ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೋಕ್ಸ್, ಡಿಕಾಕ್ ಹಾದಿಯಲ್ಲಿ ಭಾರತೀಯರು: ಟೀಮ್ ಇಂಡಿಯಾದ 4 ಕ್ರಿಕೆಟಿಗರು 2023ರಲ್ಲಿ ಒಂದು ಮಾದರಿಗೆ ಗುಡ್‌ಬೈ!

These 4 Indian cricketers could announce retirement from one Format in 2023

2022 ಭಾರತೀಯ ಕ್ರಿಕೆಟ್ ಆಟಗಾರರ ಪಾಲಿಗೆ ಅತ್ಯಂತ ಬಿಡುವಿಲ್ಲದ ವರ್ಷವಾಗಿತ್ತು. ಟೀಮ್ ಇಂಡಿಯಾದ ಆಟಗಾರರು ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನು ಈ ವರ್ಷ ಆಡಿದ್ದಾರೆ. ಕೆಲ ಸಂದರ್ಭಗಳಲ್ಲಿ ಆಟಗಾರರು ವಿಶ್ರಾಂತಿ ಪಡೆದುಕೊಂಡಿದ್ದರು ಕೂಡ ಅಂತಾರಾಷ್ಟ್ರೀಯ ಮಟ್ಟದ ಅತಿಯಾದ ಕ್ರಿಕೆಟ್ ವೇಳಾಪಟ್ಟಿ ಆಟಗಾರರನ್ನು ಸಹಜವಾಗಿ ಒತ್ತಡಕ್ಕೆ ಸಿಲುಕಿಸುತ್ತದೆ.

ಸಾಲು ಸಾಲು ದ್ವಿಪಕ್ಷೀಯ ಸರಣಿಗಳು, ಏಷ್ಯಾಕಪ್, ವಿಶ್ವಕಪ್‌ನಂತಾ ಮಹತ್ವದ ಟೂರ್ನಿಯ ಜೊತೆಗೆ ಐಪಿಎಲ್ ಕೂಡ ಆಟಗಾರರ ವೇಳಾಪಟ್ಟಿಯ ಪ್ರಮುಖ ಭಾಗವಾಗಿತ್ತು. ಈ ರೀತಿಯ ಒತ್ತಡದ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ಮೂರು ಮಾದರಿಯಲ್ಲಿಯೂ ಯಾವುದೇ ಆಟಗಾರನಿಗೆ ಉಳಿದುಕೊಳ್ಳುವುದು ಬಹಳ ಕಷ್ಟಕರವಾಗಲಿದೆ. ಇದೇ ಕಾರಣಕ್ಕೆ ಬೆನ್ ಸ್ಟೋಕ್ಸ್, ಕ್ವಿಂಟನ್ ಡಿ ಕಾಕ್ ಅವರಂತಾ ಆಟಗಾರರು ಈ ವರ್ಷ ಒಂದು ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದೀಗ ಈ ಆಟಗಾರರ ಸಾಲಿಗೆ ಭಾರತೀಯ ಕ್ರಿಕೆಟಿಗರು ಕೂಡ ಸೇರಿಕಕೊಳ್ಳುವ ಸಾಧ್ಯತೆಯಿದೆ. ಅತಿಯಾದ ಕ್ರಿಕೆಟ್‌ನ ಕಾರಣದಿಂದಾಗಿ ಈ ನಾಲ್ಕು ಭಾರತೀಯ ಕ್ರಿಕೆಟ್ ಆಟಗಾರರು 2023ರಲ್ಲಿ ಒಂದು ಮಾದರಿಗೆ ವಿದಾಯ ಘೋಷಣೆ ಮಾಡುವ ಸಾಧ್ಯತೆಯಿದೆ.

Aus vs SA 2nd Test: ಹರಿಣಗಳಿಗೆ ಮುಖಭಂಗ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬೃಹತ್ ಜಯ ಸಾಧಿಸಿದ ಆಸ್ಟ್ರೇಲಿಯಾAus vs SA 2nd Test: ಹರಿಣಗಳಿಗೆ ಮುಖಭಂಗ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬೃಹತ್ ಜಯ ಸಾಧಿಸಿದ ಆಸ್ಟ್ರೇಲಿಯಾ

ಹಾಗಾದರೆ 2023ರಲ್ಲಿ ಒಂದು ಮಾದರಿಗೆ ವಿದಾಯ ಘೋಷಣೆ ಮಾಡಲಿರುವ ನಾಲ್ವರು ಕ್ರಿಕೆಟಿಗರು ಯಾರು? ಮುಂದೆ ಓದಿ...

