ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಒಂದೇ ಒಂದು ಗೆಲುವು ಸಾಧಿಸದೆ ಒತ್ತಡದಲ್ಲಿರುವ ಪಾಕಿಸ್ತಾನ ಮತ್ತೊಂದು ಕದನಕ್ಕೆ ಸಿದ್ಧವಾಗಿದೆ. ಈ ಬಾರಿಯ ವಿಶ್ವಕಪ್‌ನಲ್ಲಿಯಾದರೂ ಭಾರತದ ವಿರುದ್ಧದ ಸೋಲಿನ ಸರಪಳಿಯನ್ನು ಪಾಕಿಸ್ತಾನ ತುಂಡರಿಸುತ್ತಾದೆಯೇ ಎಂಬುದು ಪಾಕಿಸ್ತಾನದ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ. ಇಂತಾ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಪಾಕ್ ಆಟಗಾರರಿಗೆ ಗೆಲುವಿಗೆ ಸುಲಭ ದಾರಿಯೊಂದನ್ನು ಹೇಳಿದ್ದಾರೆ.
'ಸ್ಪೋರ್ಟ್ಸ್ ಕೀಡಾ' ವೆಬ್‌ಸೈಟ್ ಜೊತೆಗೆ ಮಾತನಾಡಿದ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ತಮಾಷೆಯಾಗಿ ಪಾಕಿಸ್ತಾನ ತಂಡದ ಗೆಲುವಿಗೆ ಸಲಹೆಯನ್ನು ನೀಡಿದ್ದಾರೆ. ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ ಸುಲಭವಾಗಿ ಗೆಲ್ಲಬೇಕಿದ್ದರೆ ಭಾರತೀಯ ಆಟಗಾರರಿಗೆ ನಿದ್ದೆ ಮಾತ್ರೆ ಕೊಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ಮೂಲಕ ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವುದು ಅಸಾಧ್ಯ ಎಂಬುದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ ಪಾಕಿಸ್ತಾನದ ಈ ಮಾಜಿ ವೇಗಿ.
ಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿ
ಪಾಕ್ ಗೆಲುವಿಗೆ ಅಖ್ತರ್ ಮೂರು ಸಲಹೆ
ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಬೇಕಾದರೆ ಮೂರು ತಮಾಷೆಯ ದಾರಿಯನ್ನು ಶೋಯೆಬ್ ಅಖ್ತರ್ ಹೇಳಿದ್ದಾರೆ. "ಮೊದಲಿಗೆ ಭಾರತೀಯ ಆಟಗಾರರಿಗೆ ನಿದ್ದೆ ಮಾತ್ರೆ ನೀಡಬೇಕು. ಎರಡನೇಯದ್ದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಎರಡು ದಿನಗಳ ಕಾಲ ಬಳಕೆ ಮಾಡದಂತೆ ನೋಡಿಕೊಳ್ಳಬೇಕು ಹಾಗೂ ಮೆಂಟರ್ ಆಗಿರುವ ಎಂಎಸ್ ಧೋನಿ ಬ್ಯಾಟರ್ ಆಗಿ ಮೈದಾನಕ್ಕೆ ಇಳಿಯದಂತೆ ನೋಡಿಕೊಳ್ಳಬೇಕು" ಎಂದು ಶೋಯೆಬ್ ಅಖ್ತರ್ ಸಲಹೆಯನ್ನು ನೀಡಿದ್ದಾರೆ.
