ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಮೈದಾನದಲ್ಲಿ ಕೆಲ ಆಟಗಾರರು 2 ಕ್ಯಾಪ್ ಧರಿಸುವುದು ಏಕೆ?

ಕೋವಿಡ್-19 ಸಾಂಕ್ರಾಮಿಕ ಶುರುವಾಗಿ ಕ್ರೀಡೆ ಸೇರಿದಂತೆ ಎಲ್ಲವೂ ನಿಂತು ಹೋಗಿದ್ದ ದಿನಗಳನ್ನು ಯಾರು ಮರೆಯುವಂತಿಲ್ಲ. ಅದರಲ್ಲೂ ಭಾರತದ ಕ್ರಿಕೆಟ್ ಅಭಿಮಾನಿಗಳು ಐಪಿಎಲ್‌ ನೋಡಲು ಕಾತುರರಾಗಿದ್ದರು. ಅಂತೂ ಕೊನೆಗೆ ಜುಲೈನಲ್ಲಿ ಉನ್ನತ ಮಟ್ಟದ ಕ್ರಿಕೆಟ್ ಪುನರಾರಂಭವಾದಾಗಿನಿಂದ ಅಭಿಮಾನಿಗಳಿಗೆ ಸಮಾಧಾನ ತರಿಸಿದೆ.

ಆದರೆ ಕೊರೊನಾ ಕಾಟದ ನಡುವೆ ಕ್ರಿಕೆಟ್ ಪುನರಾರಂಭವಾದಾಗಿನಿಂದ, ಆಶ್ಚರ್ಯಕರ ದೃಶ್ಯವು ಕ್ರಿಕೆಟ್ ಮೈದಾನದಲ್ಲಿ ಸಾಕ್ಷಿಯಾಗಿದೆ. ಮೈದಾನದಲ್ಲಿ ಕೆಲ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕ್ಯಾಪ್ ಧರಿಸಿದ ಆಟಗಾರರನ್ನು ನೋಡಲಾಗುತ್ತಿದೆ.

ಒಂದಕ್ಕಿಂತ ಹೆಚ್ಚು ಕ್ಯಾಪ್ ಧರಿಸಿದ್ದ ಮಾರ್ಗನ್, ಫಿಂಚ್

ಒಂದಕ್ಕಿಂತ ಹೆಚ್ಚು ಕ್ಯಾಪ್ ಧರಿಸಿದ್ದ ಮಾರ್ಗನ್, ಫಿಂಚ್

ಕಳೆದ ತಿಂಗಳು ಸೀಮಿತ ಓವರ್‌ಗಳ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ, ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಮತ್ತು ಆಸ್ಟ್ರೇಲಿಯಾ ಸೀಮಿತ ಓವರ್‌ ತಂಡದ ನಾಯಕ ಆ್ಯರೋನ್ ಫಿಂಚ್ ತಲೆಗೆ ಒಂದಕ್ಕಿಂತ ಹೆಚ್ಚು ಕ್ಯಾಪ್ ಧರಿಸಿರುವುದು ಕಂಡುಬಂತು.

ಇಂದು ಆರ್‌ಸಿಬಿ vs ಕೆಕೆಆರ್ ಮುಖಾಮುಖಿ: ಪಿಚ್ ರಿಪೋರ್ಟ್, ಸಂಭಾವ್ಯ ತಂಡ ತಿಳಿದುಕೊಳ್ಳಿ

ವಾಸ್ತವವಾಗಿ, ಕೆಲವು ಸಂದರ್ಭಗಳಲ್ಲಿ ಮಾರ್ಗನ್ ಎರಡು ಕ್ಯಾಪ್‌ಗಳಿಗಿಂತ ಹೆಚ್ಚು ಧರಿಸಿರುವುದು ಅಭಿಮಾನಿಗಳಿಗೆ ಸಂಪೂರ್ಣವಾಗಿ ಆಶ್ಚರ್ಯವನ್ನುಂಟು ಮಾಡಿತು. ಇದರ ಜೊತೆಗೆ ಫಿಂಚ್ ಕೂಡ ತಲೆಗೆ ಒಂದಕ್ಕಿಂತ ಹೆಚ್ಚು ಕ್ಯಾಪ್ ಧರಿಸಿರುವುದು ಕಂಡುಬಂತು.

ಐಪಿಎಲ್‌ನಲ್ಲೂ ಕಾಣಸಿಗುತ್ತಿದೆ ಎರಡೆರಡು ಕ್ಯಾಪ್ ಪ್ಲೇಯರ್ಸ್

ಐಪಿಎಲ್‌ನಲ್ಲೂ ಕಾಣಸಿಗುತ್ತಿದೆ ಎರಡೆರಡು ಕ್ಯಾಪ್ ಪ್ಲೇಯರ್ಸ್

ಐಪಿಎಲ್‌ನಲ್ಲೂ ಇದೇ ರೀತಿಯ ದೃಷ್ಯಗಳು ನಮಗೆ ಕಾಣಸಿಗುತ್ತವೆ. ಬಹುತೇಕ ಎಲ್ಲಾ ಪಂದ್ಯಗಳಲ್ಲಿ, ಆಟಗಾರರು ವಿಶೇಷವಾಗಿ ತಂಡದ ಕ್ಯಾಪ್ಟನ್ ಒಂದು ಸಮಯದಲ್ಲಿ ಎರಡು ಕ್ಯಾಪ್ ಧರಿಸಿರುವುದು ಕಂಡುಬರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳನ್ನು ನೋಡಿದರೆ, ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕ್ಯಾಪ್ ಧರಿಸಿದ ಆಟಗಾರರು ಖಂಡಿತವಾಗಿಯೂ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದ್ದಾರೆ ಎಂದು ಸುಲಭವಾಗಿ ಹೇಳಬಹುದು.

