ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PAK vs NZ: ಶಕ್ತಿಶಾಲಿ ಪ್ರದರ್ಶನ; ಫೈನಲ್ ತಲುಪಿದ ಪಾಕ್ ತಂಡವನ್ನು ಕೊಂಡಾಡಿದ ಸುರೇಶ್ ರೈನಾ

T20 World Cup 2022: Suresh Raina Congratulates Pakistan Team Who Defeated New Zealand To Reach The Final

ಬುಧವಾರ, ನವೆಂಬರ್ 9ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ 2022ರ ಮೊದಲ ಸೆಮಿಫೈನಲ್‌ನಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.

ಪಾಕಿಸ್ತಾನವು ಕೊನೆಯದಾಗಿ 2009ರಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಶ್ರೀಲಂಕಾ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಮತ್ತೊಂದು ಫೈನಲ್‌ ಪಂದ್ಯಕ್ಕಾಗಿ ಆಸ್ಟ್ರೇಲಿಯಾದಲ್ಲಿ ಪ್ರವೇಶ ಮಾಡಿದೆ.

PAK vs NZ: ಟಿ20 ವಿಶ್ವಕಪ್ ಫೈನಲ್ ತಲುಪಿ ಶ್ರೀಲಂಕಾ ದಾಖಲೆ ಸರಿಗಟ್ಟಿದ ಪಾಕಿಸ್ತಾನPAK vs NZ: ಟಿ20 ವಿಶ್ವಕಪ್ ಫೈನಲ್ ತಲುಪಿ ಶ್ರೀಲಂಕಾ ದಾಖಲೆ ಸರಿಗಟ್ಟಿದ ಪಾಕಿಸ್ತಾನ

ಶ್ರೀಲಂಕಾ ತಂಡವು 2009 (ರನ್ನರ್ಸ್-ಅಪ್), 2012 (ರನ್ನರ್ಸ್-ಅಪ್) ಮತ್ತು 2014 (ಚಾಂಪಿಯನ್) ನಲ್ಲಿ ಟಿ20 ವಿಶ್ವಕಪ್‌ನ ಫೈನಲ್‌ಗೆ ತಲುಪಿದ್ದರೆ, ಪಾಕಿಸ್ತಾನ ತಂಡವು 2007 (ರನ್ನರ್ಸ್-ಅಪ್), 2009 (ಚಾಂಪಿಯನ್) ರಲ್ಲಿ ಫೈನಲ್‌ನಲ್ಲಿ ಮುಖಾಮುಖಿ ಮತ್ತು 2022 (ಫೈನಲ್ ಪಂದ್ಯವನ್ನು ಇನ್ನೂ ಆಡಬೇಕಿದೆ).

ಪಾಕಿಸ್ತಾನ ಸಂಪೂರ್ಣ ಸಾಮರ್ಥ್ಯದೊಂದಿಗೆ ಆಟವಾಡಿತು

ಪಾಕಿಸ್ತಾನ ಸಂಪೂರ್ಣ ಸಾಮರ್ಥ್ಯದೊಂದಿಗೆ ಆಟವಾಡಿತು

ಸೆಮಿಫೈನಲ್ ಪಂದ್ಯದಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ನಂತರ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರನೂ ಆಗಿರುವ ರೈನಾ, ಸೆಮಿಫೈನಲ್‌ನಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಪಾಕಿಸ್ತಾನ ತಂಡವನ್ನು ಸರಣಿ ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.

ಪಾಕಿಸ್ತಾನ ತಂಡ ತಮ್ಮ ದಿನದಂದು ಉತ್ತಮ ಆಟ ಆಡಿತು, ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಆಟವಾಡಿತು. ಯಾವುದೇ ಹೆಚ್ಚಿನ ಅಡಚಣೆಗಳಿಲ್ಲದೆ ಅವರು ಫೈನಲ್ ತಲುಪುವುದನ್ನು ಖಚಿತಪಡಿಸಿಕೊಂಡರು. ದೊಡ್ಡ ಪಂದ್ಯದಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡಿದ ಆರಂಭಿಕ ಜೋಡಿ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಸಹ ಸುರೇಶ್ ರೈನಾ ಹೊಗಳಿದರು.

ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಉತ್ತಮವಾಗಿ ಆಡಿದರು

ಈ ಕುರಿತು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಸುರೇಶ್ ರೈನಾ, "ಪಾಕಿಸ್ತಾನ ಇಂದಿನ ಪಂದ್ಯದಲ್ಲಿ ಆಡುವುದನ್ನು ನೋಡಲು ಸಂತೋಷವಾಯಿತು, ಅವರು ಯೋಧರಂತೆ ಆಡಿದರು. ತಂಡದ ಎಲ್ಲಾ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನ ಮತ್ತು ಸಮಾನ ಹೋರಾಟಕ್ಕಾಗಿ ನ್ಯೂಜಿಲೆಂಡ್‌ನಿಂದಲೂ ಅತ್ಯುತ್ತಮವಾಗಿ ಆಡಿದ್ದಾರೆ. ಡ್ಯಾರಿಲ್ ಮಿಚೆಲ್ ಎಂತಹ ಇನ್ನಿಂಗ್ಸ್ ಆಡಿದರು," ಎಂದು ಬರೆದಿದ್ದಾರೆ.

"ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಉತ್ತಮವಾಗಿ ಆಡಿದ್ದೀರಿ, ಇಂದಿನ ಪಂದ್ಯದಲ್ಲಿ ನೀವು ಎಂತಹ ಶಕ್ತಿಯುತ ಪ್ರದರ್ಶನವನ್ನು ಪ್ರದರ್ಶಿಸಿದ್ದೀರಿ. ಮತ್ತೊಮ್ಮೆ ಇಬ್ಬರು ಅತ್ಯಂತ ಸಂಯೋಜಿತ ಮತ್ತು ನುರಿತ ಆಟಗಾರರ ನಡುವಿನ ಪ್ರಮುಖ ಜೊತೆಯಾಟಕ್ಕೆ ಅಭಿನಂದನೆಗಳು," ಎಂದು ಸುರೇಶ್ ರೈನಾ ತಿಳಿಸಿದರು.

ಇದೇ ವೇಳೆ ಸುರೇಸ್ ರೈನಾ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮತ್ತು ಮೆಂಟರ್ ಮ್ಯಾಥ್ಯೂ ಹೇಡನ್ ಅವರನ್ನು ಸಹ ಶ್ಲಾಘಿಸಿದ್ದಾರೆ. ಹೇಡನ್ ಎಂದಿಗೂ ಉದಾಹರಣೆ ನೀಡಲು ವಿಫಲವಾಗುವುದಿಲ್ಲ ಎಂದು ರೈನಾ ಹೇಳಿದರು.

ಭಾರತ ಅಥವಾ ಇಂಗ್ಲೆಂಡ್‌ ತಂಡಕ್ಕಾಗಿ ಕಾಯುತ್ತಿದೆ

ಭಾರತ ಅಥವಾ ಇಂಗ್ಲೆಂಡ್‌ ತಂಡಕ್ಕಾಗಿ ಕಾಯುತ್ತಿದೆ

ಪಾಕಿಸ್ತಾನ ಈಗ ಫೈನಲ್‌ನಲ್ಲಿ ಭಾರತ ಅಥವಾ ಇಂಗ್ಲೆಂಡ್‌ ತಂಡಕ್ಕಾಗಿ ಕಾಯುತ್ತಿದೆ. ಗುರುವಾರ ನಡೆಯಲಿರುವ 2ನೇ ಸೆಮಿಫೈನಲ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ, 2007ರ ನಂತರ ಮತ್ತೊಮ್ಮೆ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.

2007ರ ಫೈನಲ್ ಪಂದ್ಯವನ್ನು ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಗೆದ್ದಿತ್ತು. ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳು ಇತಿಹಾಸ ಪುನರಾವರ್ತನೆಯಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದಾರೆ. ಆದರೆ ಇಂಗ್ಲೆಂಡ್ ತಂಡ ಬಲಿಷ್ಠವಾಗಿದ್ದು, ಸೋಲಿಸುವುದು ಕಷ್ಟ. ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Story first published: Wednesday, November 9, 2022, 19:25 [IST]
Other articles published on Nov 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X