ಗಂಭೀರವಾಗಿ ಸಲಹೆ ನೀಡಿದ ಅಖ್ತರ್
ಇನ್ನು ತಮಾಷೆಯಾಗಿ ನಿಡಿದ ಈ ಮೂರು ಸಲಹೆಗಳ ನಂತರ ಶೋಯೆಬ್ ಅಖ್ತರ್ ಗಂಭೀರವಾಗಿ ಪಾಕಿಸ್ತಾನ ತಂಡ ಯಾವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂಬ ಸಲಹೆಯನ್ನು ಕೂಡ ನೀಡಿದ್ದಾರೆ. "ಪಾಕಿಸ್ತಾನ ತಂಡ ಉತ್ತಮವಾದ ಆರಂಭವನ್ನು ಪಡೆಯಬೇಕಿದೆ. ನಂತರ ಪಾಕಿಸ್ತಾನ ಡಾಟ್ ಬಾಲ್‌ಗಳನ್ನು ಕಡಿಮೆಗೊಳಿಸಬೇಕಿದೆ. ಮೊದಲ ಐದು ಆರು ಓವರ್‌ಗಳಲ್ಲಿ ಪ್ರತಿ ಎಸೆತಕ್ಕೊಂದರಂತೆ ರನ್ ಗಳಿಸಬೇಕು ಹಾಗೂ ಅದಾದ ಬಳಿಕ ಸ್ಟ್ರೈಕ್‌ರೇಟ್ ಹೆಚ್ಚಿಸುವತ್ತ ಚಿತ್ತ ನೆಡಬೇಕಿದೆ. ಇನ್ನು ಬೌಲಿಂಗ್ ವಿಚಾರವಾಗಿ ಉತ್ತಮವಾದ ರನ್‌ಗಳಿಸಿದ್ದರೆ ನೀವು ವಿಕೆಟ್ ಕಬಳಿಸುವ ಸಲುವಾಗಿ ಕಣಕ್ಕಿಳಿದಿದ್ದೀರಿ ಎಂಬುದನ್ನು ಅರಿತುಕೊಳ್ಳಿ" ಎಂದು ಶೋಯೆಬ್ ಅಖ್ತರ್ ಪಾಕಿಸ್ತಾನ ತಂಡಕ್ಕೆ ಸಲಹೆಯನ್ನು ನೀಡಿದ್ದಾರೆ.
ಆಸಿಫ್ ಅಲಿ ಪ್ರದರ್ಶನದ ಮೇಲೆ ಅಖ್ತರ್ ಭರವಸೆ
ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಕದನದಲ್ಲಿ ಪಾಕಿಸ್ತಾನದ ಓರ್ವ ಆಟಗಾರನ ಪ್ರದರ್ಶನ ಮೇಲೆ ನಿರೀಕ್ಷೆಯಿಡಬಹುದು ಎಂದಿದ್ದಾರೆ ಶೋಯೆಬ್ ಅಖ್ತರ್. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಸಿಫ್ ಅಲಿ ಪಾಕಿಸ್ತಾನದ ಪರವಾಗಿ ಟ್ರಂಫ್ ಕಾರ್ಡ್ ಆಗಬಲ್ಲ ಆಟಗಾರ ಎಂದು ಶೋಯೆಬ್ ಅಖ್ತರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಆಸಿಫ್ ಅಲಿ ಕೆಳ ಕ್ರಮಾಂಕದಲ್ಲಿ ರನ್‌ಗತಿಯನ್ನು ಅದ್ಭುತವಾಗಿ ಏರಿಸಲಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಈತನೇ ಟ್ರಂಪ್ ಕಾರ್ಡ್ ಎನಿಸಲಿದ್ದಾರೆ" ಎಂದು ಶೋಯೆಬ್ ಅಖ್ತರ್ ಭವಿಷ್ಯ ನುಡಿದಿದ್ದಾರೆ.
ಭಾರತ ಸ್ಕ್ವಾಡ್ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ
ಮೀಸಲು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್ ; ಮಾರ್ಗದರ್ಶಕ: ಎಂಎಸ್ ಧೋನಿ
ಪಾಕಿಸ್ತಾನ ಸ್ಕ್ವಾಡ್ ಹೀಗಿದೆ : ಬಾಬರ್ ಅಜಂ (ನಾಯಕ), ಶಾದಬ್ ಖಾನ್, ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ,
ಪಾಕಿಸ್ತಾನ ಗೆದ್ದ ನಂತರ ಬಾಬರ್ ಅವರ ತಂದೆಯ ವಿಡಿಯೋ ವೈರಲ್ | Oneindia Kannada
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed