ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ನ್ಯೂಜಿಲೆಂಡ್‌ಗೆ ಪಾಕಿಸ್ತಾನ ಸವಾಲು: ಚುಟುಕು ಕ್ರಿಕೆಟ್‌ನಲ್ಲಿ ಯಾರಿಗಿದೆ ಮೇಲುಗೈ?

T20 World Cup 2021: Pakistan vs New Zealand Head to Head Records, Most runs, Most wickets & Other Stats

ಪಾಕಿಸ್ತಾನ ಈ ಬಾರಿಯ ಟಿ20 ವಿಶ್ವಕಪ್‌ನ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಮೊದಲ ಪಂದ್ಯವನ್ನು ಭಾರತದ ವಿರುದ್ಧ ಭಾರೀ ಅಂತರದಿಂದ ಗೆದ್ದ ಆತ್ಮವಿಶ್ವಾಸದಿಂದ ಬೀಗುತ್ತಿರುವ ಪಾಕಿಸ್ತಾನಕ್ಕೆ ಈಗ ನ್ಯೂಜಿಲೆಂಡ್ ತಂಡ ಎದುರಾಗಿದೆ. ಈ ಪಂದ್ಯವನ್ನು ಕೂಡ ಗೆದ್ದು ಮುನ್ನಡೆಯಲು ಪಾಕಿಸ್ತಾನ ಸಜ್ಜಾಗಿದೆ. ತವರಿನಲ್ಲಿ ಸರಣಿಯನ್ನು ಆಡದೆ ವಾಪಾಸಾದ ನ್ಯೂಜಿಲೆಂಡ್ ವಿರುದ್ಧ ಈ ವಿಶ್ವಕಪ್‌ನಲ್ಲಿ ಸೇಡು ತೀರಿಸಿಕೊಳ್ಳಲು ಕೂಡ ಪಾಕಿಸ್ತಾನ ತಂಡ ಎದುರು ನೋಡುತ್ತಿದೆ. ಹೀಗಾಗಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಈ ಕದನ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ.

ಇನ್ನು ಟಿ20 ಕ್ರಿಕೆಟ್‌ನಲ್ಲಿ ಈ ಎರಡು ತಂಡಗಳ ಮುಖಾಮುಖಿಯ ಅಂಕಿಅಂಶಗಳ ಚಿತ್ತ ಹರಿಸೋಣ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಎರಡು ತಂಡಗಳು 2007 ರಿಂದ ಈವರೆಗೆ ಒಟ್ಟು 24 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲಗ್ಲಿ ಪಾಕಿಸ್ತಾನ ತಂಡ ಮುನ್ನಡೆ ಸಾಧಿಸಿದ್ದು 14 ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ತಂಡ 10 ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿದೆ.

ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಕುಸಿದ ಪಾಕ್ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಕುಸಿದ ಪಾಕ್

ಇನ್ನು ಈ ಎರಡು ತಂಡಗಳ ಮುಖಾಮುಖಿಯ ಸಂದರ್ಭದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ತಂಡ ಪಾಕಿಸ್ತಾನ. 201 ರನ್‌ಗಳನ್ನು ಗಳಿಸಿದ ಸಾಧನೆ ಮಾಡಿದೆ. ನ್ಯೂಜಿಲೆಂಡ್ ತಂಡದ ವಿರುದ್ಧ ಪಾಕಿಸ್ತಾನದ ಕನಿಷ್ಠ ಮೊತ್ತ 100 ರನ್. ಇನ್ನು ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧ 196 ರನ್‌ಗಳನ್ನು ಗಳಿಸಿದ್ದು ಈವರೆಗೆ ಪಾಕ್ ವಿರುದ್ಧ ಕಿವೀಸ್ ಪಡೆಯ ಹೈಯೆಸ್ಟ್ ಸ್ಕೋರ್ ಎನಿಸಿದೆ. 80 ರನ್‌ಗಳಿಗೆ ಆಲೌಟ್ ಆಗಿರುವುದು ನ್ಯೂಜಿಲೆಂಡ್‌ನ ಕನಿಷ್ಠ ಸ್ಕೋರ್ ಆಗಿದೆ.

