ಟಿ20 ವಿಶ್ವಕಪ್: ಈ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಬಲಿಷ್ಠ ತಂಡವನ್ನೇ ಕಡೆಗಣಿಸಿದ ಇಯಾನ್ ಚಾಪೆಲ್!

ಸುಮಾರು 5 ವರ್ಷಗಳ ನಂತರ ಮರಳಿ ಬಂದಿರುವ ಚುಟುಕು ಮಹಾಸಮರ ಎಂದೇ ಖ್ಯಾತಿಯನ್ನು ಗಳಿಸಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಸೂಪರ್ 12 ಹಂತದ ಪಂದ್ಯಗಳು ಆರಂಭವಾದ ನಂತರ ಸಾಕಷ್ಟು ದೊಡ್ಡ ಮಟ್ಟದ ಸುದ್ದಿಗಳಿಗೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಪಂದ್ಯವೊಂದನ್ನು ಗೆದ್ದ ಸಾಧನೆಯನ್ನು ಮಾಡುವುದರ ಮೂಲಕ ತನ್ನ ಸೋಲಿನ ಸರಪಳಿಯ ಕೆಟ್ಟ ದಾಖಲೆಗೆ ಬ್ರೇಕ್ ಹಾಕಿದೆ.

ಟಿ20 ವಿಶ್ವಕಪ್: ಪಾಕಿಸ್ತಾನದ ವಿರುದ್ಧ ಭಾರತ ದೊಡ್ಡ ತಪ್ಪನ್ನು ಮಾಡಿತು: ಬ್ರಾಡ್ ಹಾಜ್ಟಿ20 ವಿಶ್ವಕಪ್: ಪಾಕಿಸ್ತಾನದ ವಿರುದ್ಧ ಭಾರತ ದೊಡ್ಡ ತಪ್ಪನ್ನು ಮಾಡಿತು: ಬ್ರಾಡ್ ಹಾಜ್

ಇದೇ ಮಾದರಿಯಲ್ಲಿ ಪಾಕಿಸ್ತಾನ ತಂಡ ಕೂಡ ಭಾರತದ ವಿರುದ್ಧ ಅಮೋಘ ಜಯ ಸಾಧಿಸುವುದರ ಮೂಲಕ ವಿಶ್ವಕಪ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಭಾರತ ತಂಡವನ್ನು ಸೋಲಿಸಿದ ಸಾಧನೆಯನ್ನು ಮಾಡಿದೆ. ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಆರಂಭದಲ್ಲಿಯೇ ಅನೇಕ ವರ್ಷಗಳಿಂದ ಇದ್ದ ಕೆಟ್ಟ ಹೆಸರುಗಳನ್ನು ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ತಮ್ಮಿಂದ ದೂರ ಮಾಡಿಕೊಂಡು ಉತ್ತಮ ಆರಂಭವನ್ನು ಪಡೆದುಕೊಂಡಿವೆ.

ಭಾರತ vs ಪಾಕಿಸ್ತಾನ: ಭಾರತೀಯ ಅಭಿಮಾನಿಗಳಿಗೆ ಕಾಡಿದ್ದು 'ಆತನ' ಅನುಪಸ್ಥಿತಿಭಾರತ vs ಪಾಕಿಸ್ತಾನ: ಭಾರತೀಯ ಅಭಿಮಾನಿಗಳಿಗೆ ಕಾಡಿದ್ದು 'ಆತನ' ಅನುಪಸ್ಥಿತಿ

ಇನ್ನುಳಿದಂತೆ ಶ್ರೀಲಂಕಾ ತಂಡ ಕೂಡ ಸೂಪರ್ 12 ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸಿದ್ದು, ಆರನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಕೂಡ ಗೆಲುವನ್ನು ಪಡೆದುಕೊಂಡಿದೆ. ಹಾಗೂ ಹಾಲಿ ಟಿ ಟ್ವೆಂಟಿ ವಿಶ್ವಕಪ್ ಚಾಂಪಿಯನ್ಸ್ ಎನಿಸಿಕೊಂಡಿರುವ ವೆಸ್ಟ್ ಇಂಡೀಸ್ ಈ ಹಂತದ ತಮ್ಮ ಮೊದಲನೇ ಪಂದ್ಯದಲ್ಲಿ ಸೋಲುಂಡಿದ್ದು, ಸೌತ್ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳು ಕೂಡ ಈ ಸುತ್ತಿನ ತಮ್ಮ ಮೊದಲನೇ ಪಂದ್ಯಗಳಲ್ಲಿ ಸೋತಿವೆ. ಹಾಗೂ ಈ ಪಂದ್ಯಗಳು ಮುಗಿದ ಬಳಿಕ ಪ್ರದರ್ಶನದ ಆಧಾರದ ಮೇಲೆ ಯಾವ ತಂಡಗಳು ಮುಂದಿನ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಹಂತವನ್ನು ಪ್ರವೇಶಿಸಬಹುದು ಎಂಬ ಲೆಕ್ಕಾಚಾರಗಳು ಕೂಡ ಆರಂಭವಾಗಿವೆ. ಇನ್ನು ಈ ಬಾರಿಯ ಟೂರ್ನಿಯ ಕುರಿತಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಸೆಮಿಫೈನಲ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಳ್ಳಲಿರುವ 4 ತಂಡಗಳನ್ನು ಹೆಸರಿಸಿದ್ದು ಈ ಕೆಳಕಂಡಂತೆ ಕಾರಣಗಳನ್ನು ನೀಡಿದ್ದಾರೆ.

