ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಬಾಬರ್ ಅಜಮ್ ಜೊತೆ ರೋಹಿತ್ ಶರ್ಮಾ ಮಾತನಾಡಿದ್ದೇನು ಗೊತ್ತಾ?

T20 World Cup: Know The What Rohit Sharma And Babar Azam Discussed In Their Meeting

ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಗಾಗಿ ಆಸ್ಟ್ರೇಲಿಯಾ ಸಜ್ಜಾಗಿದೆ. ಸೆಪ್ಟೆಂಬರ್ 16ರಿಂದ ಪ್ರತಿಷ್ಟಿತ ಟೂರ್ನಿಗೆ ಚಾಲನೆ ಸಿಗಲಿದೆ. ನವೆಂಬರ್ 13ರಂದು ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ನಡೆಯಲಿದೆ. 16 ತಂಡಗಳು ಪ್ರತಿಷ್ಟಿತ ಕಪ್‌ಗಾಗಿ ಟೂರ್ನಿಯಲ್ಲಿ ಸೆಣಸಲಿವೆ.

ಶ್ರೀಲಂಕಾ ಪ್ರೀಮಿಯರ್ ಲೀಗ್: 3ನೇ ಆವೃತ್ತಿಯ ದಿನಾಂಕ ಘೋಷಿಸಿದ ಶ್ರೀಲಂಕಾ ಕ್ರಿಕೆಟ್ಶ್ರೀಲಂಕಾ ಪ್ರೀಮಿಯರ್ ಲೀಗ್: 3ನೇ ಆವೃತ್ತಿಯ ದಿನಾಂಕ ಘೋಷಿಸಿದ ಶ್ರೀಲಂಕಾ ಕ್ರಿಕೆಟ್

ಟೀಂ ಇಂಡಿಯಾ ಕೂಡ ಟಿ20 ವಿಶ್ವಕಪ್‌ಗಾಗಿ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ. ಭಾರತವು ಅಕ್ಟೋಬರ್ 23 ರ ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಉಭಯ ತಂಡಗಳಿಗೆ ಈ ಬಾರಿ ವಿಶ್ವಕಪ್‌ನಲ್ಲಿ ಇದು ಮೊದಲನೇ ಪಂದ್ಯವಾಗಿರಲಿದೆ.

ಕಳೆದ ಬಾರಿ ಯುಎಇಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಹವಣಿಸುತ್ತಿದೆ. ಇತ್ತೀಚೆಗೆ ನಡೆದ ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಿತ್ತು. ಬಾಬರ್ ಅಜಂ ನೇತೃತ್ವದ ತಂಡ ರೋಹಿತ್ ಶರ್ಮಾ ನೇತೃತ್ವದ ತಂಡದ ವಿರುದ್ಧ ಸಮಬಲ ಸಾಧಿಸಿದೆ.

ವಿಶ್ವಕಪ್‌ಗೆ ಮುನ್ನ ಭೇಟಿಯಾದ ನಾಯಕರು

ವಿಶ್ವಕಪ್‌ಗೆ ಮುನ್ನ ಭೇಟಿಯಾದ ನಾಯಕರು

ಟಿ 20 ವಿಶ್ವಕಪ್ ಆರಂಭಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಭಾರತೀಯ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಟಿ 20 ವಿಶ್ವಕಪ್‌ನಲ್ಲಿ ಪರಸ್ಪರ ಮುಂಬರುವ ಪಂದ್ಯದ ಕುರಿತು ಚರ್ಚಿಸಿದರು.

ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಕೇಳಿದಾಗ, ರೋಹಿತ್ ಹಿರಿಯರಾಗಿದ್ದು, ಅವರ ಕೌಶಲ್ಯ ಮತ್ತು ಅನುಭವದಿಂದ ಸಾಧ್ಯವಾದಷ್ಟು ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೇಳಿದರು.

