ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs PAK: ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸಂಭಾವ್ಯ ಆಡುವ 11ರ ಬಳಗ ಹೆಸರಿಸಿದ ಗಂಭೀರ್!

T20 World Cup 2022: Gautam Gambhir Names Indias Prediction 11 To Play Against Pakistan

2022ರ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳನ್ನು ಮುಗಿಸಿರುವ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಪಾಕಿಸ್ತಾನದ ವಿರುದ್ಧದ ಹೈ-ವೋಲ್ಟೇಜ್ ಸೆಣಸಾಟಕ್ಕೆ ಸಿದ್ಧವಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೊದಲ ಪಂದ್ಯ ಭಾನುವಾರ (ಅಕ್ಟೋಬರ್ 23) ಮೆಲ್ಬೋರ್ನ್‌ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.

2023ರ ವಿಶ್ವಕಪ್‌ನಿಂದ ಹಿಂದೆ ಸರಿಯುವ ಪಾಕ್ ಬೆದರಿಕೆಗೆ ಕೇಂದ್ರ ಕ್ರೀಡಾ ಸಚಿವರ ತೀಕ್ಷ್ಣ ಪ್ರತಿಕ್ರಿಯೆ2023ರ ವಿಶ್ವಕಪ್‌ನಿಂದ ಹಿಂದೆ ಸರಿಯುವ ಪಾಕ್ ಬೆದರಿಕೆಗೆ ಕೇಂದ್ರ ಕ್ರೀಡಾ ಸಚಿವರ ತೀಕ್ಷ್ಣ ಪ್ರತಿಕ್ರಿಯೆ

ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿಗೆ ಈ ಬಾರಿ ಭಾರತ ತಂಡ ಪ್ರತೀಕಾರ ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

ಆಡುವ 11ರ ಬಳಗವನ್ನು ಆಯ್ಕೆ ಮಾಡಿದ ಗೌತಮ್ ಗಂಭೀರ್

ಆಡುವ 11ರ ಬಳಗವನ್ನು ಆಯ್ಕೆ ಮಾಡಿದ ಗೌತಮ್ ಗಂಭೀರ್

ಝೀಮ್ಡಿಯಾ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಮುಂಬರುವ 2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ತಮ್ಮ ಆಡುವ 11ರ ಬಳಗವನ್ನು ಆಯ್ಕೆ ಮಾಡಿದರು ಮತ್ತು ಪಾಕಿಸ್ತಾನದ ವಿರುದ್ಧ ಗೆಲ್ಲುವುದು ಮಾತ್ರವಲ್ಲ, ಅಂತಿಮ ಗುರಿ ವಿಶ್ವಕಪ್ ಗೆಲ್ಲುವುದು ಎಂದು ಹೇಳಿದರು.

ಒಂದು ಪಂದ್ಯದಲ್ಲಿ ರಿಷಭ್ ಪಂತ್ 10-12 ಎಸೆತಗಳನ್ನು ಆಡುವುದಿಲ್ಲವಾದ್ದರಿಂದ ಅವರು ದಿನೇಶ್ ಕಾರ್ತಿಕ್ ಬದಲಾಗಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡುವುದಾಗಿ ಗೌತಮ್ ಗಂಭೀರ್ ತಿಳಿಸಿದ್ದಾರೆ. ಆದರೆ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಮಾಡಬಹುದು ಮತ್ತು ಭಾರತವು ಕೆಲವು ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡರೆ ಬ್ಯಾಟಿಗ್ ಆರ್ಡರ್ ಅನ್ನು ಬಳಸಿಕೊಳ್ಳಬಹುದು ಎಂದರು.

4 ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿದ ಗಂಭೀರ್

4 ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿದ ಗಂಭೀರ್

ಮಾಜಿ ಎಡಗೈ ಬ್ಯಾಟರ್ ಗೌತಮ್ ಗಂಭೀರ್ ಅವರು ಅನುಭವಿ ಬೌಲರ್ ಮೊಹಮ್ಮದ್ ಶಮಿ, ಅರ್ಶ್‌ದೀಪ್ ಸಿಂಗ್ ಮತ್ತು ಹರ್ಷಲ್ ಪಟೇಲ್ ಅವರೊಂದಿಗೆ ಹಾರ್ದಿಕ್ ಪಾಂಡ್ಯರನ್ನು 4ನೇ ಬೌಲರ್‌ ಆಗಿ 4 ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿದರು. ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಮತ್ತು ಯುಜ್ವೇಂದ್ರ ಚಾಹಲ್ ಅಥವಾ ರವಿಚಂದ್ರನ್ ಅಶ್ವಿನ್ ಅವರ ವಯಸ್ಸಿಗೆ ತಕ್ಕಂತೆ ಆಡಬೇಕು ಎಂದು ಹೇಳಿದರು.

ಬ್ಯಾಟಿಂಗ್ ಲೈನ್‌ಅಪ್ ಕುರಿತು ಮಾತನಾಡಿದ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಓಪನಿಂಗ್ ನಂತರ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಕ್ರಮಾಂಕ ಭಾರತ ತಂಡಕ್ಕೆ ಸಾಕಷ್ಟು ಸೆಟ್ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪಾಕಿಸ್ತಾನ ವಿರುದ್ಧ ಗೌತಮ್ ಗಂಭೀರ್ ಆಯ್ಕೆಯ ಭಾರತದ ಆಡುವ 11ರ ಬಳಗ

ಪಾಕಿಸ್ತಾನ ವಿರುದ್ಧ ಗೌತಮ್ ಗಂಭೀರ್ ಆಯ್ಕೆಯ ಭಾರತದ ಆಡುವ 11ರ ಬಳಗ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಹರ್ಷಲ್ ಪಟೇಲ್.

Story first published: Thursday, October 20, 2022, 20:32 [IST]
Other articles published on Oct 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X