ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಈ ಭಾರತೀಯ 'ಪ್ಲೇಯರ್ ಆಫ್ ದಿ ಟೂರ್ನಾಮೆಂಟ್'ಗೆ ಅರ್ಹ; ಜೋಸ್ ಬಟ್ಲರ್

T20 World Cup 2022: Suryakumar Yadav Deserves Player of the Tournament Award Says Jos Buttler

ಭಾನುವಾರ, ನವೆಂಬರ್ 13ರಂದು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಮೆಲ್ಬೋರ್ನ್‌ ಮೈದಾನದಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ 10 ವಿಕೆಟ್‌ಗಳಿಂದ ಸೋಲಿಸಿತು.

ವಿಜಯ್ ಹಜಾರೆ ಟ್ರೋಫಿ 2022: ರುತುರಾಜ್ ಶತಕ; ರೈಲ್ವೇಸ್ ವಿರುದ್ಧ ಮಹಾರಾಷ್ಟ್ರಕ್ಕೆ ಭರ್ಜರಿ ಜಯವಿಜಯ್ ಹಜಾರೆ ಟ್ರೋಫಿ 2022: ರುತುರಾಜ್ ಶತಕ; ರೈಲ್ವೇಸ್ ವಿರುದ್ಧ ಮಹಾರಾಷ್ಟ್ರಕ್ಕೆ ಭರ್ಜರಿ ಜಯ

ಇದೀಗ 2022ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು 'ಪ್ಲೇಯರ್ ಆಫ್ ದಿ ಟೂರ್ನಾಮೆಂಟ್' ಆಗಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಆಯ್ಕೆ ಮಾಡಿದ್ದಾರೆ.

ಸೂರ್ಯಕುಮಾರ್ ಯಾದವ್ ಇಡೀ ಟೂರ್ನಿಯಲ್ಲಿ ಒತ್ತಡದ ಪರಿಸ್ಥಿತಿಯಲ್ಲಿಯೂ ಸ್ವತಂತ್ರವಾಗಿ ಆಡಿದ್ದಾರೆ ಮತ್ತು ಭಾರತ ತಂಡದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ನಂಬಲಾಗದಷ್ಟು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಲ್ಕು ಅರ್ಧಶತಕಗಳೊಂದಿಗೆ 296 ರನ್

ವಿರಾಟ್ ಕೊಹ್ಲಿ ನಾಲ್ಕು ಅರ್ಧಶತಕಗಳೊಂದಿಗೆ 296 ರನ್

ಟಿ20 ವಿಶ್ವಕಪ್ ಫೈನಲ್ ತಲುಪಿದ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮತ್ತು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತಮ್ಮ 'ಪ್ಲೇಯರ್ ಆಫ್ ದಿ ಟೂರ್ನಾಮೆಂಟ್' ಅನ್ನು ಆಯ್ಕೆ ಮಾಡಿದ್ದಾರೆ.

ಐಸಿಸಿ ಶುಕ್ರವಾರದಂದು 'ಟೂರ್ನಿ ಶ್ರೇಷ್ಠ ಪ್ರಶಸ್ತಿ' ಪಡೆಯುವ ಸ್ಪರ್ಧೆಯಲ್ಲಿ ಒಂಬತ್ತು ಆಟಗಾರರ ಪಟ್ಟಿಯನ್ನು ಅನಾವರಣಗೊಳಿಸಿದೆ, ಇದರಲ್ಲಿ ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಾಲ್ಕು ಅರ್ಧಶತಕಗಳೊಂದಿಗೆ 296 ರನ್ ಗಳಿಸಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

ಸೂರ್ಯಕುಮಾರ್ ನನ್ನ ಪಾಲಿಗೆ ಅತ್ಯುತ್ತವಾಗಿ ಆಡಿದ ಆಟಗಾರ

ಸೂರ್ಯಕುಮಾರ್ ನನ್ನ ಪಾಲಿಗೆ ಅತ್ಯುತ್ತವಾಗಿ ಆಡಿದ ಆಟಗಾರ

ಸೂರ್ಯಕುಮಾರ್ ಯಾದವ್, ಪಾಕಿಸ್ತಾನದ ಆಲ್‌ರೌಂಡರ್ ಶಾದಾಬ್ ಖಾನ್, ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ, ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರ್ರಾನ್, ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್, ನೆದರ್ಲ್ಯಾಂಡ್ಸ್ ತಂಡದ ಓ'ಡೌಡ್, ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಜಾ ಮತ್ತು ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಕೂಡ ಈ ಪಟ್ಟಿಯಲ್ಲಿದ್ದಾರೆ.

