ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಆಟಗಾರರೇ ಯಾಕೆ?: ಆಸ್ಟ್ರೇಲಿಯಾ ತಂಡದ ಕಾಲೆಳೆದ ದಿನೇಶ್ ಕಾರ್ತಿಕ್

T20 world cup: Dinesh Karthik Funny post on Australia squad mentioned RCB

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ತಂಡಗಳು ಈ ಮಹತ್ವದ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರ ಬಳಗವನ್ನು ಘೋಷಣೆ ಮಾಡುತ್ತಿದೆ. ಇತ್ತ ಆಸ್ಟ್ರೇಲಿಯಾ ತಂಡ ತನ್ನ ಆಡುವ ಬಳಗವನ್ನು ಘೋಷಣೆ ಮಾಡಿದ ಬಳಿಕ ಇದೀಗ ಟಿ20 ವಿಶ್ವಕಪ್‌ನಲ್ಲಿ ಧರಿಸುವ ಹೊಸ ಜರ್ಸಿಯನ್ನು ಕೂಡ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಮಾಡಿರುವ ಟ್ವೀಟ್‌ವೊಂದು ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದೆ.

ಆಸ್ಟ್ರೇಲಿಯಾ ತಂಡದ ನೂತನ ಜರ್ಸಿ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ತಂಡದ ಆಟಗಾರರು ನೂತನ ಜರ್ಸಿಯನ್ನು ತೊಟ್ಟಿರುವ ಫೋಟೋ ಹಂಚಿಕೊಳ್ಳಲಾಗಿದೆ. ಈ ಫೋಟೋವನ್ನು ದಿನೇಶ್ ಕಾರ್ತಿಕ್ ರಿಟ್ವೀಟ್ ಮಾಡಿದ್ದು ಈ ಸಂದರ್ಭದಲ್ಲಿ ನೀಡಿರುವ ಕ್ಯಾಪ್ಶನ್ ಕುತೂಹಲ ಕೆರಳಿಸಿದೆ.

IND vs ENG T20: ಸ್ಮೃತಿ ಮಂಧಾನ ಅಬ್ಬರದ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಗೆಲುವುIND vs ENG T20: ಸ್ಮೃತಿ ಮಂಧಾನ ಅಬ್ಬರದ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಗೆಲುವು

ಆಸ್ಟ್ರೇಲಿಯಾ ತಂಡದ ನೂತನ ಜರ್ಸಿಯನ್ನು ಧರಿಸಿ ತಂಡದ ಆಟಗಾರರಾದ ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋಶ್ ಹೇಜಲ್‌ವುಡ್ ಫೋಸ್ ನೀಡಿದ್ದಾರೆ. ಆಸ್ಟ್ರೇಲಿಯಾ ತಂಡದ ಈ ಮೂವರು ಆಟಗಾರರು ಕೂಡ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿರುವ ಆಟಗಾರರು. ಹೀಗಾಗಿ ಇದನ್ನು ತಮಾಷೆಯಾಗಿ ಉಲ್ಲೇಖಿಸಿರುವ ದಿನೇಶ್ ಕಾರ್ತಿಕ್ ಆರ್‌ಸಿಬಿ ಬಿಟ್ಟು ಬೇರೆ ತಂಡದ ಆಟಗಾರರನ್ನು ಕೂಡ ಆಯ್ಕೆ ಮಾಡಬೇಕಾದ ಅಗತ್ಯವಿದೆ ಎಂದಿದ್ದಾರೆ. ದಿನೇಶ್ ಕಾರ್ತಿಕ್ ಅವರ ಈ ಟ್ವೀಟ್ ಅಭಿಮಾನಿಗಳಲ್ಲಿ ನಗುತರಿಸಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ವಿಶ್ವಕಪ್: ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಈ ಬಾರಿಯ ಟಿ20 ವಿಶ್ವಕಪ್‌ಅನ್ನು ತಾನೇ ಆಯೋಜಿಸುತ್ತಿದೆ. ಹೀಗಾಗಿ ತವರಿನಲ್ಲಿ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ ಆಸ್ಟ್ರೇಲಿಯಾ ಪಡೆ. ಆರೋನ್ ಫಿಂಚ್ ನೇತೃತ್ವದಲ್ಲಿ ಈ ಬಾರಿಯೂ ಆಸ್ಟ್ರೇಲಿಯಾ ತಂಡ ಕಣಕ್ಕಿಳಿಲು ಸಿದ್ಧವಾಗಿದೆ.

ವಿಶ್ವಕಪ್‌ಗೆ ಮುನ್ನ ಭಾರತ ಪ್ರವಾಸ: ಇನ್ನು ಆರೋನ್ ಫಿಂಚ್ ಪಡೆ ತವರಿನಲ್ಲಿ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯುವ ಮುನ್ನ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ವಿಶ್ವಕಪ್‌ಗೆ ಭಾರತದ ನೆಲದಲ್ಲಿ ಈ ಮೂಲಕ ಸಿದ್ಧತೆಯನ್ನು ಮಾಡಿಕೊಳ್ಳಲಿದೆ. ಸೆಪ್ಟೆಂಬರ್ 20ರಿಂದ ಈ ಸರಣಿ ಆರಂಭವಾಗಲಿದ್ದು ಮೊಹಾಲಿ, ನಾಗ್ಪುರ ಹಾಗೂ ಹೈದರಾಬಾದ್‌ನಲ್ಲಿ ಪಂದ್ಯಗಳು ಆಯೋಜನೆಯಾಗಲಿದೆ.

ವಿಶ್ವಕಪ್‌ನಲ್ಲಿ ಭಾಗವಹಿಸುವ ಆಸ್ಟ್ರೇಲಿಯಾ ಸ್ಕ್ವಾಡ್ ಹೀಗಿದೆ: ಆರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಆಶ್ಟನ್ ಅಗರ್, ಟಿಮ್ ಡೇವಿಡ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಕೇನ್ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ

Story first published: Thursday, September 15, 2022, 10:55 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X