ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ಜಯಗಳಿಸಿದ 3 ತಂಡಗಳಿವು!

ಐಪಿಎಲ್ ಅಂತಿಮ ಹಂತಕ್ಕೆ ಕಾಲಿಟ್ಟಿದ್ದು ಫೈನಲ್ ಪಂದ್ಯ ಮಾತ್ರವೇ ಈಗ ಬಾಕಿಯಿದೆ. ಇಂಥಾ ಸಂದರ್ಭದಲ್ಲಿ ಟಿ20 ವಿಶ್ವಕಪ್‌ನ ಆರಂಭಕ್ಕೂ ಕ್ಷಣಗಣನೆ ಆರಂಭವಾಗಿದ್ದು ಅಭಿಮಾನಿಗಳು ಟಿ20 ವಿಶ್ವಕಪ್‌ನ ಮಹಾ ಸಮರದ ವಿಚಾರವಾಗಿ ಸಾಕಷ್ಟು ಕುತೂಹಲದಿಮದ ಎದುರು ನೋಡುತ್ತಿದ್ದಾರೆ.

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟಿ20 ವಿಶ್ವಕಪ್ ಆಯೋಜನೆಯಾಗುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಟಿ20 ಮಾದರಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿತು. ಆ ಚೊಚ್ಚಲ ಟೂರ್ನಮೆಂಟ್‌ನಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತ್ತು.

ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಈವರೆಗೆ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ಎಲ್ಲಾ ಪಂದ್ಯಗಳಲ್ಲಿಯೂ ಭಾರತ ತಂಡ ಗೆಲುವು ಸಾಧಿಸಿ ಬೀಗಿದೆ. ಪಾಕಿಸ್ತಾನ ಮಾತ್ರವಲ್ಲದೆ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳ ವಿರುದ್ಧವೂ ಭಾರತ ಟಿ20 ವಿಶ್ವಕಪ್ ವೇದಿಕೆಯಲ್ಲಿ ಶೇಕಡಾ 100 ಗೆಲುವಿನ ಸಾಧನೆ ಮಾಡಿದೆ.

ಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆ

ಹಾಗಿದ್ದರೂ ಕೆಲ ತಂಡಗಳ ವಿರುದ್ಧ ಭಾರತ ಸತತವಾಗಿ ಹಿನ್ನಡೆ ಕಂಡ ಉದಾಹರಣೆ ಈ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ದೊರೆಯುತ್ತದೆ. ಈ ಗೆಲುವಿನ ಸಂಖ್ಯೆ ದೊಡ್ಡ ಮಟ್ಟದಲ್ಲಿಲ್ಲದಿದ್ದರೂ ಅಂಕಿಅಂಶ ಕುತೂಹಲಕಾರಿಯಾಗಿದೆ. ಹಾಗಾದರೆ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ಮೂರು ತಂಡಗಳು ಯಾವುದು? ಮುಂದೆ ಓದಿ..

ನ್ಯೂಜಿಲೆಂಡ್- 2 ಗೆಲುವು

ನ್ಯೂಜಿಲೆಂಡ್- 2 ಗೆಲುವು

ನ್ಯೂಜಿಲೆಂಡ್ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ನ ಚೊಚ್ಚಲ ಆವೃತ್ತಿಯಲ್ಲಿ ಭಾರತ ತಂಡವನ್ನು ಸೋಲಿಸಿದ ಏಕೈಕ ತಂಡವಾಗಿತ್ತು. ಉಳಿದ ಎಲ್ಲಾ ಪಂದ್ಯಗಳಲ್ಲಿಯೂ ಭಾರತ ಆ ಟೂರ್ನಿಯಲ್ಲಿ ಜಯಭೇರಿ ಬಾರಿಸಿತ್ತು. ಭಾರತ ಈ ವಿಶ್ವಕಪ್‌ನಲ್ಲಿ ಸೂಪರ್ 8 ಹಂತದಲ್ಲಿ ತನ್ನ ಚೊಚ್ಚಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಿತ್ತು. ದಕ್ಷಿಣ ಆಫ್ರಿಕಾದ ವಾಂಡರರ್ಸ್ ಕ್ರೀಡಾಂಗಣದಲ್ಲಿ 2007ರ ಸೆಪ್ಟೆಂಬರ್ 16ರಂದು ಈ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ 190 ರನ್‌ಗಳಿಸಿತ್ತು. ಈ ಪಂದ್ಯದಲ್ಲಿ ಕಿವೀಸ್ ಪಡೆ 10 ರನ್‌ಗಳ ಅಂತರದಿಂದ ಗೆಲುವ ಸಾಧಿಸಿತ್ತು.