"ಸೂರ್ಯಕುಮಾರ್ ಯಾದವ್ "ಪ್ಲೇಯರ್ ಆಫ್ ದಿ ಟೂರ್ನಾಮೆಂಟ್' ಎಂದು ನಾನು ಭಾವಿಸುತ್ತೇನೆ. ಸೂರ್ಯಕುಮಾರ್ ನನ್ನ ಪಾಲಿಗೆ ಅತ್ಯುತ್ತವಾಗಿ ಆಡಿದ ಆಟಗಾರ. ಸ್ಟಾರ್ ಬ್ಯಾಟ್ಸ್‌ಮನ್‌ಗಳಿಂದ ಕೂಡಿದ ಭಾರತ ತಂಡದಲ್ಲಿ ಗಮನಸೆಳೆಯುವ ಪ್ರದರ್ಶನ ನೀಡಿದ್ದಾರೆ," ಎಂದು ಜೋಸ್ ಬಟ್ಲರ್ ಹೇಳಿದ್ದನ್ನು ಐಸಿಸಿ ಉಲ್ಲೇಖಿಸಿದೆ.

ಸೂರ್ಯಕುಮಾರ್ ಯಾದವ್ 239 ರನ್‌ ಗಳಿಸಿದ್ದಾರೆ

ಸೂರ್ಯಕುಮಾರ್ ಯಾದವ್ 239 ರನ್‌ ಗಳಿಸಿದ್ದಾರೆ

ಸೂರ್ಯಕುಮಾರ್ ಯಾದವ್ 189.68ರ ಸ್ಟ್ರೈಕ್ ರೇಟ್‌ನೊಂದಿಗೆ 239 ರನ್‌ ಗಳಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಗಳಿಸಿದ್ದಾರೆ.

ಜೋಸ್ ಬಟ್ಲರ್ ತಮ್ಮ ತಂಡದ ಸಹ ಆಟಗಾರ, ಆಲ್‌ರೌಂಡರ್ ಸ್ಯಾಮ್ ಕರ್ರಾನ್ ಮತ್ತು ಬ್ಯಾಟರ್ ಅಲೆಕ್ಸ್ ಹೇಲ್ಸ್ ಅವರಿಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿ ಗೆಲ್ಲುವ ಅವಕಾಶವಿದೆ ಎಂದು ಹೇಳಿದರು.

"ಖಂಡಿತವಾಗಿಯೂ, ಆ ಪಟ್ಟಿಯಲ್ಲಿ ನಮ್ಮ ಸ್ಯಾಮ್ ಕರ್ರಾನ್ ಮತ್ತು ಅಲೆಕ್ಸ್ ಹೇಲ್ಸ್ ಇಬ್ಬರು ಆಟಗಾರರೂ ಇದ್ದಾರೆ. ಅವರು ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅವರು ನನ್ನ ಪ್ರಕಾರ 'ಪ್ಲೇಯರ್ ಆಫ್ ದಿ ಟೂರ್ನಾಮೆಂಟ್' ಆಗುವ ಅವಕಾಶವಿದೆ," ಎಂದು ಜೋಸ್ ಬಟ್ಲರ್ ತಿಳಿಸಿದರು.

ಶಾದಾಬ್ ಖಾನ್ ಪಾಕಿಸ್ತಾನ ಪರವಾಗಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ

ಶಾದಾಬ್ ಖಾನ್ ಪಾಕಿಸ್ತಾನ ಪರವಾಗಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ

ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ 10 ವಿಕೆಟ್‌ಗಳೊಂದಿಗೆ ಸ್ಯಾಮ್ ಕರ್ರಾನ್ ಇಂಗ್ಲೆಂಡ್‌ ಪರ ಹೆಚ್ಚಿನ ವಿಕೆಟ್ ಟೇಕರ್ ಆಗಿದ್ದಾರೆ. ಅಲೆಕ್ಸ್ ಹೇಲ್ಸ್ ಐದು ಇನ್ನಿಂಗ್ಸ್‌ಗಳಲ್ಲಿ 52.75 ಸರಾಸರಿಯಲ್ಲಿ ಎರಡು ಅರ್ಧ ಶತಕಗಳೊಂದಿಗೆ 211 ರನ್ ಗಳಿಸಿದ್ದಾರೆ. ಇನ್ನು ಜೋಸ್ ಬಟ್ಲರ್ ಐದು ಪಂದ್ಯಗಳಲ್ಲಿ 49.75 ಸರಾಸರಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 199 ರನ್ ದಾಖಲಿಸಿದ್ದಾರೆ.

ಮತ್ತೊಂದೆಡೆ, ಪಾಕಿಸ್ತಾನದ ನಾಯಕ ಬಾಬರ್ ಅಜಂ, ತಮ್ಮ ತಂಡದ ಆಲ್‌ರೌಂಡರ್ ಶಾದಾಬ್ ಖಾನ್ ಅವರನ್ನು 'ಪ್ಲೇಯರ್ ಆಫ್ ದಿ ಟೂರ್ನಾಮೆಂಟ್' ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಪಾಕಿಸ್ತಾನ ತಂಡವು ಫೈನಲ್‌ಗೆ ಏರುವಲ್ಲಿ ಶಾದಾಬ್ ಖಾನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪಂದ್ಯಾವಳಿಯಲ್ಲಿ ಪಾಕಿಸ್ತಾನ ಪರವಾಗಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 52 ರನ್‌ಗಳನ್ನು ಬಾರಿಸಿದ್ದಾರೆ.

Story first published: Saturday, November 12, 2022, 21:16 [IST]
Other articles published on Nov 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X