದಿನ ದ್ವಿಶತಕಗಳನ್ನು ಸಿಡಿಸಿದ್ದಾರೆ. ಇಶಾನ್ ಕಿಶನ್ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ. ಇದೀಗ ನ್ಯೂಜಿಲೆಂಡ್ ವಿರುದ್ಧ ಶುಭ್ಮನ್ ಗಿಲ್ ದ್ವಿಶತಕ ಬಾರಿಸಿ, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಐದನೇ ಭಾರತೀಯ ಆಟಗಾರನಾದರು.

ಇದೇ ವೇಳೆ, ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶುಭ್ಮನ್ ಗಿಲ್ ತಮ್ಮ 19ನೇ ಏಕದಿನ ಇನ್ನಿಂಗ್ಸ್‌ನಲ್ಲಿ 106 ರನ್‌ಗಳನ್ನು ತಲುಪಿದಾಗ 1000 ರನ್‌ಗಳ ಗಡಿಯನ್ನು ದಾಟಿದರು.

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1,000 ರನ್‌ಗಳನ್ನು ಗಳಿಸಲು ಕನಿಷ್ಠ ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡ ಅಗ್ರ ಐದು ಭಾರತೀಯ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.

5) ಶ್ರೇಯಸ್ ಅಯ್ಯರ್- 25 ಇನ್ನಿಂಗ್ಸ್‌ಗಳಲ್ಲಿ 1,000 ರನ್‌

5) ಶ್ರೇಯಸ್ ಅಯ್ಯರ್- 25 ಇನ್ನಿಂಗ್ಸ್‌ಗಳಲ್ಲಿ 1,000 ರನ್‌

ಪ್ರಸ್ತುತ ಭಾರತ ತಂಡದ ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದಾರೆ. ಅಯ್ಯರ್ ಅವರ ಕಡಿಮೆ ವೃತ್ತಿಜೀವನದಲ್ಲಿ ಭಾರತ ತಂಡಕ್ಕಾಗಿ ಅನೇಕ ಪಂದ್ಯಗಳನ್ನು ಗೆದ್ದಿದ್ದಾರೆ.

ಶ್ರೇಯಸ್ ಅಯ್ಯರ್ ತಮ್ಮ ಏಕದಿನ ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಲು ಕೇವಲ 25 ಇನ್ನಿಂಗ್ಸ್ ತೆಗೆದುಕೊಂಡರು. ಕಳೆದ ವರ್ಷ ಜುಲೈನಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬಲಗೈ ಬ್ಯಾಟರ್ ಈ ಸಾಧನೆ ಮಾಡಿದರು.

4) ನವಜೋತ್ ಸಿಂಗ್ ಸಿಧು - 25 ಇನ್ನಿಂಗ್ಸ್‌ಗಳಲ್ಲಿ 1,000 ರನ್‌

4) ನವಜೋತ್ ಸಿಂಗ್ ಸಿಧು - 25 ಇನ್ನಿಂಗ್ಸ್‌ಗಳಲ್ಲಿ 1,000 ರನ್‌

ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಏಕದಿನ ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಲು 25 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಅಕ್ಟೋಬರ್ 22, 1989ರಂದು ಅಹಮದಾಬಾದ್ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದರು.

ಆ ಪಂದ್ಯದಲ್ಲಿ ನವಜೋತ್ ಸಿಂಗ್ ಸಿಧು ಭಾರತ ಪರ 88 ಎಸೆತಗಳಲ್ಲಿ 80 ರನ್ ಗಳಿಸಿ ಪಂದ್ಯ ವಿಜೇತ ಆಟವಾಡಿದ್ದರು. ನಂತರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

3) ಶಿಖರ್ ಧವನ್ - 24 ಇನ್ನಿಂಗ್ಸ್‌ಗಳಲ್ಲಿ 1,000 ರನ್‌

3) ಶಿಖರ್ ಧವನ್ - 24 ಇನ್ನಿಂಗ್ಸ್‌ಗಳಲ್ಲಿ 1,000 ರನ್‌

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮೂರು ವರ್ಷಗಳ ನಂತರ, ನಾಗ್ಪುರದ ವಿದರ್ಭ ಸ್ಟೇಡಿಯಂನಲ್ಲಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಅವರು 1,000 ಏಕದಿನ ರನ್‌ಗಳನ್ನು ಪೂರೈಸಿದರು.

ಏಕದಿನ ಕ್ರಿಕೆಟ್ ವೃತ್ತಿಜೀವನದ 24ನೇ ಇನ್ನಿಂಗ್ಸ್ ಆಡಿದ್ದ ಶಿಖರ್ ಧವನ್, ಆ ಪಂದ್ಯದಲ್ಲಿ ಶತಕ ಗಳಿಸಿ, ಆ ಪಂದ್ಯವನ್ನು ಭಾರತ ಗೆಲ್ಲಲು 351 ರನ್‌ಗಳ ಯಶಸ್ವಿ ಚೇಸ್ ಮಾಡಲು ನೆರವಾಗಿದ್ದರು.

2) ವಿರಾಟ್ ಕೊಹ್ಲಿ - 24 ಇನ್ನಿಂಗ್ಸ್‌ಗಳಲ್ಲಿ 1,000 ರನ್‌

2) ವಿರಾಟ್ ಕೊಹ್ಲಿ - 24 ಇನ್ನಿಂಗ್ಸ್‌ಗಳಲ್ಲಿ 1,000 ರನ್‌

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಏಕದಿನ ಪದಾರ್ಪಣೆ ಮಾಡಿದ ಎರಡು ವರ್ಷಗಳಲ್ಲೇ 1,000 ರನ್ ಪೂರೈಸಿದರು. ಅವರು ಜೂನ್ 5, 2010ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ವೃತ್ತಿಜೀವನದ 24ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 95 ಎಸೆತಗಳಲ್ಲಿ 68 ರನ್ ಗಳಿಸಿ ಭಾರತ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರು. ಆದರೂ, ಶ್ರೀಲಂಕಾ ಆರು ವಿಕೆಟ್‌ಗಳಿಂದ ಗೆದ್ದಿದ್ದರಿಂದ ಕೊಹ್ಲಿ ಪ್ರಯತ್ನಗಳು ವ್ಯರ್ಥವಾಗಿತ್ತು.

1) ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1,000 ರನ್ ಪೂರೈಸಿದ ಶುಭ್ಮನ್ ಗಿಲ್

1) ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1,000 ರನ್ ಪೂರೈಸಿದ ಶುಭ್ಮನ್ ಗಿಲ್

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ ದಾಖಲೆಯನ್ನು ಮುರಿದರು. ತಮ್ಮ 19ನೇ ಇನ್ನಿಂಗ್ಸ್‌ನಲ್ಲಿ 1,000 ರನ್ ಪೂರೈಸಿದ ಭಾರತೀಯ ಆಟಗಾರನೆಂಬ ಸಾಧನೆ ಮಾಡಿದರು.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಅಂತಿಮವಾಗಿ 149 ಎಸೆತಗಳಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್‌ಗಳ ನೆರವಿನಿಂದ 208 ರನ್ ಗಳಿಸಿ ಔಟಾದರು.

For Quick Alerts
ALLOW NOTIFICATIONS
For Daily Alerts
Story first published: Thursday, January 19, 2023, 7:10 [IST]
Other articles published on Jan 19, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X