ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL Auction 2023: ಪ್ರಮುಖ ಆಟಗಾರರನ್ನೇ ಬಿಡುಗಡೆ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಬಲಿಷ್ಠವಾಗಿದೆಯಾ?

SRH Team 2023 Players List: Full List of Sunrisers Hyderabad Players With Price in Kannada

ಸನ್‌ರೈಸರ್ಸ್ ಹೈದರಾಬಾದ್ 2023ರ ಮಿನಿ ಹರಾಜಿಗೆ ಮನ್ನ ಪ್ರಮುಖ ಆಟಗಾರರನ್ನೆ ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಪ್ರಮುಖ ಆಟಗಾರರನ್ನೇ ಬಿಡುಗಡೆ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿಸುವ ನಿರೀಕ್ಷೆ ಇತ್ತು. ಅದರಂತೆ, ದೊಡ್ಡ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪರ್ಸ್‌ನಲ್ಲಿ ಹೆಚ್ಚಿನ ಮೊತ್ತವನ್ನು ಹೊಂದಿತ್ತು. 42.25 ಕೋಟಿ ರುಪಾಯಿ ಮೊತ್ತ ಹೊಂದಿದ್ದ ಸನ್‌ರೈಸರ್ಸ್ ಹೈದರಾಬಾದ್ ಮಿನಿ ಹರಾಜಿನಲ್ಲಿ 13 ಆಟಗಾರರನ್ನು ಖರೀದಿ ಮಾಡಿದೆ. ಎಸ್‌ಆರ್ ಎಚ್‌ ಪರ್ಸ್‌ನಲ್ಲಿ 6.55 ಕೋಟಿ ರುಪಾಯಿ ಮೊತ್ತವನ್ನು ಉಳಿಸಿಕೊಂಡಿದೆ. ಬೆನ್‌ಸ್ಟೋಕ್ಸ್‌ರನ್ನು ಖರೀದಿ ಮಾಡಲು ಎಸ್‌ಆರ್ ಹೆಚ್ ಭಾರಿ ಪೈಪೋಟಿ ನಡೆಸಿದರು ಕೊನೆಗೆ ಸಿಎಸ್‌ಕೆ ತಂಡ ಸ್ಟೋಕ್ಸ್‌ರನ್ನು ಖರೀದಿ ಮಾಡಿತು.

IPL Auction 2023: ಹೆಸರಿಗೆ ಮಾತ್ರ ಆರ್‌ಸಿಬಿ, ಇವರೇ ತಂಡದಲ್ಲಿರುವ ಏಕೈಕ ರಾಜ್ಯದ ಆಟಗಾರ!IPL Auction 2023: ಹೆಸರಿಗೆ ಮಾತ್ರ ಆರ್‌ಸಿಬಿ, ಇವರೇ ತಂಡದಲ್ಲಿರುವ ಏಕೈಕ ರಾಜ್ಯದ ಆಟಗಾರ!

ಇಂಗ್ಲೆಂಡ್‌ ತಂಡ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್‌ ಸನ್‌ರೈಸರ್ಸ್ ಹೈದರಾಬಾದ್‌ ಮಿನಿ ಹರಾಜಿನಲ್ಲಿ ಖರೀದಿಸಿದ ದುಬಾರಿ ಆಟಗಾರ ಎನಿಸಿಕೊಂಡರು. 13.25 ಕೋಟಿ ರುಪಾಯಿಗೆ ಬಿಡ್ ಮಾಡುವ ಮೂಲಕ ಅವರನ್ನು ಖರೀದಿ ಮಾಡಿತು. ನಂತರ ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಮಯಾಂಕ್‌ ಅಗರ್ವಾಲ್‌ರನ್ನು 8.25 ಕೋಟಿ ರುಪಾಯಿಗೆ ಖರೀದಿ ಮಾಡಿತು. ದೊಡ್ಡ ಆಟಗಾರರ ಜೊತೆ ಹಲವು ಯುವ ಆಟಗಾರರನ್ನು ಕೂಡ ಎಸ್‌ಆರ್ ಎಚ್ ತಂಡಕ್ಕೆ ಆಯ್ಕೆ ಮಾಡಿಕೊಂಡಿತು.

ವಿವ್ರಾಂತ್ ಶರ್ಮಾಗೆ 2.60 ಕೋಟಿ ರುಪಾಯಿ

ವಿವ್ರಾಂತ್ ಶರ್ಮಾಗೆ 2.60 ಕೋಟಿ ರುಪಾಯಿ

ಯುವ ಬೌಲರ್, ಆಲ್‌ರೌಂಡರ್ ಗಳಿಗೆ ಸನ್‌ರೈಸರ್ಸ್ ಹೈದರಾಬಾದ್ ಮೊದಲಿನಿಂದಲೂ ಅವಕಾಶ ನೀಡುತ್ತಾ ಬಂದಿದೆ. ಈ ಬಾರಿ ಕೂಡ ಜಮ್ಮು ಕಾಶ್ಮೀರದ ಆಲ್‌ರೌಂಡರ್ ವಿವ್ರಾಂತ್ ಶರ್ಮಾ ಅವರನ್ನು 2.60 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತು. ನಂತರ ಮಯಾಂಕ್‌ ಮಾರ್ಕಂಡೆಗೆ 50 ಲಕ್ಷ ಮೂಲಬೆಲೆ ನೀಡಿ ಖರೀದಿ ಮಾಡಿತು.