ಅದಾಗಿ ಸುಮಾರು ಒಂದು ದಶಕದ ಬಳಿಕ 2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಭಾರತಕ್ಕೆ ಎದುರಾಳಿಯಾಗಿತ್ತು. ಇದು ಸೂಪರ್ 10 ಹಂತದಲ್ಲಿ ಭಾರತ ತಂಡದ ಮೊದಲ ಪಂದ್ಯವಾಗುತ್ತು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ 126 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿತ್ತು. ಆದರೆ ಬಳಿಕ ನ್ಯೂಜಿಲೆಂಡ್ ತಂಡದ ಶಿಸ್ತಿನ ಬೌಲಿಂಗ್‌ಗೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತಿಣುಕಾಡಿ ಕೇವಲ 79 ನ್‌ಗಳನ್ನಷ್ಟೇ ಗಳಿಸಿ ಶರಣಾಗಿತ್ತು.

ಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡ

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಅಕ್ಟೋಬರ್ 31ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ.

ಶ್ರೀಲಂಕಾ- 2 ಗೆಲುವು

ಶ್ರೀಲಂಕಾ- 2 ಗೆಲುವು

ಭಾರತದ ವಿರುದ್ಧ 2 ಗೆಲುವು ಸಾಧಿಸಿರುವ ಮತ್ತೊಂದು ತಂಡವೆಂದರೆ ಅದು ಶ್ರೀಲಂಕಾ. 2010ರ ಟಿ 20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ಶ್ರೀಲಂಕಾ ಮತ್ತು ಭಾರತ ಸೆಣೆಸಾಡಿದ್ದವು. ಆ ಪಂದ್ಯದಲ್ಲಿ ಶ್ರೀಲಂಕಾ ಕೊನೆಯ ಎಸೆತದಲ್ಲಿ ಐದು ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ಮೊದಲ ಗೆಲುವು ಸಾಧಿಸಿದ ನಾಲ್ಕು ವರ್ಷಗಳ ನಂತರ 2014ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ಮತ್ತು ಭಾರತ ಮುಖಾಮುಖಿಯಾದವು. ಈ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಭಾರತದ ವಿರುದ್ಧ ಮತ್ತೊಂದು ಯಶಸ್ವಿ ರನ್-ಚೇಸ್ ಮಾಡಿ ಗೆದ್ದು ಬೀಗಿತ್ತು. ಈ ಮೂಲಕ ಶ್ರೀಲಂಕಾ ಚಾಂಪಿಯನ್ ಪಟ್ಟಕ್ಕೇರಿತ್ತು.

ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಅರ್ಹತಾ ಸುತ್ತಿನಲ್ಲಿ ಗೆದ್ದು ಸೂಪರ್ 12 ಹಂತದಲ್ಲಿ ಸ್ಥಾನ ಸಂಪಾದಿಸಬೇಕಿದೆ. ಎ ಗುಂಪಿನಲ್ಲಿರುವ ಶ್ರೀಲಂಕಾ ಎರಡನೇ ಸ್ಥಾನವನ್ನು ಪಡೆದರೆ ನವೆಂಬರ್ 8 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡವನ್ನು ಎದುರಿಸಲಿದೆ.

ವೆಸ್ಟ್ ಇಂಡೀಸ್-3 ಗೆಲುವು

ವೆಸ್ಟ್ ಇಂಡೀಸ್-3 ಗೆಲುವು

ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಎರಡಕ್ಕಿಂತ ಹೆಚ್ಚು ಗೆಲುವು ದಾಖಲಿಸಿದ ಏಕೈಕ ತಂಡವೆಂದರೆ ಅದು ವೆಸ್ಟ್ ಇಂಡೀಸ್. ಕೆರಿಬಿಯನ್ ತಂಡವು 2016ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋಲಿಸುವ ಟೂರ್ನಿಯಿಂದ ಹೊರಹಾಕಿತ್ತು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಪಡೆ 2009 ಮತ್ತು 2010ರ ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಹಂತದಲ್ಲಿ ಭಾರತದ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿತ್ತು.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್‌ ತಂಡಗಳು ಪ್ರತ್ಯೇಕ ಗುಂಪುಗಳಲ್ಲಿದೆ. ಆದರೆ ನಾಕೌಟ್ ಹಂತದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 4 - October 18 2021, 07:30 PM
ಶ್ರೀಲಂಕಾ
Namibia
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, October 14, 2021, 21:37 [IST]
Other articles published on Oct 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X