ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಈ 3 ಸ್ಟಾರ್ ಆಟಗಾರರು ಪ್ರಪ್ರಥಮ ಏಕದಿನ ಶತಕ ಸಿಡಿಸಿದ್ದು ಜಿಂಬಾಬ್ವೆ ನೆಲದಲ್ಲಿ!

These 3 Indian star cricketers hit their first ODI hundred in Zimbabwe

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿಯೂ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಸರಣಿಯನ್ನು 3-0 ಅಂತರದಿಂದ ವೈಟ್‌ವಾಶ್ ಮೂಲಕ ವಶಕ್ಕೆ ಪಡೆದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಭಾರತದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಭರ್ಜರಿ ಶತಕವನ್ನು ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದ್ದಾರೆ.

ಭಾರತ ಹಾಗೂ ಜಿಂಬಾಬ್ವೆ ವಿರುದ್ಧ ಹೆಚ್ಚೇನೂ ಸರಣಿ ನಡೆಯುವುದಿಲ್ಲ. ಆದರೆ ಸರಣಿ ನಡೆದಾಗಲೆಲ್ಲಾ ಭಾರತ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶವನ್ನು ನೀಡಿಕೊಂಡು ಬಂದಿದೆ. ಈ ಮೂಲಕ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಈ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶವನ್ನು ನೀಡಿದೆ. ಅನೇಕ ಯುವ ಆಟಗಾರರು ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದರಲ್ಲಿ ಕೆಲ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಮಿಂಚಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಆಟಗಾರರು ಇದ್ದಾರೆ.

ಫಿಫಾದ ಎಲ್ಲಾ ಷರತ್ತುಗಳಿಗೂ ಕೇಂದ್ರ ಅಸ್ತು; ಎಐಎಫ್ಎಫ್ ಬ್ಯಾನ್ ಹಿಂತೆಗೆಸಲು ಪ್ಲಾನ್ಫಿಫಾದ ಎಲ್ಲಾ ಷರತ್ತುಗಳಿಗೂ ಕೇಂದ್ರ ಅಸ್ತು; ಎಐಎಫ್ಎಫ್ ಬ್ಯಾನ್ ಹಿಂತೆಗೆಸಲು ಪ್ಲಾನ್

ಇನ್ನು ಜಿಂಬಾಬ್ವೆ ಪ್ರವಾಸದಲ್ಲಿ ಭಾರತದ ಮೂವರು ಸ್ಟಾರ್ ಆಟಗಾರರು ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಮಾದರಿಯ ಶತಕ ಬಾರಿಸಿದ್ದಾರೆ. ಆ ಆಟಗಾರರು ಯಾರು ಎಂಬುದನ್ನು ನೋಡೋಣ. ಮುಂದೆ ಓದಿ..

ಭರ್ಜರಿ ಶತಕ ಸಿಡಿಸಿದ ಶುಬ್ಮನ್ ಗಿಲ್

ಭರ್ಜರಿ ಶತಕ ಸಿಡಿಸಿದ ಶುಬ್ಮನ್ ಗಿಲ್

ಈ ಬಾರಿಯ ಜಿಂಬಾಬ್ವೆ ಪ್ರವಾಸದಲ್ಲಿ ಭಾರತದ ಯುವ ಆಟಗಾರ ಶುಬ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದು ತಮ್ಮ ಪ್ರಪ್ರಥಮ ಶತಕವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಶತಕಗಳಿಸುವ ಅವಕಾಶವನ್ನು ಹೊಂದಿದ್ದರಾದರೂ ಮಳೆಯಿಂದಾಗಿ ಇನ್ನಿಂಗ್ಸ್ ಮುಂದುವರಿಯದ ಕಾರಣ ಶತಕಗಳಿಸುವ ಅವಕಾಶ ದೊರೆಯಲಿಲ್ಲ. ಇದೀಗ ಜಿಂಬಾಬ್ವೆ ಪ್ರವಾಸದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.

ಕೆಎಲ್ ರಾಹುಲ್ ಮೊದಲ ಶತಕ ಸಿಡಿಸಿದ್ದು ಜಿಂಬಾಬ್ವೆಯಲ್ಲಿ

ಕೆಎಲ್ ರಾಹುಲ್ ಮೊದಲ ಶತಕ ಸಿಡಿಸಿದ್ದು ಜಿಂಬಾಬ್ವೆಯಲ್ಲಿ

ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಈ ಸಂಗತಿಯನ್ನು ಪರೆತಿರಬಹುದು. ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಕೆಎಲ್ ರಾಹುಲ್ ಒಡಿಐ ಮಾದರಿಗೆ ಪದಾರ್ಪಣೆ ಮಾಡಿದ್ದು 2016ರಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ. ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿಯೇ ರಾಹುಲ್ ಶತಕವನ್ನು ಸಿಡಿಸಿದ್ದರು. ಈ ಮೂಲಕ ಏಕದಿನ ಮಾದರಿಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಸದ್ಯ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ ರಾಹುಲ್.

Shikhar Dhawan ಜೆರ್ಸಿ ಮೇಲೆ ಟೇಪ್ ಅಂಟಿಸಿದ್ದೇಕೆ | OneIndia Kannada
ರೋಹಿತ್ ಶರ್ಮಾರ ಪ್ರಥಮ ಶತಕ ಜಿಂಬಾಬ್ವೆ ವಿರುದ್ಧವೇ!

ರೋಹಿತ್ ಶರ್ಮಾರ ಪ್ರಥಮ ಶತಕ ಜಿಂಬಾಬ್ವೆ ವಿರುದ್ಧವೇ!

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸದ್ಯ ವೈಟ್‌ಬಾಲ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ಅನೇಕ ದಾಖಲೆಗಳನ್ನು ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಆದರೆ ರೋಹಿತ್ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದ್ದು ಜಿಂಬಾಬ್ವೆ ತಂಡದ ವಿರುದ್ಧವೇ ಎಂಬುದು ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರಲು ಸಾಧ್ಯವಿಲ್ಲ. 2010ರಲ್ಲಿ ತ್ರಿಕೋನ ಸರಣಿಯಲ್ಲಿ ಭಾಗವಹಿಸಿದ್ದಾಗ ರೋಹಿತ್ ಶರ್ಮಾ ಈ ಸಾಧನೆ ಮಾಡಿ ಮಿಂಚಿದ್ದರು.

Story first published: Monday, August 22, 2022, 20:31 [IST]
Other articles published on Aug 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X