ಇಂಗ್ಲೆಂಡ್‌ ಸ್ಪಿನ್ನರ್ ಆದಿಲ್ ರಶೀದ್‌ರನ್ನು 2 ಕೋಟಿ ರುಪಾಯಿ ಮೂಲಬೆಲೆಗೆ ಖರೀದಿ ಮಾಡುವ ಮೂಲಕ ರಶೀದ್‌ ಖಾನ್‌ಗೆ ಬದಲೀ ಬೌಲರ್ ಹುಡುಕಾಟಕ್ಕೆ ಅಂತ್ಯ ಹಾಡಿತು. ಸೌತ್ ಆಫ್ರಿಕಾದ ಬ್ಯಾಟರ್ ಹೆನ್ರಿಚ್ ಕ್ಲಸೀನ್‌ರನ್ನು 5.25 ಕೋಟಿ ರುಪಾಯಿಗೆ ಖರೀದಿ ಮಾಡಿದೆ.

IPL Auction 2023 : 25 ಎಸೆತಗಳಲ್ಲಿ ಶತಕ ಸಿಡಿಸಿದ್ದ ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಆರ್‌ಸಿಬಿ ತಂಡಕ್ಕೆ ಸೇರ್ಪಡೆ

ಹಲವು ಯುವ ಆಟಗಾರರಿಗೆ ಮಣೆ

ಹಲವು ಯುವ ಆಟಗಾರರಿಗೆ ಮಣೆ

ಪ್ರಮುಖ ಆಟಗಾರರಿಗೆ ಕೋಟಿ ಕೋಟಿ ನೀಡಿದ ಸನ್‌ರೈಸರ್ಸ್ ಹೈದರಾಬಾದ್ ಕಡಿಮೆ ಮೊತ್ತದಲ್ಲಿ ಹಲವು ಯುವ ಆಟಗಾರರನ್ನು ಕೂಡ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಉಪೇಂದ್ರ ಸಿಂಗ್‌ ಯಾದವ್‌ರನ್ನು 25 ಲಕ್ಷ ರೂಪಾಯಿಗೆ ಖರೀದಿ ಮಾಡಿತು. ಸನ್ವಿರ್ ಸಿಂಗ್, ಸಮರ್ಥ್ ವ್ಯಾಸ್‌ರನ್ನು 20 ಲಕ್ಷ ರುಪಾಯಿ ಮೂಲ ಬೆಲೆಗೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು.

ಭಾರತೀಯ ಆಲ್‌ರೌಂಡರ್ ಮಯಾಂಕ್ ದಗಾರ್ ಅವರಿಗಾಗಿ 1.80 ಕೋಟಿ ರುಪಾಯಿ ಖರ್ಚು ಮಾಡಿತು. ವಿಕೆಟ್ ಕೀಪರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು 20 ಲಕ್ಷ ಮೂಲಬೆಲೆಗೆ ಖರೀದಿ ಮಾಡಿದೆ. ಹರಾಜಿನ ಕೊನೆಯಲ್ಲಿ ವೆಸ್ಟ್ ಇಂಡೀಸ್ ಬೌಲರ್ ಅಕೇಲ್ ಹೊಸೈನ್‌ರನ್ನು 1 ಕೋಟಿ ರುಪಾಯಿ ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡರು. ಅನ್ಮೋಲ್‌ಪ್ರೀತ್‌ ಸಿಂಗ್‌ರನ್ನು ಕೊನೆಯದಾಗಿ 20 ಲಕ್ಷ ಮೂಲಬೆಲೆಗೆ ಖರೀದಿ ಮಾಡಿತು.

ಮಿನಿ ಹರಾಜು ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡ

ಮಿನಿ ಹರಾಜು ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡ

ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್, ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಾಂಡೆ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್ , ಉಪೇಂದ್ರ ಸಿಂಗ್ ಯಾದವ್, ಮಯಾಂಕ್ ದಾಗರ್, ನಿತೀಶ್ ಕುಮಾರ್ ರೆಡ್ಡಿ, ಅಕೇಲ್ ಹೊಸೈನ್, ಅನ್ಮೋಲ್‌ಪ್ರೀತ್ ಸಿಂಗ್.

Story first published: Friday, December 23, 2022, 23:12 [IST]
Other articles published on Dec 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X