ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಟೀಂ ಇಂಡಿಯಾ ಫಾರ್ಮ್ ಬಗ್ಗೆ ಅಚ್ಚರಿ ಹೇಳಿಕೆ ಇಂಜಮಾಮ್-ಉಲ್-ಹಕ್

T20 World Cup 2022: Former Pakistan Captain Inzamam-ul-Haq Praises Team Indias Form

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ರನ್ ಗಳಿಸುವುದು ಟೀಂ ಇಂಡಿಯಾಕ್ಕೆ ಶುಭ ಸಂಕೇತ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ. ಭಾರತ ತಂಡ ತಮ್ಮ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಪರ್ತ್‌ನಲ್ಲಿ ಭಾನುವಾರ, ಅಕ್ಟೋಬರ್ 30ರಂದು ನಡೆಯುವ ನಿರ್ಣಾಯಕ ಸೂಪರ್-12 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಲು ಸಜ್ಜಾಗಿದೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್, ಸದ್ಯ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಫಾರ್ಮ್‌ಗೆ ಬಂದಿದ್ದಾರೆ ಮತ್ತು ರನ್ ಗಳಿಸುತ್ತಿದ್ದಾರೆ, ಇದು ಭಾರತಕ್ಕೆ ಉತ್ತಮ ಸಂಕೇತವಾಗಿದೆ ಎಂದರು.

ಟಿ20 ವಿಶ್ವಕಪ್ 2022: ಈತನ ಫಾರ್ಮ್ ಭಾರತಕ್ಕೆ ಕಳವಳಕಾರಿಯಾಗಿದೆ; ಸುನಿಲ್ ಗವಾಸ್ಕರ್ಟಿ20 ವಿಶ್ವಕಪ್ 2022: ಈತನ ಫಾರ್ಮ್ ಭಾರತಕ್ಕೆ ಕಳವಳಕಾರಿಯಾಗಿದೆ; ಸುನಿಲ್ ಗವಾಸ್ಕರ್

"ಸೂರ್ಯಕುಮಾರ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ವಿರಾಟ್ ಕೊಹ್ಲಿ ಅವರು ಫಾರ್ಮ್‌ನಲ್ಲಿದ್ದರೆ ಪಂದ್ಯಗಳನ್ನು ಗೆಲ್ಲಿಸಿಕೊಡುವ ಆಟಗಾರ. ಇಂತಹ ವಿಷಯಗಳು ಕ್ರಿಕೆಟ್‌ನಲ್ಲಿ ಮುಖ್ಯವಾಗಿದ್ದು, ನೀವು ಪ್ರದರ್ಶನ ನೀಡುತ್ತಿರುವಾಗ ಮತ್ತು ತಂಡವು ಗೆಲ್ಲುತ್ತಿರುವಾಗ, ಅದು ಉತ್ತಮವಾಗಿ ನಡೆಯುತ್ತಿದೆ ಎಂದರ್ಥ. ವಿರಾಟ್ ಕೊಹ್ಲಿಯ ಫಾರ್ಮ್ ಚೆನ್ನಾಗಿ ಕಾಣುತ್ತಿದೆ. ಅವರು ಉತ್ತಮ ಬ್ಯಾಟಿಂಗ್ ಮೂಲಕ ಪಂದ್ಯಗಳನ್ನು ಗೆಲ್ಲಿಸುತ್ತಿದ್ದಾರೆ," ಎಂದು ಹೇಳಿದರು.

ಭಾರತ ತಂಡಕ್ಕೆ ಶುಭ ಸೂಚನೆಗಳಾಗಿವೆ

ಭಾರತ ತಂಡಕ್ಕೆ ಶುಭ ಸೂಚನೆಗಳಾಗಿವೆ

"ಹೀಗಾಗಿ ಭಾರತ ತಂಡಕ್ಕೆ ಇವು ಶುಭ ಸೂಚನೆಗಳಾಗಿವೆ. ರೋಹಿತ್ ಶರ್ಮಾ ಕೂಡ ಅರ್ಧಶತಕ ಗಳಿಸಿದ್ದು, ಭಾರತದ ಅಗ್ರ ಕ್ರಮಾಂಕ ಗಟ್ಟಿಯಾಗಿ ಕಾಣುತ್ತಿದೆ. ಎಲ್ಲಾ ತಂಡಗಳಿಗೆ ಹೋಲಿಸಿದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕವು ಸ್ಥಿರವಾಗಿದೆ. ಹಾರ್ದಿಕ್ ಪಾಂಡ್ಯ ಕೂಡ ನಿರ್ಣಾಯಕ ರನ್ ಗಳಿಸಿದರು," ಎಂದು ಇಂಜಮಾಮ್-ಉಲ್-ಹಕ್ ತಿಳಿಸಿದರು.

ಅಮೋಘ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಪಾಕಿಸ್ತಾನದ ವಿರುದ್ಧ 82 ಮತ್ತು ನೆದರ್‌ಲ್ಯಾಂಡ್ಸ್ ವಿರುದ್ಧ 62 ರನ್ ಗಳಿಸಿದ್ದು, ಎರಡೂ ಸಂದರ್ಭಗಳಲ್ಲಿ ಅಜೇಯರಾಗಿ ಉಳಿದಿರುವುದು ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ದೊಡ್ಡ ಅನುಕೂಲವಾಗಿದೆ. ನಾಯಕ ರೋಹಿತ್ ಶರ್ಮಾ ಕೂಡ ನೆದರ್ಲ್ಯಾಂಡ್ಸ್ ವಿರುದ್ಧ ಅರ್ಧಶತಕ ಬಾರಿಸಿದರು ಮತ್ತು ವಿಶ್ವಕಪ್‌ನ ಕೊನೆಯ ಹಂತಗಳಲ್ಲಿ ತಮ್ಮ ಫಾರ್ಮ್ ಅನ್ನು ಮುಂದುವರೆಸಲು ಎದುರು ನೋಡುತ್ತಿದ್ದಾರೆ.

ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ

ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ

ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ನಂತರ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ನೆದರ್ಲ್ಯಾಂಡ್ಸ್ ತಂಡವನ್ನು 56 ರನ್‌ಗಳಿಂದ ಸೋಲಿಸಿತು. ತನ್ನ ಎರಡೂ ಪಂದ್ಯಗಳನ್ನು ಗೆದ್ದ ನಂತರ, ಭಾರತವು ತನ್ನ ಸೂಪರ್ 12 ಗುಂಪಿನಲ್ಲಿ ನಾಲ್ಕು ಅಂಕಗಳು ಮತ್ತು +1.425ರ ನೆಟ್ ರನ್‌ರೇಟ್‌ನೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತದ ಮುಂದಿನ ಪಂದ್ಯವು ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ, ಅಕ್ಟೋಬರ್ 30ರಂದು ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸೂಪರ್ 12ರ ಮುಂದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾರ ತಂಡವು ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಮತ್ತು ಕ್ರೇಗ್ ಎರ್ವಿನ್ ನಾಯಕತ್ವದ ಜಿಂಬಾಬ್ವೆಯನ್ನು ಎದುರಿಸಲಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ರಿಷಭ್ ಪಂತ್, ಯುಜ್ವೇಂದ್ರ ಚಾಹಲ್, ದೀಪಕ್ ಹೂಡಾ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ಹೆನ್ರಿಚ್ ಕ್ಲಾಸೆನ್, ತಬ್ರೈಜ್ ಶಮ್ಸಿ, ರೆಕ್ಸ್ ಜಾನ್ಸೆನ್.

Story first published: Saturday, October 29, 2022, 12:48 [IST]
Other articles published on Oct 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X