ಮುಂದಿನ ಐಪಿಎಲ್‌ನಲ್ಲಿ ಮಂಕಡಿಂಗ್ ಮೂಲಕ ಯಾರನ್ನಾದರೂ ಔಟ್ ಮಾಡುತ್ತೇನೆ ಎಂದ ರಾಜಸ್ಥಾನ ರಾಯಲ್ಸ್ ಆಟಗಾರ

ಬಾಬರ್ ಅಜಂ ಜೊತೆಗಿನ ಸಂಭಾಷಣೆ ಬಹಿರಂಗ

ಬಾಬರ್ ಅಜಂ ಜೊತೆಗಿನ ಸಂಭಾಷಣೆ ಬಹಿರಂಗ

ರೋಹಿತ್ ಶರ್ಮಾ, ಬಾಬರ್ ಅಜಮ್ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಬಹಿರಂಗಪಡಿಸಿದರು "ನಾವೆಲ್ಲರೂ ನಮ್ಮ ಕುಟುಂಬಗಳು ಮತ್ತು ಎಲ್ಲರ ಬಗ್ಗೆ ಮಾತನಾಡುತ್ತೇವೆ. ನಾವು ಜೀವನದ ಬಗ್ಗೆ ಮಾತನಾಡುತ್ತೇವೆ, ನೀವು ಯಾವ ಹೊಸ ಕಾರು ಖರೀದಿಸಿದ್ದೀರಿ ಎನ್ನುವುದರ ಬಗ್ಗೆ ಕೂಡ ಮಾತನಾಡಿದೆವು" ಎಂದು ಅವರು ಹೇಳಿದರು.

ಪಾಕಿಸ್ತಾನ ಮತ್ತು ಭಾರತ ತಂಡದ ನಾಯಕರು ಪರಸ್ಪರ ಮುಖಾಮುಖಿಯಾದಾಗ ಸ್ನೇಹಿತರಂತೆ ಮಾತನಾಡಿದ್ದಾರೆ. ಇಬ್ಬರೂ ಕೂಡ ಕ್ರೀಡಾಸ್ಪೂರ್ತಿಯನ್ನು ಮೆರೆದಿದ್ದಾರೆ.

ನಾವು ಅವರನ್ನು ಏಷ್ಯಾಕಪ್‌ನಲ್ಲಿ ಭೇಟಿಯಾಗಿದ್ದೇವೆ ಮತ್ತು ಈಗ ವಿಶ್ವಕಪ್‌ಗೆ ಮುನ್ನ ಭೇಟಿಯಾಗಿದ್ದೇವೆ, ನಾವು ಪಾಕಿಸ್ತಾನದ ಆಟಗಾರರ ವಿರುದ್ಧ ಭೇಟಿಯಾದಾಗಲೆಲ್ಲಾ ನಾವು ಮನೆಗೆ ಹಿಂದಿರುಗಿದ ವಿಷಯಗಳು, ಕುಟುಂಬಗಳು ಹೇಗಿವೆ ಎಂಬುದರ ಕುರಿತು ಮಾತನಾಡುತ್ತೇವೆ ಎಂದು ರೋಹಿತ್ ಶರ್ಮಾ ಹೇಳಿದರು.

ನಾವು ಒತ್ತಡಕ್ಕೆ ಒಳಗಾಗಿಲ್ಲ

ನಾವು ಒತ್ತಡಕ್ಕೆ ಒಳಗಾಗಿಲ್ಲ

ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ನೀವು ಒತ್ತಡದಲ್ಲಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ರೋಹಿತ್ ಶರ್ಮಾ, ಈ ರೀತಿ ಒತ್ತಡಕ್ಕೆ ಒಳಗಾಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ನಾವು ಅರ್ಥಮಾಡಿಕೊಂಡಿದ್ದೇವೆ, ಆದರೆ ಪ್ರತಿ ಬಾರಿಯೂ ಅದರ ಬಗ್ಗೆ ಮಾತನಾಡುವುದರಲ್ಲಿ ಮತ್ತು ನಿಮ್ಮೊಳಗೆ ಒತ್ತಡವನ್ನು ಸೃಷ್ಟಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯಕ್ಕೆ ದಿನಗಣನೆ

ಭಾರತ-ಪಾಕಿಸ್ತಾನ ಪಂದ್ಯಕ್ಕೆ ದಿನಗಣನೆ

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಈಗಾಗಲೇ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಟೀಂ ಇಂಡಿಯಾವನ್ನು ಮೊಹಮ್ಮದ್ ಶಮಿ ಸೇರಿಕೊಂಡಿದ್ದು, ತಂಡದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಿದೆ. ಅಕ್ಟೋಬರ್ 23ರಂದು ಎಂಸಿಜಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ.

ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಪಾಕಿಸ್ತಾನ ಮತ್ತು ಬಲಿಷ್ಠ ಬ್ಯಾಟಿಂಗ್ ಪಡೆ ಇರುವ ಭಾರತದ ನಡುವಿನ ಪಂದ್ಯಕ್ಕಾಗಿ ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Story first published: Saturday, October 15, 2022, 19:16 [IST]
Other articles published on Oct 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X