ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಭಾರತದ ಈ ಇಬ್ಬರು ಸ್ಟಾರ್‌ಗಳು ಟಿ20 ವಿಶ್ವಕಪ್ ತಂಡದಲ್ಲಿರಬೇಕು; ರಿಕಿ ಪಾಂಟಿಂಗ್

T20 World Cup: These 2 Indian Stars Should Be In The Indias T20 World Cup Squad Says Ricky Ponting

ಆಸ್ಟ್ರೇಲಿಯದಲ್ಲಿ ಇದೇ ವರ್ಷದ ಕೊನೆಯಲ್ಲಿ ಟಿ20 ವಿಶ್ವಕಪ್‌ ತಂಡಕ್ಕಾಗಿ ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರನ್ನೂ ತಮ್ಮ ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳಲು ಭಾರತವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದರು.

ಶ್ರೇಯಸ್ ಅಯ್ಯರ್, ಸ್ಯಾಮ್ಸನ್ ಬದಲು ಈತ ನಂ.4ರಲ್ಲಿ ಆಡಬೇಕು ಎಂದ ಕಿವೀಸ್ ಕ್ರಿಕೆಟಿಗಶ್ರೇಯಸ್ ಅಯ್ಯರ್, ಸ್ಯಾಮ್ಸನ್ ಬದಲು ಈತ ನಂ.4ರಲ್ಲಿ ಆಡಬೇಕು ಎಂದ ಕಿವೀಸ್ ಕ್ರಿಕೆಟಿಗ

ಈ ಎರಡೂ ವಿಕೆಟ್‌ಕೀಪರ್-ಬ್ಯಾಟರ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ ಮತ್ತು ಇಬ್ಬರೂ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲಿರುವುದರಿಂದ ಟೀಮ್ ಇಂಡಿಯಾಕ್ಕೆ ಲಾಭವಾಗಬಹುದು ಎಂದು ಅಂದಾಜಿಸಿದ್ದಾರೆ.

ಟಿ20 ವಿಶ್ವಕಪ್‌ ತಂಡದಲ್ಲಿ ರಿಷಭ್ ಪಂತ್, ದಿನೇಶ್ ಕಾರ್ತಿಕ್

ಟಿ20 ವಿಶ್ವಕಪ್‌ ತಂಡದಲ್ಲಿ ರಿಷಭ್ ಪಂತ್, ದಿನೇಶ್ ಕಾರ್ತಿಕ್

ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೆ, ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ಪ್ರಭಾವಶಾಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅಭಿಯಾನವನ್ನು ಹೊಂದಿದ್ದರು. ಅದೇ ರೀತಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರಂತಹ ಅಟಗಾರರು ಪಂತ್ ಮತ್ತು ಕಾರ್ತಿಕ್ ಅವರನ್ನು ಅನುಸರಿಸುತ್ತಿರುವುದಾಗಿ ಆಸ್ಟ್ರೇಲಿಯ ಮಾಜಿ ನಾಯಕ ಹೇಳಿದರು.

50-ಓವರ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಸಾಮರ್ಥ್ಯ ನೋಡಿದ್ದೇವೆ

50-ಓವರ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಸಾಮರ್ಥ್ಯ ನೋಡಿದ್ದೇವೆ

"ನಾವು 50-ಓವರ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಸಾಮರ್ಥ್ಯವನ್ನು ನೋಡಿದ್ದೇವೆ ಮತ್ತು ಟಿ20 ಪಂದ್ಯದಲ್ಲಿ ಅವರು ಏನು ಸಮರ್ಥರಾಗಿದ್ದಾರೆಂದು ನನಗೆ ಸಂಪೂರ್ಣವಾಗಿ ತಿಳಿದಿದೆ. ದಿನೇಶ್ ಕಾರ್ತಿಕ್ ಅವರು ಇತ್ತೀಚೆಗಷ್ಟೇ ಅವರ ಅತ್ಯುತ್ತಮ ಐಪಿಎಲ್ ಅನ್ನು ಹೊಂದಿದ್ದಾರೆ. ನಾನು ಎಲ್ಲ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತೇನೆ. ನನ್ನ ತಂಡದಲ್ಲಿ ಆ ಹುಡುಗರಿಬ್ಬರೂ ಇರುತ್ತಾರೆ," ಎಂದರು.

ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್

ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್

"ರಿಷಭ್ ಪಂತ್, ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಕ್ರಮವಾಗಿ ಮೂರು-ನಾಲ್ಕು-ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ಏಕೆಂದರೆ ಇವರು ತಂಡದ ಅತ್ಯುತ್ತಮ ಫಿನಿಶರ್‌ಗಳಾಗಿದ್ದಾರೆ. ಈ ಮೂವರ ಬ್ಯಾಟಿಂಗ್ ಲೈನ್-ಅಪ್ ಚೆನ್ನಾಗಿ ಕಾಣುತ್ತದೆ ಮತ್ತು ತುಂಬಾ ಅಪಾಯಕಾರಿಯಾಗಿರುತ್ತದೆ," ಎಂದು ಐಸಿಸಿ ರಿವ್ಯೂನಲ್ಲಿ ರಿಕಿ ಪಾಂಟಿಂಗ್ ತಿಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಫಾರ್ಮ್ ಕಳೆದುಕೊಳ್ಳಲ್ಲ

ಸೂರ್ಯಕುಮಾರ್ ಯಾದವ್ ಫಾರ್ಮ್ ಕಳೆದುಕೊಳ್ಳಲ್ಲ

"ನಿಸ್ಸಂಶಯವಾಗಿ ಇಶಾನ್ ಕಿಶನ್ ಅಥವಾ ಸೂರ್ಯಕುಮಾರ್ ಯಾದವ್ ಅಥವಾ ಶ್ರೇಯಸ್ ಅಯ್ಯರ್ ಇವರಲ್ಲಿ ಯಾರಾದರೊಬ್ಬರು ಅವಕಾಶ ತಪ್ಪಿಸಿಕೊಳ್ಳಬಹುದು. ಸೂರ್ಯಕುಮಾರ್ ಯಾದವ್ ಅವರ ಪ್ರಸ್ತುತ ಫಾರ್ಮ್ ಅನ್ನು ಕಳೆದುಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಆದರೆ ಪ್ರತಿಭಾನ್ವಿತರ ಭಾರತೀಯ ತಂಡವನ್ನು ಆಯ್ಕೆ ಮಾಡುವುದು ಯಾವಾಗಲೂ ಕಷ್ಟಕರವಾಗಿರುತ್ತದೆ. ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರು ತಂಡದಲ್ಲಿರುತ್ತಾರೆ. ನಾನು ಇದೀಗ ಕಿಶನ್‌ಗಿಂತ ಇವರನ್ನು ಮೊದಲು ಆಯ್ಕೆ ಮಾಡುತ್ತೇನೆ," ಎಂದು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಆಗಿರುವ ರಿಕಿ ಪಾಂಟಿಂಗ್ ಹೇಳಿದರು.

ಭಾರತ ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡುತ್ತಿದೆ. ಮೊದಲ ಏಕದಿನ ಪಂದ್ಯವು ಶುಕ್ರವಾರದಂದು ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದೆ.

ರವೀಂದ್ರ ಜಡೇಜಾ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಪಂದ್ಯದಿಂದ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.

ಭಾರತ ಸಂಭಾವ್ಯ ಆಡುವ ಬಳಗ
1 ಶಿಖರ್ ಧವನ್ (ನಾಯಕ), 2 ಇಶಾನ್ ಕಿಶನ್ (ವಿಕೆಟ್ ಕೀಪರ್‌), 3 ಸಂಜು ಸ್ಯಾಮ್ಸನ್, 4 ಸೂರ್ಯಕುಮಾರ್ ಯಾದವ್, 5 ಶ್ರೇಯಸ್ ಅಯ್ಯರ್, 6 ದೀಪಕ್ ಹೂಡಾ, 7 ಅಕ್ಷರ್ ಪಟೇಲ್ 8 ಶಾರ್ದೂಲ್ ಠಾಕೂರ್, 9 ಮೊಹಮ್ಮದ್ ಸಿರಾಜ್, 10 ಅವೇಶ್ ಖಾನ್, 11 ಯುಜ್ವೇಂದ್ರ ಚಾಹಲ್.

ವೆಸ್ಟ್ ಇಂಡೀಸ್‌ ಸಂಭಾವ್ಯ ಆಡುವ ಬಳಗ
1 ಶಾಯ್ ಹೋಪ್, 2 ಬ್ರಾಂಡನ್ ಕಿಂಗ್, 3 ಶಮರ್ ಬ್ರೂಕ್ಸ್, 4 ಕೀಸಿ ಕಾರ್ಟಿ, 5 ನಿಕೋಲಸ್ ಪೂರನ್ (ಕ್ಯಾಪ್ಟನ್, ವಿಕೆಟ್ ಕೀಪರ್‌), 6 ರೋವ್‌ಮನ್ ಪೊವೆಲ್, 7 ಜೇಸನ್ ಹೋಲ್ಡರ್, 8 ಕೀಮೋ ಪಾಲ್, 9 ಅಕೇಲ್ ಹೋಸಿನ್, 10 ಅಲ್ಜಾರಿ ಜೋಸೆಫ್, 11 ಜೇಡನ್ ಸೀಲ್ಸ್.

Story first published: Friday, July 22, 2022, 17:40 [IST]
Other articles published on Jul 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X