ಅಗ್ರಸ್ಥಾನಕ್ಕೇರಿದ ಅಫ್ಘಾನಿಸ್ತಾನ, ಶಮಿ ಪರ ಸಚಿನ್ ಬ್ಯಾಟಿಂಗ್; ಅಕ್ಟೋಬರ್ 25ರ ಪ್ರಮುಖ ಕ್ರಿಕೆಟ್ ಸುದ್ದಿಗಳುಅಗ್ರಸ್ಥಾನಕ್ಕೇರಿದ ಅಫ್ಘಾನಿಸ್ತಾನ, ಶಮಿ ಪರ ಸಚಿನ್ ಬ್ಯಾಟಿಂಗ್; ಅಕ್ಟೋಬರ್ 25ರ ಪ್ರಮುಖ ಕ್ರಿಕೆಟ್ ಸುದ್ದಿಗಳು

ಅತಿ ಹೆಚ್ಚು ರನ್‌ಗಳಿಸಿದ ಆಟಗಾರರು: ಈ ಎರಡು ತಂಡಗಳ ಮುಖಾಮುಖಿಯ ಸಂದರ್ಭದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆಯನ್ನು ಪಾಕಿಸ್ತಾನದ ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ಹೊಂದಿದ್ದಾರೆ. 552 ರನ್‌ಗಳಿಸಿರುವ ಮೊಹಮ್ಮದ್ ಹಫೀಸ್ ಈ ಸಾಧನೆ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಆಟಗಾರ ಮಾರ್ಟಿನ್ ಗಪ್ಟಿಲ್ 509 ರನ್‌ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಇದ್ದು 414 ರನ್‌ಗಳಿಸಿದ್ದಾರೆ.

ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರು: ಇನ್ನು ಈ ಎರಡು ತಂಡಗಳ ಮುಖಾಮುಖಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ನ್ಯೂಜಿಲೆಂಡ್ ತಂಡದ ಟಿಮ್ ಸೌಥಿ. 23 ವಿಕೆಟ್ ಪಡೆದು ಈ ಸಾಧನೆ ಮಾಡಿದ್ದಾರೆ ಕಿವೀಸ್ ವೇಗಿ. ಇನ್ನು ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಇದ್ದು 21 ವಿಕೆಟ್ ಪಡೆದುಕೊಂಡಿದ್ದಾರೆ. 15 ವಿಕೆಟ್ ಪಡೆದಿರುವವ ಉಮರ್ ಗುಲ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಟಿ20 ವಿಶ್ವಕಪ್: ನಮ್ಮ ಅಬ್ಯಾಸವನ್ನು ಬದಲಾಯಿಸಬೇಕು!; ಗೆಲುವಿನ ಬಳಿಕ ಸಹ ಆಟಗಾರರಿಗೆ ಬಾಬರ್ ಸಲಹೆಟಿ20 ವಿಶ್ವಕಪ್: ನಮ್ಮ ಅಬ್ಯಾಸವನ್ನು ಬದಲಾಯಿಸಬೇಕು!; ಗೆಲುವಿನ ಬಳಿಕ ಸಹ ಆಟಗಾರರಿಗೆ ಬಾಬರ್ ಸಲಹೆ

ಪಂದ್ಯದ ಆರಂಭ: ಇನ್ನು ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಕದನ ಇಂದು ಸಂಜೆ 7:30ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಈ ಪಂದ್ಯದ ನೇರಪ್ರಸಾರವಿರಲಿದ್ದು ಹಾಟ್‌ ಸ್ಟಾರ್‌ನಲ್ಲಿಯೂ ವೀಕ್ಷಿಸಬಹುದಾಗಿದೆ.

ನ್ಯೂಜಿಲೆಂಡ್ ತಂಡದ ಸ್ಕ್ವಾಡ್: ಮಾರ್ಟಿನ್ ಗಪ್ಟಿಲ್, ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್, ಇಶ್ ಸೋಧಿ, ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್

ಚೆನ್ನಾಗಾಡ್ತಿಲ್ಲ,ಫಿಟ್ನೆಸ್ ಸಮಸ್ಯೆ,ಇಷ್ಟಾದ್ರೂ ಯಾಕ್ ಗುರೂ ಇವ್ನುನ್ ಬಿಡ್ತಾಯಿಲ್ಲ | Oneindia

ಪಾಕಿಸ್ತಾನ ತಂಡದ ಸ್ಕ್ವಾಡ್: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಂ, ಶಾದಾಬ್ ಖಾನ್, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ, ಹೈದರ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ನವಾಜ್, ಸರ್ಫರಾಜ್ ಅಹಮದ್

Story first published: Tuesday, October 26, 2021, 11:42 [IST]
Other articles published on Oct 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X