ಆಟಗಾರರ ಸುರಕ್ಷತೆಯ ದೃಷ್ಟಿಯೇ ಇದರ ಹಿಂದಿನ ಕಾರಣ

ಆಟಗಾರರ ಸುರಕ್ಷತೆಯ ದೃಷ್ಟಿಯೇ ಇದರ ಹಿಂದಿನ ಕಾರಣ

ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಈ ಪರೀಕ್ಷಾ ಸಮಯದಲ್ಲಿ ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಹಲವಾರು ಕ್ರಮಗಳಲ್ಲಿ ಇದರ ಹಿಂದಿನ ಕಾರಣವಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಆಟಗಾರರು ಕ್ಯಾಪ್ ಮತ್ತು ಸನ್‌ಗ್ಲಾಸ್‌ ಸೇರಿದಂತೆ ತಮ್ಮ ವಸ್ತುಗಳನ್ನು ಅಂಪೈರ್‌ಗಳಿಗೆ ಹಸ್ತಾಂತರಿಸುವುದನ್ನು ಐಸಿಸಿ ನಿಷೇಧಿಸಿದೆ.

ಮತ್ತೆ ಎಲ್ಲರ ಗಮನಸೆಳೆದ ಸೂಪರ್ ಓವರ್ ಗರ್ಲ್

ಆಟಗಾರರು ತಮ್ಮ ವಸ್ತುಗಳನ್ನು ತಮ್ಮ ತಂಡದ ಆಟಗಾರರಿಗೆ ಹಸ್ತಾಂತರಿಸುವುದನ್ನು ಆಡಳಿತ ಮಂಡಳಿ ನಿಷೇಧಿಸಿದೆ. ಆದರೆ ಆಟಗಾರರು ಖಂಡಿತವಾಗಿಯೂ ತಮ್ಮ ವಸ್ತುಗಳನ್ನು ಅಂಪೈರ್‌ಗಳಿಗೆ ಹಸ್ತಾಂತರಿಸದಿದ್ದರೂ, ಅವರು ಬೌಲಿಂಗ್ ಮಾಡುವ ಮೊದಲು ತಮ್ಮ ಕ್ಯಾಪ್‌ಗಳನ್ನು ತಮ್ಮ ತಂಡದ ಆಟಗಾರರಿಗೆ ಹಸ್ತಾಂತರಿಸುತ್ತಿದ್ದಾರೆ.

ಐಸಿಸಿ ನಿಯಮ ಏನು ಹೇಳುತ್ತದೆ?

ಐಸಿಸಿ ನಿಯಮ ಏನು ಹೇಳುತ್ತದೆ?

"ಆನ್-ಫೀಲ್ಡ್ ಪ್ರೋಟೋಕಾಲ್‌ಗಳು ಉದಾಹರಣೆಗೆ, ಯಾವುದೇ ಅನಗತ್ಯ ದೇಹದ ಸಂಪರ್ಕ ಮತ್ತು ವಸ್ತುಗಳನ್ನು (ಕ್ಯಾಪ್, ಟವೆಲ್, ಸನ್‌ಗ್ಲಾಸ್ ಇತ್ಯಾದಿ) ಅಂಪೈರ್‌ಗಳು ಅಥವಾ ತಂಡದ ಆಟಗಾರರಿಗೆ ಹಸ್ತಾಂತರಿಸುವುದಿಲ್ಲ. ಪ್ರತಿಯೊಬ್ಬ ಆಟಗಾರನು ತಮ್ಮದೇ ಆದ ವಸ್ತುಗಳಿಗೆ ಜವಾಬ್ದಾರನಾಗಿರಬೇಕು "ಎಂದು ಐಸಿಸಿ ಹೇಳುತ್ತದೆ.

ಆದರೆ ಬೌಲರ್ ಮಾತ್ರ ಅನಿವಾರ್ಯವಾಗಿ ತಾನು ಧರಿಸಿದ್ದ ಕ್ಯಾಪ್ ಅನ್ನು ತನ್ನ ನಾಯಕನಿಗೆ ನೀಡುತ್ತಿರುವುದರಿಂದ ಆಯಾ ತಂಡದ ನಾಯಕರು ಕೆಲ ಸಮಯದಲ್ಲಿ ಎರಡೆರಡು ಕ್ಯಾಪ್ ಧರಿಸಿರುತ್ತಾರೆ.

Story first published: Wednesday, October 21, 2020, 15:04 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X