ಹಾರ್ದಿಕ್ ಪಾಂಡ್ಯ, ಟೆಸ್ಟ್ ಮಾದರಿಗೆ ವಿದಾಯ ಸಾಧ್ಯತೆ

ಹಾರ್ದಿಕ್ ಪಾಂಡ್ಯ, ಟೆಸ್ಟ್ ಮಾದರಿಗೆ ವಿದಾಯ ಸಾಧ್ಯತೆ

2021ರ ಕ್ಯಾಲೆಂಡರ್ ವರ್ಷ ಅಂತ್ಯವಾಗುವ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ದಯ ಅವರ ಫಿಟ್‌ನೆಸ್ ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ದೊಡ್ಡ ಕಳವಳಕಾರಿ ಅಂಶವಾಗಿತ್ತು. ಅವರ ಭವಿಷ್ಯದ ಮೇಲೆಯೇ ಕರಿಛಾಯೆ ಆವರಿಸಿತ್ತು. ಆದರೆ ಹಾರ್ದಿಕ್ ಪಾಂಡ್ಯ ಇದರಿಂದ ಹೊರಬಂದ ರೀತಿ ಅಮೋಘ. ಕಮ್‌ಬ್ಯಾಕ್ ಮಾಡಿದ ಬಳಿಕ ಅದ್ಭುತ ಫಾರ್ಮ್‌ನಲ್ಲಿರುವ ಪಾಂಡ್ಯ ಚುಟುಕು ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಹಂತಕ್ಕೇರಿದ್ದಾರೆ ಎಂಬುದು ಗಮನಾರ್ಹ ಅಂಶ. ಸದ್ಯ ವೈಟ್‌ಬಾಲ್ ಕ್ರಿಕೆಟ್ ಮೇಲೆ ಮಾತ್ರವೇ ಗಮನಹರಿಸುತ್ತಿರುವ ಪಾಂಡ್ಯ ಟೆಸ್ಟ್ ಕ್ರಿಕೆಟ್‌ಗೆ ಮುಂದಿನ ವರ್ಷವ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆಯಿದೆ.

ಆರ್ ಅಶ್ವಿನ್, ಟಿ20I

ಆರ್ ಅಶ್ವಿನ್, ಟಿ20I

ಟೆಸ್ಟ್ ಮಾದರಿಯಲ್ಲಿ ಭಾರತ ತಂಡದ ಅತ್ಯುತ್ತಮ ಆಲ್‌ರೌಂಡರ್ ಎಂದರೆ ಅದು ಆರ್ ಅಶ್ವಿನ್. ಟಿ20 ಮಾದರಿಯಲ್ಲಿ ಆರ್ ಅಶ್ವಿನ್ ಅವರ ಬದಲಿಗೆ ಸೂಕ್ತವೆನಿಸುವ ಆಟಗಾರರು ಲಭ್ಯವಾದರು ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಸ್ಥಾನ ತುಂಬುವುದು ಸದ್ಯಕ್ಕೆ ಅಸಾಧ್ಯ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನ ಮೇಲೆ ಹೆಚ್ಚಿನ ಗಮನ ನೀಡುವ ದೃಷ್ಟಿಯಿಂದ ಮುಂದಿನ ವರ್ಷ ಚುಟುಕು ಮಾದರಿಗೆ ಆರ್ ಅಶ್ವಿನ್ ನಿವೃತ್ತಿ ಹೇಳುವ ಸಾಧ್ಯತೆಯಿದೆ.

ಮೊಹಮ್ಮದ್ ಶಮಿ, ಟಿ20I

ಮೊಹಮ್ಮದ್ ಶಮಿ, ಟಿ20I

ಮೊಹಮ್ಮದ್ ಶಮಿ ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಮಾದರಿಯಲ್ಲಿ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದರೂ ಟಿ20 ಕ್ರಿಕೆಟ್‌ನಲ್ಲಿ ಸ್ಥಾನ ಭದ್ರವಾಗಿಲ್ಲ. 2021ರ ವಿಶ್ವಕಪ್‌ನ ಬಳಿಕ ತಂಡದಿಂದ ಹೊರಬಿದ್ದಿದ್ದ ಶಮಿ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ಗೆ ಅಂತಿಮ ಕ್ಷಣದಲ್ಲಿ ಸೇರ್ಪಡೆಯಾದರು. ಹೀಗಾಗಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನ ಮೇಲೆ ಹೆಚ್ಚಿನ ಗಮನ ನೀಡುವ ದೃಷ್ಟಿಯಿಂದ ಮೊಹಮ್ಮದ್ ಶಮಿ ಟಿ20 ಮಾದರಿಗೆ ಮುಂದಿನ ವರ್ಷ ನಿವೃತ್ತಿ ಹೇಳುವುದು ಸೂಕ್ತ.

ರವೀಂದ್ರ ಜಡೇಜಾ, ಟಿ20I ಅಥವಾ ಟೆಸ್ಟ್

ರವೀಂದ್ರ ಜಡೇಜಾ, ಟಿ20I ಅಥವಾ ಟೆಸ್ಟ್

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಪದೇ ಪದೇ ಗಾಯದಿಂದಾಗಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಅದರಲ್ಲೂ 2022ರಲ್ಲಿ ಬಹುತೇಕ ಅವಧಿಯನ್ನು ಜಡ್ಡು ಗಾಯದಿಂದಾಗಿ ವಿಶ್ರಾಂತಿಯಲ್ಲಿ ಕಳೆದಿದ್ದಾರೆ. ಮೂರು ಮಾದರಿಯಲ್ಲಿಯೂ ಭಾರತ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ರವೀಂದ್ರ ಜಡೇಜಾ ಗಯದ ಸಮಸ್ಯೆಯನ್ನು ಕಡಿಮೆ ಗೊಳಿಸಬೇಕಾದರೆ ಒಂದು ಮಾದರಿಗೆ ನಿವೃತ್ತಿ ಘೋಷಿಸುವ ಅಗತ್ಯವಿದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದ್ದು ಸಾಕಷ್ಟು ಟೆಸ್ಟ್ ಕ್ರಿಕೆಟ್ ಸರಣಿಗಳು ಕೂಡ ಆಯೋಜನೆಯಾಗಲಿದೆ. ಹೀಗಾಗಿ ಚುಟುಕು ಕ್ರಿಕೆಟ್‌ನಿಂದ ಜಡ್ಡು ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಅಥವಾ ಟೆಸ್ಟ್ ಮಾದರಿಯಿಂದ ನಿವೃತ್ತಿ ಪಡೆದರೂ ಅಚ್ಚರಿಯಿಲ್ಲ.

Story first published: Thursday, December 29, 2022, 17:45 [IST]
Other articles published on Dec 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X