"ಈ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ"

"ಸೂಪರ್ 12 ಹಂತದ ಗ್ರೂಪ್ 2ನಿಂದ ಸೆಮಿಫೈನಲ್ ಪ್ರವೇಶಿಸಬಹುದಾದ ತಂಡಗಳೆಂದರೆ ಭಾರತ ಮತ್ತು ಪಾಕಿಸ್ತಾನ. ಆದರೆ ಈ ತಂಡಗಳಿಗೆ ದೊಡ್ಡ ಸಮಸ್ಯೆಯಾಗಿ ನ್ಯೂಜಿಲೆಂಡ್ ಕಾಡಲಿದೆ. ಇನ್ನು ಗ್ರೂಪ್‌ 1 ವಿಚಾರಕ್ಕೆ ಬಂದರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಯಾವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂಬುದನ್ನು ಊಹಿಸುವುದು ತೀರಾ ಕಷ್ಟ. ಆದರೆ ನನ್ನ ಪ್ರಕಾರ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ" ಎಂದು ಇಯಾನ್ ಚಾಪೆಲ್ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾ ಹೆಸರನ್ನು ಕೈಬಿಟ್ಟ ಇಯಾನ್ ಚಾಪೆಲ್!

ಆಸ್ಟ್ರೇಲಿಯಾ ಹೆಸರನ್ನು ಕೈಬಿಟ್ಟ ಇಯಾನ್ ಚಾಪೆಲ್!

ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯ ಪ್ರಮುಖ ತಂಡಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಆದರೆ ಈ ತಂಡದ ಕುರಿತಾಗಿ ತಮ್ಮ ತಂಡದ ಮಾಜಿ ಆಟಗಾರರೇ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ. ಈ ಕುರಿತಾಗಿ ಮಾತನಾಡಿರುವ ಹಲವಾರು ಮಾಜಿ ಆಸ್ಟ್ರೇಲಿಯಾ ಕ್ರಿಕೆಟಿಗರಲ್ಲಿ ಯಾರೊಬ್ಬರೂ ಸಹ ಆಸ್ಟ್ರೇಲಿಯಾ ಟ್ರೋಫಿ ಗೆಲ್ಲಲಿರುವ ತಂಡ ಎಂದು ಹೇಳಿಕೆ ನೀಡುವ ಪ್ರಯತ್ನವನ್ನು ಮಾಡಿಲ್ಲ. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರಾದ ಇಯಾನ್ ಚಾಪೆಲ್ ಕೂಡ ಇದೇ ರೀತಿಯಲ್ಲಿ ಮುಂದುವರಿದಿದ್ದು ಸೆಮಿಫೈನಲ್ ಹಂತ ಪ್ರವೇಶಿಸಬಹುದಾದ ತಂಡಗಳ ಪಟ್ಟಿಯಿಂದ ಆಸ್ಟ್ರೇಲಿಯಾ ತಂಡವನ್ನು ಕೈಬಿಟ್ಟಿದ್ದಾರೆ.

ಯುಎಇ ಪಿಚ್ ಈ 2 ತಂಡಗಳ ಪಾಲಿಗೆ ಪ್ಲಸ್ ಪಾಯಿಂಟ್

ಯುಎಇ ಪಿಚ್ ಈ 2 ತಂಡಗಳ ಪಾಲಿಗೆ ಪ್ಲಸ್ ಪಾಯಿಂಟ್

ಇನ್ನೂ ಮುಂದುವರಿದು ಮಾತನಾಡಿರುವ ಇಯಾನ್ ಚಾಪೆಲ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಯುಎಇಯಲ್ಲಿ ನಡೆಯುತ್ತಿರುವ ಕಾರಣ ಪಾಕಿಸ್ತಾನದ ಆಟಗಾರರಿಗೆ ದೊಡ್ಡ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ತಂಡದ ಬಹುತೇಕ ಪಂದ್ಯಗಳು ಈ ದೇಶದ ಕ್ರೀಡಾಂಗಣಗಳಲ್ಲಿಯೇ ನಡೆದಿರುವ ಕಾರಣ ಪಾಕಿಸ್ತಾನದ ಆಟಗಾರರಿಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ತಮ್ಮ ತವರು ನೆಲದಲ್ಲಿಯೇ ಆಡಿದ ಅನುಭವವಾಗಲಿದೆ ಎಂದಿದ್ದಾರೆ. ಇನ್ನು ಇತ್ತೀಚಿನ 2 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳು ಇದೇ ನೆಲದಲ್ಲಿ ನಡೆದಿರುವ ಕಾರಣ ಈ ಟೂರ್ನಿಗಳಲ್ಲಿ ಭಾಗವಹಿಸಿದ ಆಟಗಾರರಿಗೂ ಸಹಕಾರಿಯಾಗಲಿದೆ ಎಂದು ಇಯಾನ್ ಚಾಪೆಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, October 25, 2021, 17:41 [IST]
Other articles published on Oct 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X